• Home
  • »
  • News
  • »
  • lifestyle
  • »
  • Mother and Baby: ಎಲ್ಲರನ್ನೂ ಸಂತೋಷವಾಗಿಡುವವರು ತಮ್ಮ ಮಗುವಿನ ಭಾವನೆಗೆ ಹೆಚ್ಚು ಸ್ಪಂದಿಸುತ್ತಾರಂತೆ

Mother and Baby: ಎಲ್ಲರನ್ನೂ ಸಂತೋಷವಾಗಿಡುವವರು ತಮ್ಮ ಮಗುವಿನ ಭಾವನೆಗೆ ಹೆಚ್ಚು ಸ್ಪಂದಿಸುತ್ತಾರಂತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತಾಯಿ ಮಗುವಿನ ಪರಸ್ಪರ ಬಾಂಧವ್ಯ ಎಂಬುವಂತಹದ್ದು ಅಮೂಲ್ಯವಾದ ಕ್ಷಣವಾಗಿದ್ದು, ಶಿಶುವಿನ ಕಾಳಜಿಯ ವಿಷಯದಲ್ಲಿ ಪ್ರಾಥಮಿಕ ಅವಲಂಬನೆ ತಾಯಿಯೇ ಎಂಬುದಾಗಿ ತಿಳಿಸಿದ್ದಾರೆ. ಮಗುವಿನ ಪರಸ್ಪರ ಚಟುವಟಿಕೆಯ ಮೇಲೆ ನಿಗಾವಹಿಸುವ ತಾಯಿ ಮಗುವನ್ನು ಸಮಾಧಾನಪಡಿಸುವುದರಿಂದ ಹಿಡಿದು ಮಗುವಿನ ಆರೈಕೆ ನಡೆಸುವುದರಲ್ಲಿ ಮುಖ್ಯವಾಗಿದ್ದಾರೆ.

ಮುಂದೆ ಓದಿ ...
  • Share this:

ಶಿಶುವಿನ (Infant)  ಸರ್ವತೋಮುಖ ಬೆಳವಣಿಗೆಯಲ್ಲಿ ಮಗುವಿನ ತಾಯಿಯ ಪಾತ್ರ ಹಿರಿದಾದುದು ಎಂಬುದಾಗಿ ವರ್ಜೀನಿಯಾ ವಿಶ್ವವಿದ್ಯಾಲಯದ ಬೇಬಿಲ್ಯಾಬ್‌ನಲ್ಲಿ ನಡೆಸಿರುವ ಅಧ್ಯಯನಗಳು ತಿಳಿಸಿವೆ. ತಾಯಿ (Mother) ಮಗುವಿನ ಪರಸ್ಪರ ಬಾಂಧವ್ಯ ಎಂಬುವಂತಹದ್ದು ಅಮೂಲ್ಯವಾದ ಕ್ಷಣವಾಗಿದ್ದು, ಶಿಶುವಿನ ಕಾಳಜಿಯ ವಿಷಯದಲ್ಲಿ ಪ್ರಾಥಮಿಕ ಅವಲಂಬನೆ ತಾಯಿಯೇ ಎಂಬುದಾಗಿ ತಿಳಿಸಿದ್ದಾರೆ. ಮಗುವಿನ ಪರಸ್ಪರ ಚಟುವಟಿಕೆಯ ಮೇಲೆ ನಿಗಾವಹಿಸುವ ತಾಯಿ ಮಗುವನ್ನು ಸಮಾಧಾನಪಡಿಸುವುದರಿಂದ ಹಿಡಿದು ಮಗುವಿನ ಆರೈಕೆ (Baby Care) ನಡೆಸುವುದರಲ್ಲಿ ಮುಖ್ಯವಾಗಿದ್ದಾರೆ. ಮಗುವು ಗಲಾಟೆ ಮಾಡಿದಾಗ ಮಗುವಿನ ತಾಯಿ ಮೆತ್ತಗೆ ಮಗುವಿನ ಬೆನ್ನು ತೀಡಿ ಸಮಾಧಾನಪಡಿಸುತ್ತಾರೆ ಹಾಗೆಯೇ ಮಗುವು ಸಮಾಧಾನಗೊಳ್ಳುತ್ತದೆ. ಇದನ್ನು ಮನಶ್ಶಾಸ್ತ್ರಜ್ಞ ಮೇರಿ ಐನ್ಸ್‌ವರ್ತ್ ತಾಯಿ ಮಗುವಿನ ಬಾಂಧವ್ಯ (Attachment) ಹಾಗೂ ಪರಸ್ಪರ ಆನಂದಗೊಳಿಸುವಿಕೆ ಎಂದು ಕರೆದಿದ್ದಾರೆ.


ಪರಸ್ಪರ ಸಂತೋಷಪಡುವುದು
ಮಗು ಹಾಗೂ ತಾಯಿಯ ನಡುವಿನ ಅನುಬಂಧ ಇದಾಗಿದ್ದು ಈ ಹಂತ ಶಿಶುಗಳ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಮಗುವಿನ ಆರೈಕೆ ಮಾಡುವವರಿಗೆ ಅದರ ಪ್ರತಿಯೊಂದು ಚಲನೆಗಳನ್ನು ನಿಗಾವಹಿಸುವುದು ಅಂತೆಯೇ ಚಟುವಟಿಕೆಗಳಿಗೆ ಸ್ಪಂದಿಸುವುದು ಸವಾಲಿನ ಸಂಗತಿಯಾಗಿದೆ ಹಾಗೂ ಇದೊಂದು ರೀತಿಯ ಕೌಶಲ್ಯವಿರುವ ಸಂವಹನವಾಗಿದ್ದು, ಈ ಸಂವಹನಗಳನ್ನು ಅಭಿವೃದ್ಧಿಪಡಿಸಲು ನೆರವನ್ನೀಯುವ ಕೌಶಲ್ಯಗಳನ್ನು ಬಹಿರಂಗಪಡಿಸಲು ಸಂಶೋಧಕರು ಉತ್ಸುಕರಾಗಿದ್ದಾರೆ.


ಸೂಕ್ಷ್ಮ ಮತ್ತು ಸ್ಪಂದಿಸುವ ಸಂವಹನಗಳು ನಿರ್ಣಾಯಕವಾಗಿವೆ
ಎಮೋಷನ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ ಜನನದ ನಂತರ ಐದು ತಿಂಗಳುಗಳಲ್ಲಿ ಅಧ್ಯಯನಕಾರರು 120 ತಾಯಂದಿರು ಮತ್ತು ಶಿಶುಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಭಾವನಾತ್ಮಕವಾಗಿ ಗ್ರಹಿಸುವ ಸ್ಥಿತಿಯನ್ನು ಮುಖದ ಅಭಿವ್ಯಕ್ತಿಗಳಿಂದ ಪತ್ತೆಹಚ್ಚಲು ಸಾಧ್ಯ ಎಂಬುದು ಈ ಸಂಶೋಧಕರ ಅಭಿಪ್ರಾಯವಾಗಿದೆ. ಸೂಕ್ಷ್ಮವಾದ ಆರೈಕೆಯ ಪ್ರಮುಖ ಮುನ್ಸೂಚನೆ ಎಂಬುದಾಗಿ ಅಧ್ಯಯನಕಾರರು ಇದನ್ನು ಕರೆದಿದ್ದಾರೆ.


ಶಿಶುಗಳ ಆಂತರಿಕ ಬೆಳವಣಿಗೆಯನ್ನು ನಿರ್ಮಿಸಲು ಮತ್ತು ಸಾಮಾಜಿಕ ಕೌಶಲ್ಯಗಳು ಮತ್ತು ದೈಹಿಕ ಆರೋಗ್ಯವನ್ನು ಸಂರಕ್ಷಿಸಲು ಮಗುವು ಆರೈಕೆ ಮಾಡುವವರೊಂದಿಗೆ ಹೊಂದಿರುವ ಸೂಕ್ಷ್ಮ ಮತ್ತು ಸ್ಪಂದಿಸುವ ಸಂವಹನಗಳು ನಿರ್ಣಾಯಕವಾಗಿವೆ. ಸೂಕ್ಷ್ಮ ಆರೈಕೆಯನ್ನು ಬೆಂಬಲಿಸುವ ಭಾವನಾತ್ಮಕ ಬುದ್ಧಿವಂತಿಕೆಯ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳುವುದು ಆರೋಗ್ಯಕರ, ಸುರಕ್ಷಿತ ಪೋಷಕ-ಮಕ್ಕಳ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.


ತಾಯಿ ಹಾಗೂ ಮಗುವಿನ ಬಾಂಧವ್ಯ
ಅಧ್ಯಯನವು ಅಮೆರಿಕಾದಲ್ಲಿ ವಾಸಿಸುವ ತಾಯಂದಿರ ಮನಸ್ಥಿತಿಯನ್ನು ಅರಿಯುವ ಪ್ರಯತ್ನವನ್ನು ಮಾಡಿದೆ. ಈ ಸಮಯದಲ್ಲಿ ತಾಯಿ ಹಾಗೂ ಮಗುವಿಗೆ ಪರಸ್ಪರ ಆಟವಾಡುವ ಟಾಸ್ಕ್ ಅನ್ನು ನೀಡಲಾಯಿತು. ತಂದೆ ಹಾಗೂ ತಾಯಿಯ ವಿಷಯಕ್ಕೆ ಬಂದಾಗ ಮಗು ಹಾಗೂ ಅವರುಗಳ ನಡುವಿನ ಬಾಂಧವ್ಯ ಹೇಗಿದೆ ಎಂಬುದನ್ನು ಮನಗಾಣಲು ಅಧ್ಯಯನಕಾರರು ಬಯಸಿದರು.


ಇದನ್ನೂ ಓದಿ: Birth Weight: ನವಜಾತ ಶಿಶುಗಳ ತೂಕದಲ್ಲಿ ಈ ವ್ಯತ್ಯಾಸ ಆದ್ರೆ ಅಪಾಯ ಗ್ಯಾರಂಟಿಯಂತೆ


ಮಗುವು ಒತ್ತಡಕ್ಕೆ ಒಳಗಾದಾಗ ಅಥವಾ ಅಸಮಾಧಾನಗೊಂಡಾಗ ಆರೈಕೆ ಮಾಡುವವರ ಪ್ರತಿಕ್ರಿಯೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು. ಮಗುವು ಹೆಚ್ಚು ಅಸಂತುಷ್ಟರಾದಾಗ ತಾಯಿ ಕೂಡ ವಿವಿಧ ರೀತಿಯ ಮಾನಸಿಕ ತೊಳಲಾಟಕ್ಕೆ ಒಳಗಾಗುವುದನನ್ನು ಅಧ್ಯಯನಕಾರರು ಅವಲೋಕಿಸಿದ್ದಾರೆ.


ಇತರರ ಸಂತೋಷವನ್ನು ಗುರುತಿಸುವವರು ಶಿಶುಗಳ ಪಾಲನೆಯನ್ನು ಚೆನ್ನಾಗಿ ಮಾಡುತ್ತಾರೆ
ಅಧ್ಯಯನದಲ್ಲಿ ತಿಳಿದು ಬಂದ ಇನ್ನೊಂದು ಅಂಶವೆಂದರೆ ಇತರರಲ್ಲಿ ಸಂತೋಷವನ್ನು ಗುರುತಿಸಲು ಸಾಮರ್ಥ್ಯವುಳ್ಳ ತಾಯಂದಿರು ತಮ್ಮ ಶಿಶುಗಳ ಸಂತೋಷವನ್ನು ಉತ್ತಮವಾಗಿ ಗ್ರಹಿಸುತ್ತಾರೆ ಹಾಗೂ ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದಾಗಿ ಅಧ್ಯಯನಕಾರರು ತಿಳಿಸಿದ್ದಾರೆ. ಇತರರ ಸಕಾರಾತ್ಮಕ ಭಾವನೆಗಳನ್ನು ಗುರುತಿಸುವಲ್ಲಿ ಸಾಮರ್ಥ್ಯವುಳ್ಳ ತಾಯಂದಿರು ಮಗುವಿನ ಸೂಕ್ಷ್ಮ ಭಾವನೆಗಳನ್ನು ಬೇಗನೇ ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಸ್ಪಂದಿಸುತ್ತಾರೆ ಎಂಬುದಾಗಿ ಅಧ್ಯಯನದಿಂದ ತಿಳಿದುಬಂದಿದೆ.


ಇದನ್ನೂ ಓದಿ: Children Health: ಮಕ್ಕಳಿಗೆ ಓಟ್ಸ್‌ ತಿನ್ನಿಸುವ ಮೊದಲು ಈ ವಿಷಯಗಳ ಬಗ್ಗೆ ಎಂದಿಗೂ ಮರೆಯದಿರಿ


ಮಕ್ಕಳೊಂದಿಗೆ ಭಾವನಾತ್ಮಕವಾಗಿ ವ್ಯವಹರಿಸಲು ಈ ತಾಯಂದಿರಿಗೆ ಸಾಧ್ಯವಾಗಿದೆ. ಸಮಾಧಾನ ಚಿತ್ತರಾಗಿ ಮಕ್ಕಳೊಂದಿಗೆ ಆಟಗಳಲ್ಲಿ ತೊಡಗಿಕೊಳ್ಳಲು ತಾಯಂದಿರಿಗೆ ಸಾಧ್ಯವಾಗಿದೆ ಹಾಗಾಗಿಯೇ ಅಧ್ಯಯನಕಾರರು ಇತರರ ಸಂತೋಷವನ್ನು ಗುರುತಿಸುವ ತಾಯಂದಿರು ತಮ್ಮ ಶಿಶುಗಳ ಪ್ರತಿಯೊಂದು ಚಟುವಟಿಕೆಯಲ್ಲೂ ಸ್ಪಂದಿಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ.

Published by:Ashwini Prabhu
First published: