ಪ್ರಪಂಚದ ನತದೃಷ್ಟ ತಂದೆ ನಾನು: ಪುಟ್ಟ ಕಂದಮ್ಮನ ಉಳಿವಿಗಾಗಿ ತಂದೆಯ ಅಳಲು

news18
Updated:October 19, 2018, 3:52 PM IST
ಪ್ರಪಂಚದ ನತದೃಷ್ಟ ತಂದೆ ನಾನು: ಪುಟ್ಟ ಕಂದಮ್ಮನ ಉಳಿವಿಗಾಗಿ ತಂದೆಯ ಅಳಲು
  • Advertorial
  • Last Updated: October 19, 2018, 3:52 PM IST
  • Share this:
(ಪ್ರಾಯೋಜಿತ)

ಪ್ರಪಂಚದ ಅತ್ಯಂತ ನತದೃಷ್ಟ ತಂದೆ ನಾನೆಂದು ಭಾವಿಸುತ್ತೇನೆ. ಏಕೆಂದರೆ ಹುಟ್ಟಿದ ಕೂಡಲೇ ನನ್ನ ಪುಟ್ಟ ಕಂದಮ್ಮನನ್ನು ಕಳೆದುಕೊಳ್ಳುವ ಭೀತಿ ನನ್ನಲ್ಲಿ ಆವರಿಸಿದೆ. ಅವನ ಅಳುವೇ ಈಗ ನನ್ನನ್ನು ಅಳಿಸುತ್ತಿದೆ ಹೀಗೆ ಕಾರ್ತಿಕ್ ಅವರು ಹೇಳುವಾಗ ಎಂತವರ ಕಲ್ಲು ಹೃದಯವೂ ಕರಗಿ ಬಿಡುತ್ತದೆ. ಮಗು ಪಡೆದ ಸಂಭ್ರಮದಲ್ಲಿ ಇರಬೇಕಾದ ದಂಪತಿಗಳು ಇಂದು ಕಣ್ಣೀರು ಸುರಿಸುತ್ತಿದ್ದಾರೆ. ಇವರ ಪುಟ್ಟ ಮಗುವು ಹುಟ್ಟುವ ಮೊದಲೇ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗಿತ್ತು. ಕಾರ್ತಿಕ್ ಅವರ ಹೆಂಡತಿಯು ಗರ್ಭಧಾರಣೆಯ ಕೊನೆಯ ಎರಡು ತಿಂಗಳಿನಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೆ ಮಗುವಿನ ಕುರಿತು ಹೆಚ್ಚು ಚಿಂಚಿತರಾಗಿದ್ದರು. ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರು ಹೆರಿಗೆಯ ನಂತರ ಮಗುವಿಗೆ ಮೂರು ಶಸ್ತ್ರಚಿಕಿತ್ಸೆಗಳ ಅವಶ್ಯಕತೆ ಇದೆ ಎಂದು ತಿಳಿಸಿದಾಗ ಈ ದಂಪತಿಗಳಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು.ವೈದ್ಯರ ಸೂಚನೆಯಂತೆ ಮಗುವನ್ನು ಉಳಿಸಲು ತೀರ್ಮಾನಿಸಿದ ದಂಪತಿಗಳು ಹೆರಿಗೆಯ ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗುವಿನ ಚಿಕಿತ್ಸಾ ವೆಚ್ಚವು ಕಾರ್ತಿಕ್ ಕುಟುಂಬದ ಆದಾಯಕ್ಕಿಂತಲೂ ಹೆಚ್ಚು. ಇಂತಹ ಹತಾಶ ಸ್ಥಿತಿಯಲ್ಲೂ ಮಗುವನ್ನು ಉಳಿಸಲು ಶತಾಗತಾಯ ಪ್ರಯತ್ನ ಮಾಡಲು ಕಾರ್ತಿಕ್ ನಿರ್ಧರಿಸಿದ್ದಾರೆ. ಈ ಕಂದಮ್ಮನ ಹೃದಯದ ಮಹಾಪಧಮನಿಯ ಕೊರ್ಕಟೆಷನ್​ ಭಾಗದಲ್ಲಿ ಸಮಸ್ಯೆಯಿದ್ದು, ಇದರಿಂದ ದೇಹದ ಭಾಗಕ್ಕೆ ಹರಿಯುವ ರಕ್ತದಲ್ಲಿ ಅಡಚಣೆಯುಂಟಾಗುತ್ತದೆ. ಇದನ್ನು ಚಿಕಿತ್ಸೆಯ ಮೂಲಕ ಸರಿ ಪಡಿಸಬಹುದೆಂದು ವೈದ್ಯರು ತಿಳಿಸಿದ್ದಾರೆ. ಆದರೆ ಚಿಕಿತ್ಸಾ ವೆಚ್ಚ 12 ಲಕ್ಷ ರೂ. ಆಗಿದ್ದು ಇದನ್ನು ಭರಿಸುವಷ್ಟು ಕಾರ್ತಿಕ್ ಕುಟುಂಬ ಶಕ್ತವಾಗಿಲ್ಲ.ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಕಾರ್ತಿಕ್ ತಿಂಗಳಿಗೆ ಕೇವಲ 15 ಸಾವಿರ ಆದಾಯಗಳಿಸುತ್ತಾರೆ. ಅಲ್ಲದೆ ಇವರೇ ಕುಟುಂಬಕ್ಕೆ ಆಧಾರಸ್ತಂಭ. ಈ ಮಗುವಿಗೆ ತೊಂದರೆಗಳಿವೆ ಎಂದು ಗೊತ್ತಾದ ಕೂಡಲೇ ಇವರು ವೆಲ್ಲೂರಿನ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದರು. ಆದರೆ ಅಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯವಿರದ ಕಾರಣ ಮಗುವನ್ನು ಚೆನ್ನೈಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಇದೀಗ ಚೆನ್ನೈನ ಡಾಕ್ಟರ್​ಗಳು ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ಉಳಿಸಬಹುದು ಎಂದು ದೈರ್ಯ ತುಂಬಿದರೂ, ನಮ್ಮ ಆರ್ಥಿಕ ಪರಿಸ್ಥಿತಿಯಿಂದ ನಾವು ಹತಾಶೆಗೆ ಒಳಗಾಗಿದ್ದೇವೆ ಎನ್ನುತ್ತಾರೆ ಕಾರ್ತಿಕ್.

ಪ್ರಪಂಚದ ಯಾವುದೇ ತಂದೆ-ತಾಯಿ ಕೂಡ ಹುಟ್ಟಿದ ಕೂಡಲೇ ಮಗುವನ್ನು ಐಸಿಯುನಲ್ಲಿ ನೋಡಬೇಕೆಂದು ಬಯಸುವುದಿಲ್ಲ. ಆದರೆ ನಮ್ಮ ದುರಾದೃಷ್ಟ. ನಮ್ಮ ಮಗುವು ಆಮ್ಲಜನಕದ ಮಾಸ್ಕ್​ನ್ನು ಧರಿಸಿ ಐಸಿಯುನಲ್ಲಿ ಮಲಗಿದೆ. ಇದನ್ನು ನೋಡುವಾಗ ನನ್ನ ಹೃದಯವೇ ಹಿಸುಕಿದಂತಾಗುತ್ತದೆ. ಈಗಾಗಲೇ ಆಸ್ಪತ್ರೆಯ ಖರ್ಚನ್ನು ಭರಿಸಲು ಇದ್ದ ಭೂಮಿಯನ್ನು ಮತ್ತು ಒಂದಷ್ಟು ಒಡವೆಗಳನ್ನು ಮಾರಲಾಗಿದೆ. ಇನ್ನೂ ಸ್ನೇಹಿತರ ಮತ್ತು ಸಂಬಂಧಿಕರ ನೆರವಿನಿಂದ ಸ್ವಲ್ಪ ಹಣವನ್ನು ಸಾಲ ಪಡೆದು ಮಗುವಿನ ಶಸ್ತ್ರಚಿಕಿತ್ಸೆ, ಔಷಧಿಗಳಿಗೆ ಖರ್ಚು ಮಾಡಲಾಗಿದೆ. ಮಗುವು ಚೇತರಿಸಿಕೊಳ್ಳಲು ಇನ್ನೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದು, ಮಗುವನ್ನು ಉಳಿಸಲು ನಮ್ಮಲ್ಲಿ ಏನೂ ಉಳಿದಿಲ್ಲ. ಐಸಿಯುನಲ್ಲಿ ಜೀವ ಮರಣದ ನಡುವೆ ಹೋರಾಟ ನಡೆಸುತ್ತಿರುವ ಪುಟ್ಟ ಕಂದಮ್ಮನ ಕಣ್ಣೀರಿಗೆ ನಿಮ್ಮ ಸಹಾಯದ ಅವಶ್ಯಕತೆಯಿದೆ. ದಯವಿಟ್ಟು ನನ್ನ ಮಗನ ಚಿಕಿತ್ಸೆಗಾಗಿ ನೆರವಾಗಿ ನಮ್ಮ ಮಗುವನ್ನು ಉಳಿಸಿಕೊಡಿ ಎಂದು ಕಾರ್ತಿಕ್ ಕಣ್ಣೀರು ಹಾಕುತ್ತಿದ್ದಾರೆ.​

ಇಲ್ಲಿ ಕ್ಲಿಕ್ ಮಾಡುವ ಮೂಲಕ ಪುಟ್ಟ ಕಂದಮ್ಮನನ್ನು ಉಳಿಸಲು ನೆರವಾಗಿ

 
First published:October 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ