• Home
  • »
  • News
  • »
  • lifestyle
  • »
  • Child Care: ಮಗುವಿಗೆ ಜೋಗುಳ ಹಾಡಿ ಮಲಗಿಸಿದ್ರೆ ಬೆಳವಣಿಗೆಗೆ ಬಹಳ ಒಳ್ಳೆಯದಂತೆ

Child Care: ಮಗುವಿಗೆ ಜೋಗುಳ ಹಾಡಿ ಮಲಗಿಸಿದ್ರೆ ಬೆಳವಣಿಗೆಗೆ ಬಹಳ ಒಳ್ಳೆಯದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Musical Rhythm Supports Kids Development: ಮಗುವಿನ ತಾಯಿ ಇಲ್ಲವೇ ಮಗುವಿನ ಆರೈಕೆ ಮಾಡುವವರು ಶಿಶುಗಳೊಂದಿಗೆ ಹಾಡಿನ ಮೂಲಕ ಸಂವಹನ ನಡೆಸಿದಾಗ ಪರಸ್ಪರ ಬಾಂಧವ್ಯವವನ್ನು ಸೌಹಾರ್ದಯುತವಾಗಿ ಬೆಳೆಸಿಕೊಳ್ಳುತ್ತಾರೆ

  • Share this:

ಮಕ್ಕಳನ್ನು (Children) ಮಲಗಿಸುವಾಗ ಸಾಮಾನ್ಯವಾಗಿ ತಾಯಂದಿರು (Mother) ಲಾಲಿ ಹಾಡು (Song) ಇಲ್ಲವೇ ಜೋಗುಳವನ್ನು ಹಾಡುವುದು ನಾವು ನೋಡಿರುತ್ತೇವೆ. ಈ ಜೋಗುಳ ಪದಗಳು ಸಂಸ್ಕೃತಿಯ ಸೊಗಡಿನೊಂದಿಗೆ ಮಿಳಿತವಾಗಿದ್ದು ಸುಂದರವಾದ ಅರ್ಥಗಳನ್ನು (Beautiful Meaning) ಒಳಗೊಂಡಿದೆ. ಇದೀಗ ಶಿಶುಗಳನ್ನು ಹಾಡು ಹೇಳಿ ಮಲಗಿಸುವುದು ಅವರ ಸಾಮಾಜಿಕ ಮತ್ತು ಪರಸ್ಪರ ಕ್ರಿಯೆಯನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.


ಶಿಶುವಿನ ಮೇಲೆ ಹಾಡಿನ ಪರಿಣಾಮವೇನು?


ವಾಂಡರ್‌ಬಿಲ್ಟ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಮಕ್ಕಳ ಕಾಳಜಿ ಹಾಗೂ ಆರೈಕೆ ವಿಭಾಗವು ಈ ವಿಭಿನ್ನ ಅಧ್ಯಯನವನ್ನು ಕೈಗೊಂಡಿದ್ದು 2 ರಿಂದ 6 ತಿಂಗಳ ವಯಸ್ಸಿನ 112 ಶಿಶುಗಳ ಮೇಲೆ ಹಾಡಿನ ಪರಿಣಾಮವನ್ನು ದಾಖಲಿಸಿದೆ. ಮಗುವಿನ ಪಾಲನೆ ಮಾಡುವವರು ಹಾಡು ಹೇಳುವಾಗ ಅದಕ್ಕೆ ಮಗು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಟ್ರ್ಯಾಕ್ ಮಾಡಿದ್ದು ಶಿಶುಗಳ ಕಣ್ಣಿನ ಚಲನೆ, ಹಾವ ಭಾವಗಳು, ಅವರು ವ್ಯಕ್ತಪಡಿಸುವ ಭಾವನೆಗಳನ್ನು ಸಂಶೋಧಕರು ತಂಡವು ನಿಗಾ ಇರಿಸಿದೆ.


ಹಾಡು ಅರ್ಥಪೂರ್ಣ ಸಾಮಾಜಿಕ ಪ್ರಕ್ರಿಯೆ


ಅಧ್ಯಯನಕಾರರು ತಿಳಿಸಿರುವಂತೆ 2 ತಿಂಗಳಲ್ಲಿಯೇ ಶಿಶುವು ಸಂವಾದಾತ್ಮಕ ರೀತಿಯಲ್ಲಿ ಪರಸ್ಪರ ಸಂವಹನಗಳಿಗೆ ತೊಡಗಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದು, ಹಾಡು ಹೇಳುವವರ ಕಣ್ಣುಗಳನ್ನು ನೋಡುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.


6 ತಿಂಗಳಲ್ಲಿ ಶಿಶುಗಳು ಅಭಿವೃದ್ಧಿ ಹೊಂದಿದಂತೆ ಸಂಗೀತದ ಲಯವನ್ನು ಆಸ್ವಾದಿಸುವ ಮಟ್ಟ ಕೂಡ ಹೆಚ್ಚಿದ್ದು, ಸಂವಹನ ನಡವಳಿಕೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ ಹಾಗೂ ಈ ಸಮಯದಲ್ಲಿ ಹಾಡು ಹೇಳುವವರ ಕಣ್ಣುಗಳೊಂದಿಗೆ ಪರಸ್ಪರ ನಿಕಟತೆಯನ್ನು ಹೊಂದುವುದು ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ.


you want to make your child life sweet than call this name honey
ಸಾಂದರ್ಭಿಕ ಚಿತ್ರ


ಶಿಶುಗಳಿಗೆ ಹಾಡು ಹೇಳುವುದು ಕೇವಲ ಅವರನ್ನು ಮಲಗಿಸಲು ಪ್ರಯೋಜನಕಾರಿಯಾಗಿರುವುದು ಮಾತ್ರವಲ್ಲದೆ ಅತ್ಯಂತ ಮಹತ್ವವಾದ ಅರ್ಥಪೂರ್ಣ ಸಾಮಾಜಿಕ ಪ್ರಕ್ರಿಯೆ ಎಂದೆನಿಸಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಮಿರಿಯಮ್ ಲೆನ್ಸ್ ತಿಳಿಸಿದ್ದಾರೆ.


ಮಗುವಿನ ತಾಯಿ ಇಲ್ಲವೇ ಮಗುವಿನ ಆರೈಕೆ ಮಾಡುವವರು ಶಿಶುಗಳೊಂದಿಗೆ ಹಾಡಿನ ಮೂಲಕ ಸಂವಹನ ನಡೆಸಿದಾಗ ಪರಸ್ಪರ ಬಾಂಧವ್ಯವವನ್ನು ಸೌಹಾರ್ದಯುತವಾಗಿ ಬೆಳೆಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಚಳಿಗಾಲದ ನಿಮ್ಮ ಡಯಟ್​ನಲ್ಲಿ ಇದೇ ಕಾರಣಕ್ಕೆ ಪ್ಲಮ್​ ಹಣ್ಣು ಇರಲೇಬೇಕಂತೆ


ಐ ಟ್ರ್ಯಾಕಿಂಗ್ ತಂತ್ರಜ್ಞಾನದ ಬಳಕೆ


ಮಕ್ಕಳು ಸಂಗೀತದೊಂದಿಗೆ ಎಷ್ಟು ತನ್ಮಯರಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಅಧ್ಯಯನಕಾರರು ಐ-ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಬಳಸಿದ್ದಾರೆ ಹಾಗೂ ಹಾಡು ಹೇಳುವಾಗ ಮಗುವಿನ ಚಲನವಲನಗಳನ್ನು ಗಮನಿಸಿದ್ದಾರೆ.


What should mothers do to prevent their children from getting infected in winter


ಈ ಅಧ್ಯಯನಕ್ಕಾಗಿ ಶಿಶುವಿನಲ್ಲಿ ಉಂಟಾಗುವ ಬದಲಾವಣೆಯು ಶಿಶುವಿನ ಕಾರಣದಿಂದಾಗಿಯೇ ಎಂಬುದನ್ನು ಗಮನಿಸಿದ್ದೇವೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ನೇರವಾಗಿ ಹಾಡುವುದು ಹಾಗೂ ವಿಡಿಯೋ ಹಾಡುಗಳ ಮೂಲಕ ಕೂಡ ಪರಿಶೀಲನೆಗಳನ್ನು ನಡೆಸಿರುವುದಾಗಿ ಅಧ್ಯಯನಕಾರರು ತಿಳಿಸಿದ್ದಾರೆ.




ವಿಡಿಯೋ ಹಾಡುಗಳಲ್ಲಿ ಶಿಶುಗಳ ಸಂವಹನವು ಏಕರೂಪವಾಗಿಲ್ಲ ಅವರ ಗಮನ ಬೇರೆಲ್ಲಿಯೋ ಇರುವುದಾಗಿ ಅಧ್ಯಯನಕಾರರು ತಿಳಿಸಿದ್ದು ಹಾಡುಗಾರ ನೇರವಾಗಿ ಶಿಶುವಿನ ಕಣ್ಣುಗಳನ್ನು ನೋಡಿ ಹಾಡುವಾಗ ಅವುಗಳು ಏಕಾಗ್ರತೆಯಿಂದ ತನ್ಮಯತೆಯಿಂದ ಹಾಡುವುದನ್ನು ಆಲಿಸುವುದನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದ್ದಾರೆ.


ಪೋಷಕರ ಹಾಗೂ ಶಿಶುವಿನ ಆಂತರಿಕ ಜೋಡಣೆಗೆ ಹಾಡು ಸಹಕಾರಿ


ಹಾಡು, ಶಿಶು ಹಾಗೂ ಮಗುವಿನ ಪೋಷಕರ ನಡುವಿನ ನಡವಳಿಕೆ ಮತ್ತು ಗಮನಾರ್ಹ ದೈಹಿಕ ಜೋಡಣೆಯನ್ನು ಬಹಿರಂಗಪಡಿಸುತ್ತದೆ ಎಂದು ಎಮೋರಿ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಅಧ್ಯಯನದ ಹಿರಿಯ ಲೇಖಕ ಡಿಸ್ಟಿಂಗ್ವಿಶ್ಡ್ ಚೇರ್ ವಾರೆನ್ ತಿಳಿಸಿದ್ದಾರೆ.


ಶಿಶುವಿನ ಪೋಷಕರು ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದು ಮುಖ್ಯವಾಗಿದ್ದರೂ ಶಿಶುಗಳೊಂದಿಗೆ ಅವರು ಸಾಮಾಜಿಕ ಸೂಚನೆಗಳನ್ನು ವ್ಯಕ್ತಪಡಿಸುವ ರೀತಿ ಮುಖ್ಯವಾಗಿರುತ್ತದೆ ಎಂಬುದು ವಾರೆನ್ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಇಂದಿರಾನಗರದ ಈ ಸ್ಥಳಗಳಲ್ಲಿ ಸಿಗುತ್ತೆ ಸೂಪರ್ ಟೇಸ್ಟಿ ಬಿರಿಯಾನಿ, ವಿಸಿಟ್ ಮಾಡೋದು ಮರೆಯಬೇಡಿ


ಹಾಡಿನ ಲಯವನ್ನು ಊಹಿಸಿಕೊಂಡು ಹಾಡುವುದು ಶಿಶುವಿನ ಸಂವಹನವನ್ನು ರಚಿಸುವಂತೆಯೇ ಶಿಶುವಿನ ಸಾಮಾಜಿಕ ಅಭಿವೃದ್ಧಿಯನ್ನು ಬೆಂಬಲಿಸುವ ಅವಿಭಾಜ್ಯ ಅಂಗವಾಗಿದೆ ಎಂಬುದು ವಾರೆನ್ ಹೇಳಿಕೆಯಾಗಿದೆ.

Published by:Sandhya M
First published: