Mushroom: ಅಣಬೆ ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ ಸೈಡ್ ಎಫೆಕ್ಟ್ಸ್ ಕೂಡ ಇದೆಯಂತೆ

ನಿಮಗೆ ತಿಳಿದಿದೆಯೇ, ಈ ಅಣಬೆಗಳು ಎಷ್ಟು ಉಪಯುಕ್ತವೋ ಅಷ್ಟೇ ಅಡ್ಡ ಪರಿಣಾಮಗಳನ್ನು ಸಹ ಹೊಂದಿವೆ? ಹೌದು, ನೀವು ಇದನ್ನು ಸರಿಯಾಗಿಯೇ ಓದಿದ್ದೀರಿ. ಅಣಬೆ ಸೇವನೆಯಿಂದ ಕೆಲವು ರೀತಿಯ ಅಡ್ಡ ಪರಿಣಾಮಗಳು ಸಹ ಉಂಟಾಗುತ್ತವೆ. ಹಾಗಾದರೆ ಬನ್ನಿ ಅಣಬೆಯ ಸೇವನೆಯಿಂದ ಆಗುವಂತಹ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

ಅಣಬೆ

ಅಣಬೆ

  • Share this:
ಎಷ್ಟೋ ಜನರಿಗೆ ಈ ಹೊಟೇಲ್ ಗಳಲ್ಲಿ ಸಿಗುವ ಮಶ್ರೂಮ್ (Mushroom) ಅಂದರೆ ತುಂಬಾನೇ ಪ್ರೀತಿಯಿರುತ್ತದೆ. ಈ ಮಶ್ರೂಮ್ ನಿಂದ ಮಾಡಿದ ಪಲ್ಯ ಮತ್ತು ಮಂಚೂರಿಯನ್ ಅಂತೂ ಸಿಕ್ಕಾಪಟ್ಟೆ ಇಷ್ಟಪಟ್ಟು ತಿಂತಾರೆ.  ಹೌದು.. ಅನೇಕರು ತಮ್ಮ ಮನೆಯಲ್ಲಿಯೂ (Home) ಸಹ ಈ ಮಶ್ರೂಮ್ ಪಲ್ಯಗಳನ್ನು ಮಾಡಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಈ ಮಶ್ರೂಮ್ ತಿನ್ನುವುದರಿಂದ ದೇಹದ ಆರೋಗ್ಯಕ್ಕೆ (Health) ಒಳ್ಳೆಯದೇ ಆಥವಾ ಇದನ್ನು ತಿನ್ನುವುದರಿಂದ ಯಾವುದಾದರೂ ಅಡ್ಡಪರಿಣಾಮಗಳಿವೆಯೇ ಅಂತ ಅನೇಕರಿಗೆ ಸಾಕಷ್ಟು ಗೊಂದಲಗಳಿರುವುದು ಸಹಜ. ಅಂದ ಹಾಗೆ ಈ ಮಶ್ರೂಮ್ ಎನ್ನುವುದು ಆಂಗ್ಲ ಪದ, ಇದನ್ನು ಕನ್ನಡದಲ್ಲಿ ಅಣಬೆಗಳು ಅಂತ ಹೇಳುತ್ತೇವೆ. ಅಣಬೆಗಳು ತಿನ್ನಬಹುದಾದ ಶಿಲೀಂಧ್ರಗಳು (fungus) ಎಂದು ನಮಗೆಲ್ಲರಿಗೂ ತಿಳಿದಿದೆ, ಅವು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ.

ಅಣಬೆ ಸೇವನೆಯ ಆರೋಗ್ಯ ಪ್ರಯೋಜನಗಳು
ಉದಾಹರಣೆಗೆ ಮೂತ್ರಪಿಂಡ, ಯಕೃತ್ತು ಮತ್ತು ಹೃದಯ ರಕ್ತನಾಳದ ಕಾಯಿಲೆಗಳು. ಅಣಬೆಗಳು ಬ್ಯಾಕ್ಟೀರಿಯಾ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ದೇಹದಲ್ಲಿರುವ ರೋಗನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಬಹುದು. ಇಷ್ಟೇ ಅಲ್ಲದೆ ಇದು ನಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ. ಅಣಬೆಯು ಕಾಡಿನಲ್ಲಿ ಬಿಸಿ ಮತ್ತು ಆರ್ದ್ರ ಪರಿಸ್ಥಿತಿಗಳಲ್ಲಿ ಬೆಳೆಯುವ ಸಸ್ಯದ ಹಣ್ಣಾಗಿದೆ.

ಅವುಗಳನ್ನು ನೆಲದ ಮೇಲೆ, ಮಣ್ಣಿನಲ್ಲಿ ಅಥವಾ ಅವುಗಳ ಆಹಾರ ಮೂಲದ ಮೇಲೆ ಉತ್ಪಾದಿಸಲಾಗುತ್ತದೆ. ನಿಮಗೆ ತಿಳಿದಿದೆಯೇ, ಈ ಅಣಬೆಗಳು ಎಷ್ಟು ಉಪಯುಕ್ತವೋ ಅಷ್ಟೇ ಅಡ್ಡ ಪರಿಣಾಮಗಳನ್ನು ಸಹ ಹೊಂದಿವೆ? ಹೌದು, ನೀವು ಇದನ್ನು ಸರಿಯಾಗಿಯೇ ಓದಿದ್ದೀರಿ. ಅಣಬೆ ಸೇವನೆಯಿಂದ ಕೆಲವು ರೀತಿಯ ಅಡ್ಡ ಪರಿಣಾಮಗಳು ಸಹ ಉಂಟಾಗುತ್ತವೆ. ಹಾಗಾದರೆ ಬನ್ನಿ ಅಣಬೆಯ ಸೇವನೆಯಿಂದ ಆಗುವಂತಹ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

1. ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡಬಹುದು: ಅಣಬೆ ಸೇವನೆಯು ಅನೇಕ ರೀತಿಯ ಹೊಟ್ಟೆ ಸಮಸ್ಯೆಗಳನ್ನು ತಂದೊಡ್ಡಬಹುದು. ಉದಾಹರಣೆಗೆ ಅತಿಸಾರ, ವಾಕರಿಕೆ ಮತ್ತು ವಾಂತಿ. ಅಣಬೆಗಳು ಶಿಲೀಂಧ್ರಗಳಾಗಿರುವುದರಿಂದ, ಕೆಲವು ಜನರು ಈ ಅಣಬೆಗಳನ್ನು ಸೇವಿಸಿದ ಕೂಡಲೇ ಅತಿಸಾರವು ಪ್ರಚೋದಿಸಲ್ಪಡುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಅಣಬೆ ಎಲ್ಲರ ದೇಹಕ್ಕೆ ಹೊಂದಿಕೆ ಆಗುವುದಿಲ್ಲ ಎಂದು ಹೇಳಬಹುದು.

ಇದನ್ನೂ ಓದಿ: Kitchen Tips: ಈ ರೀತಿ ನಿಂಬೆರಸವನ್ನು ಶೇಖರಣೆ ಮಾಡಿದ್ರೆ ವರ್ಷವಾದ್ರೂ ಹಾಳಾಗಲ್ಲ

2. ಚರ್ಮದ ಅಲರ್ಜಿಗೆ ಕಾರಣವಾಗಬಹುದು: ಅಣಬೆಗಳ ಒಂದು ಅಡ್ಡ ಪರಿಣಾಮವೆಂದರೆ ಅವು ಚರ್ಮದ ಅಲರ್ಜಿಗೆ ಕಾರಣವಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ಇದನ್ನು ತಿನ್ನುವುದರಿಂದ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು, ಇದು ಚರ್ಮದ ದದ್ದುಗಳು ಮತ್ತು ಕಿರಿಕಿರಿಯಂತಹ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ. ಆದ್ದರಿಂದ, ದಯವಿಟ್ಟು ಇದನ್ನು ಮಿತವಾಗಿ ತಿನ್ನುವುದು ಸೂಕ್ತ ಎಂದು ಹೇಳಬಹುದು.

3. ಉದಾಸೀನತೆ: ಅಣಬೆಯನ್ನು ಹೆಚ್ಚಾಗಿ ತಿಂದರೆ ವ್ಯಕ್ತಿಯು ಭ್ರಮೆಯ ಸ್ಥಿತಿಯಲ್ಲಿ ಹೋಗಬಹುದು. ಹೌದು, ನೀವು ಅದನ್ನು ಸರಿಯಾಗಿ ಓದಿದ್ದೀರಿ. ಅಣಬೆಗಳನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ಕೆಲ ವ್ಯಕ್ತಿಗಳು ವಾಸ್ತವಿಕತೆಯ ಸ್ಥಿತಿಯಿಂದ ದೂರವಾದಂತಾಗುತ್ತಾರೆ. ಅಂದರೆ ಸ್ವಲ್ಪ ಗೊಂದಲಮಯ ಸ್ಥಿತಿಯನ್ನು ಅನುಭವಿಸಬಹುದು. ಇಂತಹ ನಿರ್ದಿಷ್ಟ ಅಣಬೆಗಳನ್ನು ಕಾಡು ಅಥವಾ ಬೆಳೆಸಿದ ಅಣಬೆಗಳು ಎಂದು ಕರೆಯಲಾಗುತ್ತದೆ. ಅವು ಸೈಲೋಸಿಬಿನ್ ಅನ್ನು ಹೊಂದಿರುತ್ತವೆ, ಇದು ನೈಸರ್ಗಿಕವಾಗಿ ಸಂಭವಿಸುವ ಸೈಕೋಆಕ್ಟಿವ್ ಮತ್ತು ಹ್ಯಾಲುಸಿನೋಜೆನಿಕ್ ಸಂಯುಕ್ತವಾಗಿದೆ.

ಇದನ್ನೂ ಓದಿ:  Green Almonds: ಹಸಿರು ಬಾದಾಮಿಯಲ್ಲಿದೆ ಹೇರಳ ಪೋಷಕಾಂಶಗಳು, ಇದರ ಆರೋಗ್ಯ ಪ್ರಯೋಜನಗಳೇನು ನೋಡಿ

4. ಮಂಪರು ಆವರಿಸುವುದು: ಈ ಅಣಬೆಗಳನ್ನು ಸೇವಿಸಿದ ನಂತರ, ಬಹಳಷ್ಟು ಜನರು ಕೆಲವೊಮ್ಮೆ ತುಂಬಾ ಆಯಾಸ ಮತ್ತು ನಿದ್ರೆಯನ್ನು ಅನುಭವಿಸುತ್ತಾರೆ. ಇದು ನಿಮಗೆ ಸರಿ ಹೊಂದದಿದ್ದರೆ, ನೀವು ತುಂಬಾ ಅಹಿತಕರ ಭಾವನೆಯನ್ನು ಅನುಭವಿಸುವ ಸಾಧ್ಯತೆಯಿದೆ ಮತ್ತು ನಿಮ್ಮ ಶಕ್ತಿಯ ಮಟ್ಟಗಳು ಸಹ ಇದನ್ನು ಸೇವಿಸಿದ ನಂತರ ಗಮನಾರ್ಹವಾಗಿ ಕಡಿಮೆಯಾಗಬಹುದು.
Published by:Ashwini Prabhu
First published: