Mushroom Biryani Near Me: ಬೆಂಗಳೂರಿನ ಈ ರೆಸ್ಟೊರೆಂಟ್​ಗಳಲ್ಲಿ ಮಸ್ತ್​ ಮಶ್ರೂಮ್ ಬಿರಿಯಾನಿ ಸಿಗುತ್ತೆ

Mushroom Biryani Near Me: ಭಾರತದಾದ್ಯಂತ ಬಹುತೇಕರು ಇಷ್ಟಪಡುವ ಯಾವುದಾದರೊಂದು ಭಕ್ಷ್ಯವಿದ್ದರೆ, ಅದು ಬಿರಿಯಾನಿ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಬೆಂಗಳೂರು ಸಹ ಇದಕ್ಕೆ ಹೊರತಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಬಿರಿಯಾನಿ (Biryani) ಎನ್ನುವ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರು ಬರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಬಿರಿಯಾನಿ ಹೈದರಬಾದಿನಲ್ಲಿ (Hyderabad) ತುಂಬಾನೇ ಜನಪ್ರಿಯ ಎನ್ನುವುದು ಬಹುತೇಕರಿಗೆ ಗೊತ್ತಿದೆ. ಆದರೆ ಬಿರಿಯಾನಿಯಲ್ಲಿ ಸಹ ಈಗ ವೆರೈಟಿ ಲಭ್ಯವಿದೆ. ಸದ್ಯ ಮಶ್ರೂಮ್ ಬಿರಿಯಾನಿ ಟ್ರೆಂಡಿಂಗ್​ನಲ್ಲಿದೆ. ಎಲ್ಲರೂ ಬೆಸ್ಟ್ ಮಶ್ರೂಮ್ ಬಿರಿಯಾನಿ ಎಂದು ಹುಡುಕುತ್ತಿದ್ದಾರೆ.  ಆದರೆ ನೀವು ಬೆಂಗಳೂರಿನಲ್ಲಿದ್ದು (Bengaluru), ಉತ್ತಮ ಮತ್ತು ಸ್ವಾದಿಷ್ಟಕರವಾದ ಮಶ್ರೂಮ್​ ಬಿರಿಯಾನಿ ಅನ್ನು ಸೇವಿಸಬೇಕು ಎಂದು ನಿಮಗೆ ಅನ್ನಿಸಿದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. 

ಭಾರತದಾದ್ಯಂತ ಬಹುತೇಕರು ಇಷ್ಟಪಡುವ ಯಾವುದಾದರೊಂದು ಭಕ್ಷ್ಯವಿದ್ದರೆ, ಅದು ಬಿರಿಯಾನಿ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಬೆಂಗಳೂರು ಸಹ ಇದಕ್ಕೆ ಹೊರತಾಗಿಲ್ಲ. ಈ ಬಿರಿಯಾನಿಯನ್ನು ದೇಶದ ಉದ್ದಗಲಕ್ಕೂ ವಿಭಿನ್ನವಾಗಿ ತಯಾರಿಸಲಾಗುತ್ತದೆ. ಹಾಗಾದರೆ ಬೆಂಗಳೂರಿನಲ್ಲಿ ಅದ್ಭುತವಾದ ಮಶ್ರೂಮ್ ಬಿರಿಯಾನಿ ಸಿಗುವ ಸ್ಥಳಗಳ ಪಟ್ಟಿ ಇಲ್ಲಿದೆ.

ಪೋಟ್​ ಬಿರಿಯಾನಿ, ನಾಗಸಂದ್ರ, ಬೆಂಗಳೂರು

ಇದೊಂದು ಒಂದು ಸಣ್ಣ ವ್ಯವಹಾರ ಕೇಂದ್ರವಾಗಿದ್ದು, ಮಶ್ರೂಮ್​ ಬಿರಿಯಾನಿಯ ತಾಜಾತನ ಮತ್ತು ರುಚಿಗೆ ಸರಿಸಾಟಿ ಯಾರಿಲ್ಲ. ಇಲ್ಲಿ ಕೇವಲ ಮಶ್ರೂಮ್ ಮಾತ್ರವಲ್ಲದೇ, ವಿವಿಧ ರೀತಿಯ ಬಿರಿಯಾನಿಗಳು ಲಭ್ಯವಿದೆ.

ವಿಳಾಸ: ನಂ. 267, ನೆಲ ಮಹಡಿ, ಜೆ ಕೆ ಗಾಲ್ಫ್ ವ್ಯೂ, 139/20, ನಾಗಸಂದ್ರ ರಸ್ತೆ, ಎಂಬಸಿ ಗಾಲ್ಫ್ ಲಿಂಕ್ಸ್ ಬ್ಯುಸಿನೆಸ್ ಪಾರ್ಕ್, ದೊಮ್ಮಲೂರು, ಅಮರಜ್ಯೋತಿ ಲೇಔಟ್, ದೊಮ್ಮಲೂರು, ಬೆಂಗಳೂರು, ಕರ್ನಾಟಕ 560071, ಭಾರತ

ಮೊಬೈಲ್ ನಂಬರ್: 9900025811

ಇದನ್ನೂ ಓದಿ: ಮಹಿಳೆಯರಿಗೆ ಈ ಪರ್ಫ್ಯೂಮ್ ಪರಿಮಳ ಎಂದರೆ ಬಹಳ ಇಷ್ಟವಂತೆ

ಶಿವಾಜಿ ಮಿಲಿಟರಿ ಹೋಟೆಲ್​, ಜಯನಗರ, ಬೆಂಗಳೂರು

ಈರುಳ್ಳಿ ಮತ್ತು ಟೊಮ್ಯಾಟೋ ಗ್ರೇವಿಯನ್ನು ಹಾಕಿ, ಇಲ್ಲಿನ ಮಶ್ರೂಮ್ ಬಿರಿಯಾನಿಯನ್ನು ನೀವು ಇಲ್ಲಿ ಒಮ್ಮೆಯಾದರೂ ಸವಿಯಲೇ ಬೇಕು. ಇದರಲ್ಲಿ ವಿಭಿನ್ನ ಮಸಾಲೆಗಳನ್ನು ಹಾಕಲಾಗುತ್ತದೆ. ಬೆಂಗಳೂರಿನಲ್ಲಿ ಹೆಚ್ಚು ಪ್ರಸಿದ್ದ ಸ್ಥಳಗಳಲ್ಲಿ ಒಂದು. ಸ್ಪೈಸಿ , ಮಸಲಾಯುಕ್ತ ಬಿರಿಯಾನಿ ಬೇಕು ಎಂದರೆ ಇಲ್ಲಿಗೆ ವಿಸಿಟ್​ ಮಾಡಲೇಬೇಕು.

ವಿಳಾಸ: 718, 1ನೇ ಸಿ ಮೇನ್, 8ನೇ ಬ್ಲಾಕ್, ಜಯನಗರ, ಬೆಂಗಳೂರು

ಮೊಬೈಲ್ ನಂಬರ್: +919845149217

ಬಿಗ್​ ಪಿಚ್ಚರ್, HAL 2ನೇ ಹಂತ, ಬೆಂಗಳೂರು

ರುಚಿಕರವಾದ ಆಹಾರ, ಪಾಕಶಾಲೆಯ ಅನುಭವ ಬೇಕು ಎಂದರೆ ಇಲ್ಲಿಗೆ ವಿಸಿಟ್​ ಮಾಡಬೇಕು. ವಿಶೇಷ ಸಂದರ್ಭಕ್ಕಾಗಿ ಖಂಡಿತವಾಗಿಯೂ ಯೋಗ್ಯವಾದ ಸ್ಥಳ. ನೀವು ಇದನ್ನು ಪ್ರಯತ್ನಿಸಬೇಕು. ಮಶ್ರೂಮ್​ ಬಿರಿಯಾನಿಯನ್ನು ಇಲ್ಲಿ ತಿಂದರೆ ಪದೇ ಪದೇ ಇಲ್ಲಿಗೆ ವಿಸಿಟ್​ ಮಾಡುತ್ತೀರಿ.

ವಿಳಾಸ: 4121, LR ಆರ್ಕೇಡ್, HAL 2ನೇ ಹಂತ, ವಾರ್ಡ್ 88 (ಹಳೆಯ ವಿಮಾನ ನಿಲ್ದಾಣ ರಸ್ತೆ), ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 080 4553 0000

ದಿ ಎಗ್​ ಫ್ಯಾಕ್ಟರಿ, ಜೆಪಿ ನಗರ್, ಬೆಂಗಳೂರು

ನಿಮಗೆ ಇಲ್ಲಿ ಕೇವಲ ಮಶ್ರೂಮ್​ ಬಿರಿಯಾನಿ ಮಾತ್ರವಲ್ಲದೇ, ಮಶ್ರೂಮ್​ನಿಂದ ಮಾಡಿದ ಹಲವಾರು ಪದಾರ್ಥಗಳನ್ನು ಇಲ್ಲಿ ಎಂಜಾಯ್ ಮಾಡಬಹುದು. ಆಹಾರ ಪ್ರಿಯರಿಗೆ ಇದು ಫೇವರೇಟ್​ ಜಾಗವಾಗಿದೆ.

ವಿಳಾಸ: #288, ನೆಲ ಮಹಡಿ (15ನೇ ಸಿಆರ್​ಎಸ್​, 18ನೇ ಮುಖ್ಯ, ಜೆಪಿ ನಗರ 5ನೇ ಹಂತ), ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 40124848

ಇದನ್ನೂ ಓದಿ: ಸೀರೆಗೆ ವೆಸ್ಟರ್ನ್ ಟಚ್​ ಕೊಟ್ಟು ಹೀಗೂ ಉಡಬಹುದು ನೋಡಿ

ಮಿಲ್ಲರ್ 46 (Millers 46), ವಸಂತ ನಗರ, ಬೆಂಗಳೂರು

ಇಲ್ಲಿ ಓರಿಯೆಂಟಲ್ ಪೋರ್ಕ್ ಹೆಚ್ಚು ಪ್ರಸಿದ್ದ. ಆದರೆ ಮಶ್ರೂಮ್ ಬಿರಿಯಾನಿ ಸವಿಯಲು ಜನರು ವೀಕೆಂಡ್​ನಲ್ಲಿ ಸಾಲುಗಟ್ಟಿ ಬರುತ್ತಾರೆ.ಇಲ್ಲಿನ ಒಂದೊಂದು ವಿಭಿನ್ನ ಆಹಾರಗಳು ಅದ್ಭುತ ರುಚಿಯನ್ನು ಹೊಂದಿದ್ದು, ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು.

ವಿಳಾಸ: 46, ಮಿಲ್ಲರ್ಸ್ ರಸ್ತೆ, ಕವಿರಪ್ಪ ಲೇಔಟ್, ವಸಂತ ನಗರ, ಬೆಂಗಳೂರು, ಕರ್ನಾಟಕ 560052

ಮೊಬೈಲ್ ನಂಬರ್: 080 4113 1746
Published by:Sandhya M
First published: