Non Veg Recipe: ಭಾನುವಾರದ ಬಾಡೂಟಕ್ಕೆ ಮಾಡಿ ಸವಿಯಿರಿ ರುಚಿಯಾದ ಮಟನ್ ಕೈಮಾ ಉಂಡೆ ಸಾಂಬಾರ್

ಮಟನ್ ಕೈಮಾ

ಮಟನ್ ಕೈಮಾ

ಮಟನ್​ ಕೈಮಾವನ್ನು  ಉಂಡೆ ಸಾಂಬಾರ್ ಅನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದನ್ನು ಮಾರ್ನಿಂಗ್ ಬ್ರೇಕ್ ಫಾಸ್ಟ್, ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೂ ಕೂಡ ಸೇವಿಸಬಹುದು. ಅದರಲ್ಲಿಯೂ ರೊಟ್ಟಿ, ಚಪಾತಿ ಜೊತೆಗೆ ಸಖತ್ ಟೇಸ್ಟಿಯಾಗಿರುತ್ತದೆ. ನಿಮ್ಮ ನಾಲಿಗೆ ಹೊಸದಾದ ರುಚಿಯನ್ನು ಸವಿಯಲು ಬಯಸುತ್ತಿದ್ದರೆ, ಕೈಮಾ ಸಾಂಬಾರ್ ಮಾಡಿ ತಿನ್ನಬಹುದು.

ಮುಂದೆ ಓದಿ ...
  • Share this:

ಮಟನ್ (Mutton) ಅಂದ್ರೆ ಜನ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಾಮಾನ್ಯವಾಗಿ ಮಟನ್​ನಲ್ಲಿ ಕೇವಲ ಸಾಂಬಾರ್ (Mutton Sambar)ಮಾತ್ರ ಮಾಡಬಹುದು ಅಂತ ಕೆಲವರು ಅಂದುಕೊಂಡಿರುತ್ತಾರೆ. ಆದರೆ ಮಟನ್​ನಲ್ಲಿ ಕೈಮಾ (Mutton Kaima) ಕೂಡ ಇದೆ. ಇದರಿಂದ ನಾನಾ ರೀತಿಯ ಖಾದ್ಯಗಳನ್ನು ಮಾಡಬಹುದು ಎಂದು ಎಷ್ಟೋ ಮಂದಿಗೆ ತಿಳಿದೇ ಇರುವುದಿಲ್ಲ. ಅಂತಹವರು ಮಟನ್​ ಕೈಮಾವನ್ನು  ಉಂಡೆ ಸಾಂಬಾರ್ ಅನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದನ್ನು ಮಾರ್ನಿಂಗ್ ಬ್ರೇಕ್ ಫಾಸ್ಟ್, ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೂ ಕೂಡ ಸೇವಿಸಬಹುದು. ಅದರಲ್ಲಿಯೂ ರೊಟ್ಟಿ, ಚಪಾತಿ ಜೊತೆಗೆ ಸಖತ್ ಟೇಸ್ಟಿಯಾಗಿರುತ್ತದೆ. ನಿಮ್ಮ ನಾಲಿಗೆ ಹೊಸದಾದ ರುಚಿಯನ್ನು ಸವಿಯಲು ಬಯಸುತ್ತಿದ್ದರೆ, ಕೈಮಾ ಸಾಂಬಾರ್ ಮಾಡಿ ತಿನ್ನಬಹುದು. ಚಳಿಗಾಲದಂತೂ ಕೈಮಾ ಸಾಂಬಾರ್ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ.


ಮಟನ್ ಕೈಮಾ


ಮಟನ್​ ಕೈಮಾ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳು


  • ಮಟನ್ – 500 ಗ್ರಾಂ

  • ಮಟನ್ ಮೂಳೆ

  • ಕೊತ್ತಂಬರಿ ಪುಡಿ

  • ಸ್ವಲ್ಪ ಕೊಬ್ಬರಿ

  • 1 ಬೆಳ್ಳುಳ್ಳಿ

  • 1 ಸ್ಪೂನ್ ಖಾರದ ಪುಡಿ

  • ಸ್ವಲ್ಪ ಕರಿಮೆಣಸು

  • 4 ಚಕ್ಕೆ

  • 4 ಲವಂಗ

  • 1 ಮೊಟ್ಟೆ

  • ಸ್ವಲ್ಪ ಕರಿಕಡಲೆ

  • 1 ತೆಂಗಿನ ಕಾಯಿ

  • 1 ಈರುಳ್ಳಿ

  • 1 ಬೆಳ್ಳುಳ್ಳಿ

  • 1 ಟೊಮೆಟೋ

  • ಸ್ವಲ್ಪ ಗಸಗಸೆ

  • ಸ್ವಲ್ಪ ಕೊತ್ತಂಬರಿ ಸೊಪ್ಪು

  • ಸ್ವಲ್ಪ ಎಣ್ಣೆ

  • ರುಚಿಗೆ ತಕ್ಕಷ್ಟು ಉಪ್ಪು


ಮಟನ್ ಕೈಮಾ


ಮಟನ್​ ಕೈಮಾ ಮಾಡುವ ವಿಧಾನ:

  • ಮೊದಲಿಗೆ ಮಟನ್, ಮಟನ್ ಮೂಳೆ, ಬೆಳ್ಳುಳ್ಳಿ, ಕೊತ್ತಂಬರಿ ಪುಡಿ, ಕೊಬ್ಬರಿ, ಕರಿಮೆಣಸು, ಚಕ್ಕೆ, ಲವಂಗ ಪದಾರ್ಥಗಳನ್ನು ನೀರು ಹಾಕದೇ ಮಿಕ್ಸಿ ಜಾರ್‌ನಲ್ಲಿ ರುಬ್ಬಿ ಕೊಳ್ಳಬೇಕು. ಜೊತೆಗೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

  • ನಂತರ ಕರಿಕಡಲೆಯನ್ನು ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು.

  • ಬಳಿಕ ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು ಹುರಿಕಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು.

  • ಕುಕ್ಕರ್​ ಅನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಸ್ವಲ್ಪ ಕಾದ ನಂತರ ಈರುಳ್ಳಿ, ಅರಿಶಿನ ಪುಡಿ ಹಾಕಿ ಫ್ರೈ ಮಾಡಿಕೊಳ್ಳಬೇಕು.

  • ಇದಾದ ನಂತರ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಟೊಮೆಟೋ, ಗಸಗಸೆ, ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ಚೆನ್ನಾಗಿ ರುಬ್ಬಿಕೊಳ್ಳಬೇಕು.

  • ಅಗತ್ಯಕ್ಕೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ರಿಂದ 15 ನಿಮಿಷ ಕುದಿಸಬೇಕು.

  • ಬಳಿಕ ಕುದಿಯುತ್ತಿರುವ ಮಸಾಲೆಗೆ ಈಗಾಗಲೇ ಮಾಡಿಟ್ಟಿರುವ ಉಂಡೆಗಳನ್ನು ಹಾಕಿ 10-15 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಕೈಮಾ ಉಂಡೆ ಸಾರು ಸವಿಯಲು ಸಿದ್ಧವಾಗಿರುತ್ತದೆ.




ಮಟನ್ ಕೈಮಾಕೈಮಾ ಸಮೋಸಾ


ಇಷ್ಟೇ ಅಲ್ಲದೇ ಕೈಮಾ ಉಂಡೆಯ ಸಾಂಬಾರ್ ಜೊತೆಗೆ ಮಟನ್ ಕೈಮಾದಲ್ಲಿ ಸಮೋಸಾ ಕೂಡ ಮಾಡಬಹುದು. ಸಮೋಸಾಗಳು ಭಾರತೀಯರ ಮುಖ್ಯ ತಿಂಡಿ. ಸಮೋಸಾದಲ್ಲಿ ಸಾಮಾನ್ಯವಾಗಿ ಆಲೂ ತುಂಬಿರುತ್ತದೆಯಾದರೂ, ಇದನ್ನು ಕೈಮಾದಿಂದಲೂ ಮಾಡಬಹುದು.


ಮೊಸರು ಡಿಪ್ ಜೊತೆ ಕೈಮಾ ಸಮೋಸಾ ಮಾಡುವುದು ಹೇಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಉಪ್ಪು, ಅರಿಶಿನ, ಕೊತ್ತಂಬರಿ ಪುಡಿ, ಮೊಸರಿನೊಂದಿಗೆ ಕೀಮಾವನ್ನು ಮ್ಯಾರಿನೇಟ್ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಎಣ್ಣೆಯನ್ನು ಬಿಸಿ ಮಾಡಿ, ಸಂಪೂರ್ಣ ಗರಂ ಮಸಾಲಾ, ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಮ್ಯಾರಿನೇಡ್ ಕೀಮಾ ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಬೇಯಿಸಿ. ಕತ್ತರಿಸಿದ ಶುಂಠಿಯನ್ನು ಕೀಮಾಗೆ ಸೇರಿಸಿ. ಡ್ರೈ ಫ್ರೂಟ್ಸ್ ಸೇರಿಸಿ.




ಸಮೋಸಾಕ್ಕಾಗಿ: ಗಟ್ಟಿಯಾದ ಹಿಟ್ಟನ್ನು ತಯಾರಿಸಲು ಎಣ್ಣೆ ಜೊತೆಗೆ ಹಿಟ್ಟಿಗೆ ಉಪ್ಪು ಸೇರಿಸಿ. ಸಣ್ಣ ಚೆಂಡುಗಳಾಗಿ ವಿಭಜಿಸಿ. ಪ್ಯಾನ್‌ಕೇಕ್‌ಗಳಲ್ಲಿ ಸುತ್ತಿಕೊಳ್ಳಿ. ಪ್ಯಾನ್‌ಕೇಕ್‌ ಮತ್ತು ಆಕಾರಕ್ಕೆ ಕೀಮಾ ಸೇರಿಸಿ (ಅರ್ಧಚಂದ್ರಾಕಾರ) ಬೇಯುವವರೆಗೆ ಹುರಿಯಿರಿ.


Published by:Monika N
First published: