ಅನೇಕ ಬಾರಿ ನೀವು ಭಾರವಾದ ಕೆಲಸ (Work) ಮಾಡಿದಾಗ, ಕಠಿಣ ವ್ಯಾಯಾಮ (Exercise) ಮಾಡಿದಾಗ ಮೂಳೆಗಳಲ್ಲಿ (Bones) ಮತ್ತು ದೇಹವು (Body) ನೋವಾಗುವುದು (Pain) ಸಹಜ. ದೇಹದಲ್ಲಿ ಆಂತರಿಕ ಗಾಯಗಳು ಉಂಟಾಗುತ್ತವೆ. ಇದರಿಂದ ದೇಹದ ಬಾಹ್ಯ ಭಾಗಗಳಲ್ಲಿಯೂ (Parts) ಊತ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಸ್ನಾಯುಗಳ ಹಿಗ್ಗುವಿಕೆ ಅಥವಾ ಗಾಯದಿಂದ ಉಂಟಾಗುವ ಊತದ ಸಮಸ್ಯೆಯನ್ನು ಕೆಲವು ಮನೆಮದ್ದುಗಳ ಮೂಲಕ ನೀವು ಗುಣಪಡಿಸಬಹುದು. ಆದರೆ ಯಾವುದೇ ಸಮಸ್ಯೆ ಇರದೇ, ದೇಹದ ಅಂಗಗಳಲ್ಲಿ ಊತ ಬರುವುದು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ದೇಹದ ಊತಕ್ಕೆ ಹಲವು ಕಾರಣಗಳು ಇವೆ. ಅವೆಲ್ಲವೂ ಅಂಗಗಳ ಮೇಲೆ ಕಾಣಿಸಿಕೊಳ್ಳಲೇಬೇಕು ಎಂದೇನಿಲ್ಲ.
ಮೂಳೆಗಳ ಊತ ಹಾಗೂ ಪಾದಗಳ ಸುಡುವ ಸಂವೇದನೆ ಸಮಸ್ಯೆಗೆ ಕಾರಣವೇನು?
ದೇಹದಲ್ಲಿ ಉರಿಯೂತ ಸಮಸ್ಯೆ ಯಾಕೆ ಶುರು ಆಗುತ್ತದೆ ಎಂಬುದು ಬಹುತೇಕರ ಪ್ರಶ್ನೆ ಆಗಿದೆ. ಒಂದು ಕಾಯಿಲೆ ಅಥವಾ ಗಾಯಕ್ಕೆ ಒಡ್ಡಿಕೊಂಡಾಗ, ದೇಹದ ಒಂದು ಭಾಗವು ಊತಕ್ಕೆ ಒಳಗಾಗುತ್ತದೆ. ಜೊತೆಗೆ ಸ್ನಾಯುವಿನ ಒತ್ತಡ ಅಥವಾ ಅಧಿಕ ತೂಕವು ಊತ ಸಮಸ್ಯೆಗೆ ಕಾರಣ ಆಗುತ್ತದೆ.
ಆದರೆ ಕೆಲವೊಮ್ಮೆ ಯಾವುದೇ ಬಾಹ್ಯ ಕಾರಣ ಇಲ್ಲದೇ ಆಂತರಿಕ ಆರೋಗ್ಯ ಸಮಸ್ಯೆ ಇದ್ದಾಗ ದೇಹದ ವಿವಿಧ ಭಾಗಗಳಲ್ಲಿ ಊತ ಸಮಸ್ಯೆ ಉಂಟಾಗುತ್ತದೆ. ಇದು ಸಾಕಷ್ಟು ಬಾಧಿಸುತ್ತದೆ.
ಡಾ. ಆರ್.ಆರ್. ದತ್ತಾ ಅವರು ಹೇಳುವ ಪ್ರಕಾರ, ದೀರ್ಘಕಾಲದ ಉರಿಯೂತ ಇದ್ದಾಗ ಅದು ದೇಹವು ಗಾಯ ಮತ್ತು ರೋಗಕ್ಕೆ ಒಡ್ಡಿಕೊಳ್ಳದೆ ಹೋಗುತ್ತದೆ.
ನಂತರ ಇದು ಉರಿಯೂತದ ಕೋಶಗಳ ಉತ್ಪಾದನೆ ಮಾಡಲು ಶುರು ಮಾಡುತ್ತದೆ. ಅಂತಹ ವೇಳೆ ಉರಿಯೂತ ಸಮಸ್ಯೆ ದೇಹದಲ್ಲಿ ಪ್ರಾರಂಭ ಆಗುತ್ತದೆ. ಇದು ಸಂಧಿವಾತ ಅಥವಾ ಆಲ್ಝೈಮರ್ ಅಪಾಯ ಹುಟ್ಟು ಹಾಕುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಉರಿಯೂತ ಸಮಸ್ಯೆ ನಡುವಿನ ಸಂಬಂಧವೇನು?
ಡಾ ಆರ್ ಆರ್ ದತ್ತಾ ಅವರ ಪ್ರಕಾರ, ದೇಹವು ಬ್ಯಾಕ್ಟೀರಿಯಾ, ವೈರಸ್ ಅಥವಾ ಹಾನಿಕಾರಕ ವಸ್ತು ಇನ್ವಿಯೋಲೇಟ್ ಏಜೆಂಟ್ ಜೊತೆ ಸಂಪರ್ಕಕ್ಕೆ ಬಂದಾಗ ಅಥವಾ ಅದು ಗಾಯಗೊಂಡಾಗ ಪ್ರತಿರಕ್ಷಣಾ ವ್ಯವಸ್ಥೆ ಸಕ್ರಿಯವಾಗುತ್ತದೆ.
ಇದು ದೇಹದಲ್ಲಿ ಉರಿಯೂತ ಕೋಶಗಳ ಉತ್ಪಾದನೆಗೆ ಕಾರಣ ಆಗುತ್ತದೆ. ಇದು ಅಂಗಾಂಶವನ್ನು ಸರಿಪಡಿಸುತ್ತದೆ. ಮತ್ತು ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳಿಗೆ ಉರಿಯೂತದ ಪ್ರತಿಕ್ರಿಯೆ ಉಂಟು ಮಾಡುತ್ತದೆ.
ಈ ಕಾರಣಕ್ಕಾಗಿ, ದೇಹದಲ್ಲಿ ಅಸ್ವಸ್ಥತೆ, ಊತ, ಗಾಯ ಅಥವಾ ಕೆಂಪು ಬಣ್ಣವು ಪ್ರಾರಂಭವಾಗುತ್ತದೆ.
ದೀರ್ಘಕಾಲದ ಉರಿಯೂತದ ಮುಖ್ಯ ಲಕ್ಷಣಗಳು ಯಾವುವು?
ದೀರ್ಘಕಾಲದ ಉರಿಯೂತ ಲಕ್ಷಣಗಳ ಬಗ್ಗೆ ಹೇಳಿದ ತಜ್ಞರು ಹೃದ್ರೋಗ, ಮಧುಮೇಹ, ಕ್ಯಾನ್ಸರ್, ಸಂಧಿವಾತ ಅಥವಾ ಕ್ರೋನ್ಸ್ ಕಾಯಿಲೆ ಅಥವಾ ಅಲ್ಸರೇಟಿವ್ ಕೊಲೈಟಿಸ್‌ನಂತಹ ಕರುಳಿನ ಕಾಯಿಲೆ ಸಮಸ್ಯೆ ಇರಬಹುದು ಎಂದು ಹೇಳುತ್ತಾರೆ.
ವ್ಯಕ್ತಿಯ ದೇಹದ ಯಾವುದೇ ಭಾಗವು ಊತಕ್ಕೆ ತುತ್ತಾಗುತ್ತದೆ. ಯಾವ ಪೌಷ್ಟಿಕಾಂಶದ ಕೊರತೆ ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು ಅಂದ್ರೆ ಪೌಷ್ಟಿಕಾಂಶದ ಕೊರತೆಗಳಾದ ಅಮೈನೋ ಆಮ್ಲ, ಆಲಿಗೋಸ್ಯಾಕರೈಡ್‌ಗಳು ಮತ್ತು ಶಾರ್ಟ್-ಚೈನ್ ಕೊಬ್ಬಿನಾಮ್ಲಗಳು ದೀರ್ಘಕಾಲದ ಉರಿಯೂತ ಉಂಟು ಮಾಡಉತ್ತವೆ.
ಹಾಗಲಕಾಯಿ ಸೇವನೆ ಮಾಡುವದು
ಎಲ್ಲಾ ರೀತಿಯ ಪೋಷಕಾಂಶಗಳು ಉರಿಯೂತ ಗುಣಲಕ್ಷಣ ಹೊಂದಿವೆ. ಇದು ಊತ ಸಮಸ್ಯೆ ಅಪಾಯ ಕಡಿಮೆ ಮಾಡುತ್ತದೆ. ಊತ ಸಮಸ್ಯೆ ಹೋಗಲಾಡಿಸಲು ಹಾಗಲಕಾಯಿ ಸೇವನೆ ರಾಮಬಾಣ ಎಂದು ಸಾಬೀತಾಗುತ್ತದೆ.
ಇದನ್ನೂ ಓದಿ: ಮುಖದ ತ್ವಚೆ ಸುಂದರವಾಗಲಿ ಅಂತ ಅಡುಗೆ ಸೋಡಾ ಬಳಸುತ್ತೀರಾ? ಹಾಗಿದ್ರೆ ಇದು ಎಷ್ಟು ಸೇಫ್?
ಯಾಕಂದ್ರೆ ಹಾಗಲಕಾಯಿ ಉರಿಯೂತ ನಿವಾರಕ, ಮಧುಮೇಹ ನಿವಾರಕ, ಕ್ಯಾನ್ಸರ್ ವಿರೋಧಿ, ಆ್ಯಂಟಿ ಆಕ್ಸಿಡೆಂಟ್, ಬೊಜ್ಜು ನಿವಾರಕ, ಬ್ಯಾಕ್ಟೀರಿಯಾ ವಿರೋಧಿ, ಇಮ್ಯುನೊಮಾಡ್ಯುಲೇಟರಿ ಗುಣ ಹೊಂದಿದೆ. ಉರಿಯೂತ ನಿವಾರಣೆಗೆ ಪರಿಣಾಮಕಾರಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ