ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

Mymul Direct Recruitment: ತಾಂತ್ರಿಕ ಅಧಿಕಾರಿ, ಇಂಜಿನಿಯರಿಂಗ್ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳು ಆಯಾ ವಿಭಾಗಕ್ಕೆ ಸಂಬಂಧಪಟ್ಟ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

zahir | news18-kannada
Updated:September 17, 2019, 8:27 AM IST
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
  • Share this:
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿರುವ ವಿವಿಧ ಹುದ್ದೆಗಳ ನೇಮಕಾತಿ ಪಕ್ರಟಣೆ ಹೊರಡಿಸಲಾಗಿದೆ. ಇಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯು ನೇರ ನೇಮಕಾತಿ ವಿಧಾನದಲ್ಲಿ ನಡೆಯಲಿದ್ದು, ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಒಟ್ಟು ಹುದ್ದೆಗಳ ಸಂಖ್ಯೆ ಮತ್ತು ವಿಭಾಗ:
168 ಹುದ್ದೆಗಳು

ಸಹಾಯಕ ವ್ಯವಸ್ಥಾಪಕರು: 14 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಡಿ.ಟಿ) : 5 ಹುದ್ದೆಗಳು
ಖರೀದಿ / ಉಗ್ರಾಣಾಧಿಕಾರಿ: 1 ಹುದ್ದೆ
ತಾಂತ್ರಿಕಾಧಿಕಾರಿ : 05 ಹುದ್ದೆಗಳುಡೆಪ್ಯೂಟಿ ಸೂಪರ್ ವೈಸರ್ ದರ್ಜೆ-2: 4 ಹುದ್ದೆಗಳು
ಭದ್ರತಾ ಸಹಾಯಕಾರಿ : 8 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ-2 : 18 ಹುದ್ದೆಗಳು
ಜೂನಿಯರ್ ಸಿಸ್ಟಂ ಆಪರೇಟರ್ : 7 ಹುದ್ದೆಗಳು
ವಿಸ್ತರಣಾಧಿಕಾರಿ ದರ್ಜೆ- 3: 15 ಹುದ್ದೆಗಳು
ಕೆಮಿಸ್ಟ್ ದರ್ಜೆ-2 : 12 ಹುದ್ದೆಗಳು
ಆಡಳಿತಾಧಿಕಾರಿ : 1 ಹುದ್ದೆಗಳು
ಲೆಕ್ಕಾಧಿಕಾರಿ : 1 ಹುದ್ದೆಗಳು
ಎಂಐಎಸ್ /ಸಿಸ್ಟಂ ಆಫೀಸರ್ : 1 ಹುದ್ದೆ
ತಾಂತ್ರಿಕ ಅಧಿಕಾರಿ (ಗು.ನಿ): 2 ಹುದ್ದೆಗಳು
ಮಾರುಕಟ್ಟೆ ಅಧಿಕಾರಿ : 2 ಹುದ್ದೆಗಳು
ಭದ್ರತಾಧಿಕಾರಿ : 01 ಹುದ್ದೆ
ಲೆಕ್ಕ ಸಹಾಯಕ ದರ್ಜೆ-2 : 04 ಹುದ್ದೆಗಳು
ಅಡ್ಮಿನ್ ಅಸಿಸ್ಟಂಟ್ ದರ್ಜೆ-2: 2 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್ / ಬಾಯ್ಲರ್ ಅಟೆಂಡರ್ : 49 ಹುದ್ದೆಗಳು

ವಿದ್ಯಾರ್ಹತೆ:
-ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅಧಿಸೂಚನೆಯಲ್ಲಿ ಸೂಚಿಸಿದ ವಿದ್ಯಾರ್ಹತೆಯೊಂದಿಗೆ ಆ ಕ್ಷೇತ್ರದಲ್ಲಿನ ಕಾರ್ಯಾನುಭವವನ್ನು ಹೊಂದಿರಬೇಕು.
-ತಾಂತ್ರಿಕ ಅಧಿಕಾರಿ, ಇಂಜಿನಿಯರಿಂಗ್ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳು ಆಯಾ ವಿಭಾಗಕ್ಕೆ ಸಂಬಂಧಪಟ್ಟ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
-ಲೆಕ್ಕಾಧಿಕಾರಿ, ಆಡಳಿತಾಧಿಕಾರಿ, ಲೆಕ್ಕ ಸಹಾಯಕ ಹುದ್ದೆಗಳಿಗೆ ಯಾವುದಾದರೂ ಪದವಿ ಪಡೆದಿರಬೇಕು.
-ಜೂನಿಯರ್ ಸಿಸ್ಟಂ ಆಪರೇಟರ್, ಜೂನಿಯರ್ ಟೆಕ್ನಿಷಿಯನ್ ಮತ್ತು ಬಾಯ್ಲರ್ ಅಟೆಂಡರ್ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ತಿಳಿಸಿದ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಮೈಮುಲ್ ಅಧಿಕೃತ ವೆಬ್‌ಸೈಟ್ www.mymul.coopಗೆ ಭೇಟಿ ನೀಡಿ ಅಪ್ಲಿಕೇಶನ್ ಸಲ್ಲಿಸಬಹುದು. ಹಾಗೆಯೇ ಆನ್‌ಲೈನ್‌ ಹೊರತುಪಡಿಸಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ.

ಇದನ್ನೂ ಕ್ಲಿಕ್ ಮಾಡಿ: ಸಾಧನೆ ಮೆರೆದ ಸಿಂಧುಗೆ ಐಷಾರಾಮಿ ಕಾರು ಗಿಫ್ಟ್​ ನೀಡಿದ ಟಾಲಿವುಡ್ ಸ್ಟಾರ್ ನಟ..!

ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ- 1000 ರೂ.
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ- 500 ರೂ.

ಹೆಚ್ಚಿನ ಮಾಹಿತಿ:
ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಮೈಮುಲ್ ಅಧಿಕೃತ ವೆಬ್‌ಸೈಟ್ www.mymul.coop ಗೆ ಭೇಟಿ ನೀಡಿ ಪರಿಶೀಲಿಸಬಹುದು. ಅಥವಾ ದೂರವಾಣಿ ಸಂಖ್ಯೆ - 0821- 2473923/ 2473933 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ- ಸೆ.9 , 2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಅಕ್ಟೋಬರ್ 10, 2019
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ-ಅಕ್ಟೋಬರ್ 10, 2019

ಇದನ್ನೂ ಓದಿ: ಪೋರ್ನ್​ ವೀಕ್ಷಕರೇ ಎಚ್ಚರ: ನಿಮ್ಮ ವಿಡಿಯೋ ಕೂಡ ರೆಕಾರ್ಡ್​ ಆಗುತ್ತಿದೆ..!


ಇದನ್ನೂ ಓದಿ: ಸೌತ್ ಸಿನಿರಂಗದ ಸ್ಟಾರ್ ನಟನ ಮುದ್ದಿನ ಮಡದಿ ಯುವರತ್ನನ ಯುವರಾಣಿ..!First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading