Women Hygiene: ಖಾಸಗಿ ಆರೋಗ್ಯಕ್ಕೆ ಈ ಎಣ್ಣೆಗಳು ಬಹಳ ಪ್ರಯೋಜನಕಾರಿ, ಹೆಣ್ಣುಮಕ್ಕಳು ಇದರ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

Women Health Care: ಇನ್ನು ನಿಮಗೆ ಕೆಲ ಎಸೆನ್ಷಿಯಲ್ ಎಣ್ಣೆಗಳು ಈ ವಾಸನೆಗಳಿಂದ ಮುಕ್ತಿ ನೀಡುತ್ತದೆ. ಅವುಗಳನ್ನು ಸರಿಯಾದ ವಿಧಾನದಲ್ಲಿ ಬಳಕೆ ಮಾಡುವುದು ಯೋನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಹಾಗಾದ್ರೆ ಯಾವ ಎಣ್ಣೆಗಳು ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೆಂಗಸರ (Women) ಸಮಸ್ಯೆಗಳು ಹಲವಾರು. ಕೆಲವೊಂದು ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು. ಇನ್ನು ಸಾಮಾನ್ಯವಾಗಿ ಹೆಂಗಸರು ತಮ್ಮ ಯೋನಿಯ  (Intimate Area) ಭಾಗದಲ್ಲಿ ವಾಸನೆಯನ್ನು ಗಮನಿಸಿದಾಗ ಗಾಬರಿಗೊಳ್ಳುತ್ತಾರೆ. ಆದರೆ ಇದು ಪ್ಯಾನಿಕ್ (Panic) ಆಗುವ ಸಮಯವಲ್ಲ. ಅನೇಕ ಜನರು ಹೆದರಿಕೊಳ್ಳುತ್ತಾರೆ. ನಿಮ್ಮ ಪ್ಯೂಬಿಕ್ ಪ್ರದೇಶದಲ್ಲಿ ವಾಸನೆ ಮತ್ತು ಕಾಲಕಾಲಕ್ಕೆ ಅದರಲ್ಲಿ ಸಣ್ಣ ಬದಲಾವಣೆಗಳು ಸಂಪೂರ್ಣವಾಗಿ ಸಾಮಾನ್ಯ ಎಂಬುದನ್ನ ಮರೆಯಬಾರದು. ಈ ವಾಸನೆಯ ವ್ಯತ್ಯಾಸಗಳು ನಿಮ್ಮ ಋತುಚಕ್ರ (Periods) , ನಿಮ್ಮ ಸ್ವಚ್ಛತೆಯ ಅಭ್ಯಾಸಗಳು ಅಥವಾ ನಿಮ್ಮ ಲೈಂಗಿಕ ಚಟುವಟಿಕೆಯ ಪರಿಣಾಮವಾಗಿರಬಹುದು. ಹಾಗಾಗಿ ಹೆದರುವ ಅವಶ್ಯಕತೆ ಇಲ್ಲ.

ಆದರೂ ಸಹ, ವಾಸನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ನೀವು ಗಮನಿಸಿದರೆ, ನೀವು ಖಂಡಿತವಾಗಿಯೂ ಅದನ್ನು ನಿರ್ಲಕ್ಷಿಸಬಾರದು. ವೈದ್ಯರ ಬಳಿ ಮಾತನಾಡಲು ಮುಜುಗರ ಪಡದೇ ಅವರ ಸಲಹೆ ಪಡೆಯುವುದು ಬಹಳ ಮುಖ್ಯ. ನಿಮ್ಮ ಪಿರಿಯಡ್ಸ್ ಅವಧಿಯಲ್ಲಿ ವಾಸನೆ ಸಾಮಾನ್ಯವಿರಬಹುದು, ಆದರೆ ಮೀನಿನ ವಾಸನೆಗಿಂತ ಅತಿ ಅಸಹ್ಯವಾಗಿ ವಾಸನೆ ಬರುವುದು ನಿಜಕ್ಕೂ ಸಾಂಆಣ್ಯವಲ್ಲ ಹಾಗೂ ಯಾವುದೋ ಸಮಸ್ಯೆಯ ಸೂಚನೆ ಎಂಬುದನ್ನ ತಿಳಿದುಕೊಳ್ಳಿ. ನಿಮಲ್ಲೂ ಸಹ ಈ ರೀತಿಯ ವಾಸನೆ ಕಂಡುಬಂದಲ್ಲಿ ತಕ್ಷಣವೇ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರ್ಥ.

ಇನ್ನು ಈ ವಾಸನೆಯನ್ನು ಹೋಗಲಾಡಿಸಲು ಹಾಗೂ ನಿಮ್ಮ ಯೋನಿ ಭಾಗವನ್ನು ಸ್ವಚ್ಛವಾಗಿಡಲು ಕೆಲ ನೈಸರ್ಗಿಕ ಮಾರ್ಗಗಳಿದ್ದು, ನಿಮ್ಮ ಸ್ವಚ್ಛತೆಯ ದೃಷ್ಟಿಯಿಂದ ಅದು ಉತ್ತಮ. ಹಾಗಾದ್ರೆ ಏನು ಮಾಡಬೇಕು ಎಂಬುದು ಇಲ್ಲಿದೆ.

ನೀವು ಕೆಟ್ಟ ಪ್ಯುಬಿಕ್ ವಾಸನೆಯನ್ನು ಹೋಗಲಾಡಿಸಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಅಭ್ಯಾಸಗಳನ್ನು ಕೆಲ ಬದಲಾವಣೆ ಮಾಡಿಕೊಂಡರೆ ವಾಸನೆ ಹೋಗಲಾಡಿಸಲು ಸಾಧ್ಯವಿದೆ. ಕೊಳಕು, ಬೆವರು ಮತ್ತು ಸತ್ತ ಚರ್ಮವನ್ನು ಹೋಗಲಾಡಿಸಲು ಆಗಾಗ ಆ ಸ್ಥಳವನ್ನು ಸ್ವಚ್ಛ ಮಾಡಿ. ತೊಳೆಯುತ್ತಿರಬೇಕು. ನಿಮ್ಮ ಬಳಿ ಸೂಕ್ತವಾದ ವಾಶ್ ಉತ್ಪನ್ನ ಲಭ್ಯವಿದ್ದರೆ ಅದರ ಬಳಕೆ ಕಡಿಮೆ ಮಾಡಿ. ರಾಸಾಯನಿಕ ಉತ್ಪನ್ನಗಳು ಹೆಚ್ಚು ಹಾನಿಕಾರಕವಾಗಬಹುದು. ಅಲ್ಲದೇ ಅವುಗಳು ನೈಸರ್ಗಿಕ ಪಿಎಚ್ ಲೆವೆಲ್ ಮೇಲೆ ಪರಿಣಾಮ ಬೀರಬಹುದು. ಇನ್ನು ಪ್ರತಿ ಬಾರಿ ವಾಶ್ರೂಮ್ ಹೋಗಿ ಬಂದ ಮೇಲೆ ಸ್ವಚ್ಛ ಮಾಡುವುದು ಸಹ ಮುಖ್ಯವಾಗುತ್ತದೆ. ಅದರಲ್ಲೂ ಸಾರ್ವಜನಿಕ ಶೌಚಾಲಯಗಳನ್ನು ಬಳಕೆ ಮಾಡಿದಾಗ ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಅವುಗಳು ಹೆಚ್ಚು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿರುವುದರಿಂದ ಸಾಧ್ಯವಾದರೆ ಅವುಗಳ ಬಳಕೆ ಕಡಿಮೆ ಮಾಡಿ.

ಇನ್ನು ನಿಮಗೆ ಕೆಲ ಎಸೆನ್ಷಿಯಲ್ ಎಣ್ಣೆಗಳು ಈ ವಾಸನೆಗಳಿಂದ ಮುಕ್ತಿ ನೀಡುತ್ತದೆ. ಅವುಗಳನ್ನು ಸರಿಯಾದ ವಿಧಾನದಲ್ಲಿ ಬಳಕೆ ಮಾಡುವುದು ಯೋನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಹಾಗಾದ್ರೆ ಯಾವ ಎಣ್ಣೆಗಳು ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

ಇದನ್ನೂ ಓದಿ: ನೆಲ್ಲಿಕಾಯಿ ಒಗರು ಅಂತ ತಿನ್ನದೇ ಇರಬೇಡಿ? ಅದು ಎಲ್ಲಾ ರೋಗಕ್ಕೂ ರಾಮಬಾಣ

ಟೀ ಟ್ರೀ ಆಯಿಲ್
ಟೀ ಟ್ರೀ ಆಯಿಲ್ ಅದರ ಅದ್ಭುತ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದಾಗಿ ಅನೇಕ ಕಾಯಿಲೆಗಳಿಗೆ ಅಗತ್ಯವಾದ ತೈಲವಾಗಿದೆ. ಕ್ಯಾಂಡಿಡಿಯಾಸಿಸ್‌ನಿಂದ ಪ್ಯುಬಿಕ್ ಪ್ರದೇಶದಲ್ಲಿನ ಯೀಸ್ಟ್ ಸೋಂಕುಗಳಿಗೆ ಟೀ ಟ್ರಿ ಎಣ್ಣೆಯು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಹಾಗಾಗಿ ಸೋಂಕುಗಳನ್ನು ತಡೆಗಟ್ಟಲು ಈ ಎಣ್ಣೆಯನ್ನು ಸುರಕ್ಷಿತವಾಗಿ ಬಳಸಬಹುದು ಎನ್ನಲಾಗುತ್ತದೆ.

ಲ್ಯಾವೆಂಡರ್ ಆಯಿಲ್
ಈ ವಾಸನೆಯಿಂದ ಮುಕ್ತಿ ಪಡೆಯಲು ಲ್ಯಾವೆಂಡರ್ ಎಣ್ಣೆಯನ್ನು ಬಳಸುವುದು ಉತ್ತಮ ಪರಿಹಾರ ಎನ್ನಲಾಗುತ್ತದೆ. ಇದು ಪರಿಣಾಮಕಾರಿ ವಾಸನೆ ಪರಿಹಾರ ಮತ್ತು ಡಿಯೋಡರೈಸರ್ ಮಾತ್ರವಲ್ಲ, ಇದು ಯೋನಿನೋಸಿಸ್ಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ನೈಸರ್ಗಿಕ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಇದನ್ನೂ ಓದಿ: ಪಾಲಕ್ ಸೊಪ್ಪು ಸೋಂಕು ನಿವಾರಕವಂತೆ - ಇಲ್ಲಿದೆ ಅದರ ಪ್ರಯೋಜನಗಳು

ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯ ಪ್ರಯೋಜನಗಳು ಹಲವಾರಿದ್ದು, ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ ಎಂದರೆ ತಪ್ಪಲ್ಲ. ಇದು ಆಂಟಿಮೈಕ್ರೊಬಿಯಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
Published by:Sandhya M
First published: