ಬ್ಯಾಟ್ಮ್ಯಾನ್, ಸೂಪರ್ಮ್ಯಾನ್, ಐರನ್-ಮ್ಯಾನ್, ಅಥವಾ ಥಾನೋಸ್ ಇವರನ್ನೆಲ್ಲಾ ನಾವು ಸೂಪರ್ ಹೀರೋ ಎನ್ನುತ್ತೇವೆ, ಆದರೆ ನಮ್ಮ ಜೀವನದ ನಿಜವಾದ ಸೂಪರ್ ಹೀರೋ ನಮ್ಮ ತಾಯಿ (Mother) ಎಂಬುದು ಮುಖ್ಯ. ಮಲ್ಟಿ ಟಾಸ್ಕಿಂಗ್ ಪ್ರವೀಣೆ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡುವವಳು. ಆಕೆಯ ತ್ಯಾಗ ಮತ್ತು ಪ್ರೀತಿಗೆ ಧನ್ಯವಾದ ತಿಳಿಸಲು ಒಂದು ದಿನ ಸಾಲುವುದಿಲ್ಲ, ಆದರೂ ನಾಳೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ನಿಮ್ಮ ತಾಯಿಯ ಬೆಂಗಳೂರಿನ (Bengaluru) ಈ ರೆಸ್ಟೊರೆಂಟ್ಗಳಿಗೆ (Restaurants) ಕರೆದುಕೊಂಡು ಹೋಗಿ ಆಚರಿಸಿ.
ಹೆಬ್ಬಾಳ್ ಕೆಫೆ, ನಾಗಾವರ
ಹೆಬ್ಬಾಳ್ ಕೆಫೆಯು ಎಲ್ಲಾ ಸೂಪರ್ಮಾಮ್ಗಳಿಗೆ ತಾಯಂದಿರ ದಿನದ ಸಲುವಾಗಿ ವಿಶೇಷ ಊಟದ ಮೆನು ಹೊಂದಿರುತ್ತದೆ. ಪ್ರತಿದಿನ ಅಡುಗೆ ಮಾಡಿ ಬಡಿಸುವ ತಾಯಿಯನ್ನು ಸ್ಪೆಷಲ್ ಲಂಚ್ಗೆ ಕರೆದುಕೊಂಡು ಹೋಗಲು ಇದು ಸೂಕ್ತವಾದ ಸ್ಥಳ ಎನ್ನಬಹುದು. ಇಲ್ಲಿ ಹರ್ಬ್ ಬಟರ್ ರೋಸ್ಟ್ ಚಿಕನ್ ವಿತ್ ಟಸ್ಕನ್ ಶೈಲಿಯ ಬ್ರೆಡ್ ಸಲಾಡ್ ಮತ್ತು ರೂಟ್ ವೆಜಿಟೇಬಲ್ಸ್ ಮತ್ತು ಪ್ಯಾನ್ ಜಸ್ ಸಹ ಲಬ್ಯವಿದ್ದು, ಒಂದು ಸುಂದರ ಸಮಯವನ್ನು ನೀವಿಲ್ಲಿ ಕಳೆಯಬಹುದು.
ವಿಳಾಸ: ಹೆಬ್ಬಾಳ ಕೆಫೆ, ಮ್ಯಾರಿಯಟ್ ಬೆಂಗಳೂರು ಹೆಬ್ಬಾಳದ ಅಂಗಳ, ನಂ 2, 55, ಹೊರ ವರ್ತುಲ ರಸ್ತೆ, ಜೋಗಪ್ಪ ಲೇಔಟ್, ನಾಗವಾರ
ಸಮಯ: 12:30 pm - 3:30 pm
ಮೊಬೈಲ್ ನಂಬರ್: 096064 82968
ಮೈಯಾ, ಆರ್ಟಿ ನಗರ
ನೀವು ಮೈಯಾಗೆ ಹೋಗಿದ್ದರೆ, ಅವರ ಸಂಪೂರ್ಣ ಮೆನುವಿನ ರುಚಿಕರ ಆಹಾರದ ಬಗ್ಗೆ ಮಾಹಿತಿ ಇರುತ್ತದೆ. ಆದರೆ ನಿಮಗೆ ಗೊತ್ತಾ ಇಲ್ಲಿ ತಾಯಂದಿರ ದಿನದ ವಿಶೇಷವಾಗಿ ಅನಿಯಮಿತ ಗುಜರಾತಿ ಥಾಲಿಯನ್ನು ಮಧ್ಯಾಹ್ನದ ಊಟಕ್ಕೆ ಸವಿಯುವುದೇ ಬೇರೆಯದೇ ಅನುಭವ ನೀಡುತ್ತದೆ. ಫರ್ಸಾನ್, ಥೇಪ್ಲಾಸ್, ಸ್ವೀಟ್ ಶ್ರೀಖಂಡ ಆಹಾ ಇಲ್ಲಿನ ಮೆನು ಲಿಸ್ಟ್ ಹೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ.
ವಿಳಾಸ: 2ನೇ ಮಹಡಿ, 1/2, 2ನೇ ಕ್ರಾಸ್ ವಾಯುವಿಹಾರ ಕೆಂಪು, Rt ನಗರ, ಸಿಂಧಿ ಕಾಲೋನಿ, ಪುಲಿಕೇಶಿ ನಗರ, ಬೆಂಗಳೂರು, ಕರ್ನಾಟಕ 2000
ಸಮಯ: ಬೆಳಿಗ್ಗೆ 9:30 ರಿಂದ ಸಂಜೆ 6:30 ರವರೆಗೆ
ಮೊಬೈಲ್ ನಂಬರ್: 080 4121 9231
ಸಿಟ್ರಸ್ , ಲೀಲಾ ಪ್ಯಾಲೇಸ್
Escabeche, Beef Wellington, Chicken Marengo ಮತ್ತು Poisson Meunière ನಂತಹ 80 ಮತ್ತು 90 ರ ದಶಕದ ಕ್ಲಾಸಿಕ್ ಫುಡ್ ಐಟಮ್ಗಳನ್ನು ಹೊಂದಿರುವ ಸಿಟ್ರಸ್ ಥ್ರೋಬ್ಯಾಕ್ ಮೆನುವನ್ನು ನೀಡುತ್ತಿದೆ. ನಿಮ್ಮ ಅಮ್ಮನಿಗೆ ಇಷ್ಟವಾದ ಪ್ರತಿಯೊಂದು ಆಹಾರ ಪದಾರ್ಥಗಳು ಇಲ್ಲಿದ್ದು, ನಿಮ್ಮ ಪ್ರೀತಿಯ ಅಮ್ಮನನ್ನ ಇಲ್ಲಿ ಕರೆದುಕೊಂಡು ಹೋಗಲು ಮಿಸ್ ಮಾಡಲೇ ಬೇಡಿ.
ವಿಳಾಸ: 23, HAL ಹಳೆಯ ವಿಮಾನ ನಿಲ್ದಾಣ ರಸ್ತೆ, HAL 2ನೇ ಹಂತ, ಕೋಡಿಹಳ್ಳಿ, ಬೆಂಗಳೂರು, ಕರ್ನಾಟಕ 560008
ಸಮಯ: ಮಧ್ಯಾಹ್ನ 12.30 ರಿಂದ 3.30 ರವರೆಗೆ
ಮೊಬೈಲ್ ನಂಬರ್: 080 2521 1234
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಯಲ್ಲಿ ನೀರೂರಿಸುವ ನಾನ್ವೆಜ್ ರೆಸ್ಟೊರೆಂಟ್ಗಳ ಲಿಸ್ಟ್ ಇಲ್ಲಿದೆ
1Q1
1Q1 ನಲ್ಲಿ ನಿಮ್ಮ ವಿಶೇಷ ದಿನವನ್ನು ಇನ್ನೂ ವಿಶೇಷವಾಗಿ ಆಚರಿಸಬಹುದು. ಜಪಾನೀಸ್ ರೋಬಟಾಯಕಿ ಗ್ರಿಲ್, ಸುಶಿ ಮತ್ತು ಡಿಮ್ ಸಮ್ಸ್ ಮತ್ತು ಡಿಕಡೆಂಟ್ ಡೆಸರ್ಟ್ಗಳ ಟ್ರಿಟ್ ಅನ್ನು ಅಮ್ಮನಿಗೆ ಕೊಡಿಸಲು ಮರೆಯದಿರಿ.
ನೀವು ಅಮ್ಮನೊಂದಿಗೆ ಪರಿಪೂರ್ಣವಾದ ಡೇಟ್ ಹೋಗಲು ಇದು ಸೂಕ್ತವಾದ ಸ್ಥಳ ಎನ್ನಬಹುದು. ಇನ್ನು ಇಲ್ಲಿಗೆ ಹೋದಾಗ ಫೋಟೋ ಕ್ಲಿಕ್ ಮಾಡಲು ಮರೆಯದಿರಿ.
ವಿಳಾಸ: ನಂ. 1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು, ಕರ್ನಾಟಕ 560001
ಸಮಯ: 12pm-1am
ಮ್ಯಾರಿಯಟ್ ಹೋಟೆಲ್, ವೈಟ್ಫೀಲ್ಡ್
ತಾಯಂದಿರ ದಿನದ ಬ್ರಂಚ್ನ ಭಾಗವಾಗಿ, ಅವರು ನಿಮ್ಮ ಅಮ್ಮನಿಗೆ ವಿಶೇಷವಾದ ಬಹಳಷ್ಟು ಆಫರ್ಗಳನ್ನು ನೀಡುತ್ತಾರೆ. ಪಾಸ್ಟಾ, ಪಿಜ್ಜಾ, ಸುಶಿ, ಬಾವೊ ಮತ್ತು ಚಾಟ್ ಲೈವ್ ಕೌಂಟರ್ಗಳು ಸಹ ಇಲ್ಲಿದೆ. ನೈಟ್ರೋಜನ್ ಪಾನಿ ಪುರಿ, ತೆಪ್ಪನ್ಯಾಕಿ ಐಸ್ ಕ್ರೀಮ್, ಫಿಯರಿ ಪಾನ್ ಮತ್ತು ಫ್ರೈಡ್ ಕಲ್ಲಂಗಡಿಗಳಂತಹ ಸಿಗ್ನೇಚರ್ ಆಹಾರಗಳನ್ನು ನೀವಿಲ್ಲಿ ಮಿಸ್ ಮಾಡಿಕೊಳ್ಳಬಾರದು.
ವಿಳಾಸ: ಎಂ ಕೆಫೆ, ಬೆಂಗಳೂರು ಮ್ಯಾರಿಯಟ್ ಹೋಟೆಲ್ ವೈಟ್ಫೀಲ್ಡ್, ರಸ್ತೆ ಸಂಖ್ಯೆ 7, ಕೆಐಎಡಿಬಿ ರಫ್ತು ಪ್ರಚಾರ ಕೈಗಾರಿಕಾ ಪ್ರದೇಶ, ವೈಟ್ಫೀಲ್ಡ್
ಇದನ್ನೂ ಓದಿ: ಬೆಂಗಳೂರಿನ ಈ 5 ರೆಸ್ಟೊರೆಂಟ್ಗಳು ಬಫೆಟ್ಗೆ ಫೇಮಸ್ ಅಂತೆ - ನೀವೂ ಟ್ರೈ ಮಾಡಿ
ಸಮಯ:
12:30 - 03:30 pm
ಮೊಬೈಲ್ ನಂಬರ್: 080 4943 5000
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ