ದಕ್ಷಿಣ ಭಾರತೀಯರ (South Indians) ಫೆವರೇಟ್ ತಿಂಡಿಗಳಲ್ಲಿ (Favorite Food) ಪ್ರಮುಖವಾದುದು ದೋಸೆ (Dose) ಮತ್ತು ಇಡ್ಲಿ (Idli). ಈ ಪೈಕಿ ಎರಡರಲ್ಲೂ ವೈರೆಟಿ ವೈರೆಟಿ ದೋಸೆ, ಇಡ್ಲಿಗಳಿವೆ. ಇನ್ನು ದೋಸೆ ವಿಚಾರಕ್ಕೆ ಬಂದ್ರೆ ಮಸಾಲೆ ದೋಸೆ (Masala Dose) ತುಂಬಾನೇ ಫೇಮಸ್. ಅದರಲ್ಲೂ ಮೈಸೂರು ಮಸಾಲೆ ದೋಸೆ (Mysore masala Dose) ಅಂತ ಹೆಸರು ಕೇಳುತ್ತಿದ್ದಂತೆ ಆಹಾರ ಪ್ರಿಯರ ಬಾಯಲ್ಲಿ ನೀರೂರುವುದು ಗ್ಯಾರಂಟಿ! ದೋಸೆಗಿಂತಲೂ ಮಸಾಲೆ ದೋಸೆ ಗರಿಗರಿಯಾಗಿದ್ದು ಒಳಗಡೆ ಹಚ್ಚಿದ ಕೆಂಪು ಚಟ್ನಿ ಹಾಗೂ ಆಲೂಗಡ್ಡೆಯ ಪಲ್ಯದ ರುಚಿಯೇ ಬೇರೆ. ಇದರೊಂದಿಗೆ ಚಟ್ನಿ, ಸಾಂಬಾರು ಹಾಕೊಂಡು ತಿಂತಾ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು.
ಅಂದಹಾಗೆ ಈ ರೀತಿಯ ಗರಿ ಗರಿಯಾದ, ರುಚಿ ರುಚಿಯಾದ ಮೈಸೂರು ಮಸಾಲ ದೋಸೆ ಮಾಡೋದು ಹೇಗೆ? ಅದು ಮನೆಯಲ್ಲಿ ಹೋಟೆಲ್ನಲ್ಲಿ ಕೊಡುವಷ್ಟೇ ರುಚಿಯಾದ ಮಸಾಲೆ ದೋಸೆ ಮಾಡೋದು ಹೇಗೆ ಅಂತ ತಲೆ ಕೆಡಿಸಿಕೊಂಡಿದ್ದೀರಾ? ಹಾಗಿದ್ರೆ ಚಿಂತೆ ಬಿಡಿ, ನಾವು ಕೊಟ್ಟಿರುವ ಈ ರೆಸಿಪಿ ಓದಿ, ನಿಮ್ಮ ಮನೆಯಲ್ಲೂ ಗರಿ ಗರಿಯಾದ, ರುಚಿ ರುಚಿಯಾದ ಮೈಸೂರು ಮಸಾಲೆ ದೋಸೆ ಮಾಡಿ, ಸಖತ್ ಬ್ರೇಕ್ಫಾಸ್ಟ್ ಮಾಡಿ…
ಮೈಸೂರು ಮಸಾಲೆ ದೋಸೆಗೆ ಬೇಕಾಗುವ ಪದಾರ್ಥಗಳು
* ಇಡ್ಲಿ ಅಕ್ಕಿ - 2 ಬಟ್ಟಲು
* ಮೆಂತ್ಯ- 2 ಚಮಚ
* ಉದ್ದಿನ ಬೇಳೆ – ಅರ್ಧ ಬಟ್ಟಲು
* ಕಡಲೆ ಬೇಳೆ – ಕಾಲು ಬಟ್ಟಲು
* ತೊಗರಿಬೇಳೆ -ಕಾಲು ಬಟ್ಟಲು
* ಅವಲಕ್ಕಿ - ಕಾಲು ಬಟ್ಟಲು
* ಅರಿಶಿಣದ ಪುಡಿ – ಕಾಲು ಚಮಚ
* ರವೆ - 1 ಬಟ್ಟಲು
* ಸಕ್ಕರೆ - ಅರ್ಧ ಚಮಚ
* ಎಣೆ – ಅಗತ್ಯಕ್ಕನುಗುಣವಾಗಿ
* ಉಪ್ಪು - ರುಚಿಗೆ ತಕ್ಕಷ್ಟು
ಇದನ್ನೂ ಓದಿ: Recipe: ಮನೆಯಲ್ಲಿ ಸುಲಭವಾಗಿ ಮಾಡಿ ರುಚಿಕರ ಮಜ್ಜಿಗೆ ಸಾಂಬಾರ್
ಮೈಸೂರು ಮಸಾಲೆ ದೋಸೆಗೆ ಹಿಟ್ಟು ರೆಡಿಮಾಡುವುದು ಹೇಗೆ?
* ಪಾತ್ರೆಯೊಂದನ್ನು ತೆಗೆದುಕೊಂಡು ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಹಾಗೂ ಮೆಂತ್ಯೆದ ಕಾಳುಗಳನ್ನು ಹಾಕಿ ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು.
* ಅವಲಕ್ಕಿಯನ್ನು ಪ್ರತ್ಯೇಕವಾಗಿ 1 ಗಂಟೆಗಳ ಕಾಲ ನೆನೆಹಾಕಬೇಕು.
* ನಂತರ ಮಿಕ್ಸಿ ಜಾರ್ ತೆಗೆದುಕೊಂಡು ನೆನೆ ಹಾಕಿದ್ದ ಅಕ್ಕಿ, ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು.
* ನಂತರ ಅವಲಕ್ಕಿಯನ್ನು ರುಬ್ಬಿಕೊಂಡು, ಪಾತ್ರೆಯೊಂದಕ್ಕೆ ಹಾಕಿ ಉಪ್ಪು ಹಾಕಿ 12 ಗಂಟೆಗಳ ಕಾಲ ನೆನೆಯಲು ಬಿಡಬೇಕು.
* ನಂತರ ಈ ಹಿಟ್ಟಿಗೆ ಅರ್ಧ ಚಮಚ ಸಕ್ಕರೆ, ರವೆ, ಅರಿಶಿಣದ ಪುಡಿ, ಚಿಟಿಕೆ ಅಡುಗೈ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಮೈಸೂರು ಮಸಾಲೆ ದೋಸೆ ಮಾಡುವ ವಿಧಾನ
* ಹಿಟ್ಟು ರೆಡಿಯಾದ ಬಳಿಕ ದೋಸೆ ಮಾಡಲು ತಯಾರಿ ಮಾಡಿಕೊಳ್ಳಬೇಕು
* ಒಲೆಯ ಮೇಲೆ ಪ್ಯಾನ್ ಇಟ್ಟು ಚೆನ್ನಾಗಿ ಕಾದ ನಂತರ ಹಿಟ್ಟನ್ನು ಹಾಕಿ ದೋಸೆಯ ಆಕಾರದಲ್ಲಿ ಹಾಕಿ, ಕೆಂಪಗೆ ಸುಡಬೇಕು.
* ನಂತರ ಕೆಂಪು ಚಟ್ಟಿಯನ್ನು ಒಂದು ಭಾಗದಲ್ಲಿ ಹಚ್ಚಿ ತೆಗೆಯಬೇಕು.
ಇದನ್ನೂ ಓದಿ: Recipe: ರುಚಿಕರ ಮಾವಿನಹಣ್ಣಿನ ಕರಿ ರೆಸಿಪಿ, ನೀವು ಒಮ್ಮೆ ಟ್ರೈ ಮಾಡಿ
ಚಟ್ನಿ ಅಥವಾ ಸಾಂಬಾರಿನೊಂದಿಗೆ ತಿನ್ನಿ
ಕಾಯಿ ಚಟ್ಟಿ ಅಥವಾ ದೋಸೆಗಾಗಿಯೇ ಮಾಡಿರುವ ಸಾಂಬಾರಿನೊಂದಿಗೆ ಈ ಮೈಸೂರು ಮಸಾವೆ ದೋಸೆಯನ್ನು ತಿಂದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ