• Home
  • »
  • News
  • »
  • lifestyle
  • »
  • Mysuru Dasara 2022: ಮೈಸೂರು ದಸರಾ ಎಷ್ಟೊಂದು ಸುಂದರ, ನೀವೂ ಹೋದ್ರೆ ಇವುಗಳನ್ನು ನೋಡಲು ಮರೆಯಬೇಡಿ

Mysuru Dasara 2022: ಮೈಸೂರು ದಸರಾ ಎಷ್ಟೊಂದು ಸುಂದರ, ನೀವೂ ಹೋದ್ರೆ ಇವುಗಳನ್ನು ನೋಡಲು ಮರೆಯಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Must Visit Places During: ಮೈಸೂರಿನಲ್ಲಿ ನೋಡಲು ಹಲವಾರು ಸ್ಥಳಗಳಿದೆ. ಆದರೆ, ದಸರಾ ಸಮಯದಲ್ಲಿ ಮಾತ್ರ ನೋಡಲು ಕೆಲವೊಂದು ವಿಶೇಷ ಕಾರ್ಯಕ್ರಮಗಳು (Special Program) ಇದ್ದು, ಅದರ ಮಾಹಿತಿ ಇಲ್ಲಿದೆ.

  • Share this:

ಮೈಸೂರು ದಸರಾ (Mysuru Dasara) ಎಷ್ಟೊಂದು ಸುಂದರ ಈ ಹಾಡು ಎಂದಿಗೂ ಸೂಕ್ತವಾಗುತ್ತದೆ. ಸದ್ಯ ಮೈಸೂರು ದಸರಾ ಆರಂಭವಾಗಿದೆ. ಇದು  ಕರ್ನಾಟಕದ (Karnataka)  ರಾಜ್ಯ ಉತ್ಸವ ಎಂದರೆ ತಪ್ಪಲ್ಲ. ಬಹುತೇಕ ವರ್ಷ ಪೂರ್ತಿ ಜನರು ಕಾಯುತ್ತಿರುವ ಒಂದು ಅದ್ಭುತ ಹಬ್ಬಗಳಲ್ಲಿ ಇದು ಸಹ ಒಂದು. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾವನ್ನು ಆಚರಿಸುವುದನ್ನ ನೋಡುವುದು ಒಂದು ಸುಂದರ ಅನುಭವ ಎನ್ನಬಹುದು. 10 ದಿನಗಳ ಕಾಲ ನಡೆಯುವ ಈ ದಸರಾ ಆಚರಣೆಗೆ ಸಾಕ್ಷಿಯಾಗಲು ಪ್ರತಿವರ್ಷ ಲಕ್ಷಗಟ್ಟಲೆ ಪ್ರವಾಸಿಗರು (Tourist) ದೇಶ ವಿದೇಶಗಳಿಂದ  ಆಗಮಿಸುತ್ತಾರೆ. ಮೈಸೂರಿನಲ್ಲಿ ನೋಡಲು ಹಲವಾರು ಸ್ಥಳಗಳಿದೆ. ಆದರೆ, ದಸರಾ ಸಮಯದಲ್ಲಿ ಮಾತ್ರ ನೋಡಲು ಕೆಲವೊಂದು ವಿಶೇಷ ಕಾರ್ಯಕ್ರಮಗಳು (Special Program) ಇದ್ದು, ಅದರ ಮಾಹಿತಿ ಇಲ್ಲಿದೆ.


 ಅಂಬಾ ವಿಲಾಸ ಅರಮನೆ


ಮೊದಲನೆಯದಾಗಿ ದಸರಾ ಸಮಯದಲ್ಲಿ ಯಾವುದನ್ನಾ ನೋಡಲು ಮರೆತರ ಅರಮನೆಯನ್ನು ಮಿಸ್​ ಮಾಡಬಾರದು. ಅದರಲ್ಲೂ ಸಂಜೆಯ ಸಮಯದಲ್ಲಿ ಝಗಮಗಿಸುವ ದೀಪಾಲಂಕಾರದಲ್ಲಿ ಅರಮನೆಯನ್ನು ಕಣ್ತುಂಬಿಕೊಳ್ಳುವುದು ನಿಜಕ್ಕೂ ಅದೃಷ್ಟವೇ ಸರಿ. ಬೆಳಗಿನ ಸಮಯದಲ್ಲಿ ಸಹ ಅರಮನೆ ಸುತ್ತಲೂ ಅಲಂಕಾರ ಮಾಡಲಾಗಿರುತ್ತದೆ.


ಚಾಮುಂಡಿ  ಬೆಟ್ಟ


ನಾಡ ಅಧಿದೇವತೆ ಚಾಮುಂಡಿ ತಾಯಿ ನೆಲೆಸಿರುವ ಬೆಟ್ಟವನ್ನು ಈ ಸಮಯದಲ್ಲಿ ನೋಡಲು ಎರಡು ಕಣ್ಣು ಸಾಲದು. ಬೆಟ್ಟದ ಒಂದು ಬದಿಯಲ್ಲಿ ಸಂಜೆ ಅರಮನೆಗೆ ಲೈಟ್​ ಹಾಕಿದ ಸಂದರ್ಭದಲ್ಲಿ ಲೈಟ್​ ಹಾಕಲಾಗುತ್ತದೆ. ಬರೀ ದೀಪಾದಲ್ಲಿ ವೆಲ್​ಕಮ್ ಮತ್ತೆ ಸುಸ್ವಾಗತ ಎಂದು ಕನ್ನಡ ಹಾಗೂ ಇಂಗ್ಲೀಷ್​ನಲ್ಲಿ ಹಾಕಲಾಗಿರುತ್ತದೆ. ಅಲ್ಲದೇ, ಈ 10 ದಿನಗಳ ಕಾಲ ದೇವಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ.


ಪ್ರದರ್ಶನ


ದಸರಾ ನೋಡಲು ಮೈಸೂರಿಗೆ ಬಂದ ಮೇಲೆ ಅರಮನೆ ಮಳಿ ಇರುವ ಇಕ್ಸಿಬೀಷನ್ ಮೈದಾನಕ್ಕೆ ವಿಸಿಟ್​ ಮಾಡದಿದ್ದರೆ ಹೇಗೆ ಹೇಳಿ. ಇಲ್ಲಿ ನಿಮಗೆ ಸಿಗದ ಯಾವುದೇ ವಸ್ತು ಇಲ್ಲ. ಹೆಂಗಳೆಯರು ವಿವಿಧ ರೀತಿಯ ಬಟ್ಟೆ ಶಾಪಿಂಗ್ ಮಾಡುವುದರಿಂದ ಹಿಡಿದು ಮಕ್ಕಳಿಗೆ ಸಹ ವಿಶಿಷ್ಟ ಆಟಗಳು ಸಹ ಇಲ್ಲಿ ಇದೆ. ಹಾಗೆಯೇ, ಆಹಾರ ಪ್ರಿಯರಿಗೆ ಸಹ ಬಹಳಷ್ಟು ಆಯ್ಕೆಗಳು ಸಿಗುತ್ತದೆ. ವಿವಿಧ ಸರ್ಕಾರಿ ಸಂಸ್ಥೆಯಿಂದ ಸಹ ಪ್ರದರ್ಶನಗಳು ನಡೆಯುತ್ತವೆ. ಒಂದು ಬಾರಿ ಒಳಗೆ ಹೋದರೆ ಹೊರ ಬರಲು ಕಡಿಮೆ ಎಂದರೂ ಸುಮಾರು 4 ಗಂಟೆಗಳು ಬೇಕು. ಫಲ –ಪುಷ್ಪ ಪ್ರದರ್ಶನ


ಮೈಸೂರಲ್ಲಿ ಬಹಳ ಫೇಮಸ್​ ಕಾರ್ಯಕ್ರಮಗಳಲ್ಲಿ ಇದು ಒಂದು. ವಿವಿಧ ರೀತಿಯ ಹೂಗಳನ್ನು ವಿಭಿನ್ನವಾಗಿ ತೋಟಗಾರಿಕೆ ಇಲಾಖೆ ಪ್ರಸ್ತುತ ಪಡಿಸುತ್ತದೆ. ಪುಷ್ಪ ಪ್ರದರ್ಶನದ ಅಂಗವಾಗಿ ಕುಪ್ಪಣ್ಣ ಪಾರ್ಕ್‌ನಲ್ಲಿ ಸುಮಾರು 50 ಸಾವಿರ ಹೂವಿನ ಕುಂಡಗಳನ್ನು ಅಲಂಕರಿಸಲಾಗಿದೆ. ಕೆಲವು ವಿಶೇಷ ಸಸ್ಯ ಪ್ರಭೇದಗಳನ್ನು ಪುಣೆಯಿಂದ ಖರೀದಿಸಲಾಗಿದ್ದು, ಅವುಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿದೆ.


ಗ್ಲಾಸ್ ಹೌಸ್​ನಲ್ಲಿ ಹೂಗಳಿಂದಲೇ ರಾಷ್ಟ್ರಪತಿ ಭವನದ ಪ್ರತಿಕೃತಿ ನಿರ್ಮಿಸಲಾಗಿದೆ. ಇದಕ್ಕಾಗಿ ರೆಡ್​ ರೋಸ್, ವೈಟ್ ರೋಸ್, ಆ್ಯಸ್ಪಾರಾಗಸ್, ಸೇವಂತಿ ಬಳಸಲಾಗಿದೆಯಂತೆ. ರಾಷ್ಟ್ರಪತಿ ಭವನದ ಪ್ರತಿಕೃತಿಯು 30 ಅಡಿ ಎತ್ತರ ಹಾಗೂ 50ರಿಂದ 60 ಅಡಿ ಅಗಲವಿದೆ ಎನ್ನುವ ಮಾಹಿತಿಯನ್ನು ತೋಟಗಾರಿಕಾ ಇಲಾಖೆ ತಿಳಿಸಿದೆ.


 ಆಹಾರ ಮೇಳ


ಆಹಾರ ಮೇಳಗಳಿಗೆ ಈ ದಸರಾ ಹೆಚ್ಚು ಫೇಮಸ್​ ಎನ್ನಬಹುದು. ಅಕ್ಟೋಬರ್ 4 ರವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮತ್ತು ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಬಳಿಯ ಮುಡಾ ಮೈದಾನದಲ್ಲಿ ಆಹಾರ ಮೇಳ ಆರಂಭವಾಗಿದ್ದು, ಈ ವರ್ಷದ ಆಹಾರ ಮೇಳದಲ್ಲಿ ಕರಾವಳಿ ಕರ್ನಾಟಕ, ಮಲೆನಾಡು, ದಕ್ಷಿಣ ಮತ್ತು ಉತ್ತರ ಕನ್ನಡ ಮತ್ತು ಕೊಡಗಿನ ರುಚಿಕರ ಆಹಾರಗಳನ್ನು ಸವಿಯಬಹುದು.  ಇನ್ನು ದಸರಾ ಅಂಗವಾಗಿ ವೀಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿರುತ್ತದೆ. ಯುವ ದಸರಾ ಸೇರಿದಂತೆ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

Published by:Sandhya M
First published: