Morning Breakfast: ಬೆಳಗಿನ ತಿಂಡಿ, ತೂಕ ಇಳಿಕೆಗೆ ಮಶ್ರೂಮ್ ಸಲಾಡ್ ರೆಸಿಪಿ ಮಾಡಿ ಸವಿಯಿರಿ

ಆರೋಗ್ಯಕರ ಆಹಾರ ಪದಾರ್ಥಗಳನ್ನು ಸಹ ಅನಾರೋಗ್ಯಕರ ರೀತಿಯಲ್ಲಿ ಬೇಯಿಸಿ ತಿನ್ನುವುದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದುರ್ಬಲ ಚಯಾಪಚಯವು ಜೀರ್ಣಕಾರಿ ಸಮಸ್ಯೆ ಹೆಚ್ಚಿಸುತ್ತದೆ. ಇದು ತೂಕ ಹೆಚ್ಚಿಸುತ್ತದೆ. ಮಶ್ರೂಮ್ ನಿಮ್ಮ ಚಯಾಪಚಯ ಹೆಚ್ಚಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೆಚ್ಚುತ್ತಿರುವ ತೂಕವು (Weight Gain) ಅನೇಕ ಆರೋಗ್ಯ ಸಮಸ್ಯೆ (Health Problem) ಹುಟ್ಟು ಹಾಕುತ್ತದೆ. ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯು (Lifestyle) ಅದರಲ್ಲೂ ಬೆಳಗಿನ ತಿಂಡಿಯು ಸರಿಯಾಗಿರದೇ ಹೋದ್ರೆ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತವೆ. ಅಲ್ಲದೇ ಬೆಳಗಿನ ತಿಂಡಿಯನ್ನು ಮಿಸ್ ಮಾಡುವುದು ಅಥವಾ ಆರೋಗ್ಯಕರ ಪದಾರ್ಥ ಸೇವಿಸದಿದ್ದರೆ ಅದು ಅನಾರೋಗ್ಯವನ್ನು ಉತ್ತೇಜಿಸುತ್ತದೆ. ಕೆಲವೊಮ್ಮೆ ಬಿಡುವಿಲ್ಲದ ಕಾರಣ ಜನರು ತಮ್ಮ ಫಿಟ್ನೆಸ್ ಬಗ್ಗೆ ಯಾವುದೇ ಗಮನ ಹರಿಸಲ್ಲ. ಹಾಗಾಗಿ ತೂಕ ನಿಯಂತ್ರಿಸುವ ಉಪಹಾರ ಸೇವನೆ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಲು ಸಹಕಾರಿ. ಜಂಕ್ ಮತ್ತು ಫಾಸ್ಟ್ ಫುಡ್ ಸೇವನೆ ಕಡಿಮೆ ಮಾಡಿ.

    ಆರೋಗ್ಯಕರ ಆಹಾರ ಪದಾರ್ಥಗಳನ್ನು ಸಹ ಅನಾರೋಗ್ಯಕರ ರೀತಿಯಲ್ಲಿ ಬೇಯಿಸಿ ತಿನ್ನುವುದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದುರ್ಬಲ ಚಯಾಪಚಯವು ಜೀರ್ಣಕಾರಿ ಸಮಸ್ಯೆ ಹೆಚ್ಚಿಸುತ್ತದೆ. ಇದು ತೂಕ ಹೆಚ್ಚಿಸುತ್ತದೆ.

    ಮಶ್ರೂಮ್ ಆರೋಗ್ಯ ಪ್ರಯೋಜನಗಳು ನಿಮ್ಮ ಚಯಾಪಚಯ ಹೆಚ್ಚಿಸುತ್ತವೆ. ಹಾಗಾಗಿ ಇಂದು ನಾವು ಸುಲಭ ಮತ್ತು ಆರೋಗ್ಯಕರ ಮಶ್ರೂಮ್ ಸಲಾಡ್ ರೆಸಿಪಿಯನ್ನು ಉಪಹಾರದಲ್ಲಿ ಹೇಗೆ ಮಾಡುವುದು ಎಂದು ನಾವು ಇಲ್ಲಿ ನೋಡೋಣ.

    ಇದನ್ನೂ ಓದಿ: ಕೂದಲ ಸೌಂದರ್ಯಕ್ಕೆ ಶಾಂಪೂ ಬೇಕಾ? ಬೇಡ್ವಾ? ಈ ಬಗ್ಗೆ ತಜ್ಞರ ಸಲಹೆ ಓದಿ

    ಪೌಷ್ಟಿಕ ಆಹಾರ ಮತ್ತು ತೂಕ ನಷ್ಟ

    ತೂಕ ನಷ್ಟದ ವೇಳೆ ಜನರು ಸಾಮಾನ್ಯವಾಗಿ ಅಗತ್ಯ ಪೋಷಕಾಂಶ ಕಳೆದುಕೊಳ್ಳುತ್ತಾರೆ. ಆದರೆ ತೂಕ ಕಳೆದುಕೊಳ್ಳಲು ನೀವು ಊಟ ಬಿಡುವ ಅಗತ್ಯವಿಲ್ಲ. ಆದರೆ ನಿಮ್ಮ ಆಹಾರದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಸೇರಿಸಿ. ಮಶ್ರೂಮ್ ನಿಮಗೆ ಆರೋಗ್ಯಕರ ಆಯ್ಕೆ ಆಗಿದೆ.

    ಅಣಬೆಯನ್ನು ಸೂಪರ್ ಫುಡ್ ಎನ್ನುತ್ತಾರೆ ತಜ್ಞರು. ನಾವು ನಮ್ಮ ನಿಯಮಿತ ಆಹಾರದಲ್ಲಿ ಅಣಬೆ  ಸೇರಿಸಬೇಕು. ಇದು ತೂಕ ನಷ್ಟಕ್ಕೆ ಹಾಗೂ ಹೃದಯದ ಆರೋಗ್ಯಕ್ಕೆ ಅತ್ಯಗತ್ಯ ಆಹಾರ ಆಗಿದೆ.

    ಅಣಬೆಗಳು ದ್ರವದ ಉಗ್ರಾಣ. ಅಣಬೆಗಳಲ್ಲಿ ಬಹಳ ಕಡಿಮೆ ಪ್ರಮಾಣದ ಕ್ಯಾಲೋರಿಗಳಿವೆ. ಇದು ಪ್ರೊಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಅಣಬೆಯಲ್ಲಿರುವ ಸೆಲೆನಿಯಮ್ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಇದು ರಕ್ತದೊತ್ತಡ ರೋಗಿಗಳಿಗೂ ಆರೋಗ್ಯಕರವಾಗಿದೆ.

    ಅಣಬೆಯಲ್ಲಿ ವಿಟಮಿನ್ ಬಿ2, ವಿಟಮಿನ್ ಬಿ9, ರೈಬೋಫ್ಲಾವಿನ್, ಫೋಲೇಟ್, ವಿಟಮಿನ್ ಬಿ5, ಪ್ಯಾಂಟೊಥೆನಿಕ್ ಆಸಿಡ್, ವಿಟಮಿನ್ ಬಿ3, ನಿಯಾಸಿನ್ ಜೊತೆಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ, ವಿಟಮಿನ್ ಬಿ ಹೇರಳವಾಗಿದೆ. ಪೋಷಕಾಂಶಗಳು ಮೂಳೆಗಳಿಗೆ ಪ್ರಯೋಜನಕಾರಿ.

    ತೂಕ ನಷ್ಟಕ್ಕೆ ಅಣಬೆಗಳು ಹೇಗೆ ಸಹಾಯಕ?

    ಇತ್ತೀಚಿನ ಅಧ್ಯಯನದ ಪ್ರಕಾರ ಅಣಬೆಗಳು ನಿಮ್ಮನ್ನು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಇದು ನೀವು ಅತಿಯಾಗಿ ತಿನ್ನುವುದನ್ನು ಮತ್ತು ಆಗಾಗ್ಗೆ ಆಹಾರದ ಕಡು ಬಯಕೆಯನ್ನು ತಪ್ಪಿಸುತ್ತದೆ. ಇದು ಸ್ಥೂಲಕಾಯ ಸಮಸ್ಯೆ ನಿಯಂತ್ರಣದಲ್ಲಿದೆ. ತೂಕ ಇಳಿಸಲು ಯೋಜಿಸುತ್ತಿದ್ದರೆ ನೀವು ಚಿಂತೆ ಮಾಡದೇ ನಿಮ್ಮ ಆಹಾರದಲ್ಲಿ ಮಶ್ರೂಮ್ ಸೇರಿಸಿ.

    ಅಣಬೆ ಪೋಷಕಾಂಶಗಳು ರಕ್ತದ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಸಹಕಾರಿ. ಇದು ದೇಹದ ಕೊಬ್ಬನ್ನು ಸುಡುತ್ತದೆ. ನಿಮ್ಮ ವ್ಯಾಯಾಮ ಪೂರ್ವ ಆಹಾರದಲ್ಲಿ ನೀವು ಮಶ್ರೂಮ್ ಸೇರಿಸಿದರೆ ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ.

    ಮಶ್ರೂಮ್ ಸಲಾಡ್ ರೆಸಿಪಿ ಆರೋಗ್ಯಕರ ಪಾಕ ವಿಧಾನ

    ಸಲಾಡ್ ರೂಪದಲ್ಲಿ ತೂಕ ನಷ್ಟದ ಆಹಾರದಲ್ಲಿ ಅಣಬೆ ಸೇರಿಸುವುದು ಉತ್ತಮ ವಿಧಾನವಾಗಿದೆ. ಸಲಾಡ್‌ ಗೆ ಮಶ್ರೂಮ್ ಸೇರಿಸಿದರೆ ಎಲ್ಲಾ ಪೋಷಣೆ ಉಳಿಸುತ್ತದೆ. ಮತ್ತು ನೀವು ಇತರ ಪ್ರಮುಖ ತರಕಾರಿಗಳ ಪೋಷಕಾಂಶ ಪಡೆಯುತ್ತೀರಿ.

    ಮಶ್ರೂಮ್ ಸಲಾಡ್ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು

    ಅಣಬೆ, ಸೌತೆಕಾಯಿ, ಟೊಮೆಟೊ, ಎಲೆಕೋಸು, ನಿಂಬೆ ರಸ, ಆಲಿವ್ ಎಣ್ಣೆ, ಸೇಬು ಸೈಡರ್ ವಿನೆಗರ್, ಉಪ್ಪು (ರುಚಿಗೆ ತಕ್ಕಂತೆ), ಕರಿಮೆಣಸು,

    ಮಶ್ರೂಮ್ ಸಲಾಡ್ ರೆಸಿಪಿ ತಯಾರಿಸುವ ವಿಧಾನ

    ಮೊದಲು ಮಶ್ರೂಮ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈಗ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಗ್ಯಾಸ್ ಮೇಲೆ ಇಡಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ, ನಂತರ ಅಣಬೆ ಸೇರಿಸಿ ಮತ್ತು ನೀರು ಆವಿಯಾಗುವವರೆಗೆ ಮಿಶ್ರಣ ಮಾಡುತ್ತಾ ಇರಿ.

    ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಾಗಬೇಕು ಅಂದ್ರೆ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಹೊಕ್ಕಳಿಗೆ ಹಾಕಿ

    ಮಧ್ಯದಲ್ಲಿ ಸೌತೆಕಾಯಿ, ಟೊಮೆಟೊ ಮತ್ತು ಎಲೆಕೋಸು ಸಣ್ಣ ತುಂಡುಗಳಾಗಿ ಕತ್ತರಿಸಿ. ರುಚಿಗೆ ತಕ್ಕಂತೆ ಉಪ್ಪು, ವಿನೆಗರ್ ಮತ್ತು ಆಲಿವ್ ಎಣ್ಣೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ನೀರು ಆವಿಯಾದ ನಂತರ ಅಣಬೆ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ. ಈಗ ನಿಮ್ಮ ಬೆಳಗಿನ ತಿಂಡಿ ಮಶ್ರೂಮ್ ಸಲಾಡ್ ರೆಸಿಪಿ ರೆಡಿ.
    Published by:renukadariyannavar
    First published: