Periods Myth: ಭಾರತದಲ್ಲಿದೆ ಪಿರಿಯಡ್ಸ್​ ಬಗ್ಗೆ ಈ ತಪ್ಪು ತಿಳುವಳಿಕೆಗಳು

Myths about Menstruation: ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ 77% ಕ್ಕಿಂತ ಹೆಚ್ಚು ಮುಟ್ಟಾಗುವ ಹುಡುಗಿಯರು ಮತ್ತು ಮಹಿಳೆಯರು ಹಳೆಯ ಬಟ್ಟೆಯನ್ನು ಬಳಸುತ್ತಾರೆ, ಇದನ್ನು ಹೆಚ್ಚಾಗಿ ಮರುಬಳಕೆ ಮಾಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಟ್ಟೆಂಬುದು (Periods) ಸ್ವಾಭಾವಿಕ ಹಾಗೂ ಪ್ರತಿ ಹೆಣ್ಣು (Women) ಶಾರೀರಿಕವಾಗಿ ಅನುಭವಿಸುವ ಒಂದು ಸಹಜ ಪ್ರಕ್ರಿಯೆ. ಆದಾಗ್ಯೂ, ಮುಟ್ಟಿನ ಬಗ್ಗೆ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ (Rural Part) ಭಾಗಗಳಲ್ಲಿ ಸಾಕಷ್ಟು ಮೌಢ್ಯಗಳು ತುಂಬಿಕೊಂಡಿವೆ. ಇದರ ಪ್ರಭಾವ ಎಷ್ಟಿದೆ ಎಂದರೆ ಇದು ಹೆಣ್ಣನ್ನು ಸಾಮಾಜಿಕ-ಸಾಂಸ್ಕೃತಿಕ ಜೀವನದ ಹಲವಾರು ಅಂಶಗಳಿಂದ ಹೊರಗಿಡುವಂತಹ ನಿಷೇಧಗಳು ಮತ್ತು ಪುರಾಣಗಳಿಂದ ಸುತ್ತುವರಿದಿದೆ. ಭಾರತದಲ್ಲಿ (India), ಈ ವಿಷಯವನ್ನು ಇಂದಿಗೂ ಮುಕ್ತವಾಗಿ ಮಾತನಾಡದೆ ಒಳಗೊಳಗೆ ಇದರ ನೋವನ್ನು ಅನುಭವಿಸುವ ಅನೇಕ ಹೆಣ್ಣು ಮಕ್ಕಳಿದ್ದಾರೆ ಎಂದರೆ ತಪಾಗಲಿಕ್ಕಿಲ್ಲ . ಅನೇಕ ಸಮಾಜಗಳಲ್ಲಿ ಮುಟ್ಟಿನ ಬಗ್ಗೆ ಇರುವ ಇಂತಹ ನಿಷೇಧಗಳು ಹುಡುಗಿಯರ ಮತ್ತು ಮಹಿಳೆಯರ ಭಾವನಾತ್ಮಕ ಸ್ಥಿತಿ, ಮನಸ್ಥಿತಿ ಮತ್ತು ಜೀವನಶೈಲಿ (Lifestyle) ಮತ್ತು ಮುಖ್ಯವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಬೇಕು. 

ಮುಟ್ಟಿನ ಬಗ್ಗೆ ಹೇರಲಾಗಿರುವ ಸಾಮಾಜಿಕ-ಸಾಂಸ್ಕೃತಿಕ ನಿಷೇಧಗಳು ಮತ್ತು ಅದರ ಸುತ್ತಲಿರುವ ನಂಬಿಕೆಗಳನ್ನು ಪರಿಹರಿಸುವುದು ಒಂದು ದೊಡ್ಡ ಸವಾಲಾಗಿರುವುದಲ್ಲದೆ, ಹುಡುಗಿಯರು ಈ ಪ್ರಕ್ರಿಯೆ ಬಗ್ಗೆ ಹೊಂದಿರುವ ಕಡಿಮೆ ಪ್ರಮಾಣದ ಜ್ಞಾನ ಮಟ್ಟ ಮತ್ತು ಪ್ರೌಢಾವಸ್ಥೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಟ್ಟಿನ ಮತ್ತು ಸಂತಾನೋತ್ಪತ್ತಿಯ ಬಗೆಗಿನ ಅವರು ಹೊಂದಿರುವ ಸಮರ್ಪಕ ಮಟ್ಟದಲ್ಲಿರದೆ ಇರುವ ತಿಳುವಳಿಕೆಯಿಂದ ಈ ಒಟ್ಟಾರೆ ಮುಟ್ಟು ಪ್ರಕ್ರಿಯೆ ಸಂಕೀರ್ಣವಾಗಿ ಕಂಡುಬರುತ್ತದೆ. 

ಹೀಗಾಗಿ, ಈ ಸಮಸ್ಯೆಗಳನ್ನು ಎದುರಿಸಲು ಕಾರ್ಯತಂತ್ರದ ವಿಧಾನವನ್ನು ಅನುಸರಿಸುವ ಅವಶ್ಯಕತೆಯಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಮುಟ್ಟಿನ ಸಂಬಂಧಿತ ಮೌಢ್ಯಗಳು, ಮಹಿಳೆಯರ ಜೀವನದ ಮೇಲೆ ಅವುಗಳ ಪ್ರಭಾವ, ಪ್ರಾಥಮಿಕ ಆರೈಕೆಯಲ್ಲಿ ಈ ಸಮಸ್ಯೆಗಳನ್ನು ಪರಿಹರಿಸುವುದು ಮಹತ್ವವೇ ಆಗಿದೆ.

ಮುಟ್ಟಿನ ಹುಟ್ಟು ಹಾಗೂ ಮೌಢ್ಯ

ನೀವು ಅಧ್ಯಯನ ಮಾಡಿದರೆ ಭಾರತೀಯ ಪುರಾಣಗಳು ವೈದಿಕ ಕಾಲದ ಕಥೆಯೊಂದಿಗೆ ಮುಟ್ಟಿನ ಬಗ್ಗೆ ವಿವರಿಸುತ್ತವೆ. ಕೋಪದ ಭರದಲ್ಲಿ, ಇಂದ್ರದೇವನು ವೃತಾಸ್ ಎಂಬ ಋಷಿಯನ್ನು ಕೊಂದನು ಮತ್ತು ಬ್ರಹ್ಮ-ಹತ್ಯಾ (ಬ್ರಾಹ್ಮಣನನ್ನು ಕೊಲ್ಲುವುದು) ಅಪರಾಧವನ್ನು ಮಾಡಿದನು. ತನ್ನ ತಪ್ಪಿನ ಅರಿವಾಗಿ ಇಂದ್ರನು ಈ ಪಾಪದ ಕರ್ಮವು ಪರಿಹರಿಸುವಂತೆ ವಿಷ್ಣುವಿನನ್ನು ಕೇಳಿಕೊಂಡಾಗ, ಭಗವಾನ್ ವಿಷ್ಣು ಇಂದ್ರನಿಗೆ ಇದರ ಭಾರವನ್ನು  ಭೂಮಿ, ಮರಗಳು, ನೀರು ಮತ್ತು ಮಹಿಳೆಯರ ನಡುವೆ ಸಮನಾಗಿ ಹಂಚಲು ಸೂಚಿಸಿದನಂತೆ. ಹಾಗಾಗಿಯೇ ಹೆಣ್ಣು ಇಂದಿಗೂ ಆ ಭಾರವನ್ನು ಮುಟ್ಟಿನ ರೂಪದಲ್ಲಿ ಅನುಭವಿಸುತ್ತಿರುವುದಾಗಿ ಪೌರಾಣಿಕ ಕಥೆಯೊಂದರಿಂದ ತಿಳಿದುಬರುತ್ತದೆ. 

ಮಿಥ್ಯ/ಮೌಢ್ಯ  

ಮುಟ್ಟು ಸಾಮಾನ್ಯವಾದ ತಲೆ ನೋವಿದ್ದಂತೆ - ಮುಟ್ಟಿನ ನೋವು ಡಿಸ್ಮೆನೋರಿಯಾ ಎಂಬ ವೈದ್ಯಕೀಯ ಸ್ಥಿತಿಯಾಗಿದೆ. ಸರಿಸುಮಾರು 20% ಮಹಿಳೆಯರು ಡಿಸ್ಮೆನೊರಿಯಾವನ್ನು ಹೊಂದಿದ್ದಾರೆ, ಅದು ಅವರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಉಳಿದ 80% ಜನರಿಗೆ ಸಹ, ಇದು "ತಲೆನೋವಿನಂತೆ" ಅಂತೂ ಖಂಡಿತ ಅಲ್ಲ. ಇದರ ಪ್ರಭಾವ ಹಾಗೂ ಸಾಮರ್ಥ್ಯಕ್ಕನುಸಾರವಾಗಿ ಇದು ದೇಹದ ಮೇಲೆ ಪರಿಣಾಮ ಬೀರಬಹುದು ಮತ್ತು ಒಮ್ಮೊಮ್ಮೆ ಹೆಣ್ಣು ಹೆಚ್ಚು ಚಿಂತೆ ಮಾಡುವಂತೆ ಮಾಡಬಹುದು. ಇದೊಂದು ಸಹಜ ಶಾರೀರಿಕ ಪ್ರಕ್ರಿಯೆಯಾಗಿದ್ದು ತಲೆನೋವಂತೂ ಖಂಡಿತ ಅಲ್ಲ ಎಂದೇ ಹೇಳಬಹುದು.

ಮುಟ್ಟಿನ ರಕ್ತ ಅಶುದ್ಧ : ಇದು ಸಾಮಾನ್ಯವಾಗಿ ಎಲ್ಲೆಡೆ ಜನರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರು ನಂಬುವ ಮೌಢ್ಯ. ಹೆಣ್ಣು ಗರ್ಭಧರಿಸಿದಾಗ ಇದೇ ದ್ರವ್ಯ ಆ ಹೊಸ ಜೀವವನ್ನು ಸಲಹಲು ಸಹಕರಿಸುತ್ತದೆ. ಹೀಗೆ ಜೀವವೊಂದನ್ನು ಸಲಹುವ ದ್ರವ್ಯ ಅಶುದ್ಧ ಅಥವಾ ಅಪವಿತ್ರ ಹೇಗಾಗಬಲ್ಲುದು? ಇದರಲ್ಲಿ ಕಡಿಮೆ ರಕ್ತ ಕಣಗಳಿರಬಹುದಾದರೂ ಇದು ಹೆಣ್ಣಿನ ದೇಹದಲ್ಲಿ ಹರಿಯುವ ಒಂದು ಅಂಶವಾಗಿದ್ದು ಹೆಣ್ಣು ಹೊಸ ಜೀವಕ್ಕೆ ಆಶ್ರಯ ನೀಡಲು ಸಜ್ಜಾಗಿದ್ದಾಳೆ ಎಂಬುದನ್ನು ಹೇಳುತ್ತದೆ. 

ಮುಟ್ಟಾದ ಹೆಣ್ಣು ಅಶುದ್ಧಳಾಗಿರುತ್ತಾಳೆ : ಇದು ಇನ್ನೊಂದು ಎಲ್ಲೆಡೆ ಸಾಮಾನ್ಯವಾಗಿ ಅಂದರೆ ಭಾರತದ ಬಹು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಮೌಢ್ಯವಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ ಮುಟ್ಟಾದ ಮಹಿಳೆಯು ದೇವರು ಇರುವೆಡೆ ಅಥವಾ ದೇವಸ್ಥಾನಗಳಿಗೆ ಬರುವುದನ್ನು ನಿಷೇಧಿಸಿಸಿರುವುದೇ ಈ ಮೌಢ್ಯಕ್ಕೆ ಬುನಾದಿ ಆಗಿದೆ ಎಂದರೂ ತಪ್ಪಿಲ್ಲ. ಆದರೆ ಅಂದು ಈ ರೀತಿಯ ವಿಚಾರವನ್ನು ಗ್ರಂಥಗಳಲ್ಲಿ ಇನ್ನ್ಯಾವುದೋ ಒಳ್ಳೆಯ ದೃಷ್ಟಿಕೋನದಿಂದ ಬರೆಯಲಾಗಿದ್ದರೂ ಕಾಲ ಕಳೆದಂತೆ ಅದನ್ನು ತಿರುಚಿ ಮುರುಚಿ ತಮ್ಮದೆ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತ ಬರೆದಿರಬಹುದಾದ ಸಾಧ್ಯತೆಯಿದ್ದು ಅದರಿಂದಾಗಿಯೇ ಇದೊಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದ್ದು ನಿಜಕ್ಕೂ ದುರದೃಷ್ಟಕರ. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಹೆಣ್ಣು ದೇವರಿಗೆ ಕೇವಲ ಪಂಚಾಂಗ ನಮಸ್ಕಾರ ಮಾಡುವಂತೆ ಸೂಚಿಸಲಾಗಿದ್ದು ಪುರುಷ ಸಾಷ್ಟಾಂಗ ನಮಸ್ಕಾರ ಮಾಡುವಂತೆ ಹೇಳಲಾಗಿದೆ. 

ದಿನಚರಿಯಲ್ಲಿ ನಿರ್ಬಂಧಗಳು : ಅನೇಕ ಹುಡುಗಿಯರು ಮತ್ತು ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಕೇವಲ ಮುಟ್ಟಿನ ಕಾರಣಕ್ಕೆ ಅನೇಕ ರೀತಿಯ ನಿರ್ಬಂಧಗಳಿಗೆ ಒಳಗಾಗುತ್ತಾರೆ. "ಪೂಜೆ" ಕೋಣೆಗೆ ಪ್ರವೇಶಿಸದಿರುವುದು. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿರುವ ಹುಡುಗಿಯರಿಗೆ ಇದು ಪ್ರಮುಖ ನಿರ್ಬಂಧವಾಗಿದ್ದರೆ, ಮುಟ್ಟಿನ ಸಮಯದಲ್ಲಿ ಗ್ರಾಮೀಣ ಹುಡುಗಿಯರು ಅಡುಗೆಮನೆಗೂ ಪ್ರವೇಶಿಸದಂತಿರುವ ನಿರ್ಬಂಧ.  ಋತುಮತಿಯಾದ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಪ್ರಾರ್ಥನೆ ಸಲ್ಲಿಸಲು ಮತ್ತು ಪವಿತ್ರ ಪುಸ್ತಕಗಳನ್ನು ಮುಟ್ಟದಂತೆ ನಿರ್ಬಂಧಿಸಲಾಗುವುದು. 

ಆಹಾರ ತಯಾರಿಸುವಂತಿಲ್ಲ : ಮುಟ್ಟಾದ ಮಹಿಳೆಯರು ಅನೈರ್ಮಲ್ಯ ಹಾಗೂ ಅಶುದ್ಧರು ಆಗಿರುವುದರಿಂದ ಅವರು ತಯಾರಿಸುವ ಆಹಾರವು ಅಶುದ್ಧವಾಗಿರುತ್ತದೆ ಎಂದು ನಂಬಲಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಲಾಗಿದ್ದು ಸಾಮಾನ್ಯ ನೈರ್ಮಲ್ಯ ಕ್ರಮಗಳನ್ನು ಗಣನೆಗೆ ತೆಗೆದುಕೊಂಡಾಗ, ಯಾವುದೇ ವೈಜ್ಞಾನಿಕ ಪರೀಕ್ಷೆಯು ಯಾವುದೇ ಆಹಾರ ತಯಾರಿಕೆಯಲ್ಲಿ ಹಾಳಾಗಲು ಮುಟ್ಟು ಕಾರಣವೆಂದು ತೋರಿಸಿಲ್ಲ. ಹಾಗಾಗಿ ಇದು ಒಂದು ರೀತಿಯ ಮೌಢ್ಯವೇ ಆಗಿದೆ. 

ಇದನ್ನೂ ಓದಿ: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಇವರ ಜೀವನ, ವಿಶೇಷ ಚೇತನರ ಸಾಧನೆಯ ಕಥೆ ಈ ಮಿಟ್ಟಿ ಕೆಫೆ!

ಮುಟ್ಟು ಹಾಗೂ ಮಾಟಮಂತ್ರಗಳು : ಭಾರತದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮುಟ್ಟಿನ ರಕ್ತವು ಅಶುದ್ಧ ಹಾಗೂ ದುಷ್ಟಶಕ್ತಿಗಳಿಗೆ ಪ್ರಿಯವಾಗಿವೆ ಎಂದು ನಂಬುತ್ತಾರೆ. ಕೆಲವು ಸಂಸ್ಕೃತಿಗಳಲ್ಲಿ, ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಳಸಿದ ಬಟ್ಟೆಗಳನ್ನು ದುಷ್ಟಶಕ್ತಿಗಳು ಬಳಸದಂತೆ ತಡೆಯಲು ಹೂಳುತ್ತಾರೆ. ಕೆಲವೆಡೆ ಮುಟ್ಟಿನ ರಕ್ತವು ಅಪಾಯಕಾರಿ ಎಂದು ನಂಬಲಾಗಿದ್ದು ದುರುದ್ದೇಶಪೂರಿತ ವ್ಯಕ್ತಿಯು ಮಾಟಮಂತ್ರ ದಂತಹ ಮೌಢ್ಯ ನಂಬಿಕೆ ಬಳಸಿಕೊಂಡು ಮುಟ್ಟಿನ ಮಹಿಳೆ ಅಥವಾ ಹುಡುಗಿಗೆ ಹಾನಿ ಮಾಡಿದ ಉದಾಹರಣೆಗಳಿವೆ. ಮಹಿಳೆಯು ತನ್ನ ಋತುಚಕ್ರದ ರಕ್ತವನ್ನು ಪುರುಷನ ಮೇಲೆ ತನ್ನ ಇಚ್ಛೆಯನ್ನು ಹೇರಲು ಬಳಸಬಹುದು ಎಂದು ಸಹ ನಂಬಲಾಗಿದೆ. ಕುತೂಹಲಕಾರಿಯಾಗಿ, ಭಾರತ ಸೇರಿದಂತೆ ಏಷ್ಯಾದಲ್ಲಿ, ಇಂತಹ ನಂಬಿಕೆಗಳು ಇನ್ನೂ ಆಚರಣೆಯಲ್ಲಿವೆ. ಆದಾಗ್ಯೂ, ಇದಕ್ಕೆ ಯಾವುದೇ ತಾರ್ಕಿಕ ಅಥವಾ ವೈಜ್ಞಾನಿಕ ತಿಳುವಳಿಕೆಯಾಗಲಿ ವಿವರಣೆಯಾಗಲಿ ಪರಿಣಾಮಕಾರಿಯಾಗಿ ಹರಡದಿರುವುದೇ ಕಳವಳಕಾರಿ ಸಂಗತಿ. 

ಮೌಢ್ಯದಿಂದಾಗುವ ಪರಿಣಾಮ

ಅನೇಕ ಸಮಾಜಗಳಲ್ಲಿ ಮುಟ್ಟಿನ ಬಗ್ಗೆ ಇರುವ ಇಂತಹ ನಿಷೇಧಗಳು ಹುಡುಗಿಯರ ಮತ್ತು ಮಹಿಳೆಯರ ಭಾವನಾತ್ಮಕ ಸ್ಥಿತಿ, ಮನಸ್ಥಿತಿ ಮತ್ತು ಜೀವನಶೈಲಿ ಮತ್ತು ಮುಖ್ಯವಾಗಿ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತವೆ. ಅವರಲ್ಲಿ ಒಂದು ರೀತಿಯ ಕೀಳರಿಮೆಯ ಭಾವನೆ ಹುಟ್ಟುವಂತೆ ಮಾಡುತ್ತದೆ. ಹೆಚ್ಚಿನ ಸಂಖ್ಯೆಯ ಹುಡುಗಿಯರು ಮುಟ್ಟಾದಾಗ ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ. ಭಾರತ ಒಂದರಲ್ಲೇ ಇದರ ಪ್ರಮಾಣ 23% ಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ. ಇದರ ಜೊತೆಗೆ ಮಾಸಿಕ ಋತುಸ್ರಾವವೂ ಸಹ ಮಹಿಳಾ ಶಿಕ್ಷಕರಿಗೆ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿ, ಲಿಂಗ - ಸ್ನೇಹಿಯಲ್ಲದ ಶಾಲಾ ಸಂಸ್ಕೃತಿ ಮತ್ತು ಮೂಲಸೌಕರ್ಯ ಮತ್ತು ಸಾಕಷ್ಟು ಮುಟ್ಟು ನಿರ್ವಹಣೆಯ ಸೌಲಭ್ಯಗಳ ಕೊರತೆ ಕಲಿಯುವಿಕೆ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತವೆ. 

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಕಾಲುಬಾಯಿ ರೋಗಕ್ಕೆ ಇಲ್ಲಿದೆ ಮನೆಮದ್ದು

ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ 77% ಕ್ಕಿಂತ ಹೆಚ್ಚು ಮುಟ್ಟಾಗುವ ಹುಡುಗಿಯರು ಮತ್ತು ಮಹಿಳೆಯರು ಹಳೆಯ ಬಟ್ಟೆಯನ್ನು ಬಳಸುತ್ತಾರೆ, ಇದನ್ನು ಹೆಚ್ಚಾಗಿ ಮರುಬಳಕೆ ಮಾಡಲಾಗುತ್ತದೆ. ಹೀಗಾಗಿ ಸುರಕ್ಷಿತವಲ್ಲದ ಮತ್ತು ಅಸಮರ್ಪಕ ತೊಳೆಯುವ ಸೌಲಭ್ಯಗಳಿಂದಾಗಿ ಅವರು ಸೋಂಕಿಗೆ ಒಳಗಾಗುವುದು ಹೆಚ್ಚುತ್ತದೆ. ಮುಟ್ಟಿನ ರಕ್ತವು ಒಂದು ಅಹಿತಕರವಾದ ವಾಸನೆಯನ್ನು ಹೊಂದಿರುವುದರಿಂದ ಹುಡುಗಿಯರನ್ನು ಕಳಂಕಿತ ಎನ್ನುವಂತೆ ಮಾಡುವ ಮೂಲಕ ಅವಳು ಮಾನಸಿಕವಾಗಿ ಯಾತನೆ ಅನುಭವಿಸುವಂತೆ ಮಾಡುತ್ತದೆ.
Published by:Sandhya M
First published: