Acupressure Points For Health: ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಈ ಪ್ರೆಶರ್ ಪಾಯಿಂಟ್​ಗಳಲ್ಲಿದೆ ಪರಿಹಾರ

Pressure Points: ಚೀನೀ ಔಷಧದ ಒಂದು ವಿಭಾಗವಾದ ರಿಫ್ಲೆಕ್ಸಾಲಜಿಯ ವೈದ್ಯರು, ಒಂದು ನಿರ್ದಿಷ್ಟ ರೀತಿಯಲ್ಲಿ ಒತ್ತಡದ ಬಿಂದುಗಳನ್ನು ಸ್ಪರ್ಶಿಸುವುದರಿಂದ ನಿಮಗೆ ಹಲವಾರು ಲಾಭಗಳಾಗಲಿದೆ ಎನ್ನುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಗಳು (Health Problems) ಜನರನ್ನು ಕಾಡುತ್ತದೆ. ಅದು ತಲೆನೋವಿರಬಹುದು (Headache), ಹೊಟ್ಟೆ ನೋವಿರಬಹುದು ಹೀಗೆ ವಿವಿಧ ತೊಂದರೆಗಳು ಸಾಮಾನ್ಯ. ಕೆಲವೊಮ್ಮೆ ಎಲ್ಲಾ ಸಮಸ್ಯೆಗೆ ವೈದ್ಯರ (Doctors)  ಅವಶ್ಯಕತೆ ಇರುವುದಿಲ್ಲ. ನಮ್ಮ ಸಣ್ಣ ಪ್ರಯತ್ನದಿಂದ ಅದಕ್ಕೆ ಪರಿಹಾರ ಸಿಗುತ್ತದೆ. ಅದರಲ್ಲಿ ಮುಖ್ಯವಾಗಿ ಪ್ರೆಶರ್​ ಪಾಯಿಂಟ್​ಗಳು (Pressure Points). ಹೌದು, ಈ ಪ್ರೆಶರ್ ಪಾಯಿಂಟ್​ಗಳು ನಿಮಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತದೆ. ಹೇಗೆ ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ಇಲ್ಲಿದೆ.

ಒಂದೊಂದು ಸಮಸ್ಯೆಗೆ ಇಲ್ಲಿದೆ ಪರಿಹಾರ

ಚೀನೀ ಔಷಧದ ಒಂದು ವಿಭಾಗವಾದ ರಿಫ್ಲೆಕ್ಸಾಲಜಿಯ ವೈದ್ಯರು, ಒಂದು ನಿರ್ದಿಷ್ಟ ರೀತಿಯಲ್ಲಿ ಒತ್ತಡದ ಬಿಂದುಗಳನ್ನು ಸ್ಪರ್ಶಿಸುವುದರಿಂದ ನಿಮಗೆ ಹಲವಾರು ಲಾಭಗಳಾಗಲಿದೆ ಎನ್ನುತ್ತಾರೆ. ಇದರಿಂದ ನಿಮ್ಮ ಆರೋಗ್ಯ ಸುಧಾರಣೆಯಾಗುತ್ತದೆ. ಅಲ್ಲದೇ ದೇಹದ ಅನೇಕ ನೋವುಗಳಿಗೆ ಇದು ಪರಿಹಾರ ನೀಡುತ್ತದೆ. ದೇಹದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ರಿಫ್ಲೆಕ್ಸಾಲಜಿ ಎನ್ನುವುದು ಮಾನವ ದೇಹದ ಒಂದು ಭಾಗವು ಇನ್ನೊಂದು ಭಾಗಕ್ಕೆ ಹೇಗೆ ಸಂಪರ್ಕ ಹೊಂದಿದೆ. ಇದರರ್ಥ ನಿಮ್ಮ ತಲೆಯಂತಹ ವಿಭಿನ್ನ ಪ್ರದೇಶಕ್ಕೆ ಚಿಕಿತ್ಸೆ ನೀಡಲು ನೀವು ನಿಮ್ಮ ಕೈಯಂತಹ ಬೇರೆ ಸ್ಥಳವನ್ನು ಮಸಾಜ್ ಮಾಡಬೇಕಾಗಬಹುದು. ಹಾಗೆಯೇ ಹಲವಾರು ಪ್ರೆಶರ್ ಪಾಯಿಂಟ್​ಗಳು ನಮ್ಮ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂಬುದು ಇಲ್ಲಿದೆ.

ನಿಮ್ಮ ಮಣಿಕಟ್ಟಿನ ಭಾಗದಲ್ಲಿ ಒಂದು ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಪ್ರೆಶರ್​ ಪಾಯಿಂಟ್​ ಅನ್ನು ಒತ್ತುವುದರಿಂದ ನಿಮಗೆ ಆರೋಗ್ಯ ಲಾಭಗಳಿದೆ. ಈ ಪ್ರೆಶರ್ ಪಾಯಿಂಟ್​ ನಿಮ್ಮ ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ. ಅಲ್ಲದೇ, ಹೊಟ್ಟೆ ಉಬ್ಬುವಿಕೆ ಉಂಟಾಗಿದ್ದರೆ ಈ ಸಮಯದಲ್ಲಿ ಇದನ್ನು ಒತ್ತುವುದರಿಂದ ಸಮಸ್ಯೆ ಇರುವುದಿಲ್ಲ.



ಒತ್ತಡದ ಜೀವನಶೈಲಿ ಇತ್ತೀಚಿನ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲಿ ಮುಖ್ಯವಾಗಿ ನಿದ್ರೆಯ ಸಮಸ್ಯೆ. ಈ ಸಂದರ್ಭದಲ್ಲಿ ಎಡಗೈನ ಕಿರು ಬೆರಳಿನ ಕೆಳಗೆ ಇರುವ ಪ್ರೆಶರ್ ಪಾಯಿಂಟ್​ ಸಹಾಯ ಮಾಡುತ್ತದೆ. ನೀವು ಆ ಪಾಯಿಂಟ್​ ಅನ್ನು ವೃತ್ತಾಕಾರದಲ್ಲಿ ಒತ್ತಿ ಮಸಾಜ್ ಮಾಡುವುದರಿಂದ ನಿದ್ರೆಯ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ರಿಲ್ಯಾಕ್ಸ್ ಭಾವ ಮೂಡುತ್ತದೆ.

ಇದನ್ನೂ ಓದಿ: ಭಾರತದ ಟಾಪ್ 10 ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಗಳಿವು; ತಪ್ಪದೇ ತಿಳಿದಿರಬೇಕಾದ ಮಾಹಿತಿ

ಶೀತಕ್ಕೆ ಇಲ್ಲಿದೆ ಪ್ರೆಶರ್ ಪಾಯಿಂಟ್​

ಸದ್ಯ ಮಳೆಗಾಲ ಆರಂಭವಾಗಿದೆ. ಶೀತ, ಜ್ವರ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ ಯಾವಾಗಲೂ ಕೋಲ್ಡ್ ಆಗಿರುತ್ತದೆ. ನಿಮಗೂ ಈ ರೀತಿ ಆಗಿದ್ದರೆ, ಎಡಗೈನ ಮಣಿ ಕಟ್ಟಿನ ಹಿಂಭಾಗದಲ್ಲಿ ಅಂದರೆ ತೋರು ಬೆರಳಿನ ಕೆಳಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುವುದು ನಿಮಗೆ ಶೀತ ಹಾಗೂ ಜ್ವರ ಸಮಸ್ಯೆಗೆ ಪರಿಹಾರ ನೀಡುತ್ತದೆ.  ಹಾಗೆಯೇ ನೀವು ಎಡಗೈನ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಇರುವ ಪ್ರೆಶರ್ ಪಾಯಿಂಟ್​ ಅನ್ನು ವೃತ್ತಾಕಾರದಲ್ಲಿ 2 ನಿಮಿಷಗಳ ಕಾಲ ಒತ್ತುವುದರಿಂದ ಮಲಬದ್ಧತೆ, ಲೂಸ್ ​ಮೋಷನ್ ಇದ್ದರೆ ಸಮಸ್ಯೆ ಮಾಯವಾಗುತ್ತದೆ.

ಇನ್ನು ನಿಮ್ಮ ಎಡಗಾಲಿನ ಮೇಲೆ ಒಂದು ಪ್ರೆಶರ್ ಪಾಯಿಂಟ್​ ಇದ್ದು, ಅದನ್ನು ಪ್ರೆಸ್​ ಮಾಡುವುದರಿಂದ ಕಿಡ್ನಿ ಮತ್ತು ಲಿವರ್ ಸಮಸ್ಯೆಗಳು ಬರದಂತೆ ತಡೆಯುತ್ತದೆ ಹಾಗೂ ಈ ಸಮಸ್ಯೆಗಳು ಇದ್ದಲ್ಲಿ ಅದರ ಉಪಶಮನಕ್ಕೆ ಸಹಾಯ ಮಾಡುತ್ತದೆ. ಹಾಗೆಯೇ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದನ್ನು ಸುಮಾರು 3 ನಿಮಿಷಗಳ ಕಾಲ ಮಾಡುವುದು ಪ್ರಯೋಜನಕಾರಿ.

ಇದನ್ನೂ ಓದಿ: ಈ ಸಮಸ್ಯೆಗಳನ್ನು ಕಡೆಗಣಿಸಿದ್ರೆ ಮಾರಕ, ಒಸಡು​ ಕ್ಯಾನ್ಸರ್​ನ ಆರಂಭಿಕ ಲಕ್ಷಣವಿದು

ಹೆಣ್ಣು ಮಕ್ಕಳಿಗೆ ದೊಡ್ಡ ಸಮಸ್ಯೆ ಎಂದರೆ ಪಿರಿಯಡ್ಸ್​ ಸಮಯದಲ್ಲಿ ಬರುವ ನೋವು. ಇದಕ್ಕೆ ಪರಿಹಾರ ಎಂದರೆ ಎಡಗಾಲಿನ ಮಧ್ಯ ಭಾಗದಲ್ಲಿ ಒಂದು ಪ್ರೆಶರ್ ಪಾಯಿಂಟ್​ ಇದ್ದು ಅದನ್ನು 3 ನಿಮಿಷಗಳ ಕಾಲ ಒತ್ತುವುದರಿಂದ ಈ ಹೊಟ್ಟೆ ನೋವಿಗೆ ಮುಕ್ತಿ ನೀಡುತ್ತದೆ.  ಕುತ್ತಿಗೆಯ ಮಧ್ಯ ಭಾಗದಲ್ಲಿ ಒಂದು ಪ್ರೆಶರ್ ಪಾಯಿಂಟ್ ಇದ್ದು, ಅದನ್ನು ಒತ್ತುವುದರಿಂದ ಕಫ ಸಮಸ್ಯೆ ಬರುವುದಿಲ್ಲ, ಹಾಗೂ ಇದ್ದರೂ ಸಹ ಅದು ಹೋಗುತ್ತದೆ. ಹಾಗೆಯೇ ಮೂಗಿನ ಸಮಸ್ಯೆಗಳಿಗೆ ಎರಡು ಬದಿಯಲ್ಲಿ ಒಂದೊಂದು ಪಾಯಿಂಟ್​ಗಳಿದ್ದು ಅದು ನಿಮಗೆ ಸಹಾಯ ಮಾಡುತ್ತದೆ.
Published by:Sandhya M
First published: