Health Tips : ಮೊಟ್ಟೆ ಜೊತೆ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ

Should Not Eat these Food With Egg : ಮೊಟ್ಟೆಗಳಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರೋದ್ರಿಂದ ಮೊಟ್ಟೆಯೊಂದಿಗೆ ಕೆಲವು ಆಹಾರ ಸೇವಿಸಿದರೆ ಅದು ನಿಮಗೆ ಅಲರ್ಜಿ ಅಥವಾ ಅಜೀರ್ಣವನ್ನುಂಟುಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಿನಕ್ಕೊಂದು ಸೇಬಿನ(Apple)ಹಣ್ಣು ಸೇವಿಸಿದರೆ ನಮ್ಮನ್ನ ಹೃದ್ರೋಗ (Heart problems )ವೈದ್ಯರಿಂದ ದೂರ ಇಟ್ಟುಕೊಳ್ಳಬಹುದು, ಅಂತದ್ರಲ್ಲಿ ದಿನಕ್ಕೊಂದು ಮೊಟ್ಟೆ ಇದನೆಲ್ಲಾ ಮೀರಿ ಸಂಪೂರ್ಣ ದೇಹದ (Body )ಗುಣಮಟ್ಟವನ್ನ ಹೆಚ್ಚಿಸಿ ನಮ್ಮನ್ನ ಆರೋಗ್ಯವಂತಾರಾಗಿ (Healthy)ಮಾಡುತ್ತದೆ.ಎಲ್ಲಾ ರೀತಿಯ ವೈದ್ಯರಿಂದ (Doctors)ದೂರವಿಡುತ್ತದೆ.ಅಲ್ಲದೆ ದಿನಕ್ಕೊಂದು ಮೊಟ್ಟೆ ತಿಂದರೆ ದೈಹಿಕ ಆರೋಗ್ಯ( Physical health) ವೃದ್ದಿಯಾಗುತ್ತದೆ . ಉತ್ತಮ ಆರೋಗ್ಯಕ್ಕಾಗಿ ಮೊಟ್ಟೆ ತಿನ್ನುವ ಸಲಹೆಯನ್ನು ತಜ್ಞರು ನೀಡುತ್ತಾರೆ. ಆದರೆ ಮೊಟ್ಟೆಯ ಜೊತೆ ಕೆಲವೊಂದು ವಸ್ತುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಮೊಟ್ಟೆ ಅಪಾಯ ತಂದೊಡ್ಡಬಹುದು .ಹೀಗಾಗಿ ಮೊಟ್ಟೆಯ ಜೊತೆ ಯಾವ ಆಹಾರ ಸೇವನೆ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ..

    ಮೊಟ್ಟೆ ಜೊತೆ ತಿನ್ನಲೇಬಾರದ ಆಹಾರ ಪದಾರ್ಥ
    ಅತಿ ಸುಲಭವಾಗಿ ಸಿಗುವ ಆಹಾರ ಪದಾರ್ಥ ಅಂದರೆ ಅದು ಮೊಟ್ಟೆ.. ಪ್ರತಿನಿತ್ಯ ಎಲ್ಲರ ಮನೆಯಲ್ಲೂ ಇದ್ದೇ ಇರುವ ಮೊಟ್ಟೆಯಲ್ಲಿ ಕಬ್ಬಿಣಾಂಶ, ಸತು, ಪೊಟ್ಯಾಶಿಯಂ, ವಿಟಮಿನ್ ಇ ಹಾಗೂ ಫೋಲೇಟ್ ಅಂಶ ಹೆಚ್ಚಾಗಿರುವುದರಿಂದ ದಿನಕ್ಕೊಂದು ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು..ಆದ್ರೆ ಮೊಟ್ಟೆಗಳಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರೋದ್ರಿಂದ ಮೊಟ್ಟೆಯೊಂದಿಗೆ ಕೆಲವು ಆಹಾರ ಸೇವಿಸಿದರೆ ಅದು ನಿಮಗೆ ಅಲರ್ಜಿ ಅಥವಾ ಅಜೀರ್ಣವನ್ನುಂಟುಮಾಡಬಹುದು. ಹಾಗಾಗಿ ಮೊಟ್ಟೆಯ ಜೊತೆ ಯಾವ ಆಹಾರವನ್ನು ಸೇವಿಸಬಹುದು, ಯಾವ ಆಹಾರಾವನ್ನು ಸೇವಿಸಬಾರದು ಎಂಬ ಬಗ್ಗೆ ಎಚ್ಚರ ವಹಿಸಿ.

    ಇದನ್ನೂ ಓದಿ :ಮನೆಯಲ್ಲೇ ಸುಲಭವಾಗಿ ಮಾಡಬಹುದು ವಿವಿಧ ಬಗೆಯ ಎಗ್ ರೆಸಿಪಿ

    1) ಮೊಟ್ಟೆ ಮತ್ತು ಚಹಾ :ಬೆಳಗಿನ ಉಪಹಾರಕ್ಕೆ ಮೊಟ್ಟೆ ಸೇವನೆ ಉತ್ತಮ ಹೌದು. ಆದರೆ ಮೊಟ್ಟೆಯ ಜೊತೆ ಚಹಾ ಸೇವನೆ ಸಲ್ಲದು. ಮೊಟ್ಟೆ ಮತ್ತು ಚಹಾವನ್ನು ಜೊತೆಯಲ್ಲಿ ಸೇವಿಸಿದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಅಂದರೆ ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು. ಇದರಿಂದ ಮಲಬದ್ದತೆಯ ಸಮಸ್ಯೆ ಎದುರಾಗಬಹುದು.

    2)ಬೇಕನ್ :ಮೊಟ್ಟೆ &ಬೇಕನ್ ಕಾಂಬಿನೇಷನ್ನ್ನು ಬಯಸುತ್ತಾರೆ. ಆದರೆ, ಈ ಸಂಯೋಜನೆಯು ನಿಮಗೆ ಆಲಸ್ಯವನ್ನುಂಟುಮಾಡುತ್ತದೆ. ಮೊಟ್ಟೆ ಮತ್ತು ಬೇಕನ್ ಕ್ರಮವಾಗಿ ಪ್ರೋಟೀನ್ ಮತ್ತು ಕೊಬ್ಬಿನಂಶದಲ್ಲಿ ಸಮೃದ್ಧವಾಗಿದೆ. ಇದು ತ್ವರಿತ ಶಕ್ತಿ-ಉತ್ತೇಜಿಸಲು ಮತ್ತು ಅಷ್ಟೇ ತ್ವರಿತವಾಗಿ ಬೀಳಲು ಕಾರಣವಾಗುತ್ತದೆ.

    3)ಸಕ್ಕರೆ :ಸಕ್ಕರೆ ಮತ್ತು ಮೊಟ್ಟೆ ಎರಡರಲ್ಲೂ ಅಮೈನೊ ಆಸಿಡ್ ಇರುತ್ತದೆ. ಇದರ ಅಧಿಕ ಪ್ರಮಾಣದ ಸೇವನೆಯಿನ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗಬಹುದು. ಈ ಕಾರಣದಿಂದ ಸಕ್ಕರೆಯನ್ನು ಮೊಟ್ಟೆಯ ಜೊತೆ ತಿನ್ನಬಾರದು.

    4)ಸೋಯಾ ಹಾಲು:ಸೋಯಾ ಹಾಲು ಮತ್ತು ಮೊಟ್ಟೆಗಳ ಸಂಯೋಜನೆಯನ್ನು ತಪ್ಪಿಸಬೇಕು. ಎರಡೂ ಬಹಳಷ್ಟು ಪ್ರೋಟೀನ್ ಹೊಂದಿರುತ್ತವೆ. ಆದ್ದರಿಂದ, ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹವು ಪ್ರೋಟೀನ್ಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

    5)ಪನ್ನೀರ್ : ಮೊಟ್ಟೆ ಹಾಗೂ ಉಪ ನೀರಿನಿಂದ ಮಾಡಿದ ಅಡುಗೆಗಳು ಬಹಳ ರುಚಿಯಾಗಿರುತ್ತದೆ..ಪನೀರ್ ಸೇವನೆ ನಮ್ಮ ದೇಹಕ್ಕೆ ಹೆಚ್ಚು ಪ್ರೋಟೀನ್ ಗಳನ್ನು ನೀಡುತ್ತದೆ.. ಆದರೆ ಮೊಟ್ಟೆ ಹಾಗೂ ಪನ್ನೀರು ಎರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ, ಎರಡರಲ್ಲಿ ಇರುವ ಪ್ರೋಟೀನ್ ಅಂಶಗಳು ಅಧಿಕವಾಗಿ ನಮ್ಮ ದೇಹ ಸೇರಿ ಜೀರ್ಣಕ್ರಿಯೆಗೆ ತೊಂದರೆ ಮಾಡುತ್ತದೆ..

    ಇದನ್ನೂ ಓದಿ :ಮೊಟ್ಟೆ ಗಂಟಲಲ್ಲಿ ಸಿಲುಕಿ ಮಹಿಳೆ ಸಾವು

    6) ಮೊಲದ ಮಾಂಸ :ಮೊಟ್ಟೆಗಳನ್ನು ವಿವಿಧ ರೀತಿಯ ಮಾಂಸದೊಂದಿಗೆ ಸಂಯೋಜನೆ ಮಾಡಿ ಸೇವಿಸಲಾಗುತ್ತದೆ. ಆದರೆ, ಮೊಟ್ಟೆಗಳನ್ನು ಮೊಲದ ಮಾಂಸದೊಂದಿಗೆ ಸೇವಿಸಿದರೆ ಅದು ಅತಿಸಾರಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

    7) ಬಾಳೆಹಣ್ಣು:ಮೊಟ್ಟೆ ತಿಂದ ಕೂಡಲೇ ಯಾವತ್ತೂ ಬಾಳೆಹಣ್ಣು ತಿನ್ನಲೇ ಬಾರದು. ಇದರಿಂದ ಗ್ಯಾಸ್ , ಮಲಬದ್ದತೆ ಸಮಸ್ಯೆ ಎದುರಾಗಬಹುದು.

    8) ಮೀನು: ಬೇಯಿಸಿದ ಮೊಟ್ಟೆ ಮತ್ತು ಮೀನನ್ನು ಒಟ್ಟಿಗೆ ತಿನ್ನಬಾರದು. ಇದು ಚರ್ಮದ ಅಲರ್ಜಿಗೆ ಕಾರಣವಾಗಬಹುದು.
    Published by:ranjumbkgowda1 ranjumbkgowda1
    First published: