Breastfeeding: ಎದೆ ಹಾಲುಣಿಸುವುದರಿಂದ ಸ್ತನಗಳು ಜೋತು ಬೀಳುತ್ತವೆಯೇ?

ಸ್ತನಪಾನ ಮಾಡಿಸಲಿ, ಸ್ತನಪಾನ ಮಾಡದೇ ಇರಲಿ, ಗರ್ಭಾವಸ್ಥೆಯ ನಂತರ ಹೆಚ್ಚಿನ ಮಹಿಳೆಯರಲ್ಲಿ ಸ್ತನ ಜೋತು ಬೀಳುವಿಕೆಯ ಸಮಸ್ಯೆ ಕಂಡು ಬಂದೇ ಬರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಸ್ತನಪಾನ ಮಾಡಿಸಲಿ, ಸ್ತನಪಾನ ಮಾಡದೇ ಇರಲಿ, ಗರ್ಭಾವಸ್ಥೆಯ ನಂತರ ಹೆಚ್ಚಿನ ಮಹಿಳೆಯರಲ್ಲಿ ಸ್ತನ ಜೋತು ಬೀಳುವಿಕೆಯ ಸಮಸ್ಯೆ ಕಂಡು ಬಂದೇ ಬರುತ್ತದೆ. ಪ್ರಸವದ ನಂತರ ಮಹಿಳೆಯರ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಅದರಲ್ಲಿ ಸ್ತನಗಳ ಜೋತು ಬೀಳುವಿಕೆ ಕೂಡ ಒಂದು. ಮಗುವಿಗೆ ಸ್ತನಪಾನ ಮಾಡಿಸುವುದರಿಂದಲೇ ಹೀಗಾಗುತ್ತದೆ ಎಂದು ಬಹಳಷ್ಟು ಮಹಿಳೆಯರ ನಂಬಿಕೆ. ಆದರೆ ಅದು ಒಂದು ತಪ್ಪು ಕಲ್ಪನೆ. 2008ರಲ್ಲಿ ಏಸ್ತೆಟಿಕ್ ಸರ್ಜರಿ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಸ್ತನಗಳು ಜೋತು ಬೀಳುವ ಅಪಾಯ ಹೆಚ್ಚಲು ಸ್ತನಪಾನ ಮಾಡಿಸುವುದು ಕಾರಣವಲ್ಲ.


ಸ್ತನಪಾನ ಮಾಡಿಸಲಿ, ಸ್ತನಪಾನ ಮಾಡದೇ ಇರಲಿ, ಗರ್ಭಾವಸ್ಥೆಯ ನಂತರ ಹೆಚ್ಚಿನ ಮಹಿಳೆಯರಲ್ಲಿ ಸ್ತನ ಜೋತು ಬೀಳುವಿಕೆಯ ಸಮಸ್ಯೆ ಕಂಡು ಬಂದೇ ಬರುತ್ತದೆ. ಸ್ತನಪಾನದ ಪೂರ್ವ ಸಿದ್ಧತೆಗಾಗಿ ಹಾಲು ಉತ್ಪಾದಿಸುವ ಗ್ರಂಥಿಗಳು ಮತ್ತು ಸ್ತನದ ಅಂಗಾಂಶಗಳು ದೊಡ್ಡದಾಗಿ,ಗರ್ಭಾವಸ್ಥೆಯ ಸಮಯದಲ್ಲಿ ಸ್ತನಗಳ ಗಾತ್ರ ವೃದ್ಧಿಸುತ್ತದೆ. ಪ್ರಸವದ ನಂತರ ಮಗು ಎದೆ ಹಾಲು ಕುಡಿಯುವ ಅವಧಿ ಮುಗಿಸಿದ ಬಳಿಕ ಮತ್ತು ಅಮ್ಮಂದಿರು ಗರ್ಭಾವಸ್ಥೆಯ ತೂಕ ಇಳಿಸಲು ಆರಂಭಿಸಿದಾಗ, ಗ್ರಂಥಿಗಳು ಹಾಗೂ ಸ್ತನದ ಅಂಗಾಶಗಳು ಕುಗ್ಗಿ ಸ್ತನಗಳು ಹಿಂದಿನ ಗಾತ್ರಕ್ಕೆ ಮರಳಿ, ಬಾಗಿದಂತೆ ಅಥವಾ ಜೋತು ಬಿದ್ದಂತೆ ಕಾಣುತ್ತವೆ.


ಹಾಗಂತ ಇದೇನು ಬದಲಾಯಿಸಲು ಸಾಧ್ಯವಿಲ್ಲದಂತಹ ಸಂಗತಿ ಅಲ್ಲ. ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಮಹಿಳೆಯರು ಗರ್ಭಾವಸ್ಥೆಗಿಂತ ಮುಂಚಿನ ಸ್ತನಗಳ ಆಕಾರವನ್ನು ಮರಳಿ ಪಡೆಯಬಹುದು.



ಸೂಕ್ತ ಬ್ರಾಗಳನ್ನು ಆಯ್ಕೆ ಮಾಡಿಕೊಳ್ಳಿ:ಅರ್ಧ ಕವರೇಜ್ ಉಳ್ಳ, ಫ್ಯಾನ್ಸಿ ಲೇಸ್ ಬ್ರಾಗಳು ನಿಮ್ಮನ್ನು ಅಂದಗಾಣಿಸಬಹುದು, ಆದರೆ ಎದೆ ಹಾಲುಣಿಸುವ ಹಂತದಲ್ಲಿ, ಸ್ತನಗಳಿಗೆ ಯಾವುದೇ ನೋವು ಅಥವಾ ಗಾಯ ಆಗದಂತೆ ಸೂಕ್ತ ಬೆಂಬಲ ಮತ್ತು ರಕ್ಷಣೆ ನೀಡುವ ಬ್ರಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಆವಶ್ಯಕ. ಹಾಗಾಗಿ ಎದೆ ಹಾಲುಣಿಸುವ ಹಂತದಲ್ಲಿ ಸೂಕ್ತ ಬ್ರಾಗಳನ್ನು ಆಯ್ಕೆ ಮಾಡಿಕೊಂಡರೆ ಮುಂದೆ ಸ್ತನಗಳು ಜೋತು ಬೀಳುವುದನ್ನು ತಡೆಯಬಹುದು.



ತೂಕ ಇಳಿಸಲು ಅವಸರ ಬೇಡ:ಈಗಿನ ಸೆಲೆಬ್ರಿಟಿಗಳನ್ನು ನೋಡಿ, ಹೆಚ್ಚಿನವರು ಪ್ರಸವದ ನಂತರ ಕೂಡಲೇ ತೂಕ ಇಳಿಸಲು ಪ್ರಯತ್ನಿಸುವುದು ಒಂದು ಟ್ರೆಂಡ್ ಆಗಿದೆ. ಅದರೆ ಮತ್ತೆ ಹಳೆಯ ಆಕಾರಕ್ಕೆ ಮರಳಲು ಅವಸರ ಮಾಡುವುದು ತುಂಬಾ ಅಪಾಯಕಾರಿ. ಗಾತ್ರದ ಬದಲಾವಣೆಗಳಿಗೆ ಹೊಂದಿಕೊಳ್ಳಲು ದೇಹಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ದಿಢೀರ್ ತೂಕ ಇಳಿಸುವಿಕೆಯಿಂದ ಸ್ತನಗಳು ಅತಿಯಾಗಿ ಕುಗ್ಗುತ್ತವೆ ಮಾತ್ರವಲ್ಲ, ದೇಹದ ಇತರ ಭಾಗಗಳು ಕೂಡ ಕುಗ್ಗಬಹುದು.


ಇದನ್ನು ಓದಿ: ಆಗಸ್ಟ್ ತಿಂಗಳಲ್ಲಿ ಎಷ್ಟಿದೆ ವಿಶೇಷತೆಗಳು? ಇಲ್ಲಿದೆ ಪಟ್ಟಿ


ಧೂಮಪಾನ ಮಾಡದಿರಿ:ತಂಬಾಕು ಸಾಮಾನ್ಯವಾಗಿ ಚರ್ಮದ ದುರಸ್ತಿ ಮತ್ತು ಸುಧಾರಣೆಗೊಳ್ಳುವ ಸಾಮರ್ಥ್ಯವನ್ನು ತಡೆಯುತ್ತದೆ.ಏಕೆಂದರೆ ಧೂಮಪಾನ ಕೊಲಾಜಿನ್ ಮತ್ತು ಎಲಾಸ್ಟಿನ್‍ನ ವಿಭಜನೆಗೆ ಕಾರಣವಾಗುತ್ತದೆ. ನೀವು ಗರ್ಭಾವಸ್ಥೆಯ ತೂಕ ಕಳೆದುಕೊಂಡು ಹಿಂದಿನ ಆಕಾರಕ್ಕೆ ಬರಲು ಪ್ರಯತ್ನಿಸಿದಾಗ, ಚರ್ಮದಲ್ಲಿ ಸ್ಥಿತಿಸ್ಥಾಪಕತ್ವ ಇಲ್ಲದಿದ್ದರೆ ಅದು ಜೋತು ಬಿದ್ದಂತೆ ಕಾಣುತ್ತದೆ.ಹಾಗಾಗಿ ಧೂಮಪಾನವನ್ನು ಬಿಡುವುದು ಬಹಳ ಅವಶ್ಯಕ.



ನಿತ್ಯ ವ್ಯಾಯಾಮ ಮಾಡಿ:ನಿಮ್ಮ ಸ್ತನಗಳ ಆಕಾರ ಮತ್ತು ಗಾತ್ರವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳು ಸಹಾಯ ಮಾಡುವ ಅನೇಕ ಯೋಗಾಸನಗಳು ಮತ್ತು ವ್ಯಾಯಾಮಗಳಿವೆ. ಹಾಗಾಗಿ ಉತ್ತಮ ಆಕಾರ ಮತ್ತು ಗಾತ್ರದ ಸ್ತನಗಳನ್ನು ಹೊಂದಲು ನಿತ್ಯವೂ ವ್ಯಾಯಾಮ ಮಾಡುವುದು ಅಗತ್ಯ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವ ಅಭ್ಯಾಸ ಕೂಡ ಸ್ತನಗಳ ಜೋತು ಬೀಳುವಿಕೆಯನ್ನು ತಡೆಯುತ್ತದೆ.



ಮಾಯಿಶ್ಚರೈಸರ್ ಮತ್ತು ಎಕ್ಸ್‍ಫಾಲಿಯೇಟ್:ನಿತ್ಯ ಎಕ್ಸ್‍ಫಾಲಿಯೇಶನ್ ಮಾಡುವ ಮೂಲಕ ನಿರ್ಜೀವ ಕೋಶಗಳನ್ನು ತೆಗೆಯುವುದು ಮತ್ತು ಮಾಯಿಶ್ಚರೈಸ್ ಮಾಡುವ ಮೂಲಕ ಸ್ತನಗಳನ್ನು ಮೃದು ಹಾಗೂ ತೇವಾಂಶಭರಿತವಾಗಿ ಇಡುವುದು ಅಗತ್ಯ. ಸ್ತನಗಳ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಕೊಂಚ ಸ್ವಯಂ ಆರೈಕೆ ನಿಮ್ಮ ಸ್ತನಗಳನ್ನು ಒಳ್ಳೆಯ ಆಕಾರದಲ್ಲಿ ಇಡುವುದು ಮಾತ್ರವಲ್ಲ, ಚರ್ಮವನ್ನು ಮೃದು ಮತ್ತು ಸುಂದರವಾಗಿಸುತ್ತದೆ.


First published: