Astrology :ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಬೇಕಾ..? ಹಾಗಿದ್ರೆ ಈ ದಿನ ಹುಟ್ಟಿದ ಹುಡುಗಿಯರನ್ನ ಮದುವೆಯಾಗಿ

Powerfull date of Birth :ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಹುಡುಗಿಯರು 3, 12, 21 ಅಥವಾ 30ರಂದು ಜನಿಸಿರುತ್ತಾರೋ ಅಂತವರು ಮದುವೆಯಾದ ಬಳಿಕ ತಮ್ಮ ಗಂಡನಿಗೆ ಅದೃಷ್ಟ ತರುವ ಲಕ್ಷ್ಮಿಯರಾಗಿರುತ್ತಾರಂತೆ.ಇನ್ನು ಈ ದಿನಾಂಕಗಳಂದು ಹುಟ್ಟಿದ ಯುವತಿಯರ ಮದುವೆಗೆ ಮುಂಚೆ ಪ್ರೇಮಗಳಿದ್ದರೆ ಅವರೊಂದಿಗೆ ಕೆಲವು ವಿಷಯಕ್ಕೆ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆಯಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭೂಮಿ(Earth) ಮೇಲೆ ಪ್ರತಿದಿನ ಲಕ್ಷಾಂತರ ಮಂದಿ ಹುಟ್ಟುತ್ತಾರೆ ಈ ಹುಟ್ಟು(Birth)) ಎಂಬುದು ಖಚಿತ ನಮಗೆ ತಿಳಿದ ಹಾಗೆ ನಾವೇನು ಈ ಭೂಮಿ ಮೇಲೆ ಶಾಶ್ವತವೂ ಅಲ್ಲ ಕೂಡ. ಆದರೆ ನಾವು ಹುಟ್ಟಿದಂತಹ ಸಮಯ ನಮ್ಮ ಭವಿಷ್ಯದ ಕುರಿತು ನಿರ್ಧರಿಸುತ್ತದೆ . ಆದ್ರೆ ಜ್ಯೋತಿಷ್ಯ ಶಾಸ್ತ್ರ( Astrology) ಎಂದರೆ ಎಷ್ಟೋ ಜನರು ಕೇವಲವಾಗಿ ಕಾಣುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರವು ಗಣಿತ ವನ್ನು(Mathematics) ಆಧರಿಸಿರುತ್ತದೆ ಹಾಗೂ ಸುಮಾರು ಹದಿನಾರು ವರುಷಗಳ(16 years) ಕಾಲ ಜ್ಯೋತಿಷ್ಯ ಕಲಿತವರು ಜ್ಯೋತಿಷ್ಯದಲ್ಲಿ ಪಂಡಿತರು ಎಂದು ಕರೆಸಿಕೊಳ್ಳುತ್ತಾರೆ..ಹೀಗಾಗಿ ಇದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅದೃಷ್ಟವೆಂಬುದು(Luck( ಕೆಲವರಿಗೆ ಹುಟ್ಟಿನಿಂದಲೇ ಬಂದರೆ ಇನ್ನು ಕೆಲವರಿಗೆ ತಮ್ಮ ಬೆಳೆಯುವ ಹಂತದಲ್ಲಿ ಬರುತ್ತದೆ. ಇನ್ನು ಕೆಲವರು ತಮ್ಮ ಬದುಕಿನಲ್ಲಿ ಭೇಟಿ ಆಗುವ ಅವರಿಂದ ಅದೃಷ್ಟ(Luck) ಪಡೆದುಕೊಳ್ಳುತ್ತಾರೆ.. ಯಾರು ಹುಟ್ಟಿನಿಂದ ಕೇವಲ ದುರಾದೃಷ್ಟವನ್ನು(unluck) ಅನುಭವಿಸಿರುತ್ತಾರೆ ಅಂತವರು ಮದುವೆಯಾದಮೇಲೆ(Marriage) ಅವರ ಹೆಂಡತಿಯರಿಂದ(wife) ಅದೃಷ್ಟ ಎಂಬುದನ್ನ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪಡೆದುಕೊಳ್ಳುತ್ತಾರೆ.

    ಹೌದು ಹುಡುಗಿಯರ ಹುಟ್ಟಿದ ದಿನಾಂಕ ಆದರಿಸಿ ಮದುವೆಯಾದವರಿಗೆ ಅದೃಷ್ಟ ಎಂಬುದು ವಿವಾಹ ಬಂಧನಕ್ಕೆ ಒಳಗಾದ ಬಳಿಕ ಬರುತ್ತದೆ ಎಂದು ಎಂದು ಸಂಖ್ಯಾಶಾಸ್ತ್ರ (Numerology) ಹೇಳುತ್ತದೆ.

    3, 12, 21 ಅಥವಾ 30ರಂದು ಜನಿಸಿದ ಹುಡುಗಿಯರು ಅದೃಷ್ಟವಂತೆಯರು

    ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಹುಡುಗಿಯರು 3, 12, 21 ಅಥವಾ 30ರಂದು ಜನಿಸಿರುತ್ತಾರೋ ಅಂತವರು ಮದುವೆಯಾದ ಬಳಿಕ ತಮ್ಮ ಗಂಡನಿಗೆ ಅದೃಷ್ಟ ತರುವ ಲಕ್ಷ್ಮಿಯರಾಗಿರುತ್ತಾರಂತೆ. ದಿನಾಂಕದಂದು ಹುಟ್ಟಿದವರ ಪತಿಯಾದವರು ತಮ್ಮ ಹೆಸರಿನಲ್ಲಿ ವ್ಯವಹಾರ ಮಾಡಿದರೆ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ಹೆಣ್ಣುಮಕ್ಕಳು ತಮ್ಮ ಗಂಡಂದಿರನ್ನು ತುಂಬಾ ಇಷ್ಟ ಪಡುತ್ತಾರೆ. ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಸಹ ಹೇಳಲಾಗಿದೆ.

    ಇದನ್ನೂ ಓದಿ :ಚಳಿಗಾಲ ಎಂದರೆ ಈ ರಾಶಿಯವರಿಗೆ ಬಲು ಪ್ರೀತಿ; ಕಾರಣ ಇದು!

    ಪತಿಯ ಯಶಸ್ಸಿನ ಹಿಂದೆ ಸದಾ ಬೆಂಬಲ ನೀಡುತ್ತಾರೆ

    ಮದುವೆಯಾದ ಬಳಿಕ ಯಾವುದೇ ಕೆಲಸಗಳನ್ನು ಮಾಡಲು ಇಚ್ಛಿಸಿದರೆ ಅದಕ್ಕೆ ಈ ದಿನಾಂಕದಂದು ಹುಟ್ಟಿದ ಹುಡುಗಿಯರು ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಅಲ್ಲದೆ ಪತಿಯ ಪ್ರತಿ ಯಶಸ್ಸಿಗೂ ಇವರ ಸಂಪೂರ್ಣವಾದ ಬೆಂಬಲ ಇದ್ದೇ ಇರುತ್ತದೆ. ಹೀಗಾಗಿ ಈ ದಿನಾಂಕದಂದು ಜನಿಸಿದ ಯುವತಿಯರನ್ನು ವಿವಾಹವಾದರೆ, ನಂತರ ಪತಿಯಾದವನ ವೃತ್ತಿ ಜೀವನ ಸೇರಿದಂತೆ ಇತರ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸಿನ ಬಾಗಿಲಿ ತೆರೆದುಕೊಳ್ಳಲಿದೆ ಎಂದು ಸಂಖ್ಯಾಶಾಸ್ತ್ರವು ಹೇಳಿದೆ.

    ಅದೃಷ್ಟವಂತೆಯರು ಮಾತ್ರವಲ್ಲ ಹೃದಯವಂತರು ಕೂಡ

    3, 12, 21 ಅಥವಾ 30ರಂದು ಜನಿಸಿದ ಹುಡುಗಿಯರು ಅದೃಷ್ಟವಂತೆಯರು ಮಾತ್ರವಲ್ಲ ಹೃದಯವಂತರು ಕೂಡ ಆಗಿರುತ್ತಾರಂತೆ.. ದಯಾಗುಣವನ್ನು ಹೊಂದಿರುವ ಇವರು, ಕಷ್ಟ ಎಂದು ಬಂದರೆ ಮಿಡಿಯುವ ಸ್ವಭಾವದವರು. ಹಿಂದು ಮುಂದು ಯೋಚಿಸದೇ ಸಹಾಯವನ್ನು ಮಾಡುವ ವ್ಯಕ್ತಿಗಳಾಗಿದ್ದಾರೆ. ಇದರ ಜೊತೆಗೆ ಕಠಿಣ ಪರಿಶ್ರಮಿಗಳಾಗಿದ್ದು ಮಾಡುವ ಕೆಲಸವನ್ನು ಆಸಕ್ತಿ ) ಹಾಗೂ ಶ್ರದ್ಧೆಯಿಂದ ಮಾಡುತ್ತಾರೆ. ಅಲ್ಪಾವಧಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ.

    ಇದನ್ನೂ ಓದಿ :ದೇಹದ ಮೇಲೆ ಹಲ್ಲಿ ಬಿದ್ದರೆ ಶುಭನಾ? ಅಶುಭನಾ? ಇಲ್ಲಿದೆ ಮಾಹಿತಿ

    ಯಶಸ್ವಿ ವೈವಾಹಿಕ ಜೀವನ

    ಇನ್ನು ಈ ದಿನಾಂಕಗಳಂದು ಹುಟ್ಟಿದ ಯುವತಿಯರ ಮದುವೆಗೆ ಮುಂಚೆ ಪ್ರೇಮಗಳಿದ್ದರೆ ಅವರೊಂದಿಗೆ ಕೆಲವು ವಿಷಯಕ್ಕೆ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆಯಿದೆ.. ಆದರೆ ಒಮ್ಮೆ ವಿವಾಹ ಬಂಧನಕ್ಕೆ ಒಳಪಟ್ಟರೆ ಅವರ ವೈವಾಹಿಕ ಜೀವನವು
    ಸಂತೋಷದಾಯಕವಾಗಿರಲಿದೆ. ಈ ದಿನಾಂಕದಲ್ಲಿ ಜನಿಸಿದವರು ತಮ್ಮ ಪತಿಯನ್ನು ಸದಾ ಖುಷಿಯಲ್ಲಿ ಇಟ್ಟಿರುತ್ತಾರೆ. ಅವರು ಸಂತೋಷವಾಗಿರಬೇಕೆಂಬ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. .
    Published by:ranjumbkgowda1 ranjumbkgowda1
    First published: