ಆಹಾರವು (Food) ಬಾಯಿಯ (Mouth) ಮೂಲಕವೇ ದೇಹ (Body) ಸೇರುತ್ತದೆ. ಹಾಗಾಗಿ ಬಾಯಿಯನ್ನು ಆಹಾರವು ದೇಹ ತಲುಪಿಸುವ ಗೇಟ್ವೇ ಎಂದು ಕರೆಯಲಾಗುತ್ತದೆ. ದೇಹಕ್ಕೆ ಪೋಷಕಾಂಶ (Nutrients) ಸಿಗಲು ಆಹಾರ ಬೇಕು. ಅಂತಹ ಆಹಾರವನ್ನು ಬಾಯಿಯು ದೇಹಕ್ಕೆ ತಲುಪಿಸುತ್ತದೆ. ಯಾವುದೇ ಪದಾರ್ಥವಿರಲಿ ಮೊದಲು ಅದನ್ನು ಜಗಿದು ತಿನ್ನಬೇಕಾಗುತ್ತದೆ. ನಂತರ ಅದು ಹೊಟ್ಟೆ ಸೇರಿ, ಕರುಳು, ಜಠರ ಹೀಗೆ ಅನೇಕ ಅಂಗಗಳು (Parts) ಕೆಲಸ ಮಾಡುವ ಮೂಲಕ ದೇಹಕ್ಕೆ ಆಹಾರದಲ್ಲಿರುವ ಅಗತ್ಯ ಪೋಷಕಾಂಶ ಸಿಗಲು ಸಹಾಯ ಮಾಡುತ್ತದೆ. ಹಾಗಾಗಿ ಯಾವಾಗಲೂ ಬಾಯಿಯ ಆರೋಗ್ಯ ಕಾಪಾಡುವತ್ತ ಮುಖ್ಯ ಕಾಳಜಿ (Care) ವಹಿಸಬೇಕು. ಕೆಲವೊಮ್ಮೆ ಬಾಯಿಯ ಅನೈರ್ಮಲ್ಯವು ಹಲವು ಕಾಯಿಲೆಗಳಿಗೆ ನಿಮ್ಮನ್ನು ಗುರಿಯಾಗಿಸುತ್ತದೆ.
ಬಾಯಿ ಕ್ಯಾನ್ಸರ್ ಅಪಾಯ
ಆಹಾರವನ್ನು ಕಚ್ಚಿ ಜಗಿದು ತಿಂದು ಬಾಯಿಯಿಂದ ದೇಹಕ್ಕೆ ಹೋಗುತ್ತದೆ. ತಿನ್ನುವ ಎಲ್ಲಾ ಕೆಲಸಗಳನ್ನು ಬಾಯಿಯಿಂದಲೇ ಮಾಡಲಾಗುತ್ತದೆ. ಬಾಯಿಯ ಭಾಗಗಳಲ್ಲಿ ತುಟಿ, ವೆಸ್ಟಿಬುಲ್, ಬಾಯಿ ಕುಹರ, ಒಸಡು, ಹಲ್ಲು, ಗಟ್ಟಿಯಾದ ಮತ್ತು ಮೃದುವಾದ ಅಂಗುಳಿನ, ನಾಲಿಗೆ, ಲಾಲಾರಸ ಗ್ರಂಥಿಗಳು ಸೇರಿವೆ.
ಈ ಭಾಗಗಳಲ್ಲಿ ಗುಳ್ಳೆ ಆಗುವುದು ಸಾಮಾನ್ಯ. ಆಹಾರ ಅಲರ್ಜಿ ಆದಾಗ ಪೌಷ್ಟಿಕಾಂಶದ ಕೊರತೆ ಪರಿಣಾಮ ಗುಳ್ಳೆ ಆಗುತ್ತದೆ. ಇದು ವಾರದಲ್ಲಿ ಕಡಿಮೆಯಾಗದಿದ್ದರೆ ಕೆಲವೊಮ್ಮೆ ಬಾಯಿ ಗುಳ್ಳೆಗಳು ಬಾಯಿ ಕ್ಯಾನ್ಸರ್ ನ ಲಕ್ಷಣಗಳು ಆಗಿರುತ್ತವೆ. ಬಾಯಿ ಕ್ಯಾನ್ಸರ್ ಮಾರಣಾಂತಿಕ ಸಂಕೇತ ಇದಾಗಿರಬಹುದು.
ಬಾಯಿ ಕ್ಯಾನ್ಸರ್
ತುಟಿಗಳ ಮೇಲೆ ಅಥವಾ ಬಾಯಿಯಲ್ಲಿರುವ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದರೆ ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಈ ಕ್ಯಾನ್ಸರ್ ತುಟಿ ಮತ್ತು ಬಾಯಿ ಒಳಭಾಗವನ್ನು ಹೊಂದಿರುವ ಫ್ಲಾಟ್, ತೆಳುವಾದ ಜೀವಕೋಶಗಳಲ್ಲಿ ಉಂಟಾಗುತ್ತದೆ.
ಬಾಯಿ ಕ್ಯಾನ್ಸರ್ ನ್ನು ಬಾಯಿಯ ಕುಹರದ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಬಾಯಿ ಕ್ಯಾನ್ಸರ್ ತುಟಿ, ಒಸಡು, ನಾಲಿಗೆ, ಕೆನ್ನೆಯ ಒಳಪದರ, ಬಾಯಿಯ ಮೇಲ್ಭಾಗ ಮತ್ತು ಬಾಯಿಯಲ್ಲಿ ಉಂಟಾಗಬಹುದು.
ಬಾಯಿ ಕ್ಯಾನ್ಸರ್ ರೋಗ ಲಕ್ಷಣಗಳು
ತುಟಿ ಅಥವಾ ಬಾಯಿ ಹುಣ್ಣು ಆಗುವುದು ಮತ್ತು ಗುಣವಾಗದಿರುವುದು, ಬಾಯಿಯಲ್ಲಿ ಬಿಳಿ ಅಥವಾ ಕೆಂಪು ತೇಪೆ ಉಂಟಾಗುವುದು, ದುರ್ಬಲ ಹಲ್ಲುಗಳು, ಬಾಯಿಯಲ್ಲಿ ಗಂಟು ಆಗುವುದು, ನೋಯುತ್ತಿರುವ ಬಾಯಿ, ಕಿವಿಯಲ್ಲಿ ನೋವು ನುಂಗಲು ತೊಂದರೆ ಆಗುವುದು, ಮಾತಿನಲ್ಲಿ ಬದಲಾವಣೆ ಆಗುವುದು ಮುಖ್ಯ ಲಕ್ಷಣಗಳಾಗಿವೆ.
ಬಾಯಿಯ ಕ್ಯಾನ್ಸರ್ ಕಂಡು ಹಿಡಿಯುವುದು ಹೇಗೆ?
ನಿಯಮಿತ ತಪಾಸಣೆ ಮೂಲಕ ಮೊದಲನೇ ಹಂತದಲ್ಲಿ ಬಾಯಿ ಕ್ಯಾನ್ಸರ್ ಕಂಡು ಹಿಡಿಯಲಾಗುತ್ತದೆ. ಆರಂಭಿಕ ಹಂತದಲ್ಲಿ ಬಾಯಿ ಕ್ಯಾನ್ಸರ್ ಪತ್ತೆ ಆದ್ರೆ ಸೂಕ್ತ ಚಿಕಿತ್ಸೆ ನಂತರ 5 ವರ್ಷ ಹೆಚ್ಚು ಬದುಕುಳಿಯುವ ಚಾನ್ಸಸ್ ಇರುತ್ತದೆ.
ಬಾಯಿಯ ಕ್ಯಾನ್ಸರ್ ಲಕ್ಷಣಗಳನ್ನು ಸಾಮಾನ್ಯವಾಗಿ ಇತರ ಅಥವಾ ಕಡಿಮೆ ಗಂಭೀರ ಸ್ಥಿತಿ ಎಂದು ಭಾವಿಸಲಾಗುತ್ತದೆ. ಇದು ಮುಖ್ಯವಾಗಿ ಹಲ್ಲುನೋವು, ಮತ್ತು ಹುಣ್ಣು ಆಗುತ್ತದೆ. ನಿಯಮಿತವಾಗಿ ದಂತ ತಪಾಸಣೆ ಮಾಡುವುದು ಮುಖ್ಯ. ಇದರಿಂದ ರೋಗ ಲಕ್ಷಣಗಳ ನಿಖರ ಕಾರಣ ಮತ್ತು ತೀವ್ರತೆ ಗೊತ್ತಾಗುತ್ತದೆ.
ಹಲ್ಲಿನ ತಪಾಸಣೆ ಎಷ್ಟು ಬಾರಿ ಮಾಡಬೇಕು?
ಯಾವುದೇ ಗಂಭೀರ ಮೌಖಿಕ ಸಮಸ್ಯೆ ತಪ್ಪಿಸಲು ನಿಯಮಿತವಾಗಿ ದಂತ ತಪಾಸಣೆ ಮಾಡಿಸಬೇಕು. ಬಾಯಿ ಆರೋಗ್ಯ ಕಾಪಾಡಲು ವರ್ಷಕ್ಕೊಮ್ಮೆ ಮಾತ್ರ ಹಲ್ಲಿನ ತಪಾಸಣೆ ಮಾಡಿಸಿ ಅಂತಾರೆ ತಜ್ಞರು. ಹೆಚ್ಚಿನ ಸಮಸ್ಯೆ ಇರುವ ಜನರು ಹೆಚ್ಚು ಆಗಾಗ್ಗೆ ತಪಾಸಣೆಗೆ ಒಳಗಾಗಬೇಕಾಗುತ್ತದೆ.
ಬಾಯಿ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು ಹೇಗೆ?
ತಂಬಾಕು ಉತ್ಪನ್ನ ಸೇವನೆ, ಗುಟ್ಕಾ ಸೇವನೆ ತಪ್ಪಿಸಿ. ಬಾಯಿ ಕ್ಯಾನ್ಸರ್ನ ಹೆಚ್ಚಿನ ಅಪಾಯ ತಂಬಾಕು ಸೇವನೆಯಿಂದ ಇದೆ. ಇದರ ಸೇವನೆ ಅಪಾಯವನ್ನು ಬಹುಪಟ್ಟು ಹೆಚ್ಚಿಸುತ್ತದೆ. ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ತುಟಿ ರಕ್ಷಿಸಿ.
ಇದನ್ನೂ ಓದಿ: ಚಳಿಗಾಲದಲ್ಲಿ ಈ ಪಾನೀಯಗಳನ್ನು ಕುಡಿದ್ರೆ ಬೊಜ್ಜು ಕರಗುತ್ತೆ
ಬಾಯಿ ಕ್ಯಾನ್ಸರ್ ಆರಂಭಿಕ ಲಕ್ಷಣಗಳು ಯಾವುವು?
ಬಾಯಿ ಹುಣ್ಣು ಆಗುವುದು, ಹಲ್ಲು ನೋವು ಬರುವುದು, ನುಂಗಲು ತೊಂದರೆ ಆಗುವುದು, ಬಾಯಿಯಲ್ಲಿ ಬಿಳಿ ತೇಪೆ ಆಗುವುದು ಬಾಯಿ ಕ್ಯಾನ್ಸರ್ ಆರಂಭಿಕ ಲಕ್ಷಣಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ