Muharram Special Recipe: ಅತ್ಯಂತ ರುಚಿಕರವಾದ ಚೋಂಗೆ ಮಾಡುವ ವಿಧಾನ ಇಲ್ಲಿದೆ

ಮೊಹರಂ ಹಬ್ಬಕ್ಕಾಗಿ ಸ್ಪೆಷಲ್ ಸಿಹಿ ತಿನಿಸು (Muharram Sweet) ತಯಾರಿಸಲಾಗುತ್ತದೆ. ಇದನ್ನ ಹಬ್ಬದ ವೇಳೆ ಮಾತ್ರ ಸಿದ್ಧಪಡಿಸಲಾಗುತ್ತದೆ. ಈ ಸಿಹಿ ತಿನಿಸನ್ನು ಚೋಂಗೆ (Chonge Recipe) ಅಥವಾ ಸಿಹಿ ರೊಟ್ಟಿ ಅಥವಾ ಮಿಟ್ಟಾ ರೋಟಿ ಅಂತ ಕರೆಯುತ್ತಾರೆ.

ಚೋಂಗೆ

ಚೋಂಗೆ

  • Share this:
ನಾಡಿನೆಲ್ಲಡೆ ಮೊಹರಂ ಹಬ್ಬದ (Muharram) ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ (Corona Virus) ಹಬ್ಬದ ಸಂಭ್ರಮವವನ್ನ (Festival Celebration) ಕಿತ್ತು ಕೊಂಡಿತ್ತು. ಆದರೆ ಈ ವರ್ಷ ಕೊರೊನಾದ ಆತಂಕ ಕಡಿಮೆಯಾಗಿದ್ದು, ಈ ಹಿನ್ನೆಲೆ ಮೊಹರಂ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ  ಮಾಡಲಾಗುತ್ತಿದೆ. 11 ದಿನಗಳ ಕಾಲ ನಡೆಯುವ ಹಿಂದೂ ಮುಸ್ಲಿಂ (Hindu And Muslims) ಬಾಂಧವರು ಜೊತೆಯಾಗಿ ಆಚರಿಸುವ ಹಬ್ಬ ಇದಾಗಿದೆ. ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಈ ಹಬ್ಬವನ್ನು ಅತ್ಯಂತ ವಿಶೇಷ ಮತ್ತು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಇನ್ನು ಹಬ್ಬ ಅಂದ್ರೆ ಅಲ್ಲಿ ಸಿಹಿ ತಿನಿಸು ಇರಲೇಬೇಕು. ಮೊಹರಂ ಹಬ್ಬಕ್ಕಾಗಿ ಸ್ಪೆಷಲ್ ಸಿಹಿ ತಿನಿಸು (Muharram Sweet) ತಯಾರಿಸಲಾಗುತ್ತದೆ. ಇದನ್ನ ಹಬ್ಬದ ವೇಳೆ ಮಾತ್ರ ಸಿದ್ಧಪಡಿಸಲಾಗುತ್ತದೆ. ಈ ಸಿಹಿ ತಿನಿಸನ್ನು ಚೋಂಗೆ (Chonge Recipe) ಅಥವಾ ಸಿಹಿ ರೊಟ್ಟಿ ಅಥವಾ ಮಿಟ್ಟಾ ರೋಟಿ ಅಂತ ಕರೆಯುತ್ತಾರೆ.

ಇಂದು ನಾವು ನಿಮಗೆ ಅತ್ಯಂತ ರುಚಿಕರವಾದ ಚೋಂಗೆ ಮಾಡುವ ವಿಧಾನ ಹೇಳುತ್ತಿದ್ದೇವೆ. ಇದನ್ನು ಚೋಂಗೆ ತಿಂದವರು ಊಟದ ಕೊನೆಗೆ ಬೆರಳಿಗೆ ತಗುಲಿದ ಸಿಹಿ ಪಾಕವನ್ನು ಚಪ್ಪರಿಸುತ್ತಾರೆ. ಹಾಗಾದ್ರೆ ಚೋಂಗೆ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

Muharram Special Recipe How to make north karntaka Sweet food chonge mrq
ಚೋಂಗೆ


ಬೇಕಾಗುವ ಸಾಮಾಗ್ರಿಗಳು

ಗೋಧಿ ಹಿಟ್ಟು; 2 ಕಪ್

ಮೈದಾ ಹಿಟ್ಟು: 1 ಕಪ್

ಗಸಗಸೆ; 5 ರಿಂದ 6 ಟೀ ಸ್ಪೂನ್

ಬೆಲ್ಲ: 200 ಗ್ರಾಂ ಅಥವಾ (ಸಕ್ಕರೆ ಸಹ ಬಳಸಬಹುದು)

ಹುರಿಗಡಲೆ ಪುಡಿ: 1 ಕಪ್

ಒಣ ಕೊಬ್ಬರಿ: 200 ಗ್ರಾಂ

ತುಪ್ಪ

ಉಪ್ಪು; ಚಿಟಿಕೆ

ಏಲಕ್ಕಿ; 4 ರಿಂದ 5

ಇದನ್ನೂ ಓದಿ:  Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ರವಾ ಉತ್ತಪ್ಪ

ಮಾಡುವ ವಿಧಾನ

1.ಮೊದಲಿಗೆ ಮೈದಾ ಮತ್ತು ಗೋಧಿ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ. ನಂತರ ಮೂರನ್ನು ಮಿಕ್ಸ್ ಮಾಡಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ. ತದನಂತರ ಮುಚ್ಚಳ ಮುಚ್ಚಿ 15 ನಿಮಿಷ ಎತ್ತಿಡಿ.

Muharram Special Recipe How to make north karntaka Sweet food chonge mrq
ಚೋಂಗೆ


2.ಈಗ ಬೆಲ್ಲವನ್ನು ಜಜ್ಜಿಕೊಂಡು ಅದರ ಪುಡಿಯನ್ನು ಒಂದು ಪಾತ್ರೆಯಲ್ಲಿ ಎತ್ತಿಟ್ಟುಕೊಳ್ಳಿ.

3.ಒಣ ಕೊಬ್ಬರಿಯನ್ನು ತುರಿ ಮಾಡಿಕೊಂಡು ಎತ್ತಿಡಿ. ನಂತರ ಗಸಗಸೆಯನ್ನು ಕಡಿಮೆ ಉರಿಯಲ್ಲಿ 2 ರಿಂದ 3 ನಿಮಿಷ ಬಿಸಿ ಮಾಡಿಕೊಳ್ಳಿ.

4.ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಅದರಲ್ಲಿ ಏಲಕ್ಕಿ ಸೇರಿಸಿ ಎತ್ತಿಟ್ಟುಕೊಳ್ಳಿ.

5.ಈಗ ಕಲಸಿಕೊಂಡಿರುವ ಹಿಟ್ಟನ್ನು ತೆಗೆದುಕೊಂಡು ದಪ್ಪ ದಪ್ಪ ಚಪಾತಿಗಳನ್ನಾಗಿ ಮಾಡಿಕೊಳ್ಳಿ. ಬೇಯಿಸುವ ಮುನ್ನ ಚಪಾತಿ ಮೇಲೆ ಚಿಕ್ಕ ಚಿಕ್ಕದಾಗಿ ಸ್ಮಾಲ್ ಪೀಕ್ ಮಾಡಿಕೊಳ್ಳಿ. (ಮಾರುಕಟ್ಟೆಯಲ್ಲಿ ಚೋಂಗೆ ಮಾಡುವ ಕಲ್ಲಿನ ಅಚ್ಚುಗಳು ಲಭ್ಯ ಇರುತ್ತವೆ. ನಿಮ್ಮ ಬಳಿ ಅಚ್ಚು  ಇರದಿದ್ದರೆ ಸ್ಲಾಲ್ ಪೀಕ್ ಮಾಡುಬಹುದು) fork spoon ಬಳಸಿ ಚಪಾತಿ ಮೇಲೆ ಚುಚ್ಚಿ ಪೀಕ್ ಮಾಡಬಹುದು.

6.ಈಗ ಚಪಾತಿಯನ್ನು ತವೆ ಮೇಲೆ ಹಾಕಿ ಎರಡೂ ಬದಿ ಕಡಿಮೆ ಎಣ್ಣೆ ಬಳಸಿ ಬೇಯಿಸಿಕೊಳ್ಳಿ.

7.ಚಪಾತಿ ಬೇಯಿಸಿದ ನಂತರ ಅದನ್ನು ಆಳವಾದ ಪಾತ್ರೆಯಲ್ಲಿ ಹಾಕಿ. ಈಗ ಅದರ ಮೇಲೆ ಸ್ವಲ್ಪ ಸ್ವಲ್ಪ ಗಸಗಸೆ  ಉದುರಿಸಿ. ಇದಾದ ನಂತರ ಹುರಿಗಡಲೆ ಪುಡಿ ಹಾಕಿ.

ಇದನ್ನೂ ಓದಿ:  Breakfast Recipe: 10 ನಿಮಿಷದಲ್ಲಿ ಸಿದ್ಧವಾಗುವ ಉತ್ತರ ಕರ್ನಾಟಕ ಶೈಲಿಯ ಪೋಹಾ ಮಾಡುವ ವಿಧಾನ

8.ನಂತರ ಕೊಬ್ಬರಿ ತುರಿ ಹಾಕಿ. ಇದಾದ ಬಳಿಕ ಕೊಬ್ಬರಿ ಪುಡಿ ಉದುರಿಸಿ. ಕೊನೆಗೆ ಚಪಾತಿ ಮೇಲೆ ಅರ್ಧ ಚಮಚದಷ್ಟು ತುಪ್ಪ ಹಾಕಬೇಕು.

9.ಹೀಗೆ ಒಂದರ ಮೇಲೊಂದು ಎಂಬಂತೆ ಚಪಾತಿಯನ್ನು ಹಾಕುತ್ತಾ. ಸಿದ್ಧಮಾಡಿಕೊಂಡಿರುವ ಮಸಾಲೆಯನ್ನು ಹಾಕಿ. ಕೊನೆಗೆ 30 ರಿಂದ 40 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಚಪಾತಿ ಎತ್ತಿಡಿ.

10.ಈಗ ಚಪಾತಿ ಮೇಲೆ ಹಾಕಿದ್ದ ಬೆಲ್ಲ ಎಲ್ಲಾ ಕರಗಿರುತ್ತದೆ. ಇದರಿಂದ ನಿಮ್ಮ ಇಡೀ ಚಪಾತಿ ಸಿಹಿ ಪಾಕದಲ್ಲಿ ಮುಳುಗಿದ್ರೆ, ಚೋಂಗೆ ಸವಿಯಲು ಸಿದ್ಧ.
Published by:Mahmadrafik K
First published: