• Home
  • »
  • News
  • »
  • lifestyle
  • »
  • MND: ಮೋಟಾರು ನ್ಯೂರಾನ್ ಎಂಬ ಮೆದುಳಿನ ಕಾಯಿಲೆ ಬಗ್ಗೆ ಇರಲಿ ಎಚ್ಚರ, ಹೀಗಿವೆ ಈ ರೋಗದ ಲಕ್ಷಣಗಳು

MND: ಮೋಟಾರು ನ್ಯೂರಾನ್ ಎಂಬ ಮೆದುಳಿನ ಕಾಯಿಲೆ ಬಗ್ಗೆ ಇರಲಿ ಎಚ್ಚರ, ಹೀಗಿವೆ ಈ ರೋಗದ ಲಕ್ಷಣಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನ್ಯೂರಾನ್ ಕಾಯಿಲೆಗೆ ಸಂಬಂಧಿಸಿದ ಪ್ರೋಟೀನ್‌ಗಳು ಹಲವು ವರ್ಷಗಳ ಕಾಲ ಕರುಳಿನಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿರುತ್ತವೆ, ನಂತರ ಮೆದುಳಿನಲ್ಲಿ ರೋಗಲಕ್ಷಣಗಳನ್ನು ಪ್ರಕಟಿಸುತ್ತವೆ. ಕರುಳಿನಲ್ಲಿ ಈ ಪ್ರೋಟೀನ್‌ಗಳ ಅಸ್ವಿತ್ವನ್ನು ಪತ್ತೆಹಚ್ಚಲು ಮಲದ ಮಾದರಿ ಇಲ್ಲವೇ ಕರುಳಿನ ಬಯಾಪ್ಸಿ ಪ್ರೋಟೀನ್‌ಗಳ ಉಪಸ್ಥಿತಿಯನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದೆ ಎಂದು ಸಂಶೋಧಕರ ತಂಡ ತಿಳಿಸಿದೆ.

ಮುಂದೆ ಓದಿ ...
  • Share this:

ಮೋಟಾರ್ ನ್ಯೂರಾನ್ ಕಾಯಿಲೆ (MND) (Motor Neurone Disease) ಮೆದುಳು ಮತ್ತು ನರಗಳ ಮೇಲೆ ಪರಿಣಾಮ ಬೀರುವ ಒಂದು ಅಸಾಮಾನ್ಯ ಸ್ಥಿತಿಯಾಗಿದೆ. ಇವುಗಳು ಮೆದುಳಿನಲ್ಲಿ ರೋಗಲಕ್ಷಣಗಳನ್ನು ಸಂಕೇತಿಸುವ ಮೊದಲೇ ಕರುಳಿನಲ್ಲಿ (Intestine) ಕಂಡುಬರುತ್ತವೆ ಎಂಬುದಾಗಿ ಅಬರ್ಡೀನ್ ವಿಶ್ವವಿದ್ಯಾಲಯದ ಹೊಸ ಅಧ್ಯಯನವು ಅನ್ವೇಷಿಸಿದೆ. ಈ ಅಧ್ಯಯನಕ್ಕೆ ಪುರಾವೆಯಾಗಿ ಸಂಶೋಧಕರ ತಂಡವು 14 ವರ್ಷಗಳ ಮೊದಲು ಇದೇ ರೋಗ ಲಕ್ಷಣಗಳನ್ನು ಪತ್ತೆಹಚ್ಚಿದೆ. ನ್ಯೂರಾನ್ ಕಾಯಿಲೆಗೆ ಸಂಬಂಧಿಸಿದ ಪ್ರೋಟೀನ್‌ಗಳು (Protein) ಹಲವು ವರ್ಷಗಳ ಕಾಲ ಕರುಳಿನಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿರುತ್ತವೆ, ನಂತರ ಮೆದುಳಿನಲ್ಲಿ ರೋಗಲಕ್ಷಣಗಳನ್ನು ಪ್ರಕಟಿಸುತ್ತವೆ. ಕರುಳಿನಲ್ಲಿ ಈ ಪ್ರೋಟೀನ್‌ಗಳ ಅಸ್ವಿತ್ವನ್ನು ಪತ್ತೆಹಚ್ಚಲು ಮಲದ ಮಾದರಿ ಇಲ್ಲವೇ ಕರುಳಿನ ಬಯಾಪ್ಸಿ ಪ್ರೋಟೀನ್‌ಗಳ ಉಪಸ್ಥಿತಿಯನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದೆ ಎಂದು ಸಂಶೋಧಕರ ತಂಡ ತಿಳಿಸಿದೆ.


ಕರುಳಿನಲ್ಲಿ ಪ್ರೋಟೀನ್‌ಗಳ ಅಸ್ತಿತ್ವ
ಮೋಟಾರ್ ನ್ಯೂರಾನ್ ಡಿಸೀಸ್ (MND) ಮೆದುಳಿನ ಮೇಲೆ ಮಾತ್ರವೇ ಪರಿಣಾಮ ಬೀರುವ ಎಂಬುದಾಗಿ ಭಾವಿಸಿದ್ದರೂ, ಇದು ಕರುಳಿನ ಮೇಲೆ ಪರಿಣಾಮ ಬೀರುವ ಲಕ್ಷಣಗಳನ್ನು ಹೊಂದಿರುತ್ತದೆ ಹಾಗೂ ಹಲವಾರು ವರ್ಷಗಳ ಕಾಲ ಇಲ್ಲಿಯೇ ಅಸ್ತಿತ್ವದಲ್ಲಿರುತ್ತದೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಹಾಗಾಗಿ ಮೆದುಳಿಗೆ ಹಾನಿಯನ್ನುಂಟು ಮಾಡುವ ಮೊದಲೇ ಕರುಳಿನಲ್ಲಿ MND ಅನ್ನು ಪತ್ತೆಹಚ್ಚಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.


ಕರುಳಿನ ಕ್ರಿಯೆಗಳಲ್ಲಿ ಅಸಮಾನತೆ
ಕರುಳಿನಲ್ಲಿ ಇದು ಕಂಡುಬಂದಲ್ಲಿ ಕರುಳಿನ ಕ್ರಿಯೆಗಳಲ್ಲಿ ಅಸಮಾನತೆ ಕಂಡುಬರುತ್ತದೆ ಹಾಗೂ ಕರುಳಿನ ಕಾರ್ಯಗಳಲ್ಲಿ ಅನೇಕ ಬದಲಾವಣೆಗಳು ತಿಳಿದುಬರುತ್ತದೆ ಹಾಗೂ ತೂಕ ನಷ್ಟ ಕೂಡ ಇದೇ ಕಾಯಿಲೆಯ ಲಕ್ಷಣವಾಗಿದೆ ಎಂಬುದು ಸಂಶೋಧನೆ ನಡೆಸಿದ ತಜ್ಞರ ಅಭಿಪ್ರಾಯವಾಗಿದೆ.


ಮೆದುಳಿನಲ್ಲಿರುವ ಪ್ರೋಟೀನ್‌ಗಳ ಶೇಖರಣೆಗೆ MND ಸಂಬಂಧಿಸಿದೆ. ಇವುಗಳು ಜೊತೆಯಾಗಿ ಒಗ್ಗೂಡಿ ಮೆದುಳಿನ ಕೋಶಗಳನ್ನು ಅನಾರೋಗ್ಯಕ್ಕೆ ಒಳಪಡಿಸುತ್ತವೆ ಹಾಗೂ ನಡಿಗೆ, ಉಸಿರಾಟ ಹಾಗೂ ಆಲೋಚನಾ ಸಾಮರ್ಥ್ಯಗಳನ್ನು ಕುಗ್ಗಿಸುತ್ತವೆ.


ರೋಗದ ಲಕ್ಷಣ ಪತ್ತೆ ಹಚ್ಚಲು ಅಂಗಾಂಶ ಬಯಾಪ್ಸಿ
MND ಯ ರೋಗಲಕ್ಷಣ ಹಾಗೂ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ, ಸಂಶೋಧಕರು ರೋಗದ ಲಕ್ಷಣಗಳನ್ನು ಹುಡುಕಲು ಅಂಗಾಂಶ ಬಯಾಪ್ಸಿಗಳನ್ನು ಅಧ್ಯಯನ ಮಾಡಿದ್ದಾರೆ. ಕರುಳು, ಚರ್ಮ, ದುಗ್ಧರಸ ಗ್ರಂಥಿಗಳು ಮತ್ತು ಇತರ ಅಂಗಾಂಶಗಳಲ್ಲಿ ಕಂಡುಬಂದ ರೋಗ-ಸಂಬಂಧಿತ ಪ್ರೋಟೀನ್‌ಗಳನ್ನು ವರ್ಷಗಳ ಮೊದಲು ಅಧ್ಯಯನವು ಬಹಿರಂಗಪಡಿಸಿತು.


ಇದನ್ನೂ ಓದಿ:  Kidney Stone: ಈ ಆಹಾರಗಳನ್ನು ತಿಂದ್ರೆ ಕಿಡ್ನಿಯಲ್ಲಿ ಕಲ್ಲು ಆಗಲ್ವಂತೆ, ಮಿಸ್​ ಮಾಡ್ಬೇಡಿ


ಈ ಅಧ್ಯಯನದ ನೇತೃತ್ವ ವಹಿಸಿದ್ದ ಅಬರ್ಡೀನ್ ವಿಶ್ವವಿದ್ಯಾನಿಲಯದ ಡಾ. ಜೆನ್ನಾ ಗ್ರೆಗೊರಿ ತಿಳಿಸುವಂತೆ ರೋಗದ ಬಗ್ಗೆ ಇನ್ನಷ್ಟು ಅರಿತುಕೊಳ್ಳಲು ಈ ಸಂಶೋಧನೆ ನೆರವು ನೀಡಿದೆ ಎಂದಾಗಿದೆ. ರೋಗದ ಆರಂಭಿಕ ಸ್ಥಿತಿಯನ್ನು ಮನಗಾಣಲು ಇದು ಸಹಾಕಯವಾಗಿದೆ ಎಂಬುದು ಜೆನ್ನಾ ಅಭಿಪ್ರಾಯವಾಗಿದೆ.


ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ ನಂತರ ಈ ರೋಗಕ್ಕೆ ಔಷಧವನ್ನು ಪತ್ತೆಹಚ್ಚಲಾಗಿದ್ದು ಇದು MND ಇರುವ ರೋಗಿಗಳ ಜೀವಿತಾವಧಿಯನ್ನು ಕೊಂಚ ಕಾಲ ವಿಸ್ತರಿಸುತ್ತದೆ ಎಂಬುದು ಜೆನ್ನಾ ಹೇಳಿಕೆಯಾಗಿದೆ. ಔಷಧಗಳನ್ನು ಪ್ರಯೋಗಿಸಲು ರೋಗಿಯು ಆರಂಭಿಕ ರೋಗಲಕ್ಷಣಗಳಿರುವಾಗಲೇ ವೈದ್ಯರನ್ನು ಭೇಟಿಮಾಡಬೇಕು ಎಂದು ಸೂಚಿಸಿದ್ದಾರೆ.


MND ಸಂಶೋಧನಾ ಸುದ್ದಿ
ಪಾರ್ಕಿನ್ಸನ್ ಕಾಯಿಲೆ (PD), ಆಲ್ಝೈಮರ್ ಕಾಯಿಲೆ (AD), ಮತ್ತು ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ALS) ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳನ್ನು ನರವೈಜ್ಞಾನಿಕ ಅಸ್ವಸ್ಥತೆಗಳು ಎಂದು ಪರಿಗಣಿಸಲಾಗುತ್ತದೆ.


ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಡಾ. ಮ್ಯಾಥ್ಯೂ ಹೊರಾಕ್ಸ್ ಹೇಳುವಂತೆ MND ಎಂಬುದು ವಿನಾಶಕಾರಿ ಕಾಯಿಲೆಯಾಗಿದ್ದು, ರೋಗ ನಿರ್ಣಯ ಮಾಡಲಾದ ರೋಗಿಗಳು ಸರಾಸರಿ 3-5 ವರ್ಷಗಳ ಕಾಲ ಬದುಕುತ್ತಾರೆ. ರೋಗಲಕ್ಷಣಗಳು ಮೆದುಳಿನಲ್ಲಿ ಕಾಣಿಸಿಕೊಳ್ಳುವ ಮೊದಲೇ ಸುಲಭವಾಗಿ ಪ್ರವೇಶಿಸಬಹುದಾದ ಅಂಗಾಂಶಗಳಲ್ಲಿ ರೋಗದ ಲಕ್ಷಣಗಳನ್ನು ವೀಕ್ಷಿಸಲು ಸಾಧ್ಯವಿದೆ ಎಂದು ಈ ಸಂಶೋಧನವು ತೋರಿಸುತ್ತದೆ.


ಇದನ್ನೂ ಓದಿ:   Anemia Symptoms: ರಕ್ತಹೀನತೆ ಬಗ್ಗೆ ನಿಮಗೆಷ್ಟು ಗೊತ್ತು? ಅನಿಮಿಯದ ಲಕ್ಷಣಗಳಿವು


ಇದರಿಂದ ಮೊದಲೇ ರೋಗಪತ್ತೆಯನ್ನು ಮಾಡಬಹುದು ಎಂದು ಸಂಶೋಧಕರು ಹೇಳಿದ್ದು, ಚಿಕಿತ್ಸೆಯನ್ನು ವಿಸ್ತರಿಸುವ ಕಾಲಾವಕಾಶವನ್ನು ನೀಡಬಹುದು ಹಾಗೂ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

Published by:Ashwini Prabhu
First published: