Non-Veg Recipe: ಭಾನುವಾರ ಸ್ಪೈಸಿ ಮಟನ್ ಚಾಪ್ಸ್ ಮಾಡುವ ರೆಸಿಪಿ ಇಲ್ಲಿದೆ ನೋಡಿ

ಈ ಸಂಡೇ ಸ್ಪೆಷಲ್ ಆಗಿ ಸ್ಪೈಸಿ ಮಟನ್ ಚಾಪ್ ಮಾಡಿ ನೋಡಿ. ಸಖತ್ ಟೇಸ್ಟಿ ಆಗಿರೋ ಈ ಸುಲಭವಾದ ಮಟನ್ ಚಾಪ್ಸ್ ಮಾಡಲು ನಿಮಗೆ ತುಂಬಾ ಸಮಯ ಬೇಡ ಪರೋಟ ಚಪಾತಿ ಜೊತೆ ಬಾಯಿ ಚಪ್ಪರಿಸಿಕೊಂಡು ತಿನ್ನಲು ಮಟನ್ ಚಾಪ್ ರೆಸಿಪಿ ಬಗ್ಗೆ ಇಂದು ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಾಂಸ ಪ್ರಿಯರಿಗೆ ಮಳೆಗಾಲದಲ್ಲಿ (Monsoon) ಮಾಂಸದ ಹಬ್ಬದ ಅಡುಗೆ ಆಗಬೇಕು. ವೀಕೆಂಡ್ (Weekend) ಬಂತು ಅಂದ್ರೆ ಏನಾದ್ರೂ ಹೊಸದು ಟೇಸ್ಟ್  ಮಾಡಿ ನೋಡಬೇಕು ಎನ್ನುವ ಆಸೆ ಬಂದೇ ಬರುತ್ತೆ. ಈ ಸಂಡೇ ಸ್ಪೆಷಲ್ ಆಗಿ ಸ್ಪೈಸಿ ಮಟನ್ ಚಾಪ್ (Spicy Mutton Chops) ಮಾಡಿ ನೋಡಿ. ಸಖತ್ ಟೇಸ್ಟಿ ಆಗಿರೋ ಈ ಸುಲಭವಾದ ಮಟನ್ ಚಾಪ್ಸ್ ಮಾಡಲು ನಿಮಗೆ ತುಂಬಾ ಸಮಯ ಬೇಡ. ಸಂಜೆ ಹೊತ್ತಿನಲ್ಲಿ ನಿಮ್ಮ ಬಿಸಿ ಬಿಸಿ ಚಹಾದೊಂದಿಗೆ ಇಲ್ಲಿ ಒಂದು ಗರಿಗರಿಯಾದ ತಿಂಡಿ ಇದೆ ನೋಡಿ. ಪರೋಟ ಚಪಾತಿ (Chapathi) ಜೊತೆ ಬಾಯಿ ಚಪ್ಪರಿಸಿಕೊಂಡು ತಿನ್ನಲು ಮಟನ್ ಚಾಪ್ ರೆಸಿಪಿ ಬಗ್ಗೆ ಇಂದು ತಿಳಿಯೋಣ. ನೀವು ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.

    ಕ್ಯಾಲ್ಸಿಯಂ, ಪ್ರೋಟಿನ್‌, ಮಿನರಲ್ಸ್‌, ಅಮೀನೋ ಆಸಿಡ್ಸ್‌ ಅಂಶಗಳುಳ್ಳ, ಉರಿಯೂತ, ಅಲರ್ಜಿ ನಿವಾರಕ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಕೀಲುಗಳ ಬೆಳವಣಿಗೆಗೆ ಸಹಕಾರಿ ಈ ಮಟನ್

    ಬೇಕಾಗಿರುವ ಸಾಮಾಗ್ರಿಗಳು

    1 ಅರ್ಧ ಕೆಜಿ ಮಟನ್ ಚಾಪ್ಸ್
    2. ಈರುಳ್ಳಿ – 2
    3. ಟಮೋಟೊ -2
    4. ಅಡುಗೆ ಎಣ್ಣೆ
    5. ಗಟ್ಟಿ ಮೊಸರು – ಅರ್ಧ ಚಮಚ
    6. ಮೆಣಸಿನ ಪುಡಿ – 1 ಚಮಚ
    7. ಕರಿ ಮೆಣಸಿನ ಪುಡಿ – ಅರ್ಧ ಚಮಚ
    8. ಕೊತ್ತಂಬರಿ ಪುಡಿ – 1 ಚಮಚ
    9. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    10. ಅರಿಶಿಣ ಪುಡಿ – ಅರ್ಧ ಚಮಚ
    11. ಜೀರಿಗೆ ಪುಡಿ -ಅರ್ಧ ಚಮಚ
    12. ಕೊತ್ತಂಬರಿ ಸೊಪ್ಪು -ಸ್ವಲ್ಪ
    13. ಉಪ್ಪು -ರುಚಿಗೆ ತಕ್ಕಷ್ಟು

    ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಯಾಗಿ ರೊಟ್ಟಿ ಉಪ್ಪಿಟ್ಟು ರೆಸಿಪಿ ಮಾಡುವುದು ಹೇಗೆ? ಇಲ್ಲಿ ವಿಧಾನ ತಿಳಿಯಿರಿ

    ಮಟನ್​ ಚಾಪ್ಸ್​ ಮಾಡುವ ವಿಧಾನ

    ಮೊದಲಿಗೆ ಮಟನ್ ಚಾಪ್ಸ್ ಅನ್ನು ಚೆನ್ನಾಗಿ ತೊಳೆದುಕೊಂಡು ಇಟ್ಟುಕೊಳ್ಳಿ. (ಯಾವುದೇ ಕಾರಣಕ್ಕೂ ಅದರಲ್ಲಿ ನೀರು ಉಳಿದಿರಬಾರದು). ಒಂದು ಮಿಕ್ಸಿ ಜಾರಿಗೆ ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಪೆಪ್ಪರ್ ಪುಡಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

    ನಂತರ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ, ಮಟನ್ ಚಾಪ್ಸ್ ಜೊತೆಗೆ ಅರಿಶಿನ ಪುಡಿ, ಚಿಟಿಕೆ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ. ಅದಕ್ಕೆ ಅರ್ಧ ಕಪ್ ನೀರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 4-5 ಸೀಟಿ ಬರುವವರೆಗೆ ಅದನ್ನು ಬೇಯಿಸಿ.

    ಬೇಯಿಸಿಕೊಂಡ ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಎರಡು ನಿಮಿಷ ಬೇಯಿಸಿ ಕೆಳಗಿಳಿಸಿ. ಬಳಿಕ ಒಂದು ಪ್ಯಾನ್‍ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.

    ಈಗ ಒಂದು ಕುಕ್ಕರ್‌ಗೆ ಮಟನ್ ಚಾಪ್ಸ್, ಅರಿಶಿಣ ಪುಡಿ, ಸ್ವಲ್ಪ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೂ ಬೇಯಿಸಿಕೊಳ್ಳಿ. ಈರುಳ್ಳಿ ಕಂದು ಬಣ್ಣ ಬರುವವರೆಗೆ ಹಾಗೂ ಹಸಿ ವಾಸನೆ ಮಾಯವಾಗುವವರೆಗೆ ಫ್ರೈ ಮಾಡಿ.  ಬೇಯಿಸಿಕೊಂಡ ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಎರಡು ನಿಮಿಷ ಬೇಯಿಸಿ ಕೆಳಗಿಳಿಸಿ.

    ಇದನ್ನೂ ಓದಿ: Non-Veg Recipe: ಭಾನುವಾರದ ಬಾಡೂಟಕ್ಕೆ ಚಿಕನ್ ಫ್ರೈ ಮಸಾಲ ಮಾಡಿ

    ಬಳಿಕ ಒಂದು ಪ್ಯಾನ್‍ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಈಗಾಗಲೇ ರಬ್ಬಿಕೊಳ್ಳಲಾದ ಮಾಸಾಲ, ಕೊತ್ತಂಬರಿ ಪುಡಿ ಹಾಕಿ 10 ನಿಮಿಷ ಚೆನ್ನಾಗಿ ಫ್ರೈ ಮಾಡಿ.  ಈಗ ಬೇಯಿಸಿಕೊಂಡಿರುವ ಮಟನ್ ಚಾಪ್ಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಮಾಸಾಲಾ ಮಟನ್ ಚಾಪ್ಸ್ ಸವಿಯಲು ರೆಡಿ.
    Published by:Swathi Nayak
    First published: