News18 India World Cup 2019

ಫ್ಯಾಷನ್ ಲೋಕಕ್ಕೆ ಎಂಟ್ರಿ ಕೊಟ್ಟ ಅಮಿತಾಭ್ ಬಚ್ಚನ್ ಮೊಮ್ಮಗಳು

news18
Updated:August 20, 2018, 2:11 PM IST
ಫ್ಯಾಷನ್ ಲೋಕಕ್ಕೆ ಎಂಟ್ರಿ ಕೊಟ್ಟ ಅಮಿತಾಭ್ ಬಚ್ಚನ್ ಮೊಮ್ಮಗಳು
news18
Updated: August 20, 2018, 2:11 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ ಫ್ಯಾಷನ್ ಲೋಕದಲ್ಲಿ ಸ್ಟಾರ್ ಕುಡಿಗಳದ್ದೇ ಕಾರುಬಾರು. ಇತ್ತೀಚೆಗಷ್ಟೇ ಶಾರುಖ್ ಖಾನ್ ಮಗಳು ಸುಹಾನ ಖಾನ್ ವೋಗ್ ಇಂಡಿಯಾ ಮ್ಯಾಗಜಿನ್​ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಟಿ ಶ್ರೀದೇವಿ ಮಕ್ಕಳಾದ ಖುಷಿ ಕಪೂರ್ ಮತ್ತು ಜಾಹ್ನವಿ ಕಪೂರ್ ರ‍್ಯಾಪ್ ಮೇಲೆ ಹೆಜ್ಜೆ ಹಾಕಿದ್ದರು. ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಕೂಡ ಬಣ್ಣದ ಉಡುಗೆಯಲ್ಲಿ ಮಿಂಚಿದ್ದರು. ಈ ಎಲ್ಲ ಸುದ್ದಿಗಳು ಹಿಂದೆ ಸರಿಯುತ್ತಿದ್ದಂತೆ ಇದೀಗ ಬಾಲಿವುಡ್ ಲೆಜೆಂಡ್ ಅಮಿತಾಭ್ ಬಚ್ಚನ್ ಅವರ ಮಗಳು ಮತ್ತು ಮೊಮ್ಮಗಳು ಫ್ಯಾಷನ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಣ್ಣದ ಲೋಕದಿಂದ ಸದಾ ದೂರ ಉಳಿದಿದ್ದ ಬಚ್ಚನ್ ಮಗಳು ಶ್ವೇತಾ ನಂದಾ ಅವರು ಮೊನಿಷಾ ಜೈಸಿಂಗ್ ವಿನ್ಯಾಸಗೊಳಿಸಿದ ಉಡುಗೆಗಳಿಗೆ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.
A post shared by Monisha Jaising (@monishajaising) on


Loading...
‘MxS’ಬ್ರಾಂಡ್​ನ ಈ ಉಡುಗೆಗಳ ರಾಯಭಾರಿಗಳಾಗಿ ಬಿಗ್​ ಬಿ ಮಗಳು ಶ್ವೇತಾ ಮತ್ತು ಮೊಮ್ಮಗಳು ನವ್ಯಾ ನಂದಾ ಕಾಣಿಸಿಕೊಂಡಿದ್ದಾರೆ. ಅತ್ಯಾಧುನಿಕ ವಿನ್ಯಾಸಗಳ ಡ್ರೆಸ್​ಗಳನ್ನು ವಿನ್ಯಾಸಗೊಳಿಸಿರುವ ಮೊನಿಷಾ ಜೈಸಿಂಗ್ ಜೊತೆ ಬಚ್ಚನ್ ಫ್ಯಾ,ಮಿಲಿ ಕೈಜೋಡಿಸಿದ್ದಾರೆ. ಬಚ್ಚನ್ ಮೊಮ್ಮಗಳು ಈ ಹಿಂದೆಯೇ ಬಾಲಿವುಡ್​ಗೆ ಪದಾರ್ಪಣೆಗೈಯ್ಯಲಿದ್ದಾರೆ ಎನ್ನಲಾಗಿತ್ತು. ಇದಕ್ಕಾಗಿ ಅತ್ತೆ ಐಶ್ವರ್ಯ ರೈ ಅವರಿಂದ ಅಭಿನಯದ ಟಿಪ್ಸ್​ಗಳನ್ನು ಪಡೆಯುತ್ತಿದ್ದಾರೆ ಎಂಬಿತ್ಯಾದಿಗಳು ಸುದ್ದಿಗಳು ಹರಿದಾಡಿದ್ದವು.
ಶ್ವೇತಾ ಬಚ್ಚನ್ ರಂಗೀನ್ ಲೋಕದಿಂದ ದೂರವಿದ್ದರೂ, ನವ್ಯಾ ತಾತ ಅಮಿತಾಭ್ ಬಚ್ಚನ್​ರೊಂದಿಗೆ ಬಾಲಿವುಡ್​ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೆ ಇತ್ತೀಚೆಗೆ ಜಾಹ್ನವಿ, ಸರಾ ಅಲಿ ಖಾನ್ ಸೇರಿದಂತೆ ಹಲವು ಸ್ಟಾರ್ ಕುಡಿಗಳು ಬಾಲಿವುಡ್​ಗೆ ನಾಯಕ-ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಫ್ಯಾಷನ್ ಲೋಕದಲ್ಲಿ ಅಮ್ಮನೊಂದಿಗೆ ಕಾಣಿಸಿಕೊಳ್ಳುವ ಮೂಲಕ ನವ್ಯಾ ಬಣ್ಣದ ಲೋಕದಲ್ಲಿ ಮೊದಲ ಹೆಜ್ಜೆಯನ್ನಿಟ್ಟಾರೆ. ಇದರಿಂದ ಬಚ್ಚನ್ ಮೊಮ್ಮಗಳು ಬಾಲಿವುಡ್​ ಚಿತ್ರರಂಗಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆಂಬ ಸುದ್ದಿಗೆ ಮರುಜೀವ ಬಂದಂತಾಗಿದೆ.

First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...