ಬೇಸಿಗೆ (Summer) ಕಾಲ ಬಂತೆಂದರೆ ಸಾಕು, ಈ ರಸ್ತೆ ಬದಿಗಳಲ್ಲಿ ನಿಂತಿರುವ ತಳ್ಳುಗಾಡಿಯಲ್ಲಿ ನಮಗೆ ತುಂಬಾನೇ ಕಣ್ಣಿಗೆ ಕಾಣುವ ಹಣ್ಣುಗಳೆಂದರೆ ಅವು ಕಲ್ಲಂಗಡಿ,ಖರಬೂಜ ಮತ್ತು ಮಾವಿನಹಣ್ಣುಗಳು (Mango). ಈ ಮೂರು ಹಣ್ಣುಗಳನ್ನು ಜನರು ಕತ್ತರಿಸಿಕೊಂಡು ಸಹ ತಿನ್ನುತ್ತಾರೆ ಮತ್ತು ಇವುಗಳ ಜ್ಯೂಸ್ ಸಹ ಮಾಡಿಕೊಂಡು ಕುಡಿಯುತ್ತಾರೆ. ಮಾವಿನಹಣ್ಣನ್ನು ಮತ್ತು ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡುವಾಗ ಅವುಗಳಿಗೆ ಹಾಲು ಅಥವಾ ನೀರನ್ನು ಅಷ್ಟಾಗಿ ಬೆರೆಸುವುದಿಲ್ಲ, ಆದರೆ ಈ ಖರಬುಜ ಹಣ್ಣಿನ (Melon fruit) ಜ್ಯೂಸ್ ಮಾಡುವಾಗ ಜನರು ಹಾಲು ಅಥವಾ ನೀರನ್ನು ಅದರೊಂದಿಗೆ ಬೆರೆಸುತ್ತಾರಂತೆ. ಖರಬೂಜ ಹಣ್ಣಿನಲ್ಲಿ ನೀವು ಇದ್ಯಾವುದನ್ನು ಸೇರಿಸುವ ಅವಶ್ಯಕತೆ ಇಲ್ಲವಂತೆ, ಏಕೆಂದರೆ ಈ ಹಣ್ಣು ಸಿಹಿಯಾಗಿರುವುದು ಮಾತ್ರವಲ್ಲದೆ, ಉತ್ತಮ ಪ್ರಮಾಣದ ನೀರನ್ನು ಸಹ ಹೊಂದಿರುತ್ತದೆ.
ನೀವು ಖರಬೂಜ ಹಣ್ಣಿನ ಜ್ಯೂಸ್ ಅಥವಾ ಮಿಲ್ಕ್‌ಶೇಕ್ ತಯಾರಿಸಲು ಯೋಜಿಸುತ್ತಿದ್ದರೆ, ನೀವು ಅದರ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು. ಏಕೆಂದರೆ ಖರಬೂಜ ಮತ್ತು ಹಾಲು ಎರಡನ್ನೂ ಸೇರಿಸುವುದು ಒಳ್ಳೆಯದಲ್ವಂತೆ. ಫರಿದಾಬಾದ್ ನ ಕ್ಲೌಡ್ ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಕಾರ್ಯನಿರ್ವಾಹಕ ಪೌಷ್ಟಿಕ ತಜ್ಞ ಮನ್‌ಪ್ರೀತ್ ಕೌರ್ ಪಾಲ್ ಅವರು ಇದರ ಬಗ್ಗೆ ಏನ್ ಹೇಳಿದ್ದಾರೆ ನೋಡಿ.
ಖರಬುಜ ಹಣ್ಣು ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶವನ್ನು ಹೊಂದಿದೆ, ಇದು ಅಜೀರ್ಣ ಮತ್ತು ಮಲಬದ್ಧತೆ ಹೊಂದಿರುವ ಜನರಿಗೆ ಉತ್ತಮವಾಗಿದೆ ಎಂದು ಪಾಲ್ ಹೇಳುತ್ತಾರೆ. ಹಣ್ಣಿನಲ್ಲಿರುವ ಫೈಬರ್ ಅಂಶವು ಸರಿಯಾದ ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯನ್ನು ಶಾಂತವಾಗಿರಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ
ಖರಬೂಜ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ, ಇದು ಆಂಟಿ ಆಕ್ಸಿಡೆಂಟ್ ಆಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನೀವು ತಿನ್ನೋ ಈ ಆಹಾರಗಳು ಹೆಲ್ದೀ ಅನ್ಕೊಂಡಿದ್ರೆ ಖಂಡಿತ ತಪ್ಪು!
ಇದು ಫೈಟೊಕೆಮಿಕಲ್ಸ್, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎ ಅನ್ನು ಸಹ ಹೊಂದಿರುತ್ತದೆ, ಇದು ಕರುಳಿನ ಕಾರ್ಯವನ್ನು ನಯವಾಗಿಡಲು ಸಹಾಯ ಮಾಡುತ್ತದೆ. ಆರೋಗ್ಯಕರ ಕರುಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹದ ತೂಕವನ್ನು ಕಡಿಮೆ ಮಾಡುತ್ತದೆ
ಖರಬೂಜ ಹಣ್ಣಿನಲ್ಲಿ ಕಡಿಮೆ ಕ್ಯಾಲೊರಿಗಳಿರುತ್ತವೆ, ಹಾಗಾಗಿ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದರೆ, ಇದನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ. ತುಂಬಾನೇ ಪೋಷಕಾಂಶವನ್ನು ಹೊಂದಿರುವ ಈ ಹಣ್ಣು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತದೆ. ಇದು ನಿಮ್ಮ ನೀರಿನ ಬೇಡಿಕೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ
ಈಗಂತೂ ಋತುಚಕ್ರದ ಸೆಳೆತವು ಹೆಚ್ಚಿನ ಮಹಿಳೆಯರು ಎದುರಿಸುತ್ತಿರುವ ವಿಷಯವಾಗಿದೆ. ನೀವು ಔಷಧಿಗಳ ಮೇಲೆ ಅವಲಂಬಿತವಾಗುವುದಕ್ಕಿಂತ ಖರಬುಜ ಹಣ್ಣನ್ನು ಸೇವಿಸಿರಿ. ಇದು ನಿಮ್ಮ ಸ್ನಾಯು ಸೆಳೆತವನ್ನು ಸರಾಗಗೊಳಿಸುವ ಮೂಲಕ ಮುಟ್ಟಿನ ಹರಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಖರಬುಜ ಮತ್ತು ಹಾಲನ್ನು ಒಟ್ಟಿಗೆ ಬೆರೆಸಿಕೊಳ್ಳಬೇಡಿ..
ಪ್ರತಿಯೊಂದು ಆಹಾರವು ತನ್ನದೇ ಆದ ರುಚಿ ಮತ್ತು ಜೀರ್ಣಕಾರಿ ಪರಿಣಾಮಗಳನ್ನು ಹೊಂದಿರುತ್ತದೆ. ವಿಭಿನ್ನ ರುಚಿಯನ್ನು ಹೊಂದಿರುವ ಎರಡು ಆಹಾರಗಳನ್ನು ಸಂಯೋಜಿಸಿದಾಗ, ಅದು ಹೊಟ್ಟೆಯ ಜೀರ್ಣಕಾರಿ ಅಂಶಗಳಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಕಳಪೆ ಆಹಾರ ಸಂಯೋಜನೆಗಳು ದೇಹದಲ್ಲಿ ಅಜೀರ್ಣ ಮತ್ತು ಅನಿಲ ರಚನೆಗೆ ಕಾರಣವಾಗಬಹುದು.
ಹಾಲು ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ ಆದರೆ ಖರಬುಜ ಮೂತ್ರವರ್ಧಕ ಗುಣವನ್ನು ಹೊಂದಿದೆ, ಇದು ದೇಹದಿಂದ ವಿಷವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಬೆಕ್ಕಿನ ಮರಿ ಇದ್ಯಾ? ಹಾಗಾದ್ರೆ ಹುಷಾರ್, ಈ ಸ್ಟೋರಿ ಓದ್ಲೇ ಬೇಕು!
ಹಾಲು ಜೀರ್ಣಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ, ಆದ್ದರಿಂದ ಅವುಗಳನ್ನು ಸಂಯೋಜಿಸುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ದಿನವಿಡೀ ಅಹಿತಕರ ಅಥವಾ ಆಯಾಸವನ್ನು ಅನುಭವಿಸಬಹುದು.
ಆದ್ದರಿಂದ, ಇವೆರಡನ್ನು ಒಟ್ಟಿಗೆ ಸೇರಿಸಬೇಡಿ. ಹಣ್ಣಿನಲ್ಲಿರುವ ಪೋಷಕಾಂಶಗಳು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಬಹುದು ಮತ್ತು ಆಮ್ಲೀಯತೆಗೆ ಕಾರಣವಾಗಬಹುದು.
ಸೌತೆಕಾಯಿ: ಸೌತೆಕಾಯಿ ಮತ್ತು ಖರಬುಜ ಹಣ್ಣನ್ನು ಒಟ್ಟಿಗೆ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಜನರು ಹೊಟ್ಟೆಯುಬ್ಬರದಂತಹ ಜೀರ್ಣಕಾರಿ ಅಸ್ವಸ್ಥತೆಯನ್ನು ಅನುಭವಿಸಬಹುದು ಎಂದು ಪಾಲ್ ಹೇಳುತ್ತಾರೆ. ನೀವು ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿದ್ದರೆ ಇವುಗಳನ್ನು ಒಟ್ಟಿಗೆ ತಿನ್ನಲೇಬೇಡಿ ಅಂತ ಹೇಳ್ತಾರೆ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ