ಒಣದ್ರಾಕ್ಷಿಯನ್ನು (Raisin) ನೀವು ತಿಂದಿರಬಹುದು. ಸಿಹಿಯಾದ ಒಣದ್ರಾಕ್ಷಿ ಹಲವು ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿದೆ. ಒಣದ್ರಾಕ್ಷಿ ಹಣ್ಣು (Fruit) ಹೃದಯ ಆರೋಗ್ಯಕ್ಕೂ (Heart Health) ತುಂಬಾ ಉತ್ತಮವಾಗಿದೆ. ಹಾಗೆಯೇ ನೀವು ಮಾರುಕಟ್ಟೆಯಲ್ಲಿ, ಅಂಗಡಿಗಳಲ್ಲಿ ಒಣದ್ರಾಕ್ಷಿ ಹೋಲುವ ಕಡು ನೀಲಿ ಬಣ್ಣದ ದ್ರಾಕ್ಷಿಯನ್ನು ನೋಡಿರಬಹುದು. ಅಂದ ಹಾಗೇ ಒಣದ್ರಾಕ್ಷಿಯನ್ನೇ ಹೋಲುವ ಕಡು ನೀಲಿ ಬಣ್ಣದ ಈ ಹಣ್ಣನ್ನು ಮುನಕ್ಕ (Munakka) ಎಂದು ಕರೆಯುತ್ತಾರೆ. ಮುನಕ್ಕ ಥೇಟ್ ಒಣದ್ರಾಕ್ಷಿಯಂತೆ ಕಾಣುವ ಒಣ ಹಣ್ಣಾಗಿದೆ. ಆದ್ರೆ ಇದು ಒಣದ್ರಾಕ್ಷಿಗಿಂತ ಸ್ವಲ್ಪ ಭಿನ್ನವಾಗಿದೆ. ಅಂದ ಹಾಗೇ ರೈಸಿನ್ ಅಂದ್ರೆ ಒಣದ್ರಾಕ್ಷಿ ಹಣ್ಣನ್ನು ಇಂಗ್ಲಿಷ್ ನಲ್ಲಿ ಬ್ಲ್ಯಾಕ್ ಗ್ರೇಪ್ ರೈಸಿನ್ ಅಂತಾ ಕರೆಯುತ್ತಾರೆ.
ಮುನಕ್ಕದ ನೀರು ಸೇವಿಸಿದ್ರೆ ಸಿಗುತ್ತೆ ಸಾಕಷ್ಟು ಆರೋಗ್ಯ ಲಾಭ
ಈ ಮುನಕ್ಕ ಅತ್ಯಧಿಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರತಿನಿತ್ಯ ಮುನಕ್ಕದ ನೀರು ಸೇವನೆ ಮಾಡಿದ್ರೆ ಸಾಕಷ್ಟು ಆರೋಗ್ಯ ಲಾಭಗಳಿವೆ. ಮುನಕ್ಕ ಸೇವನೆ ಮಾಡಿದ್ರೆ ಫೈಬರ್, ಜೀವಸತ್ವ ಮತ್ತು ಖನಿಜದ ಗುಣಗಳ ಲಾಭ ಪಡೆಯಬಹುದು.
ಹಸಿ ಒಣದ್ರಾಕ್ಷಿ ಸೇವನೆಯ ಜೊತೆಗೆ ಇದರ ನೀರು ಸಹ ಸಖತ್ ಆರೋಗ್ಯ ಪ್ರಯೋಜನ ನೀಡುತ್ತದೆ. ಹೊಟ್ಟೆಗೆ ಒಣದ್ರಾಕ್ಷಿ ಮುನಕ್ಕ ನೀರು ತುಂಬಾ ಒಳ್ಳೆಯದು ಅಂತಾರೆ ಡಯೆಟಿಷಿಯನ್ ಮನ್ಪ್ರೀತ್ . ಅವರು ಹೇಳುವ ಪ್ರಕಾರ, ಪ್ರತಿದಿನ ಒಣದ್ರಾಕ್ಷಿ ಮುನಕ್ಕ ನೀರು ಸೇವಿಸಿದ್ರೆ ಕೇವಲ ಒಂದು ತಿಂಗಳಲ್ಲಿ ಐದು ಕಾಯಿಲೆಗಳು ಗುಣವಾಗುತ್ತವೆ.
ಮುನಕ್ಕ ಹೊಟ್ಟೆ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಅಂದ ಹಾಗೇ, ದೇಹದಲ್ಲಿ ಉಂಟಾಗುವ ಹಲವು ಕಾಯಿಲೆಗಳ ಮೂಲ ಹೊಟ್ಟೆಗೆ ಸಂಬಂಧಿಸಿರುತ್ತವೆ. ಪ್ರತಿಯೊಂದು ಕಾಯಿಲೆಯು ಹೊಟ್ಟೆ ಮತ್ತು ಜೀರ್ಣಕ್ರಿಯೆ ಸಮಸ್ಯೆಯಿಂದ ಹುಟ್ಟಿಕೊಳ್ಳತ್ತದೆ ಎಂಬುದನ್ನು ಯಾವಾಗಲೂ ನೆನಪಿಡಿ. ಕರುಳಿನ ಉರಿಯೂತನ್ನು ಕಡಿಮೆ ಮಾಡುತ್ತದೆ.
ಒಣದ್ರಾಕ್ಷಿ ಮುನಕ್ಕದಲ್ಲಿ ಹಲವು ಪೋಚಕಾಂಶಗಳಿದ್ದು ಕರಿಳಿನ ಆರೋಗ್ಯಕ್ಕೆ ಸಹಕಾರಿ ಆಗಿದೆ. ಮುನಕ್ಕದಲ್ಲಿ ಕಾರ್ಬೋಹೈಡ್ರೇಟ್ಗಳು, ಕ್ಯಾಲೋರಿ, ಥಯಾಮಿನ್, ಪಿರಿಡಾಕ್ಸಿನ್, ಕ್ಯಾಲ್ಸಿಯಂ, ಫೈಬರ್, ಆಸ್ಕೋರ್ಬಿಕ್ ಆಮ್ಲ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರೈಬೋಫ್ಲಾವಿನ್, ಸತು, ಕಬ್ಬಿಣ, ಕ್ಯಾಲ್ಸಿಯಂ ಇತ್ಯಾದಿ ಪೋಷಕಾಂಶಗಳಿವೆ.
ಮಲಬದ್ಧತೆ ನಿವಾರಣೆಗೆ ಸಹಕಾರಿ
ಒಣದ್ರಾಕ್ಷಿ ನೀರು ಕುಡಿದ್ರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಇದು ಫೈಬರ್ ಮತ್ತು ವಿರೇಚಕ ಗುಣ ಹೊಂದಿದೆ, ಇದು ಕರುಳಿನ ಚಲನೆಗೆ ಸಹಾಯ ಮಾಡಿ, ಮಲ ವಿಸರ್ಜನೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ. ದೀರ್ಘಕಾಲದ ಮಲಬದ್ಧತೆಯನ್ನೂ ನಿವಾರಿಸುತ್ತದೆ.
ಮೂಲವ್ಯಾಧಿ ಸಮಯ ಉಂಟಾಗುವ ನೋವು ನಿವಾರಕವಾಗಿದೆ
ಇನ್ನು ಮಲ ವಿಷರರ್ಜನೆ ವೇಳೆ ಹೆಚ್ಚಿನ ಜನರು ತುಂಬಾ ತ್ರಾಸ ಪಡ್ತಾರೆ. ಅದರಲ್ಲಿ ಒಣ ದ್ರಾಕ್ಷಿ ನೀರನ್ನು ಕುಡಿದರೆ ಮಲ ಮೃದುವಾಗುತ್ತದೆ ಮತ್ತು ಸುಲಭವಾಗಿ ಹೊರಗೆ ಹಕಬುದುದಾಗಿದೆ. ಪೈಲ್ಸ್ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಇದು ಉತ್ತಮ ಮನೆಮದ್ದು ಆಗಿದೆ. ಗಟ್ಟಿ ಮಲ ವಿಸರ್ಜನೆ ಸಮಸ್ಯೆ. ಉರಿ ಮತ್ತು ನೋವು ನಿವಾರಿಸುತ್ತವೆ.
ಇದನ್ನೂ ಓದಿ: ಶುಂಠಿ ಕೇವಲ ಆರೋಗ್ಯಕ್ಕೆ ಮಾತ್ರ ಅಲ್ಲ ಚರ್ಮದ ಅಂದ ಹೆಚ್ಚಿಸಲು ಸಹಕಾರಿ
ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ನಿವಾರಣೆ
ಕಳಪೆ ಜೀರ್ಣಕ್ರಿಯೆ ಸಮಸ್ಯೆಯು ತಿಂದ ಆಹಾರ ಜೀರ್ಣವಾಗದಂತೆ ತಡೆಯುತ್ತದೆ. ಆಗ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಶುರುವಾಗುತ್ತದೆ. ಇದು ಹೊಟ್ಟೆಯುಬ್ಬರ, ನೋವು ತರಿಸುತ್ತದೆ. ಹಾಗಾಗಿ ಮುನಕ್ಕ ಒಣದ್ರಾಕ್ಷಿ ನೀರು ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಅಸಿಡಿಟಿ, ಎದೆಯುರಿ, ಆಮ್ಲೀಯತೆ ಸಮಸ್ಯೆ ತೊಡೆದು ಹಾಕುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ