• Home
  • »
  • News
  • »
  • lifestyle
  • »
  • Haunted Places In Karnataka: ಶ್‌, ಕರ್ನಾಟಕದಲ್ಲಿದೆ ನಿಮ್ಮನ್ನು ಬೆಚ್ಚಿ ಬೀಳಿಸೋ ಸ್ಥಳಗಳು! ಅಲ್ಲಿಗೆ ಹೋಗ್ಬೇಕು ಅಂದ್ರೆ ಗುಂಡಿಗೆ ಗಟ್ಟಿ ಇರ್ಬೇಕು!

Haunted Places In Karnataka: ಶ್‌, ಕರ್ನಾಟಕದಲ್ಲಿದೆ ನಿಮ್ಮನ್ನು ಬೆಚ್ಚಿ ಬೀಳಿಸೋ ಸ್ಥಳಗಳು! ಅಲ್ಲಿಗೆ ಹೋಗ್ಬೇಕು ಅಂದ್ರೆ ಗುಂಡಿಗೆ ಗಟ್ಟಿ ಇರ್ಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Haunted Places in Karnataka: ಅದರಲ್ಲೂ ನೀವು ನಿಮ್ಮ ಕಸಿನ್​ ಗ್ಯಾಂಗ್​ ಒತೆ ಇದ್ದಾಗ ನಿಜವೂ ಸುಳ್ಳೊ ಕೆಲವೊಂದು ಭಯಾನಕ ಕಥೆಗಳನ್ನು ಕೇಳಿರುತ್ತೀರಿ. ಕೆಲ ಸ್ಥಳಗಳ ಬಗ್ಗೆ ನೀವು ಸೋಷಿಯಲ್ ಮೀಡಿಯಾದಲ್ಲಿ ಸಹ ಕೇಳಿರುತ್ತೀರಿ. ಆ ರೀತಿಯ ಕೆಲ ಸ್ಥಳಗಳ ಲಿಸ್ಟ್ ಇಲ್ಲಿದ್ದು, ಕರ್ನಾಟಕದಲ್ಲಿನ ಈ ಸ್ಥಳಗಳು ನಿಜಕ್ಕೂ ಭಯ ಹುಟ್ಟಿಸುತ್ತವೆ.

ಮುಂದೆ ಓದಿ ...
  • Share this:

ಕರ್ನಾಟಕದಲ್ಲಿ (Karnataka) ಭೇಟಿ ನೀಡಲು ಸುಂದರವಾಗಿರುವ, ಮೋಜಿನಿಂದ ಕೂಡಿರುವ ಅನೇಕ ಸ್ಥಳಗಳಿದ್ದರೂ (Place) ಸಹ ನೀವು ಸಾಹಸ ಪ್ರಿಯರಾಗಿದ್ದರೆ, ಭಯ ಹುಟ್ಟಿಸುವ ಹಲವಾರು ಸ್ಥಳಗಳಿವೆ. ನೀವು ಇಷ್ಟಪಡುವ ಹಾಗೂ ಹುಡುಕಿ ಹೋಗಲು ಬಯಸುವ ಕೆಲವು ಸ್ಪೂಕಿ ಸ್ಥಳಗಳು ಸಹ ಇವೆ. ನೀವು ಜೀವನದಲ್ಲಿ ನಂಬಿದರೆ, ನೀವು ಸಾವನ್ನು ನಂಬಬೇಕು, ನೀವು ದೇವರನ್ನು (God) ನಂಬಿದರೆ, ನೀವು ಸೈತಾನನನ್ನು ನಂಬಬೇಕು ಮತ್ತು ನೀವು ದೇವರನ್ನು ನಂಬಿದರೆ, ನೀವು ಸತ್ತವರನ್ನು ನಂಬಬೇಕು. ಹಾಗೆಯೇ, ನೀವು ಸತ್ತವರನ್ನು ನಂಬಿದರೆ, ನಿಜವಾದ ಪ್ರೇತ ಕಥೆಗಳನ್ನು ಹೊಂದಿರುವ ಕೆಲ ಸ್ಥಳಗಳನ್ನು ಸಹ ನಂಬಬೇಕು ಜೊತೆಗೆ ಅಲ್ಲಿಗೆ ವಿಸಿಟ್​ ಮಾಡಲೇಬೇಕು.  ಕೆಲವು ಭಯಾನಕ ಸ್ಥಳಗಳ (Haunted Places) ಬಗ್ಗೆ ಪ್ರತಿಯೊಬ್ಬರೂ ನಿಜ ಜೀವನದ ಕಥೆ ಕೇಳಿರುತ್ತಾರೆ.


ಅದರಲ್ಲೂ ನೀವು ನಿಮ್ಮ ಕಸಿನ್​ ಗ್ಯಾಂಗ್​ ಒತೆ ಇದ್ದಾಗ ನಿಜವೂ ಸುಳ್ಳೊ ಕೆಲವೊಂದು ಭಯಾನಕ ಕಥೆಗಳನ್ನು ಕೇಳಿರುತ್ತೀರಿ. ಕೆಲ ಸ್ಥಳಗಳ ಬಗ್ಗೆ ನೀವು ಸೋಷಿಯಲ್ ಮೀಡಿಯಾದಲ್ಲಿ ಸಹ ಕೇಳಿರುತ್ತೀರಿ. ಆ ರೀತಿಯ ಕೆಲ ಸ್ಥಳಗಳ ಲಿಸ್ಟ್ ಇಲ್ಲಿದ್ದು, ಕರ್ನಾಟಕದಲ್ಲಿನ ಈ ಸ್ಥಳಗಳು ನಿಜಕ್ಕೂ ಭಯ ಹುಟ್ಟಿಸುತ್ತವೆ.


 ಮೂರೂರು ರಸ್ತೆ, ಕುಮಟಾ


ಕುಮಟಾದ ಮೂರೂರು ರಸ್ತೆ ಕರ್ನಾಟಕದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಬಿಳಿ ಕೂದಲಿನ ಮಾಟಗಾತಿ ದೆವ್ವದ ಅನುಭವನ್ನು ಮೂರೂರು ರಸ್ತೆಯಲ್ಲಿ ಅನೇಕರು ಅನುಭವಿಸಿದ್ದಾರೆ. ದಂತಕಥೆಯ ಪ್ರಕಾರ, ಅವಳನ್ನು ನೋಡುವ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಅವರನ್ನು ಹಲವು ದಿನಗಳವರೆಗೆ ಇದು ಕಾಡುತ್ತದೆ. ಜನರು ಸಾಮಾನ್ಯವಾಗಿ ರಾತ್ರಿಯಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವುದನ್ನು ತಪ್ಪಿಸುತ್ತಾರೆ. ಬಿಳಿ ಕೂದಲಿನ ಮಾಟಗಾತಿಯು ರಸ್ತೆಯಲ್ಲಿ ಕಾಡುತ್ತಾಳೆ ಎಂದು ಜನ ಹೇಳುತ್ತಾರೆ. ಇದು ರಾತ್ರಿಯಲ್ಲಿ ಅಪಘಾತಗಳಿಗೆ ಕಾರಣವಾಗಿರುವ ಹಲವು ಘಟನೆಗಳಿವೆ.


ದೆವ್ವದ ಮನೆ, ಉಡುಪಿ


ಉಡುಪಿಯ ಈ ದೆವ್ವದ ಮನೆಗೆ ಒಂದು ಕತೆ ಇದೆ. ಹಲವು ವರ್ಷಗಳ ಹಿಂದೆ ತನ್ನ  ಊರಿನಲ್ಲಿ ಉತ್ತಮ ಹೆಸರು ಮತ್ತು ಸ್ಥಾನವನ್ನು ಹೊಂದಿದ್ದ ವ್ಯಕ್ತಿಯೊಬ್ಬರು ತಮ್ಮ ಮಗ ಅಪರಾಧ ಕ್ಷೇತ್ರಕ್ಕೆ ಬಂದಿರುವುದನ್ನು ಕಂಡು ಆತ್ಮಹತ್ಯೆ ಮಾಡಿಕೊಂಡಿದ್ದರಂತೆ. ಅವರು ತುಂಬಾ ನೋವಿನಿಂದ ಬಳಲುತ್ತಿದ್ದರು, ಅವರ ಸಾವಿನ ನಂತರವೂ ಪರ್ಕಳದ ಮಂಜುನಾಥನಗರದಲ್ಲಿರುವ ಈ ಮನೆಯ ಸುತ್ತ ಅವರ ಆತ್ಮ ಈಗಲೂ ಅಲೆದಾಡುತ್ತಿದೆ ಎಂದು ಜನ ಹೇಳುತ್ತಾರೆ. ಹಾಗಾಗಿ ಆ ಭಯದ ಕಾರಣ ಮನೆ ಈಗ ನಿರ್ಜನವಾಗಿದ್ದು, ಹಾಟೆಂಡ್​ ಪ್ರಿಯರ ನೆಚ್ಚಿನ ಸ್ಥಳವಾಗಿದೆ.


ಇದನ್ನೂ ಓದಿ: ಗ್ಲಾಸ್ ಗ್ಯಾಸ್​ ಸ್ಟೌವ್​ ಕ್ಲೀನಿಂಗ್​ ವೇಳೆ ಈ ಟಿಪ್ಸ್​ ಬಳಸಿ, ಹಾಳಾಗೋದೇ ಇಲ್ಲ


ಬಲ್ಲಾಳ್ಬಾಗ್, ಮಂಗಳೂರು


2007 ರಲ್ಲಿ ಬಲ್ಲಾಲ್‌ಬಾಗ್‌ನ ಶ್ರೀ ದೇವಿ ಕಾಲೇಜಿನ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ, ಜನರು ನವಜಾತ ಶಿಶುಗಳು ಮತ್ತು ಮಹಿಳೆ ಅಳುವ  ಶಬ್ಧ ಕೇಳಿದ್ದರಂತೆ. ಅಲ್ಲದೇ, ಸಹಾಯಕ್ಕಾಗಿ ಕೂಗುವ ಶಬ್ದಗಳನ್ನು ಕೇಳಿದ್ದರು ಎನ್ನಲಾಗುತ್ತದೆ. ಆಘಾತಕಾರಿ ಅಂಶವೆಂದರೆ ಜನರು ಸಹಾಯ ಮಾಡಲು ಹೋದಾಗ ಕಟ್ಟಡದ ಒಳಗೆ ಯಾರೂ ಇರುವುದಿಲ್ಲವಂತೆ. ಈ ರೀತಿ ಹಲವು ದಿನಗಳ ಕಾಲ ನಡೆದ ಕಾರಣ ಈ ಸ್ಥಳವನ್ನು ದೆವ್ವದ ಸ್ಥಳ ಎನ್ನಲಾಗುತ್ತದೆ.
ಹಾಂಟೆಡ್ ಫ್ಲಾಟ್, ಹುಬ್ಬಳ್ಳಿ


ಈ ಫ್ಲಾಟ್​  ಕಥೆ ನಿಜಕ್ಕೂ ಭಯನಾಕವಾಗಿದೆ. 2012 ರ ಮಧ್ಯದಲ್ಲಿ ದಂಪತಿಗಳು ಈ ಫ್ಲಾಟ್‌ಗೆ ಬಂದಿದ್ದರಂತೆ. ಆದರೆ, ಕೆಲ ಸಮಯದ ನಂತರ ಮನೆಯೊಳಗಿನ ವಿಚಿತ್ರ ಸಂಗತಿಗಳು ಆಗುತ್ತಿದ್ದವಂತೆ. ಇದನ್ನು ಹೆಂಡತಿ ಗಮನಿಸುತ್ತಿದ್ದರಂತೆ. ಇದ್ದಕ್ಕಿದ್ದಂತೆ ಲೈಟ್​ ಆನ್ ಮತ್ತು ಆಫ್ ಆಗುತ್ತಿದ್ದವಂತೆ. ನಂತರ, ಭಯದಿಂದ ಅವರು ಮನೆ ಖಾಲಿ ಮಾಡಿದರಂತೆ. ನಂತರ, ಗಮನಿಸಿದರೆ, ದೇಹದಲ್ಲಿ ಹಲವು ಗಾಯವಾಗಿದ್ದವು. ಇದು ಯಾವುದೋ ಶಕ್ತಿಯ ಕೈವಾಡ ಎನ್ನುತ್ತಾರೆ.


ಇದನ್ನೂ ಓದಿ: ಚಳಿಗಾಲದಲ್ಲಿ ರೋಸ್​ ವಾಟರ್​ ಬಳಸಿದ್ರೆ ಒಂದೆರೆಡಲ್ಲ ಹಲವು ಪ್ರಯೋಜನ ಸಿಗುತ್ತೆ


ಕಲ್ಪಲ್ಲಿ ಸ್ಮಶಾನ - ಬೆಂಗಳೂರು


ಕಲ್ಪಲ್ಲಿ ಸ್ಮಶಾನವು ಬೆಂಗಳೂರಿನ ಹಳೆಯ ಮದ್ರಾಸ್ ರಸ್ತೆಯಲ್ಲಿದೆ. ಇದನ್ನು ಸೇಂಟ್ ಜಾನ್ಸ್ ಸ್ಮಶಾನ ಎಂದೂ ಕರೆಯುತ್ತಾರೆ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ಈ ಸ್ಮಶಾನದಲ್ಲಿ ಅನುಭವವಾಗಿದ ಎಂದು ಮೂಲಗಳು ತಿಳಿಸಿವೆ. ಸ್ಮಶಾನದಲ್ಲಿ ಸಾಮಾನ್ಯವಾಗಿ ಮಾನವನ ಆಕೃತಿಯೊಂದು ಓಡಾಡುತ್ತಿರುವುದು ಕಾಣುತ್ತದೆ ಎಂದು ಅವರು ಹೇಳುತ್ತಾರೆ.

Published by:Sandhya M
First published: