Health Tips: ಕೀಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

Joint Pain: ಕೀಲು ನೋವು ಸಹಜ, ಆದರೆ ಅದರ ನೋವನ್ನು ಅನುಭವಿಸುವ ಅಥವಾ ಸುಮ್ಮನೆ ಮಾತ್ರೆಗಳನ್ನು ತಿನ್ನುವ ಬದಲು,, ಮನೆಯಲ್ಲಿಯೇ ಕೆಲ ಪ್ರಯತ್ನಗಳನ್ನು ಮಾಡಿ ನೋಡುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನುಷ್ಯನಿಗೆ ಆರೋಗ್ಯ ಸಮಸ್ಯೆಗಳು ಒಂದೆರೆಡಲ್ಲ. ಜ್ವರ, ಮೈ ಕೈ ನೋವು, ಮಧುಮೇಹ ಹೀಗೆ. ಅದರಲ್ಲೂ ಕೀಲು ನೋವಿನ ಸಮಸ್ಯೆ ಕಾಣಿಸಿಕೊಂಡರೆ ಮಾತ್ರ ಬಹಳ ನೋವನ್ನು ಅನುಭವಿಸಬೇಕಾಗುತ್ತದೆ. ಕೀಲು ನೋವು ಜನರಲ್ಲಿ, ವಿಶೇಷವಾಗಿ ವಯಸ್ಸಾದವರಲ್ಲಿ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ವಯಸ್ಸಾದಂತೆ, ನಮ್ಮ ಮೂಳೆ ದುರ್ಬಲಗೊಳ್ಳಲು ಆರಂಭವಾಗುತ್ತದೆ ಮತ್ತು ನಾವು ತೀವ್ರವಾದ ಕೀಲು ನೋವನ್ನು ಅನುಭವಿಸುತ್ತೇವೆ. ಯಾವಾಗ ನೋವು ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲವೋ, ಆಗ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಆದರೆ ಆರಂಭದಲ್ಲಿ, ನೀವು ಮಂಡಿ ನೋವನ್ನು ಕಡಿಮೆ ಮಾಡಲು ಈ ಮನೆಯಲ್ಲಿಯೇ ಇವುಗಳನ್ನು ಪ್ರಯತ್ನಿಸಬಹುದು.

ವ್ಯಾಯಾಮ

ಕೀಲು ನೋವಿನ ಸಾಮಾನ್ಯ ಕಾರಣಗಳಲ್ಲಿ ಒಂದಾದ ಆಸ್ಟಿಯೊಪೊರೋಸಿಸ್ ಬೆಳವಣಿಗೆಯನ್ನು ವ್ಯಾಯಾಮ ಮಾಡುವುದರಿಂದ ಕಡಿಮೆ ಮಾಡಬಹುದು. ಹಾಗಾಗಿ ಪ್ರತಿದಿನ ವ್ಯಾಯಾಮ ಮಾಡಿ. ವಾಕಿಂಗ್, ಈಜು, ಸೈಕ್ಲಿಂಗ್, ಯೋಗ ಇತ್ಯಾದಿ ಎಲ್ಲವನ್ನೂ ಪ್ರಯತ್ನ ಮಾಡಿ. ಕೀಲು ನೋವುಗಳು ಕಡಿಮೆ ಪ್ರಮಾಣದಲ್ಲಿದ್ದಾಗ ವ್ಯಾಯಾಮದ ಮೂಲಕ ಕಡಿಮೆ ಮಾಡಿಕೊಳ್ಳಬಹುದು.

ತೂಕ ಕಡಿಮೆ ಮಾಡಿಕೊಳ್ಳಿ
ನಿಮ್ಮ ದೇಹದ ತೂಕ ಹೆಚ್ಚಿದ್ದಲ್ಲಿ ಮೊಣಕಾಲು ನೋವು ಉಂಟಾಗುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ನೋವನ್ನು ಕಡಿಮೆ ಮಾಡಿಕೊಳ್ಳಲಿರುವ ಒಳ್ಳೆಯ ಮಾರ್ಗ. ಹಾಗಾಗಿ ತೂಕ ಇಳಿಸುವ ವ್ಯಾಯಾಮಗಳನ್ನು ಮಾಡಿ.

ಇದನ್ನೂ ಓದಿ:ನಿಮ್ಮ ಒತ್ತಡ ನಿವಾರಣೆಗೆ ಆಯುರ್ವೇದದಲ್ಲಿದೆ ಉಪಾಯ

ಪೋಷಕಾಂಶಯುಕ್ತ ಆಹಾರ ಸೇವಿಸಿ
ಕೀಲು ನೋವಿಗೆ ಮತ್ತೊಂದು ಪರಿಹಾರ ಎಂದರೆ ಪೋಷಕಾಂಶಯುಕ್ತ ಆಹಾರ ಸೇವನೆ. ನಿಮ್ಮ ಆಹಾರದಲ್ಲಿ ಯಾವಾಗಲೂ ಫೈಬರ್, ವಿಟಮಿನ್ ಡಿ, ಕ್ಯಾಲ್ಸಿಯಂ ಇತ್ಯಾದಿಗಳನ್ನು ಹೊಂದಿರುವುದು ಒಳ್ಳೆಯದು. ಆಹಾರದಲ್ಲಿರುವ ಪೋಷಕಾಂಶಗಳು ಕೀಲು ನೋವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಫಿಜಿಯೋ ಥೆರಪಿ
ಕೀಲು ನೋವು ಹೆಚ್ಚಾದಲ್ಲಿ ಫಿಜಿಯೋ ಥೆರಪಿ ಮಾಡಿಸಿಕೊಳ್ಳುವುದು ಒಳ್ಳೆಯ ಆಯ್ಕೆ. ಈ ಚಿಕಿತ್ಸಾ ವಿಧಾನ ನಿಮ್ಮ ಕೀಲು ನೋವನ್ನು ಕಡಿಮೆ ಮಾಡುತ್ತದೆ.

ಎಣ್ಣೆಯ ಮಸಾಜ್
ನಿಮ್ಮ ಕೀಲು ನೋವು ಹೆಚ್ಚಾದಲ್ಲಿ ಬಿಸಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಉತ್ತಮ ಆಯ್ಕೆ. ಅದು ನಿಮ್ಮ ಕೀಲು ನೋವಿಗೆ ಪರಿಹಾರ ನೀಡುತ್ತದೆ.

ವಿಶ್ರಾಂತಿ ಮತ್ತು ಹೆಚ್ಚಿನ ಕಾಳಜಿ ಮಾಡಿ
ನಿಮ್ಮ ಮೊಣಕಾಲುಗಳಲ್ಲಿ ಹೆಚ್ಚಿನ ನೋವಾದಾಗ ವಿಶ್ರಾಂತಿಯ ಅಗತ್ಯವಿರುತ್ತದೆ. ಅದಷ್ಟು ನಿಮ್ಮ ಆರೋಗ್ಯ ಕಾಳಜಿವಹಿಸಿ. ಮೊಣಕಾಲಿಗೆ ಶ್ರಮ ನೀಡುವ ಕೆಲಸಗಳನ್ನು ಮಾಡಬೇಡಿ. ನೀವು ಹೊರಗಡೆ ಹೋಗುವಾಗ ಮೊಣಕಾಲಿನ ಕ್ಯಾಪ್ ಧರಿಸಿ ಹೋಗುವುದು ಒಳ್ಳೆಯದು. ನಿಮಗೆ ನೋವು ಕಾಣಿಸಿಕೊಂಡಾಗ ಐಸ್ ಕ್ಯೂಬ್ಗಳನ್ನು ಮೊಣಕಾಲಿನ ಮೇಲೆ ಉಜ್ಜಿ ಆಗ ತಂಪಾದ ಅನುಭವವಾಗುವುದಲ್ಲದೇ, ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ:ಈ ಆಹಾರಗಳಲ್ಲಿದೆ ನಿಮ್ಮ ರೋಗ ನಿರೋಧಕ ಶಕ್ತಿಯ ಗುಟ್ಟು

ಶಾಖ ನೀಡಿ
ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಶಾಖ ನೀಡುವುದು ಕೂಡ ಉತ್ತಮ ಪರಿಹಾರ. ಇದು ಪರಿಣಾಮಕಾರಿ ಕೂಡ. ನಿಮ್ಮ ಕೀಲುಗಳಲ್ಲಿ ಹೆಚ್ಚಿನ ನೋವು ಕಾಣಿಸಿಕೊಂಡಾಗ ಆ ಜಾಗದಲ್ಲಿ ಶಾಖವನ್ನು ನೀಡಿ. ಅದು ನೋವನ್ನು ಶಮನಗೊಳಿಸುತ್ತದೆ. ಅಲ್ಲದೇ ಕೀಲುಗಳಲ್ಲಿ ಊತವಾಗಿದ್ದರೂ ಸಹ ಅದನ್ನು ನಿವಾರಿಸುತ್ತದೆ.

ಅಕ್ಯುಪಂಕ್ಚರ್

ಫಿಸಿಯೋ ಥೆರಪಿ ಮತ್ತು ಅರೋಮಾಥೆರಪಿ ಜೊತೆಗೆ, ಮೊಣಕಾಲು ಅಥವಾ ಕೀಲು ನೋವನ್ನು ಕಡಿಮೆ ಮಾಡಲು ಅಕ್ಯುಪಂಕ್ಚರ್ ಮತ್ತೊಂದು ಅತ್ಯಂತ ಪರಿಣಾಮಕಾರಿ ಮಾರ್ಗ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: