ಮೈಸೂರು ವಿಶ್ವವಿದ್ಯಾಲಯಲ್ಲಿದೆ ಉದ್ಯೋಗಾವಕಾಶ

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಮತ್ತು ಅಂಕಗಳನ್ನು ಪರಿಗಣಿಸಿ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

zahir | news18-kannada
Updated:October 31, 2019, 2:09 PM IST
ಮೈಸೂರು ವಿಶ್ವವಿದ್ಯಾಲಯಲ್ಲಿದೆ ಉದ್ಯೋಗಾವಕಾಶ
ಸಾಂದರ್ಭಿಕ ಚಿತ್ರ
  • Share this:
ಮೈಸೂರು ವಿಶ್ವವಿದ್ಯಾಲಯದಲ್ಲಿನ 'ಪ್ರಾಜೆಕ್ಟ್‌ ಫೆಲೋ' ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತ ಅಭ್ಯರ್ಥಿಗಳು ನವೆಂಬರ್ 11 ರೊಳಗೆ ಅಪ್ಲಿಕೇಶನ್ ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ಹೆಸರು:
ಪ್ರಾಜೆಕ್ಟ್‌ ಫೆಲೋ

ಹುದ್ದೆಗಳ ಸಂಖ್ಯೆ:
20 ಹುದ್ದೆಗಳು

ಮಾಸಿಕ ವೇತನ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 12,000 ರೂ. (ಕ್ರೋಢೀಕೃತ) ನೀಡಲಾಗುತ್ತದೆ.ವಿದ್ಯಾರ್ಹತೆ:
ಅರ್ಜಿದಾರರು ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇನ್ನು ಶೇ.50 ರಷ್ಟು ಅಂಕ ಪಡೆದಿರುವ SC / ST / PH ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ ಜೀವರಸಾಯನ ಶಾಸ್ತ್ರ / ಜೈವಿಕ ತಂತ್ರಜ್ಞಾನ / ಭೌತಶಾಸ್ತ್ರ / ಅನುವಂಶಿಕ / ಪ್ರಾಣಿಶಾಸ್ತ್ರ / ಸಸ್ಯಶಾಸ್ತ್ರ / ಅಣುಜೀವಶಾಸ್ತ್ರ / ರಸಾಯನ ಶಾಸ್ತ್ರ / ಸೂಕ್ಷ್ಮ ಜೀವ ವಿಜ್ಞಾನ / ವಸ್ತು ವಿಜ್ಞಾನಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತರು ಅರ್ಜಿ ಫಾರಂ ಭರ್ತಿ ಮಾಡುವ ಮೂಲಕ ಅರ್ಜಿಸಲ್ಲಿಸಬಹುದು. ಅಪ್ಲಿಕೇಶನ್​ ಜೊತೆ ಶೈಕ್ಷಣಿಕ ಅರ್ಹತೆ, ಸಂಶೋಧನಾ ಅನುಭವ, ಜಾತಿ ಪ್ರಮಾಣ ಪತ್ರ, ಇತ್ಯಾದಿಗಳನ್ನು ಒಳಗೊಂಡಿರಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ-
ಸಂಯೋಜಕರು,
ಇನ್‌ಸ್ಟಿಟ್ಯೂಷನ್ ಆಫ್‌ ಎಕ್ಸಲೆನ್ಸ್,
ವಿಜ್ಞಾನ ಭವನ,
ಮಾನಸಗಂಗೋತ್ರಿ, ಮೈಸೂರು.

ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಮತ್ತು ಅಂಕಗಳನ್ನು ಪರಿಗಣಿಸಿ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ನಾ ಮಕ್ಕಳ ಜೊತೆ ಬ್ಯುಸಿ ಕಣ್ರಪ್ಪ, ಸದ್ಯಕ್ಕೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ; ಆಯ್ರಾ-ಯಶ್ ವಿಡಿಯೋ ವೈರಲ್

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 11, 2019

ಹೆಚ್ಚಿನ ಮಾಹಿತಿ:
ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ನ್ನು ಕ್ಲಿಕ್ ಮಾಡಿ
ಅಧಿಸೂಚನೆ ಲಿಂಕ್: www.uni-mysore.ac.in
ವೆಬ್​ಸೈಟ್​ ಲಿಂಕ್: http://www.uni-mysore.ac.in

(ವಿ.ಸೂ: ಕೆಲವೊಂದು ಆ್ಯಪ್​ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)

 

ಬಿಗ್ ಬಿ ನೀಡಿದ ಬಿಗ್ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡ ದಕ್ಷಿಣ ಭಾರತದ ಸ್ಟಾರ್ ನಟ..!
First published:October 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ