ಚಾಕೊಲೆಟ್ ಪ್ರಿಯರಿಗೊಂದು ಸಿಹಿ ಸುದ್ದಿ : ಸೌಂದರ್ಯ ಹೆಚ್ಚಿಸಲು ಚಾಕೊಲೆಟ್​ ತಿನ್ನಿ

news18
Updated:July 16, 2018, 3:55 PM IST
ಚಾಕೊಲೆಟ್ ಪ್ರಿಯರಿಗೊಂದು ಸಿಹಿ ಸುದ್ದಿ : ಸೌಂದರ್ಯ ಹೆಚ್ಚಿಸಲು ಚಾಕೊಲೆಟ್​ ತಿನ್ನಿ
news18
Updated: July 16, 2018, 3:55 PM IST
-ನ್ಯೂಸ್ 18 ಕನ್ನಡ

ಚಾಕೊಲೆಟ್ ಎಂದರೆ ಯಾರ ಬಾಯಲ್ಲಿ ನೀರೂರಲ್ಲ ಹೇಳಿ. ಅದರಲ್ಲೂ ಮಕ್ಕಳಿಗಂತೂ ಈ ಸಿಹಿ ತಿನಿಸು ಬಲು ಇಷ್ಟ. ಆದರೆ ಇದನ್ನು ತಿನ್ನುವುದರಿಂದ ದಂತಕ್ಷಯದ ಸಮಸ್ಯೆ ಉಂಟಾಗುತ್ತದೆ ಅಂತೇಳಿ ಹೆಚ್ಚಿನವರು ಚಾಕೊಲೇಟ​ನ್ನು ತಿನ್ನುವುದಿಲ್ಲ. ಇದೀಗ, ವಿಜ್ಞಾನಿಗಳು ಚಾಕೊಲೆಟ್​ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಸ್ವೀಡಿಷ್ ಸಂಶೋಧಕರು ಚಾಕೊಲೆಟ್​ ಮೇಲೆ ನಡೆಸಿದ ಅಧ್ಯಯನದಿಂದ ಚಾಕೊಲೆಟ್ ತಿಂದರೆ ಸಾಮರ್ಥ್ಯ ಮತ್ತು ಸೌಂದರ್ಯ ಹೆಚ್ಚುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಚಾಕೊಲೆಟ್​ನಲ್ಲಿ ಕೆಫಿನ್ ಮತ್ತು ಕೊಬ್ಬಿನಾಂಶ ಇರುವುದರಿಂದ ಹೆಚ್ಚಿನವರು ಚಾಕೊ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ. ಆದರೆ ಸೌಂದರ್ಯ ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ಡಾರ್ಕ್ ಚಾಕೊಲೆಟ್ ತುಂಬಾ ಪ್ರಯೋಜನಕಾರಿ ಎಂದಿದ್ದಾರೆ ಸ್ವೀಡನ್​ನ ವಿಜ್ಞಾನಿಗಳು.

ಸಿಟ್ರಿಕ್ ಆಮ್ಲವು ಚಾಕೊಲೆಟ್​ನಲ್ಲಿರುವುದರಿಂದ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸೃಷ್ಟಿಸುತ್ತದೆ ಎನ್ನಲಾಗುತ್ತದೆ. ಈ ಬಗ್ಗೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಚಾಕೊಲೆಟ್​ನಲ್ಲಿರುವ ಸಿಟ್ರಿಕ್ ಆಮ್ಲದಿಂದ ಕೊಬ್ಬು ಉಂಟಾಗುವುದಿಲ್ಲ, ಬದಲಾಗಿ ಚಾಕೊಲೆಟ್​ನೊಂದಿಗೆ ತಿನ್ನುವ ಇತರೆ ಫ್ಯಾಟಿ ಫುಡ್​ಗಳಿಂದ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ಚಾಕೊಲೆಟ್​ನಲ್ಲಿ ಮೆಗ್ನಿಷಿಯಂ, ಐರನ್ ಮತ್ತು ಕಾಪರ್ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಪಾಲಿಫೆನಾಲ್ ಎಂಬ ಅಂಟಿ-ಆ್ಯಕ್ಸಿಡೆಂಟ್​​ ಅಂಶವಿದ್ದು ಇದು ರೋಗ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪಾಲಿಫೆನಾಲ್ ಅಂಶ ದೇಹದಲ್ಲಿ ಹೆಚ್ಚಾದಂತೆ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತದೆ. ಅಲ್ಲದೆ ಡಾರ್ಕ್​ ಚಾಕೊಲೆಟ್​ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣಗೊಳ್ಳುತ್ತದೆ.

40 ಗ್ರಾಂ ಚಾಕೊಲೆಟ್​ನಲ್ಲಿ ಕೇವಲ 6 ಮಿಲಿ ಗ್ರಾಂಗಳಷ್ಟು ಮಾತ್ರ ಕೆಫಿನ್ ಕಂಡುಬರುತ್ತದೆ. ಆದರಿಂದ ಚಾಕೊಲೆಟ್​ನಲ್ಲಿ ಕೆಫಿನ್ ಅಂಶ ಹೆಚ್ಚಿರುತ್ತದೆ ಎಂಬುದು ತಪ್ಪು ಗ್ರಹಿಕೆಯಾಗಿದೆ. 6 ಮಿಲಿ ಗ್ರಾಂ ಕೆಫಿನ್ ಪ್ರತಿನಿತ್ಯ ಕುಡಿಯುವ ಕಾಫಿನಲ್ಲೂ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹೆಚ್ಚಿನ ಜನರು ಚಾಕೊಲೆಟ್​ ಸೇವನೆ ದಂತಕ್ಷಯದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ನಂಬುತ್ತಾರೆ. ಆದರೆ ಹಲ್ಲುಗಳು ಹುಳುಕಾಗಲು ಚಾಕೊಲೆಟ್​ ಒಂದೇ ಕಾರಣವಲ್ಲ. ಬದಲಾಗಿ ಬಾಯಲ್ಲಿ ಉಳಿಯುವ ಪಿಷ್ಟ ಮತ್ತು ಸಕ್ಕರೆ ಅಂಶಗಳ ಆಹಾರಗಳು ಕಾರಣವಾಗುತ್ತವೆ. ಚಾಕೊಲೆಟ್​ನಲ್ಲಿರುವ ಕ್ಯಾಲ್ಸಿಯಂ ಮತ್ತು ಫಾಸ್ಪೇಟ್​ ಅಂಶಗಳು ಹಲ್ಲಿನ ಆರೋಗ್ಯ ಹೆಚ್ಚಿಸುವಲ್ಲಿಯು ಪ್ರಮುಖ ಪಾತ್ರವಹಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ