Tea Lover: ಟೀ ಪ್ರಿಯರ ನೀವು? ಹಾಗಾದ್ರೆ ವಿಶ್ವದ ದುಬಾರಿ ಚಹಾದ ಬೆಲೆ ಎಷ್ಟು ಗೊತ್ತಾ!

ಟೀಯ ಸುವಾಸನೆ, ರುಚಿ, ಸ್ವಾದದ ಮುಂದೆ ಯಾವ ಅನುಭವವೂ ದಕ್ಕದು. ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಟೀ ಪ್ರಿಯರಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

 ಟೀ ಭಾರತದ ಮಂದಿಗೆ ಇದು ಕೇವಲ ಪಾನೀಯವಲ್ಲ. ಅದೊಂದು ಉತ್ಸಾಹ. ಭರವಸೆ. ಒಂದು ಸಿಪ್ ಟೀಗೆ ಸಂಪೂರ್ಣ ಒತ್ತಡವನ್ನು ಶಮನ ಮಾಡುವಷ್ಟು ಶಕ್ತಿ ಇರುತ್ತದೆ. ಭಾರತಕ್ಕೂ, ಟೀಗೂ ಅಷ್ಟೊಂದು ಅವಿನಾಭಾವ ಸಂಬಂಧ. ಟೀಯ ಸುವಾಸನೆ, ರುಚಿ, ಸ್ವಾದದ ಮುಂದೆ ಯಾವ ಅನುಭವವೂ ದಕ್ಕದು. ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಟೀ ಪ್ರಿಯರಿದ್ದಾರೆ. ಪ್ರದೇಶವಾರು ರುಚಿಗೆ ಅನುಗುಣವಾಗಿ ಟೀ ದುಬಾರಿಯಾಗಿರುತ್ತದೆ. ಪ್ರಪಂಚದಾದ್ಯಂತ 7 ದುಬಾರಿ ಚಹಾಗಳು ಸಿಗುತ್ತದೆ. ಟೀ ಪ್ರಿಯರು ಅದನ್ನು ಕುಡಿದು ಆನಂದಿಸಬಹುದು.


ಡಾ. ಹಾಂಗ್ ಪಾವೊ, ಚೀನಾ
ಇದು ಒಂದು ರೀತಿಯ ಊಲಾಂಗ್ ಚಹಾ. ವಿಶ್ವದ ಅತ್ಯಂತ ದುಬಾರಿ ಚಹಾಗಳಲ್ಲಿ ಇದು ಒಂದು. ಊಲಾಂಗ್ ಚಹಾ ಮೂಲತಃ ಚೀನಾದ ಸಾಂಪ್ರದಾಯಿಕ ಚಹಾ. ವರದಿಗಳ ಪ್ರಕಾರ, ಈ ಜನಪ್ರಿಯ ಚಹಾದ ಹೆಸರು “ಬಿಗ್ ರೆಡ್ ರೋಬ್”. ಇದು ಚಕ್ರವರ್ತಿಯೊಬ್ಬನ ಕತೆಯ ಸಂಕೇತವಾಗಿದೆ. ಚಹಾ ಎಲೆಗಳು ಆಗ್ನೇಯ ಪ್ರಾಂತ್ಯದ ಫುಜಿಯಾನ್‍ನ ವುಯಿ ಪರ್ವತಗಳಲ್ಲಿ ಸಿಗುತ್ತದೆ. ಅವು ಅತ್ಯಂತ ವಿರಳ ಕೂಡ ಹೌದು. ಆದ್ದರಿಂದ, ದುಬಾರಿ ಬೆಲೆ. ಚಹಾದ ಬಗ್ಗೆ ಮಾತನಾಡುತ್ತಾ, ಚಹಾ ತಯಾರಕರೊಬ್ಬರು ಬಿಬಿಸಿಗೆ, "ಇದು ಒಬ್ಬ ಭಿಕ್ಷುಕನಿಗೂ ನಿಲುಕುತ್ತದೆ ಎಂದೆನಿಸುತ್ತದೆ, ಆದರೆ ಇದು ಚಕ್ರವರ್ತಿಯ ರೀತಿ ದುಬಾರಿ ಬೆಲೆ ಮತ್ತು ಬುದ್ಧನ ಹೃದಯದಷ್ಟು ಸ್ವಾದ ಹೊಂದಿದೆ" ಎಂದು ಹೇಳಿದರು. ಇದರ ಬೆಲೆ ಅಂದಾಜು 2,90,813 ರೂ. ಮತ್ತು ಒಂದು ಮಡಕೆಗೆ ಸುಮಾರು 7,30,569 ರೂ. ಇದೆ.


ಜ್ಯೋಕುರೊ, ಜಪಾನ್
ಈ ಅಪರೂಪದ ಚಹಾವು ಜಪಾನಿನ ಯೇಮ್ ಮತ್ತು ಉಜಿ ಪ್ರದೇಶಗಳಲ್ಲಿ ಸಿಗುತ್ತದೆ ಮತ್ತು ಜ್ಯೋಕುರೊ ಜಪಾನಿ ಭಾಷೆಯಲ್ಲಿ “ಜೇಡ್ ಡ್ಯೂ” ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ಹಸಿರು ಚಹಾವಾಗಿದ್ದು, ಅದನ್ನು ನೆರಳಿನಲ್ಲಿ ಬೆಳೆಸಲಾಗುತ್ತದೆ ಮತ್ತು ಕೊಯ್ಲು ಪ್ರಕ್ರಿಯೆ ಪ್ರಾರಂಭವಾಗುವ ಕೆಲವು ವಾರಗಳ ಮೊದಲು ಸೂರ್ಯನ ಬೆಳಕಿನಿಂದ ದೂರವಿರಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಈ ಪ್ರಕ್ರಿಯೆ ಎಲೆಗಳಲ್ಲಿ ಅಮೈನೊ ಆಮ್ಲಗಳನ್ನು ನಿರ್ಮಿಸಿ ಅದಕ್ಕೆ ಸಿಹಿ ಪರಿಮಳವನ್ನು ನೀಡುತ್ತದೆ. ಇದರ ಅಂದಾಜು ಬೆಲೆ 10,78,321 ರೂ.


ಮನೋಹರಿ ಗೋಲ್ಡ್ ಟೀ, ಅಸ್ಸಾಂ
ಭಾರತದಲ್ಲೂ ವಿಶ್ವದ ಅತ್ಯಂತ ದುಬಾರಿ ಚಹಾ ಸಿಗಲಿದೆ. ಹೌದು, ಮನೋಹರಿ ಗೋಲ್ಡ್ ಟೀ ಅಸ್ಸಾಂನ ದಿಬ್ರುಗಡ್ ಜಿಲ್ಲೆಯಲ್ಲಿ ಮಾರಾಟವಾಗುವ ಅತ್ಯಂತ ಅಪರೂಪದ ಟೀ. ಔಷಧೀಯ ಗುಣಗಳಿಂದ ಹೆಚ್ಚು ಸಮೃದ್ಧವಾಗಿರುವ ಈ ಚಹಾದ ಮೊಗ್ಗುಗಳನ್ನು ಬೆಳಗ್ಗೆ ತರಿದುಹಾಕುವುದರಿಂದ ಅವುಗಳ ಗುಣಮಟ್ಟ ಮತ್ತು ಸುವಾಸನೆಯಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ವರದಿಗಳ ಪ್ರಕಾರ, 2018ರಲ್ಲಿ, ಮನೋಹರಿ ಗೋಲ್ಡ್ ಭಾರತದ ಅತ್ಯಂತ ದುಬಾರಿ ಚಹಾ ಎಂದೆನಿಸಿಕೊಂಡಿತು. 2018 ರಲ್ಲಿ ಚಹಾವನ್ನು ಪ್ರತಿ ಕೆಜಿಗೆ 39,001 ರೂಗಳಿಗೆ, 2019 ರಲ್ಲಿ ಕೆಜಿಗೆ 50,000 ರೂಗಳಿಗೆ ಮತ್ತು 2020 ರಲ್ಲಿ ಕೆಜಿಗೆ 75,000 ರೂಗಳಿಗೆ ಮಾರಾಟ ಮಾಡಲಾಗಿತ್ತು.


ಪಾಂಡಾ ಲದ್ದಿ ಟೀ, ಚೀನಾ
ಈ ಚಹಾ ಮರದ ಎಲೆಗಳ ಬೆಳವಣಿಗೆಗೆ ಪಾಂಡಾದ ಲದ್ದಿಯನ್ನು ರಸಗೊಬ್ಬರವಾಗಿ ಬಳಸಲಾಗುತ್ತದೆ. ಮೂಲತಃ ಈ ಚಹಾವನ್ನು ನೈರುತ್ಯ ಚೀನಾದ ಉದ್ಯಮಿ ಯಾನ್ಶಿ ಅವರು ಸಿಚುವಾನ್ ಪರ್ವತದ ಯಾನ್ ಪ್ರದೇಶದಲ್ಲಿ ಬೆಳೆಯುತ್ತಾರೆ. ಇದು ನೋಡಲು ಗ್ರೀನ್ ಟೀ ರೀತಿಯಲ್ಲಿ ಕಂಡರೂ, ಇದರಲ್ಲಿನ ಬಿದಿರಿನ ಅಂಶ ಕ್ಯಾನ್ಸರ್ ಅನ್ನು ತಡೆಯುತ್ತದೆ. ಪಾಂಡಾದ ಲದ್ದಿಯನ್ನು ಗೊಬ್ಬರ ರೀತಿಯಲ್ಲಿ ಬಳಸಿದ್ದಲ್ಲಿ ಗ್ರೀನ್ ಟೀಯಂತೆಯೇ ಕ್ಯಾನ್ಸರ್ ವಿರೋಧಿ ಅಂಶಗಳನ್ನು ಹೆಚ್ಚಿಸುತ್ತದೆ.'


ಇದನ್ನು ಓದಿ: ಸ್ನೇಹಿತರಿಗೆ ಹಣ ಸಹಾಯ ಮಾಡುವ ಮುನ್ನ ಈ ಟಿಪ್ಸ್ ನೆನಪಿನಲ್ಲಿರಲಿ!

ಸಿಲ್ವರ್ ಟಿಪ್ಸ್ ಇಂಪೀರಿಯಲ್ ಟೀ, ಡಾರ್ಜೀಲಿಂಗ್
ಡಾರ್ಜೀಲಿಂಗ್‍ನ ಸಿಲ್ವರ್ ಟಿಪ್ಸ್ ಇಂಪೀರಿಯಲ್ ಅನ್ನು ಭಾರತದಲ್ಲಿ ಪ್ರತಿವರ್ಷ ಸೀಮಿತ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಇದು ಒಂದು ರೀತಿಯ ಊಲಾಂಗ್ ಚಹಾ. ಈ ಚಹಾವು ಸ್ವಲ್ಪಮಟ್ಟಿಗೆ ಬೆಳ್ಳಿಯ ಬಣ್ಣದ್ದಾಗಿದೆ. ಇದು ವಿಶಿಷ್ಟವಾದ ಸುವಾಸನೆ, ವಿನ್ಯಾಸ, ಮಿಶ್ರಣವನ್ನು ಹೊಂದಿದೆ. ಹುಣ್ಣಿಮೆಯ ಹಗಲು ರಾತ್ರಿಗಳಲ್ಲಿ ಮಾತ್ರ ಎಲೆಗಳನ್ನು ಕತ್ತರಿಸಲಾಗುತ್ತದೆ. ವರದಿಗಳ ಪ್ರಕಾರ, ಸಾಮಾನ್ಯವಾಗಿ ಪ್ರತಿ ಕಿಲೋಗ್ರಾಂಗೆ 30,000 ರೂ.. 2014 ರಲ್ಲಿ, ಇದು ಭಾರತದ ಅತ್ಯಂತ ದುಬಾರಿ ಚಹಾವಾಯಿತು ಮತ್ತು ಹರಾಜಿನ ವೇಳೆ ಪ್ರತಿ ಕಿಲೋಗ್ರಾಂಗೆ 1,35,000 ರೂ.ಗೆ ಮಾರಾಟವಾಯಿತು.


ಟೈಗುವಾನಿನ್ ಟೀ, ಚೀನಾ
ಚೀನಾದ ಕರುಣೆಯ ದೇವತೆ ಗುವಾನಿನ್ ಅವರ ಹೆಸರನ್ನು ಈ ಚಹಾಗೆ ಇಡಲಾಗಿದೆ ಮತ್ತು ಈ ವೈವಿಧ್ಯಮಯ ಆರೊಮ್ಯಾಟಿಕ್ ಊಲಾಂಗ್ ಚಹಾವು ಚೀನಾದ ಫುಜಿಯಾನ್ ಪ್ರಾಂತ್ಯದ ಆನ್ಸಿ ಕೌಂಟಿಯಲ್ಲಿ ಬೇರುಗಳನ್ನು ಹೊಂದಿದೆ. ಎಲೆಗಳು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುತ್ತವೆ, ಅವು ಆಕ್ಸಿಡೀಕರಣಗೊಂಡ ಬಳಿಕ ತಯಾರಿಕೆ ಮತ್ತು ಸಂಸ್ಕರಣೆಯನ್ನು ಅವಲಂಬಿಸಿ, ಎಲೆಗಳು ಹಸಿರು ಚಹಾ ಅಥವಾ ಕಪ್ಪು ಚಹಾ ರೂಪ ಪಡೆಯಬಹುದು. ಅದರ ವಿಶೇಷತೆಯ ಕಾರಣ ಎಲೆಗಳು ದುಬಾರಿಯಾಗಿದೆ. ಅಲ್ಲದೆ, ಪರಿಮಳವನ್ನು ಕಳೆದುಕೊಳ್ಳುವ ಮೊದಲು ಅವುಗಳನ್ನು ಏಳು ಬಾರಿ ಬಳಸಬಹುದು. ಇದರ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 30,968 ರೂ.


ಹಳದಿ ಚಿನ್ನದ ಮೊಗ್ಗುಗಳ ಟೀ, ಸಿಂಗಾಪುರ
ವಿಶ್ವದ ಅತ್ಯಂತ ದುಬಾರಿ ಚಹಾಗಳಲ್ಲಿ ಒಂದಾಗಿದೆ. ಈ ಚಹಾ ಸಿಂಗಾಪುರದಲ್ಲಿ ಮಾತ್ರ ಕಂಡುಬರುತ್ತದೆ. ಇದರ ಎಲೆಗಳು ಹಳದಿ ಬಣ್ಣದ್ದಾಗಿದ್ದು, ಅವು ಚಿನ್ನದ ಲೇಪಿತವಾಗಿದೆ ಮತ್ತು ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಹಳದಿ ಮೊಗ್ಗುಗಳನ್ನು ವರ್ಷದಲ್ಲಿ ಕೇವಲ ಒಂದು ದಿನದಲ್ಲಿ ತರಲಾಗುತ್ತದೆ. ಚಿನ್ನದ ಕಾರಣ, ಇದರ ಬೆಲೆ ಸರಿಸುಮಾರು ಒಂದು ಕಿಲೋಗ್ರಾಂಗೆ 7,72,943 ರೂ.First published: