Mothers Day ದಿನದಂದು ನಿಮ್ಮ ತಾಯಿಗೆ ನೀಡಿ ರೆಸ್ಟ್! ನೀವೇ ಈ 9 ಡಿಶ್​ ರೆಡಿ ಮಾಡಿ ಕೊಡಿ ಸರ್​ಪ್ರೈಸ್​

ನಿಮ್ಮ ಜೀವನದಲ್ಲಿ ತುಂಬಾನೇ ವಿಶೇಷವಾದ ವ್ಯಕ್ತಿಗೆ ರುಚಿಕರವಾದ ಊಟವನ್ನು ಮಾಡಿ ಬಡಿಸುವುದರ ಮೂಲಕ ಅವರ ಆ ದಿನವನ್ನು ಇನ್ನಷ್ಟು ವಿಶೇಷವಾಗಿಸುವುದು ಬಹುತೇಕವಾಗಿ ಎಲ್ಲಾ ಮಕ್ಕಳ ಯೋಚನೆ ಆಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ (Mother) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಂತಹ ತಾಯಿಗೆ ಅಂತ ವರ್ಷದಲ್ಲಿ ಒಂದು ದಿನವಾದರೂ ವಿಶೇಷವಾಗಿರಬೇಕಲ್ಲವೇ..? ನಾವು ಮೇ (May) 8 ರಂದು ಪ್ರತಿ ವರ್ಷ ‘ತಾಯಂದಿರ ದಿನ’ (Mothers Day) ವನ್ನು ಆಚರಿಸುತ್ತೇವೆ ಮತ್ತು ಆ ದಿನ ಅನೇಕರು ತಮ್ಮ ತಾಯಂದಿರಿಗೆ ಉಡುಗೊರೆ (Gift) ನೀಡುವುದಾಗಲಿ ಅಥವಾ ಅವರಿಗೆ ಇಷ್ಟವಾದ ಸಿಹಿ ತಿಂಡಿ (Sweet Food) ಯನ್ನು ಮಾಡಿಕೊಡುವುದರ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುವುದನ್ನು ನಾವೆಲ್ಲರೂ ನೋಡಿರುತ್ತೇವೆ. ನಿಮ್ಮ ಜೀವನದಲ್ಲಿ ತುಂಬಾನೇ ವಿಶೇಷವಾದ ವ್ಯಕ್ತಿಗೆ ರುಚಿಕರವಾದ ಊಟವನ್ನು ಮಾಡಿ ಬಡಿಸುವುದರ ಮೂಲಕ ಅವರ ಆ ದಿನವನ್ನು ಇನ್ನಷ್ಟು ವಿಶೇಷವಾಗಿಸುವುದು ಬಹುತೇಕವಾಗಿ ಎಲ್ಲಾ ಮಕ್ಕಳ ಯೋಚನೆ ಆಗಿರುತ್ತದೆ.

ತಾಯಂದಿರ ದಿನದಂದು ಮಾಡುವ ಡಿಶ್​!

ಒಬ್ಬ ತಾಯಿಗೆ ಒಡವೆ, ಬಟ್ಟೆ ಖರೀದಿಸಿ ಉಡುಗೊರೆಗಿಂತಲೂ, ತಮ್ಮ ಮಕ್ಕಳು ಮನೆಯಲ್ಲಿಯೇ ತಮ್ಮ ಕಣ್ಣು ಮುಂದೆ ಅಡುಗೆ ಮಾಡಿ ತಿನ್ನಿಸಿದರೆ ಅದಕ್ಕಿಂತ ದೊಡ್ಡ ಉಡುಗೊರೆ ಏನಿರುತ್ತೆ ಹೇಳಿ..? ಇದು ಆ ತಾಯಿಗೆ ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುವಂತಹ ಒಂದು ಕ್ಷಣವಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ‘ತಾಯಂದಿರ ದಿನ’ ದಂದು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವಂತಹ ಸರಳವಾದ ರುಚಿಕರವಾದ ಅಡುಗೆಗಳ ಪಟ್ಟಿಯನ್ನು ನಿಮಗಾಗಿ ಸಂಗ್ರಹಿಸಿ ತಂದಿದ್ದೇವೆ ನೋಡಿ.

1. ಅಮೃತಸರಿ ಚಿಕನ್ ಮಸಾಲಾ

ನಿಮ್ಮ ತಾಯಿ ಚಿಕನ್ ಅನ್ನು ತುಂಬಾನೇ ಇಷ್ಟ ಪಡುತ್ತಿದ್ದರೆ, ಅವಳಿಗಾಗಿ ಈ ಖಾದ್ಯವನ್ನು ತಯಾರಿಸಿ ಕೊಡಿ. ಅಮೃತಸರಿ ಚಿಕನ್ ಮಸಾಲಾ ಒಂದು ಸೊಗಸಾದ ಉತ್ತರ ಭಾರತದ ಮೇಲೋಗರವಾಗಿದ್ದು, ಇದನ್ನು ಹಲವಾರು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ನೀವು ಮೇಲೋಗರದ ಟೊಮ್ಯಾಟೋ ಗ್ರೇವಿಗೆ ಕ್ರೀಮ್ ಮತ್ತು ಸಾಕಷ್ಟು ಬೆಣ್ಣೆಯನ್ನು ಸೇರಿಸಬಹುದು. ಸರ್ವ್ ಮಾಡುವ ಮೊದಲು ತಾಜಾ ಕೊತ್ತಂಬರಿ ಸೊಪ್ಪಿನಿಂದ ಇದನ್ನು ಅಲಂಕರಿಸಿ.

2. ಮಾ ಕಿ ದಾಲ್

ನೀವು ಸರಳ, ವಿಶೇಷ ಮತ್ತು ಆರೋಗ್ಯಕರವಾದ ಅಡುಗೆಯನ್ನು ಮಾಡಿ ನಿಮ್ಮ ತಾಯಿಗೆ ನೀಡಲು ನೋಡುತ್ತಿದ್ದರೆ, ಇದು ನಿಮ್ಮ ತ್ವರಿತವಾಗಿ ಮಾಡುವಂತಹ ಪಾಕವಿಧಾನವಾಗಿರಬಹುದು. ನೀವು ಮಾ ಕಿ ದಾಲ್ ಅನ್ನು ಹಬೆಯಲ್ಲಿ ಬೇಯಿಸಿದ ಅನ್ನ, ಜೀರಾ ರೈಸ್ ಅಥವಾ ಕೇವಲ ಚಪಾತಿಗಳೊಂದಿಗೆ ಹಚ್ಚಿಕೊಂಡು ಸೇವಿಸಬಹುದು ಮತ್ತು ಇದು ಸ್ವರ್ಗದಂತೆ ರುಚಿಸುತ್ತದೆ. ಸಾಕಷ್ಟು ದೇಸಿ ಮಸಾಲೆಗಳನ್ನು ಒಳಗೊಂಡಿರುವ ದಾಲ್ ಖಂಡಿತವಾಗಿಯೂ ನಿಮ್ಮ ತಾಯಿಯನ್ನು ಮೆಚ್ಚಿಸುತ್ತದೆ.

3. ಕೊಲ್ಹಾಪುರಿ ವೆಜಿಟೇಬಲ್ಸ್

ನಿಮಗೆ ಅಡುಗೆ ಮಾಡಿ ಕೊಡಲು ಅಷ್ಟೊಂದು ಸಮಯ ಇರದೆ ಇದ್ದರೂ ಸಹ ನೀವು ಉತ್ತಮವಾದುದ್ದನ್ನು ಮಾಡಲು ಬಯಸಿದರೆ, ಈ ಪಾಕವಿಧಾನವನ್ನು ಮಾಡಿಕೊಳ್ಳುವುದು ಒಳ್ಳೆಯದು. ಕೊಲ್ಹಾಪುರಿ ವೆಜಿಟೇಬಲ್ಸ್ ತಯಾರಿಸಲು ನಿಮಗೆ ಕೇವಲ 30 ನಿಮಿಷಗಳು ಬೇಕಾಗುತ್ತವೆ. ಇದು ಮಹಾರಾಷ್ಟ್ರದ ಕೊಲ್ಹಾಪುರದ ಜನಪ್ರಿಯ ಭಕ್ಷ್ಯವಾಗಿದೆ ಮತ್ತು ತರಕಾರಿಗಳು ಹಾಗೂ ಮಸಾಲೆಗಳ ರುಚಿಕರ ಮಿಶ್ರಣವನ್ನು ಹೊಂದಿದೆ, ಇದು ಖಂಡಿತವಾಗಿಯೂ ನಿಮ್ಮ ತಾಯಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ: ಮಧುಮೇಹ ಕಾಯಿಲೆ ಬಗ್ಗೆ ನಿಮ್ಮ ನಂಬಿಕೆ ಎಷ್ಟು ಸತ್ಯ?

4. ಕಾಶ್ಮೀರಿ ರಾಜ್ಮಾ

ಕಿಡ್ನಿ ಬೀನ್ಸ್ ಎಂದೂ ಕರೆಯಲ್ಪಡುವ ಈ ರಾಜ್ಮಾ ಉತ್ತರ ಭಾರತದ ಮನೆಗಳಲ್ಲಿ ಜನಪ್ರಿಯ ಭಕ್ಷ್ಯವಾಗಿದೆ. ಇದು ಪ್ರೋಟೀನ್‌ನಿಂದ ತುಂಬಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ, ಈ ಕಾಶ್ಮೀರಿ ರಾಜ್ಮಾ ಪಾಕವಿಧಾನದೊಂದಿಗೆ, ತಾಯಂದಿರ ದಿನದಂದು ಮಧ್ಯಾಹ್ನದ ಊಟಕ್ಕೆ ಆರೋಗ್ಯಕರ ಟ್ವಿಸ್ಟ್ ನೀಡಿರಿ.

5. ಮಲಬಾರ್ ಫಿಶ್ ಬಿರಿಯಾನಿ

ನಿಮ್ಮ ತಾಯಿ ಮೀನನ್ನು ತುಂಬಾನೇ ಇಷ್ಟಪಡುತ್ತಿದ್ದರೆ, ಅವರಿಗಾಗಿ ಫಿಶ್ ಬಿರಿಯಾನಿ ಉತ್ತಮ ಆಯ್ಕೆಯಾಗಿದ್ದು, ಇದು ಕೇರಳದ ಪ್ರಸಿದ್ಧ ಭಕ್ಷ್ಯವಾಗಿದೆ. ಈ ಭಕ್ಷ್ಯದ ಖ್ಯಾತಿ ರಾಜ್ಯದ ಗಡಿಗಳನ್ನು ಮೀರಿ ಹರಡಿದೆ ಎಂದು ಹೇಳಬಹುದು. ಇದನ್ನು ತಯಾರಿಸಲು ಸೀರ್ ಮೀನನ್ನು ಬಳಸಿ. ಮ್ಯಾರಿನೇಟ್ ಮಾಡಿದ ಮೀನು, ಸುವಾಸನೆಯುಕ್ತ ಅಕ್ಕಿ ಮತ್ತು ಆಯ್ದ ಮಸಾಲೆಗಳ ಸಂಯೋಜನೆಗಳಿಂದಾಗಿ ಈ ಭಕ್ಷ್ಯವು ಬಾಯಲ್ಲಿ ನೀರೂರಿಸುವಷ್ಟು ರುಚಿಕರವಾಗಿರುತ್ತದೆ.

6. ಆಟುಕ್ಕರಿ ಕುಜಂಬು (ಕುರಿಮರಿ ಪಲ್ಯ)

ಆಟುಕ್ಕರಿ ಕುಜಂಬು ಅಥವಾ ಕುರಿಮರಿ ಮೇಲೋಗರವು ದಕ್ಷಿಣ ಭಾರತದ ಕ್ಲಾಸಿಕ್ ಖಾದ್ಯವಾಗಿದೆ. ರುಚಿಕರವಾದ ಕುರಿಮರಿ ಪಲ್ಯವನ್ನು ನಿಮ್ಮ ತಾಯಿಗೆ ಬಡಿಸುವಾಗ, ಹುರಿದ ತೆಂಗಿನಕಾಯಿ ತುಂಡುಗಳು, ಒಣ ಕೆಂಪು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪಿನ ಚಿಗುರುಗಳಿಂದ ಅಲಂಕರಿಸಿ ಮತ್ತು ಹಬೆಯಲ್ಲಿ ಬೇಯಿಸಿದ ಅನ್ನದೊಂದಿಗೆ ಸರ್ವ್ ಮಾಡಿ.

ಇದನ್ನೂ ಓದಿ: ತೂಕ ದಿಢೀರ್ ಹೆಚ್ಚುತ್ತಿದೆಯಾ? ಈ ಗಂಭೀರ ರೋಗದ ಲಕ್ಷಣವಿದು, ಪರೀಕ್ಷಿಸಿಕೊಳ್ಳಿ

7. ಬೆಂಗಾಲಿ ಡೋಯ್ ಮಾಚ್ (ಮೊಸರು ಗ್ರೇವಿಯಲ್ಲಿ ಮೀನು)

ಇದು ಪಶ್ಚಿಮ ಬಂಗಾಳದ ಒಂದು ಕ್ಲಾಸಿಕ್ ಭಕ್ಷ್ಯವಾಗಿದ್ದು, ಪ್ರತಿಯೊಬ್ಬ ಬಂಗಾಳಿಯೂ ಇದನ್ನು ತುಂಬಾನೇ ಇಷ್ಟ ಪಡುತ್ತಾರೆ ಎಂದು ಹೇಳಬಹುದು. ಇದು ಮೊಸರು ಆಧಾರಿತ, ದಪ್ಪ ಮೀನಿನ ಮೇಲೋಗರವಾಗಿದ್ದು, ಯಾವುದೇ ವಿಶೇಷ ದಿನದಂದು ನಿಮ್ಮ ಸುಲಭ ಪಾಕವಿಧಾನವಾಗಬಹುದು. ಕೋಮಲ ಮೀನಿನ ತುಂಡುಗಳನ್ನು ವಿವಿಧ ಮಸಾಲೆಗಳು ಮತ್ತು ಮೊಸರಿನಲ್ಲಿ ನೆನೆಸಿಡಲಾಗುತ್ತದೆ, ಮತ್ತು ನಂತರ ಹಬೆಯಲ್ಲಿ ಬೇಯಿಸಿದ ಅನ್ನದೊಂದಿಗೆ ಬಡಿಸಲಾಗುತ್ತದೆ.

8. ಗಟ್ಟೆ ಕಿ ಸಬ್ಜಿ

ಈ ಪಾಕವಿಧಾನವು ರಾಜಸ್ಥಾನದಿಂದ ಬಂದಿದೆ. ಇದು ಒಂದು ಮೇಲೋಗರವಾಗಿದ್ದು, ನೀವು ಮೊದಲು ಕಡಲೆ ಹಿಟ್ಟಿನ ಉಂಡೆಗಳನ್ನು ತಯಾರಿಸಬೇಕು ಮತ್ತು ನಂತರ ಅವುಗಳನ್ನು ಮಸಾಲೆಯುಕ್ತ ಗ್ರೇವಿಯಲ್ಲಿ ಅದ್ದಬೇಕು. ಇದು ಖಂಡಿತವಾಗಿಯೂ ಮನಸ್ಸಿಗೆ ಮುದ ನೀಡುವ ರುಚಿಯನ್ನು ನೀಡುತ್ತದೆ.

9. ಕೊಂಜು ವರುತರಚ್ಚಾ ಕರಿ (ಕೇರಳದ ಸೀಗಡಿ ಪಲ್ಯ)

ಈ ಸಮುದ್ರಾಹಾರದ ಮೇಲೋಗರವನ್ನು ತೆಂಗಿನಕಾಯಿ ಮತ್ತು ಸಾಕಷ್ಟು ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ. ರಸಭರಿತ ಸೀಗಡಿಗಳು ಮೆಣಸಿನಕಾಯಿ, ತೆಂಗಿನಕಾಯಿ, ಹುಣಸೆಹಣ್ಣು ಮತ್ತು ಇತರ ಗಿಡಮೂಲಿಕೆಗಳಿಂದ ಲೇಪಿತವಾಗಿರುತ್ತವೆ. ನೀವು ಈ ಭಕ್ಷ್ಯವನ್ನು ಹಬೆಯಲ್ಲಿ ಬೇಯಿಸಿದ ಅನ್ನ ಅಥವಾ ಚಪಾತಿಯೊಂದಿಗೆ ಸೇವಿಸಬಹುದು.

ಈ ಪಾಕವಿಧಾನಗಳಿಂದ ನಿಮ್ಮ ತಾಯಿಯನ್ನು ಆಶ್ಚರ್ಯಗೊಳಿಸಿ ಮತ್ತು ಅವಳ ಆ ವಿಶೇಷ ದಿನವನ್ನು ಇನ್ನಷ್ಟು ವಿಶೇಷವಾಗಿಸಿರಿ.
Published by:Vasudeva M
First published: