Cancer: ಮಕ್ಕಳ ಕಣ್ಣುಗಳು ಕೆಂಪಾಗಿದ್ದರೆ ನಿರ್ಲಕ್ಷಿಸಬೇಡಿ; ಇದು ಕಣ್ಣಿನ ಕ್ಯಾನ್ಸರ್ ಆಗಿರಬಹುದು ಎಚ್ಚರ!

ಇತ್ತೀಚಿಗೆ ಕಂಡುಬರುತ್ತಿರುವ ಕ್ಯಾನ್ಸರ್‌ ಎಂಬ ಮಾರಕ ರೋಗವು ನವಜಾತ ಶಿಶುಗಳಿಂದ ಹಿಡಿದು ವಯಸ್ಸಾದ ಅಜ್ಜ-ಅಜ್ಜಿಯರಿಗೂ ಕಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ನವಜಾತ ಶಿಶುವಿನಿಂದ ಹಿಡಿದು ಐದು ವರ್ಷದ ಮಕ್ಕಳವರೆಗೆ ಇತ್ತೀಚೆಗೆ ಕಣ್ಣಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ.

ಕಣ್ಣಿನ ಕ್ಯಾನ್ಸರ್ ಉಂಟಾದ ಮಗು

ಕಣ್ಣಿನ ಕ್ಯಾನ್ಸರ್ ಉಂಟಾದ ಮಗು

  • Share this:
ಇಂದಿನ ಆಧುನಿಕ ಜೀವನಶೈಲಿಯು (Lifestyle) ಎಷ್ಟು ಮುದ ನೀಡುತ್ತದೆಯೋ ಅಷ್ಟೆ ಹೆಚ್ಚು ರೋಗಗಳನ್ನು (Diseases) ತರುತ್ತಿದೆ. ಆಹಾರ ಅಭ್ಯಾಸ, ನಿದ್ದೆಯ ಸಮಯ, ಹೆಚ್ಚಿನ ಸಮಯ ಡಿಜಿಟಲ್‌ ಉಪಕರಣಗಳನ್ನು ಬಳಸುತ್ತಿರುವುದು, ಹೀಗೆ ಇನ್ನು ಹತ್ತು ಹಲವಾರು ಕಾರಣಗಳು ವಿಚಿತ್ರ ರೋಗಗಳನ್ನು ಹುಟ್ಟು ಹಾಕುತ್ತಿವೆ.  ಅದರಲ್ಲೂ ಇತ್ತಿಚೀಗೆ ಕಂಡುಬರುತ್ತಿರುವ ಕ್ಯಾನ್ಸರ್‌ (Cancer) ಎಂಬ ಮಾರಕ ರೋಗವು ನವಜಾತ ಶಿಶುಗಳಿಂದ (New Born Baby) ಹಿಡಿದು ವಯಸ್ಸಾದ ಅಜ್ಜ-ಅಜ್ಜಿಯರಿಗೂ ಕಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ನವಜಾತ ಶಿಶುವಿನಿಂದ ಹಿಡಿದು ಐದು ವರ್ಷದ ಮಕ್ಕಳವರೆಗೆ ಇತ್ತೀಚೆಗೆ ಕಣ್ಣಿನ ಕ್ಯಾನ್ಸರ್ (Eye Cancer) ಪ್ರಕರಣಗಳು ಹೆಚ್ಚಾಗುತ್ತಿವೆ.

ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುವ ಕಣ್ಣಿನ ಕ್ಯಾನ್ಸರ್ 
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಕಣ್ಣಿನ ಕ್ಯಾನ್ಸರ್‌ ಮಕ್ಕಳ ಜೀವಕ್ಕೆ ಬೆದರಿಕೆ ಒಡ್ಡುವ ದೊಡ್ಡ ಅಪಾಯಕಾರಿ ರೋಗ ಇದಾಗಿದೆ. ನವಜಾತ ಶಿಶು ಹಾಗೂ ಸಣ್ಣ ಮಕ್ಕಳ ಕಣ್ಣಿನಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣ ಕುರಿತಂತೆ ಬೇಗ ತಪಾಸಣೆ ಮಾಡಿಸಬೇಕಾದ ಅಗತ್ಯ ಈ ದಿನಗಳಲ್ಲಿ ಹೆಚ್ಚುತ್ತಿದೆ. ಆಗಾಗ ಮಕ್ಕಳ ನೇತ್ರ ತಪಾಸಣೆ ಮಾಡಿಸುವುದರಿಂದ ಅಪಾಯಕಾರಿ ಕಣ್ಣಿನ ಕ್ಯಾನ್ಸರ್ ಪತ್ತೆ ಮಾಡಬಹುದು. ಚಿಕ್ಕವರಿದ್ದಾಗಲೇ ಬರುವ ಅಂಧತ್ವವನ್ನು ತಡೆಯಬಹುದಾಗಿದೆ.

ಈ ಕಣ್ಣಿನ ಕ್ಯಾನ್ಸರ್‌ನಿಂದ ಒಂದು ಮುಗ್ಧಜೀವ ಸಾವನ್ನಪ್ಪಿರುವುದು ನಿಜಕ್ಕೂ ಆಘಾತಕಾರಿ ವಿಷಯ. ಆ ಮಗುವಿಗೆ ಕಣ್ಣಿನ ಕ್ಯಾನ್ಸರ್‌ ಎಂದು ತಿಳಿಯುವ ಮೊದಲು ಆ ಕ್ಯಾನ್ಸರ್‌ ದೇಹದ ಹಲವು ಭಾಗಗಳಿಗೆ ಹರಡಿಕೊಂಡಿತ್ತು. ಇದರಿಂದ ಮಗು ಸಾವನ್ನಪ್ಪಿತು. ಈ ಘಟನೆಯು ದೂರದ ಯುನೈಟೈಡ್‌ ಕಿಂಗ್‌ಡಮ್‌ ದೇಶದಲ್ಲಿ ನಡೆದಿದೆ.

ಕಣ್ಣಿನ ಕ್ಯಾನ್ಸರ್ ಉಂಟಾದ ಮಗುವಿನ ಕಥೆ ಇದು
ಇನ್ನು ಅಂಬೆಗಾಲಿಡುವ ಮಗುವಿಗೆ ಕಣ್ಣಿನ ಕ್ಯಾನ್ಸರ್‌ ಎಂದರೆ ನಂಬಲೂ ಸಾಧ್ಯವೇ? ಆದರೂ ನಂಬಲೇಬೇಕಾದ ಅನಿವಾರ್ಯತೆ ನಮಗಿದೆ. ಏಕೆಂದರೆ ಇದು ವಾಸ್ತವ. ಈ ಚಿಕ್ಕ ಮಗುವಿನ ಕಣ್ಣಿನಲ್ಲಿ ಒಂದು ಸಣ್ಣ ಗುಳ್ಳೆಯು ಮುಂದೆ ಭಯಾನಕ ಮತ್ತು ಅಪರೂಪದ ಕ್ಯಾನ್ಸರ್ ಆಗಿ ಬದಲಾವಣೆ ಆಯಿತು. ಈ ರೀತಿ ನಿಮ್ಮ ಮಗುವಿನಲ್ಲಿ ಒಂದು ಸಣ್ಣ ಬದಲಾವಣೆ ಆದರೂ ಕೂಡ ಬೇಗನೆ ನಿಮ್ಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಆ ಮಗುವಿನ ತಾಯಿ ಎಲ್ಲ ಪೋಷಕರಿಗೂ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: Diabetes in Children: ಮಕ್ಕಳಲ್ಲಿ ಹೆಚ್ಚಾಗ್ತಿದೆ ಮಧುಮೇಹ. ಪೋಷಕರು ತಪ್ಪದೇ ಈ ಕೆಲಸ ಮಾಡಬೇಕು

ಕಣ್ಣಿನ ಕ್ಯಾನ್ಸರ್ ನ ಲಕ್ಷಣಗಳು 
ಹೌದು, ಆ ತಾಯಿ ತನ್ನ ಮಗುವಿಗೆ ಆದ ಪರಿಸ್ಥಿತಿ ಮತ್ತೊಬ್ಬ ಮಗುವಿಗೆ ಬರಬಾರದೆಂದು ಪ್ರತಿ ಪೋಷಕರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಮಗುವಿನಲ್ಲಿ ಸಣ್ಣ ಬದಲಾವಣೆ ಆದರೂ ಸಹ ಅದನ್ನು ಬೇಗನೆ ವೈದ್ಯರಿಗೆ ತೋರಿಸಿ ಎಂದು ತನ್ನ ನೋವನ್ನು ಹೇಳಿಕೊಳ್ಳುತ್ತಿದ್ದಾರೆ. ಆ ತಾಯಿಯ ಹೆಸರು ಜೆಸ್ಸಿಕಾ ನೀಲ್ ಮತ್ತು ಅವರ ಪತಿಯ ಹೆಸರು ಲೀ ಆಗಿದೆ. “ತಮ್ಮ ಮಗು ಕಳೆದ ವರ್ಷ ಆಗಸ್ಟ್‌ನಲ್ಲಿ ನಮಗೆ ರಜೆ ಇರುವ ಹಿನ್ನೆಲೆ ನಾವೆಲ್ಲ ಸಮದ್ರ ತೀರಕ್ಕೆ ವಿಹಾರಕ್ಕೆಂದು ಹೋಗಿದ್ದೇವು. ಅಲ್ಲಿ ನಮ್ಮ ಮಗು ಮರಳಿನಿಂದ ಕಣ್ಣನ್ನು ಉಜ್ಜಿಕೊಂಡಿದ್ದರ ಸಲುವಾಗಿ ಮಗುವಿನ ಕಣ್ಣು ಕೆಂಪಾಗಿದೆ ಎಂದು ತಿಳಿದ್ದೆವು” ಎಂದು ಆ ಮಗುವಿನ ತಾಯಿ ಹೇಳಿದರು.

“ಆಗ ನಾನು ನನ್ನ ಮಗುವಿನ ಕಣ್ಣನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಅದನ್ನು ಮುಟ್ಟಿ ನೋಡಿದೆ. ಆದರೆ ಮಗುವಿಗೆ ಯಾವುದೇ ನೋವು ಕೂಡ ಆಗಲಿಲ್ಲ. ಆದರೆ ಕಣ್ಣಿನ ಸುತ್ತ ಇರುವ ಪ್ರದೇಶದಲ್ಲಿ ಅದು ಊದಿಕೊಂಡಿರುವಂತೆ ಭಾಸವಾಗುತ್ತಿತ್ತು” ಎಂದು ಹೇಳಿದರು. "ವಾರದುದ್ದಕ್ಕೂ ಮಗುವಿನ ಕಣ್ಣು ಮತ್ತಷ್ಟು ಊದಿಕೊಂಡಿತು. ಇದರಿಂದ ಅದು ಈಗ ಸ್ಪಷ್ಟವಾಗಿ ಕಾಣುತ್ತಿತ್ತು. ಅದನ್ನು ನಾನು ನನ್ನ ಪತಿಗೆ ತೋರಿಸಿದೆ. ಆಗ ಅವರು ನಮ್ಮ ಮಗುವಿನ ಕಣ್ಣಿಗೆ ಏನೋ ಆಗಿದೆ. ಕೂಡಲೇ ವೈದ್ಯರ ಹತ್ತಿರ ಕರೆದುಕೊಂಡು ಹೋಗೋಣ ಎಂದು ಹೇಳಿದರು” ಎಂದು ಆ ಮಗುವಿನ ತಾಯಿ ಹೇಳಿದಳು.

ವೈದ್ಯರು ತಪಾಸಣೆ ಮಾಡಿದ ನಂತರ ಮಗುವಿನ ಕಣ್ಣಿನಲ್ಲಿರುವ ಸೈನಸ್‌ಗಳಲ್ಲಿ ಕ್ಯಾನ್ಸರ್ ಗಡ್ಡೆ ಇದೆ ಎಂದು ಪರೀಕ್ಷೆಗಳಿಂದ ತಿಳಿದು ಬಂತು. ಆಗ ಆ ತಾಯಿ ಬಹಳ ನೊಂದುಕೊಂಡರು. ಈ ಕಣ್ಣಿನ ಕ್ಯಾನ್ಸರ್‌ ಬಹಳ ಅಪರೂಪವಾಗಿದ್ದು, ಅದಕ್ಕೆ ಈ ವರ್ಷದ ಜನವರಿಯವರೆಗೆ ಹೆಸರೇ ಇರಲಿಲ್ಲ. ಆ ಮಗುವಿಗೆ ಕಿಮೊಥೆರಪಿ ಮತ್ತು ಶಸ್ತ್ರಚಿಕಿತ್ಸೆಯನ್ನು ಮಾಡಿದರು. ಆದರೆ ಈಗಾಗಲೇ ಕ್ಯಾನ್ಸರ್ ದೇಹದ ಇತರ ಅಂಗಗಳಿಗೆ ಮತು ಮಗುವಿನ ಮೆದುಳಿಗೆ ಮತ್ತು ಬೆನ್ನುಹುರಿಗೆ ಹರಡಿತು. ಅದಕ್ಕೆ ಆ ಮಗು ಈ ವರ್ಷ ಏಪ್ರಿಲ್‌ನಲ್ಲಿ ತನ್ನ 16 ತಿಂಗಳ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿತು.

ಮಗುವನ್ನು ಅಗಲಿದ ತಾಯಿ ಹೇಳಿದ್ದೇನು ನೋಡಿ
“ನಾವು ನಮ್ಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಇದ್ದರೆ, ಇನ್ನು ಬೇಗ ನಮ್ಮ ಮಗನನ್ನು ಕಳೆದುಕೊಂಡು ಬಿಡುತ್ತಿದ್ದೆವು. ಆಸ್ಪತ್ರೆಗೆ ಹೋದ ನಂತರ ಅವನು 8 ತಿಂಗಳ ಕಾಲ ತನ್ನ ಜೀವವನ್ನು ಒತ್ತೆ ಇಟ್ಟು ನಮ್ಮ ಜೊತೆ ಖುಷಿಯಿಂದ ಆಟವಾಡುತ್ತಿರುವುದು ನೆನಪಿಸಿಕೊಂಡರೆ ನೋವು ಹೆಚ್ಚಾಗುತ್ತದೆ” ಮಗುವಿನ ತಾಯಿ ಹೇಳಿದರು.

“ನಾವು ನಮ್ಮ ಮಗುವನ್ನು ರಜೆಯಲ್ಲಿ ಸಮುದ್ರ ವಿಹಾರಕ್ಕೆ ಕರೆದುಕೊಂಡು ಹೋಗುವಾಗ ಅವನ ಕಣ್ಣು ಹೆಚ್ಚು ಉಬ್ಬಿರಲಿಲ್ಲ. ನೋವು ಕೂಡ ಇರಲಿಲ್ಲ. ನೋವು ಇದ್ದಿದ್ದರೆ ನನ್ನ ಮಗು ಸುಮ್ಮನೆ ಇರುತ್ತಿರಲಿಲ್ಲ. ಜೋರಾಗಿ ಅಳುತ್ತಿತ್ತು. ಆದರೆ ನೋವಿಲ್ಲದ ಕಾರಣ ಯಾವಾಗಲೂ ಸುಮ್ಮನೆ ಇರುತ್ತಿತ್ತು. ಆದರೆ ಒಂದು ವಾರದ ನಂತರ ಮಗುವಿನ ಮುಖದ ಛಾಯೆಯೆ ಸಂಪೂರ್ಣವಾಗಿ ಬದಲಾಯಿತು. ಆಗ ಇದರಿಂದ ನನಗೆ ಮತ್ತಷ್ಟು ಭಯ ಶುರು ಆಗಿತ್ತು. ಏನಾಗಿದೆ? ನನ್ನ ಮಗುವಿಗೆ ಎಂಬ ಆತಂಕ ಆರಂಭವಾಯಿತು” ಎಂದು ಹೇಳಿದರು.

ಇದನ್ನೂ ಓದಿ: Kids care: ಶಾಲೆಗೆ ಹೋಗುವ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಗಮನ, ಪದೇ ಪದೇ ಆರೋಗ್ಯ ಹದಗೆಡದಂತೆ ಈ ರೀತಿ ಮಾಡಿ

“ನಮ್ಮ ಮಗುವಿಗೆ ಬಂದ ಕಣ್ಣಿನ ಕ್ಯಾನ್ಸರ್‌ ಅನ್ನು ಎಥ್ಮೋಯ್ಡ್ ಸೈನಸ್‌ನಲ್ಲಿ ಅನಿರ್ದಿಷ್ಟ ಸಾರ್ಕೋಮಾವನ್ನು ಹೊಂದಿರುವ ಮೆಸೆಂಚೈಮಲ್ ಕೊಂಡ್ರೊಸಾರ್ಕೊಮಾ ಎಂದು ಹೆಸರಿಸಲಾಗಿದೆ” ಎಂದು ವೈದ್ಯರು ಹೇಳಿದ್ದಾರೆ.

ಕ್ಯಾನ್ಸರ್ ತನ್ನ ಮೆದುಳಿಗೆ ಹರಡಿದಾಗ ಪ್ರಾಣ ಕಳೆದುಕೊಂಡ ಮಗು
"ನಮ್ಮ ಮಗು ಬಹಳ ಕಷ್ಟಪಟ್ಟಿತು. ಏಕೆಂದರೆ ಕ್ಯಾನ್ಸರ್‌ ಅನ್ನು ಹೋಗಲಾಡಿಸಲು ಅನೇಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ಕಿಮೋಥೇರಫಿ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರಿಂದ ಆ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಆದರೆ ಚಿಕ್ಕ ಮಗು ಆಗಿರುವುದರಿಂದ ಅದಕ್ಕೆ ನೋವಿನ ಪರಿಣಾಮವು ಗೊತ್ತಾಗಿಲ್ಲ ಎಂದೇ ಹೇಳಬಹುದು. ನಮ್ಮ ಮಗು ಯಾವಾಗಲೂ ಸಂತೋಷದಿಂದ ನಗು ನಗುತ್ತಾ ಇರುತ್ತಿತ್ತು. ಅದನ್ನು ನೆನಪಿಸಿಕೊಂಡರೆ ದುಃಖ ಮತ್ತೆ ಮತ್ತೆ ಬರುತ್ತದೆ. ಅತ್ಯಂತ ದುಃಖಕರ ಸಂಗತಿ ಎಂದ್ರೆ ಕ್ಯಾನ್ಸರ್ ತನ್ನ ಮೆದುಳಿಗೆ ಹರಡಿದಾಗ ಆ ಮಗು ತನ್ನ ಪ್ರಾಣವನ್ನು ಕಳೆದುಕೊಂಡಿತು. ಆದರೆ ನಾವು ಆ ಎಂಟು ತಿಂಗಳ ನೆನಪುಗಳನ್ನು ಶಾಶ್ವತವಾಗಿ ಹೊಂದಿರುತ್ತೇವೆ ” ಎಂದು ಅವರ ತಾಯಿ ದುಖ ತೋಡಿಕೊಂಡಿದ್ದಾರೆ.

ಆಗಾಗ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುತ್ತೀರಿ
ಈ ಮಗುವಿನ ಕತೆಯನ್ನು ಕೇಳಿದರೆ ನಮ್ಮ ಮಗುವಿಗೂ ಈ ಕ್ಯಾನ್ಸರ್‌ ಬಂದರೆ ಹೇಗೆ ? ಎಂದು ಭಯ ಆಗುತ್ತೆ ಅಲ್ವಾ. ಚಿಂತೆ ಮಾಡಬೇಡಿ. ಮಗುವಿನ ಕಣ್ಣನ್ನು ಆಗಾಗ ಚೆಕ್‌ ಮಾಡ್ತಿರಿ. ಮಗುವಿನ ದೇಹದಲ್ಲಿ ಸಣ್ಣ ಬದಲಾವಣೆ ಆದರೂ ಕೂಡ ತಡ ಮಾಡದೇ ವೈದ್ಯರ ಹತ್ತಿರ ಬೇಗನೆ ಹೋಗಿ ಮಗುವಿನ ತಪಾಸಣೆ ಮಾಡಿಸಿ. ಇದರಿಂದ ಮಗುವಿಗೆ ಏನು ಸಮಸ್ಯೆ ಎಂದು ನಮಗೆ ತುಂಬಾ ಸ್ಪಷ್ಟವಾಗಿ ತಿಳಿದು ಬರುತ್ತದೆ.

ಇದನ್ನೂ ಓದಿ: Parenting Tips: ಪೋಷಕರೇ, ಇಷ್ಟು ಮಾಡಿದ್ರೆ ಸಾಕಂತೆ ನಿಮ್ಮ ಮಕ್ಕಳ ಐಕ್ಯೂ ಲೆವೆಲ್​ ಹೆಚ್ಚಾಗುತ್ತೆ

ಸುಂದರವಾದ ಜಗತ್ತನ್ನು ನೋಡಲು ಕಣ್ಣು ಅತ್ಯವಶ್ಯಕ. ಕೆಲವೊಮ್ಮೆ ವಿಶೇಷವಾಗಿ ಮಕ್ಕಳಲ್ಲಿ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುವುದುಂಟು. ಮಕ್ಕಳಲ್ಲಿ ಕಣ್ಣು ಮಸುಕಾಗುವುದು, ಕಣ್ಣು ನೋವು ಉಂಟಾದಾಗ ಸರಿಯಾದ ಚಿಕಿತ್ಸೆ ಪಡೆಯದೆ ಅಥವಾ ಸ್ಥಳೀಯ ಆಸ್ಪತ್ರೆಯಲ್ಲಿ ನೀಡುವ ಡ್ರಾಪ್‌ಗಳ ಮೊರೆ ಹೋಗುತ್ತಾರೆ. ಪುಟ್ಟ ಮಗುವಿನ ಕಣ್ಣಿನ ತೊಂದರೆಯನ್ನು ಆರಂಭದಲ್ಲಿ ಕಡೆಗಣಿಸುವುದು ತಪ್ಪು. ಮಗುವಿನಲ್ಲಿರುವ ಕಣ್ಣಿನ ತೊಂದರೆ ಆರಂಭಿಕ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಮುಂದೊಂದು ದಿನ ಮಗುವಿನ ಒಂದು ಅಥವಾ ಎರಡೂ ಕಣ್ಣನ್ನು ತೆಗೆಯಬೇಕಾಗಬಹುದು. ಆ ಮಗು ಜೀವನಪೂರ್ತಿ ಅಂಧತ್ವ ಎದುರಿಸಬೇಕಾಗಬಹುದು. ಇಂತಹ ಅಪಾಯಕ್ಕೆ ಈಡಾಗುವ ಬದಲು ಮಕ್ಕಳ ಕಣ್ಣಿನ ಕುರಿತು ಆರಂಭದಲ್ಲಿಯೇ ಜಾಗೃತಿ ವಹಿಸಿ, ಚಿಕಿತ್ಸೆ ನೀಡಿದರೆ ಮಕ್ಕಳನ್ನು ಕಣ್ಣಿನ ಕ್ಯಾನ್ಸರ್‌ನಿಂದ ರಕ್ಷಿಸಬಹುದು
Published by:Ashwini Prabhu
First published: