Memory Problem: ಮಲ್ಟಿವಿಟಮಿನ್‌ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತಾ? ಇಲ್ಲಿದೆ ನೋಡಿ

Multivitamin Benefits: ಈ ಪ್ರಯೋಗದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಮಲ್ಟಿವಿಟಮಿನ್ ಮತ್ತು ಖನಿಜಯುಕ್ತ ಪೂರಕಗಳನ್ನು ತೆಗೆದುಕೊಂಡವರು ಪ್ಲಸೀಬೊ ಮಾತ್ರೆಗಳನ್ನು ತೆಗೆದುಕೊಂಡವರಿಗಿಂತ ಸ್ವಲ್ಪ ಹೆಚ್ಚಿನ ಅಂಕಗಳನ್ನು ಗಳಿಸಿದರು.

ಮಲ್ಟಿವಿಟಮಿನ್‌

ಮಲ್ಟಿವಿಟಮಿನ್‌

  • Share this:
ನಾವು ದೈನಂದಿನ ಆಹಾರದ (Daily Food) ಜೊತೆಗೆ ಮಲ್ಟಿವಿಟಮಿನ್ (Vitamin) ಮತ್ತು ಖನಿಜ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ವಯಸ್ಸಾದಂತೆ ಸ್ವಾಭಾವಿಕವಾಗಿ ಬರುವ ಮರೆವಿನ ಸಮಸ್ಯೆಯನ್ನು (Memory Problem) ಕಡಿಮೆಗೊಳಿಸಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ. ಸತತವಾಗಿ ಮೂರು ವರ್ಷಗಳ ಕಾಲ ನಡೆದ ಪ್ರಯೋಗದ ಕೊನೆಯಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಮಲ್ಟಿವಿಟಮಿನ್-ಖನಿಜ ಪೂರಕ ಆಗಿರುವ ಮಾತ್ರೆಗಳನ್ನು ತೆಗೆದುಕೊಂಡ ಜನರು ಮಾನಸಿಕ ರೋಗಿಗಳಿಗೆ ನೀಡುವ ಪ್ಲಸೀಬೊ ಮಾತ್ರೆಯನ್ನು ತೆಗೆದುಕೊಂಡವರಿಗಿಂತ 1.8 ವರ್ಷ ಕಿರಿಯ ವಯಸ್ಸಿನ ಅಂದರೆ ತುಸು ಹೆಚ್ಚು ಜ್ಞಾಪಕ ಶಕ್ತಿಯನ್ನು ಹೊಂದಿದ್ದರು ಎಂದು ಈ ಪ್ರಯೋಗದಿಂದ ತಿಳಿದು ಬಂದಿದೆ.

ಈ ಪ್ರಯೋಗದ ಕುರಿತು ಉತ್ತರ ಕೆರೊಲಿನಾದ ವಿನ್‌ಸ್ಟನ್-ಸೇಲಂನಲ್ಲಿರುವ ವೇಕ್ ಫಾರೆಸ್ಟ್ ಯೂನಿವರ್ಸಿಟಿಯ ಪ್ರೋಪೆಸರ್‌ ಲಾರಾ ಬೇಕರ್ ಅವರು “ಇದು ಅನೇಕ ಪ್ರಯೋಗಗಳಿಗೆ ಬೆಳಕು ಚೆಲ್ಲುವ ಪ್ರಯೋಗ ಆಗಿದೆ” ಎಂದು ಹೇಳಿದರು.

ಈ ಮರೆವಿನ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವ ಪ್ರಯೋಜನಗಳನ್ನು ವೈದ್ಯರಲ್ಲಿ ಸಹ ಚರ್ಚಿಸಲಾಗಿದೆ. ಕಳಪೆ ಆಹಾರ ಸೇವನೆ ಮಾಡುವ ಜನರು ಈ ಮಾತ್ರೆಗಳನ್ನು ತೆಗದುಕೊಳ್ಳಲೇಬೇಕಾದ ಅನಿವಾರ್ಯತೆ ಖಂಡಿತ ಇದೆ. ಇದನ್ನು ವೈದ್ಯರು ಸಹ ಶಿಫಾರಸು ಮಾಡಿದ್ದಾರೆ. ಆದರೆ ಅಧ್ಯಯನದ ಆಧಾರದ ಮೇಲೆ ಈ ಮಲ್ಟಿವಿಟಮಿನ್‌ ಮಾತ್ರೆಗಳನ್ನು ತೆಗೆದುಕೊಳ್ಳುವವರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ ಎಂದು ಈ ಪ್ರಯೋಗ ನಡೆಸಿದ ಸಂಶೋಧಕರು ಹೇಳಿದರು.

ಈ ಸಂಶೋಧನೆಯನ್ನು ಪೂರ್ವ ಸಿದ್ಧತೆಗಳಿಲ್ಲದೆ ಪ್ರಯೋಗಕ್ಕೆ ಒಳಪಡಿಸಲಾಗಿದೆ.ಪ್ಲಸೀಬೊ ಮಾತ್ರೆಗಳನ್ನು ತೆಗೆದುಕೊಂಡ ಜನರನ್ನು ಸಹ ಪ್ರಯೋಗಗಕ್ಕೆ ಒಳಪಡಿಸಿದಾಗ ಈ ಪೂರಕಗಳನ್ನು ತೆಗೆದುಕೊಳ್ಳುವ ಆರೋಗ್ಯವಂತ ಜನರಿಗೆ ಇದರಿಂದ ಯಾವುದೇ ಆರೋಗ್ಯ ಪ್ರಯೋಜನಗಳು ಸಂಭವಿಸಿಲ್ಲ. ವಿಟಮಿನ್ ಮಾತ್ರೆಗಳು ನಮ್ಮ ಆರೋಗ್ಯವನ್ನು ಹಲವು ವಿಧಗಳಲ್ಲಿ ಆರೈಕೆ ಮಾಡುವುದರಿಂದ, ಈ ಮಲ್ಟಿವಿಟಮಿನ್‌ಗಳನ್ನು ತೆಗೆದುಕೊಳ್ಳುವ ಜನರು ಇಂದು ಹೆಚ್ಚಾಗಿದ್ದಾರೆ ಎಂಬುದು ಕೂಡ ಈ ಪ್ರಯೋಗದಿಂದ ತಿಳಿದು ಬಂದಿದೆ.

ಇತ್ತೀಚಿನ ಸಂಶೋಧನೆಯಲ್ಲಿ 65 ಮತ್ತು 100 ವರ್ಷ ವಯಸ್ಸಿನ ಸುಮಾರು 2300 ಯುಸ್‌ ಜನರನ್ನು ಯಾವುದೇ ವಿಧಾನಗಳನ್ನು, ಪೂರ್ವ ಸಿದ್ಧತೆ ಮಾಡಿಕೊಳ್ಳದೇಪ್ರಯೋಗಕ್ಕೊಳಪಡಿಸಲಾಗಿದೆ.

ಬೇಕರ್ ಮತ್ತು ಅವರ ತಂಡವು ಫ್ಲಾವನಾಲ್ಗ್‌ ಎಂಬ ಪೂರಕಗಳ ಕುರಿತು ಈ ಅಧ್ಯಯನವನ್ನು ಪ್ರಾರಂಭಿಸಿತು, ಏಕೆಂದರೆ ಫ್ಲಾವನಾಲ್ಗಳು, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ, ಇದು ಹೆಚ್ಚಾಗಿ ಚಾಕೊಲೇಟ್‌ನಲ್ಲಿ ಕಂಡುಬರುವ ಸಂಯುಕ್ತವಾಗಿದೆ. ಈ ಸಂಯುಕ್ತವು ವಯಸ್ಸಿನ ಜೊತೆ ಬರುವ ಮರೆವಿನ ಕಾಯಿಲೆಯನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಈ ಪ್ರಯೋಗವನ್ನು ಪ್ರಮಾಣಿತ ಮಲ್ಟಿವಿಟಮಿನ್ ಮತ್ತು ಖನಿಜ ಮಾತ್ರೆಗಳನ್ನು ತೆಗೆದುಕೊಳ್ಳುವ ಜನರ ಗುಂಪಿನ ಜೊತೆ ಹೋಲಿಸಿ ಮಾಡಲಾಗಿದೆ.

ಇದನ್ನೂ ಓದಿ: ಪೋಷಕರೇ ಎಚ್ಚರ, ಮಕ್ಕಳಲ್ಲೂ ಕಾಣಿಸಿಕೊಳ್ತಿದೆ ಕಾಲುಬಾಯಿ ರೋಗ! ಏನಿದರ ಲಕ್ಷಣ, ಇದಕ್ಕೆ ಪರಿಹಾರವೇನು? ತಜ್ಞರು ಹೇಳುತ್ತಾರೆ ಕೇಳಿ

ಈ ಪ್ರಯೋಗದ ಪ್ರಾರಂಭದಲ್ಲಿ, ಇದರಲ್ಲಿ ಭಾಗವಹಿಸುವವರು ಫೋನ್‌ನಲ್ಲಿ ಮೆಮೊರಿ, ಮೌಖಿಕ ಮತ್ತು ಸಂಖ್ಯೆಯ ಕೌಶಲ್ಯಗಳಿಗಾಗಿ ಜ್ಞಾಪಕ ಪರೀಕ್ಷೆಗಳ ಒಂದು ಟೆಸ್ಟ್‌ ಅನ್ನು ಮಾಡಿದರು.

ಯಾವುದೇ ವಿಧಾನಗಳನ್ನು ಅವಲಂಬಿಸದೆಯೇ ಮೂರು ವರ್ಷಗಳವರೆಗೆ ಫ್ಲಾವನಾಲ್ ಪೂರಕ, ಸಂಯೋಜಿತ ಮಲ್ಟಿವಿಟಮಿನ್ ಮತ್ತು ಮಿನರಲ್ ಟ್ಯಾಬ್ಲೆಟ್ ಇಲ್ಲವೇ ಪ್ಲಸೀಬೊ ಹೀಗೆ ಯಾವುದಾದರೂ ಒಂದನ್ನು ದಿನಕ್ಕೆ ಒಮ್ಮೆ ತೆಗೆದುಕೊಳ್ಳಲು ತಿಳಿಸಲಾಯಿತು. ಮೂರು ವರ್ಷಗಳಲ್ಲಿ ಪ್ರತಿ ವರ್ಷವೂ ಇದೇ ರೀತಿಯ ಅರಿವಿನ ಪರೀಕ್ಷೆಗಳನ್ನು ಪುನರಾವರ್ತಿಸಲಾಯಿತು

ಈ ಪ್ರಯೋಗದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಮಲ್ಟಿವಿಟಮಿನ್ ಮತ್ತು ಖನಿಜಯುಕ್ತ ಪೂರಕಗಳನ್ನು ತೆಗೆದುಕೊಂಡವರು ಪ್ಲಸೀಬೊ ಮಾತ್ರೆಗಳನ್ನು ತೆಗೆದುಕೊಂಡವರಿಗಿಂತ ಸ್ವಲ್ಪ ಹೆಚ್ಚಿನ ಅಂಕಗಳನ್ನು ಗಳಿಸಿದರು. ಆದರೆ ಫ್ಲಾವನಾಲ್ ಪೂರಕ ತೆಗೆದುಕೊಂಡ ಜನರ ಗುಂಪಿನಲ್ಲಿ ಯಾವುದೇ ಗಮನಾರ್ಹ ಪ್ರಯೋಜನವಾಗಿಲ್ಲ.

ಮಲ್ಟಿವಿಟಮಿನ್‌ ತೆಗೆದುಕೊಂಡಿರುವುದರಿಂದ ಹೃದಯ ಅಥವಾ ರಕ್ತಪರಿಚಲನಾ ಕಾಯಿಲೆ ಇರುವ ಜನರಲ್ಲಿ ಇದರ ಪ್ರಯೋಜನ ಹೆಚ್ಚಾಗಿ ಕಂಡುಬರುತ್ತದೆ. ಉದಾಹರಣೆಗೆ ಅವರ ಹೃದಯಕ್ಕೆ ರಕ್ತನಾಳಗಳನ್ನು ವಿಸ್ತರಿಸಲು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. "ಹೃದಯರಕ್ತನಾಳದ ಕಾಯಿಲೆಯು ಮೆದುಳಿನ ಆರೋಗ್ಯಕ್ಕೆ ಗಮನಾರ್ಹ ಪರಿಣಾಮಗಳನ್ನು ಉಂಟುಮಾಡುತ್ತದೆ" ಎಂದು ಬೇಕರ್ ಹೇಳುತ್ತಾರೆ.

ಇದನ್ನೂ ಓದಿ: ಹೀಗೆಲ್ಲಾ ಆಗ್ತಿದೆ ಅಂದ್ರೆ ನಾಳೆನೇ ನೀವು ಪಿರಿಯಡ್ಸ್​ ಆಗ್ತೀರ ಎಂದರ್ಥ

"ಈ ಸಂಶೋಧನೆಗಳು ಸಾಕಷ್ಟು ಭರವಸೆ ನೀಡುತ್ತವೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿವೆ" ಎಂದು ಯುಎಸ್‌ ಚಾರಿಟಿ ಅಲ್ಝೈಮರ್ಸ್ ಅಸೋಸಿಯೇಷನ್‌ನಲ್ಲಿರುವ ಪ್ರೊಫೆಸರ್‌ ರೆಬೆಕಾ ಎಡೆಲ್ಮೇಯರ್ ಹೇಳುತ್ತಾರೆ
Published by:Sandhya M
First published: