ವಿಶ್ವದ ಟಾಪ್ 10 ಮಹಿಳಾ ಗ್ಯಾಂಗ್​ಸ್ಟರ್​ಗಳ ಪಟ್ಟಿಯಲ್ಲಿ 'ಸಮಂತಾ'!

news18
Updated:July 22, 2018, 5:35 PM IST
ವಿಶ್ವದ ಟಾಪ್ 10 ಮಹಿಳಾ ಗ್ಯಾಂಗ್​ಸ್ಟರ್​ಗಳ ಪಟ್ಟಿಯಲ್ಲಿ 'ಸಮಂತಾ'!
news18
Updated: July 22, 2018, 5:35 PM IST
-ನ್ಯೂಸ್ 18 ಕನ್ನಡ

ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅನೇಕ ಸೆಲೆಬ್ರಿಟಿಗಳ ಬಗ್ಗೆ ನಿಮಗೆ ಗೊತ್ತಿರುತ್ತದೆ. ಹಾಗೆಯೇ ಕುಖ್ಯಾತಿ ಪಡೆದಿರುವ ಮೋಸ್ಟ್​​ವಾಟೆಂಡ್​ ಕ್ರಿಮಿನಲ್​ಗಳ ಬಗ್ಗೆ ಕೂಡ ತಿಳಿದು ಕೊಂಡಿರುತ್ತೇವೆ. ಆದರೆ ವಿಶ್ವದ ಪಾತಕ ಲೋಕದಲ್ಲಿ ಕುಖ್ಯಾತಿಗಳಿಸಿರುವ ಮಹಿಳೆಯರು ಯಾರೆಂಬುದು ಗೊತ್ತಿದೆಯೇ? ಇಂತಹ ಕುಪ್ರಸಿದ್ಧ ಟಾಪ್​ 10 ಮಹಿಳಾ ಗ್ಯಾಂಗ್​ಸ್ಟರ್​ಗಳ ಪಟ್ಟಿ ಇಲ್ಲಿವೆ.

via: www.nypost.com


10- ಅನ್ನಾ ಗ್ರಿಸ್ಟಿನಾ : ಮೂಲತಃ ಸ್ಕಾಟಿಷ್ ಮಹಿಳೆಯಾದ ಅನ್ನಾ ಗ್ರಿಸ್ಟಿನಾ 'ಮಿಲಿಯನೇರ್ ಮೇಡಮ್' ಮತ್ತು 'ಸಾಕರ್ ಮಾಮ್ ಮೇಡಮ್' ಎಂಬ ಹೆಸರಿನಿಂದ ವಿಶ್ವದಲ್ಲಿ ಕುಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಯಾವುದೇ ಕೊಲೆ-ಹಿಂಸೆಯಲ್ಲಿ ಭಾಗಿಯಾಗದಿದ್ದರೂ ಗ್ರಿಸ್ಟಿನಾ ಅವರನ್ನು ವಿಶ್ವದ ಡೇಂಜರಸ್​ ಮಹಿಳೆಯರಲ್ಲಿ ಗುರುತಿಸಲಾಗುತ್ತದೆ. ವೇಶ್ಯಾವಾಟಿಕೆಯಿಂದ ಪ್ರಪಂಚದ ಖ್ಯಾತನಾಮರನ್ನು ಬಲೆಗೆ ಹಾಕಿಕೊಂಡಿದ್ದ ಅನ್ನಾ ಗ್ರಿಸ್ಟಿನಾ ಅವರನ್ನು ರಹಸ್ಯ ಮಾಹಿತಿಗಳ ಒಡೆತಿ ಎನ್ನಲಾಗುತ್ತದೆ.

ತನ್ನ ಕಾಮಲೋಕದಲ್ಲಿ ವಿಶ್ವ ಪ್ರಸಿದ್ಧರನ್ನು ಬೀಳಿಸಿ, ಬ್ಲಾಕ್​ಮೇಲ್ ಮೂಲಕ ಅನ್ನಾ ಮಿಲಿಯನ್ ಗಟ್ಟಲೆ ಹಣವನ್ನು ಪಡೆಯುತ್ತಿದ್ದರು. ಇದರಿಂದಾಗಿ ಗ್ರಿಸ್ಟೀನಾ ಅವರನ್ನು ಮಿಲಿಯನೇರ್ ಮೇಡಮ್​ ಎಂಬ ಹೆಸರು ಸಿಕ್ಕಿದೆ. 2012 ರಲ್ಲಿ ಅಮೆರಿಕದ ನಗರವೊಂದರಲ್ಲಿ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದಾಗ ಬಂಧಿಸಲಾಯಿತು. ಇವರಲ್ಲಿರುವ 'ಬ್ಲಾಕ್​ಬುಕ್'​ನಲ್ಲಿ ಖ್ಯಾತನಾಮರ ತೆರೆಮರೆಯ ಆಟಗಳನ್ನು ನಮೂದಿಸಲಾಗಿದ್ದು, ಆದರೆ ಯಾವುದೇ ಹೆಸರು ಬಹಿರಂಗ ಪಡಿಸುವುದಿಲ್ಲವೆಂದು ತನ್ನ ಗ್ರಾಹಕರಿಗೆ ಭರವಸೆ ನೀಡಿದ್ದರು. ಸದ್ಯ ಜೈಲಿನಿಂದ ಹೊರ ಬಂದಿರುವ ಅನ್ನಾ ಡೇಟಿಂಗ್ ವೆಬ್​ಸೈಟ್​ನ್ನು ನಡೆಸುತ್ತಿದ್ದಾರೆ. ಅಲ್ಲದೆ ಜೀವನದ ಅಸಲಿ ಕಹಾನಿ ತಿಳಿಸುವ ಚಿತ್ರವೊಂದನ್ನು ನಿರ್ಮಿಸುವ ಇರಾದೆ ಕೂಡ ಅನ್ನಾ ಗ್ರಿಸ್ಟಿನಾ ಅವರಿಗಿದೆ.

via: www.listverse.com


9- ಚಾರ್ಮೈನ್​ ರೋಮನ್ : 2013 ರಲ್ಲಿ ಜಮೈಕಾ ಪೊಲೀಸರು ಮೊದಲ ಬಾರಿ ಬಂಧಿಸಿದ್ದರು. ಚಾರ್ಮೈನ್​ ರೋಮನ್ ಅವರನ್ನು ಮಾದಕ ವಸ್ತುಗಳ ದಲ್ಲಾಳಿ ಎಂದು ಮೊದಲ ಬಾರಿಗೆ ಗುರುತಿಸಲಾಗಿತ್ತು. ಆದರೆ ಹೆಚ್ಚಿನ ತನಿಖೆಯಿಂದ ಜಮೈಕಾದ ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಜಾಲವನ್ನು ನಿಯಂತ್ರಿಸುತ್ತಿರುವುದು ಚಾರ್ಮೈನ್​ ರೋಮನ್ ಎಂಬುದು ತಿಳಿಯಿತು. ಸಾವಿರಾರು ಪೌಂಡ್​ ಬೆಲೆಬಾಳುವ ಗಾಂಜಾವನ್ನು ಸಾಗಿಸುವ ವೇಳೆ ಸಿಕ್ಕಿ ಬಿದ್ದ ಚಾರ್ಮೈನ್​ ರೋಮನ್ ಅವರ ತಂಡ ಜಮೈಕಾ ದ್ವೀಪವನ್ನು ಅಮಲಿನಲ್ಲಿ ತೇಲಿಸುವ ಗುರಿ ಹೊಂದಿದ್ದರು. 20 ವರ್ಷಗಳನ್ನು ಅಮೆರಿಕದಲ್ಲಿ ಕಳೆದಿದ್ದ ರೋಮನ್ ತನ್ನ ಡ್ರಗ್ಸ್​ ವ್ಯವಹಾರದಿಂದ ಬಂದ ಹಣವನ್ನು ಕ್ಯಾಸಿನೊಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ವಿಶ್ವದ ಗಾಂಜಾ ವ್ಯವಹಾರದ ರಾಣಿ ಎಂಬ ಕುಖ್ಯಾತಿ ಕೂಡ ಚಾರ್ಮೈನ್​ ರೋಮನ್ ಹೆಸರಿನಲ್ಲಿದೆ.
Loading...

via:www.biography.com


8-ಜೆಮೆಕರ್ ಥಾಂಪ್ಸನ್ : 80ರ ದಶಕದಲ್ಲಿ ಅಮೆರಿಕದ ಕೋಕೆನ್​ನ 'ಕ್ವೀನ್ ಪಿನ್' ಎಂದು ಕುಖ್ಯಾತಿಗಳಿಸಿದ ಜೆಮೆಕರ್ ಥಾಂಪ್ಸನ್ ಅವರನ್ನು 1993ರಲ್ಲಿ ಬಂಧಿಸಲಾಯಿತು. ಮಗನ ಪದವಿ ಸಮಾರಂಭಕ್ಕೆ ಆಗಮಿಸಿದ್ದ ಭೂಗತ ಮಹಿಳೆ 'ಜೆಮೆಕರ್ ಥಾಂಪ್ಸನ್' ಅವರನ್ನು ಸೆರೆ ಹಿಡಿಯಲಾಯಿತು. 15 ವರ್ಷಗಳ ದೀರ್ಘ ಜೈಲುವಾಸದ ಬಳಿಕ 2005 ರಲ್ಲಿ ಹೊರ ಬಂದ ಜೆಮೆಕರ್ ಥಾಂಪ್ಸನ್ ಬಳಿಕ ಆಧ್ಯಾತ್ಮಿಕ ಜೀವನದ ಕಡೆಗೆ ಮುಖ ಮಾಡಿದರು. ಆದರೆ ಇಂದಿಗೂ ಅಮೆರಿಕ ಕೊಕೇನ್ ಸಾಮ್ರಾಜ್ಯದ ಕ್ವೀನ್ ಎಂದು ಜೆಮೆಕರ್ ಥಾಂಪ್ಸನ್ ಅವರನ್ನು ಗುರುತಿಸಲಾಗುತ್ತದೆ.

via: www.newsmax.com


7-ಅನ್ನಾ ಚಾಪ್ಮನ್ : 'ಬಾಂಡ್​ ಗರ್ಲ್'​ ಎಂದು ರಷ್ಯಾದಲ್ಲಿ ಖ್ಯಾತಿ ಪಡೆದರೂ ಅಮೆರಿಕನ್ನರಿಗೆ ಮಾತ್ರ ಅನ್ನಾ ಚಾಪ್ಮನ್ ಬಗಲಲ್ಲಿದ್ದ ದುಶ್ಮನ್. 2010 ರಲ್ಲಿ ರಷ್ಯಾದ ಸ್ಲೀಪರ್ ಏಜೆಂಟ್​ ಆಗಿ ಅಮೆರಿಕದಲ್ಲಿ ನೆಲೆಸಿದ್ದ ಅನ್ನಾ ಅಲ್ಲಿ ಬೇಹುಗಾರಿಕಾ ಕೆಲಸ ಮಾಡುತ್ತಿದ್ದರು. ತನ್ನ ಮಾದಕ ನೋಟದಿಂದಲೇ ಉನ್ನತ ಅಧಿಕಾರಿಗಳನ್ನು ಬಲೆಗೆ ಬೀಳಿಸುತ್ತಿದ್ದ ಅನ್ನಾ ಚಾಪ್ಮನ್ ಲೈಂಗಿಕ ಬಂಧನದಿಂದ ಮಾಹಿತಿಗಳನ್ನು ಪಡೆಯುತ್ತಿದ್ದರು. ಅಮೆರಿಕದಲ್ಲಿ ಫೇಮ್ ಫ್ಯಾಟೆಲ್ ಎಂದು ಕುಖ್ಯಾತಿ ಪಡೆದಿರುವ ಅನ್ನಾ ಅವರ ಚಿತ್ರವನ್ನು ರಷ್ಯಾದ ನಿಯತಕಾಲಿಕೆ 'ಮ್ಯಾಕ್ಸಿಮ್'​ನಲ್ಲಿ ಬಳಸಲಾಗಿತ್ತು. ತನ್ನ ಕ್ರಿಮಿನಲ್ ಬುದ್ದಿಯಿಂದ ಕೋಟಿಗಟ್ಟಲೆ ಹಣಗಳಿಸಿರುವ ಅನ್ನಾ ಚಾಪ್ಮನ್ ಸದ್ಯ ರಷ್ಯಾದಲ್ಲಿ ನೆಲೆಸಿದ್ದಾರೆ.

via: www.nypost.com


6-ಲಿನೆಟ್ ಫ್ರೊಮ್: ಕುಖ್ಯಾತ ಅಮೆರಿಕದ ಕ್ರಿಮಿನಲ್ ಚಾರ್ಲ್ಸ್​ ಮ್ಯಾನ್​ಸನ್​ ಸಹಚರರಲ್ಲಿ ಅತಿ ಆಪ್ತೆ ಎಂದು ಕುಪ್ರಸಿದ್ಧ ಪಡೆದಿದ್ದ ಲಿನೆಟ್​ ಫ್ರೊಮ್ 1969 ರ ಬಳಿಕ ಯುಎಸ್​ ಕ್ರಿಮಿನಲ್ ಲೀಸ್ಟ್​ನಲ್ಲಿ ಸ್ಥಾನ ಪಡೆದಿದ್ದರು. ಮೊದಮೊದಲು ಯಾವುದೇ ಕೊಲೆಗಳಲ್ಲಿ ಭಾಗಿಯಾದ ಲಿನೆಟ್​ ಏಕಾಏಕಿ 1975 ರಲ್ಲಿ ಅಮೆರಿಕ ಅಧ್ಯಕ್ಷ ಗೆರಾಲ್ಡ್​ ಫೂರ್ಡ್​ ಅವರ ಕೊಲೆಯತ್ನ ನಡೆಸಿದ್ದರು.

ಇದರಿಂದ ಅಮೆರಿಕದಲ್ಲಿ ಕುಖ್ಯಾತಿ ಪಡೆದ ಲಿನೆಟ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ ತನ್ನ ಗ್ಯಾಂಗ್ ಲೀಡರ್​ನ ನೋಡುವ ಸಲುವಾಗಿ 1987 ರಲ್ಲಿ ಜೈಲಿಂದ ಎಸ್ಕೇಪ್ ಆದ ಲಿನೆಟ್ ಅವರನ್ನು ಮತ್ತೆ ಬಂಧಿಸಲಾಯಿತು. ಕ್ರಿಮಿನಲ್ ಚಟುವಟಿಕೆಗಳಿಂದಲೇ ಕುಖ್ಯಾತಿ ಪಡೆದಿರುವ ಲಿನೆಟ್ ಫ್ರೊಮ್ ಅವರನ್ನು ಜೈಲಿನಲ್ಲಿ ತೀವ್ರ ಹಿಂಸೆಗೆ ಗುರಿ ಪಡಿಸಲಾಗಿತ್ತಂತೆ. 2009 ರಲ್ಲಿ ಪೆರೋಲ್​ ಪಡೆದು ಹೊರ ಬಂದಿರುವ ಲಿನೆಟ್​ ಫ್ರೊಮ್ ಈಗಲೂ ಸಹ ಅಮೆರಿಕದ ಅಪಾಯಕಾರಿ​ ಮಹಿಳೆಯರಲ್ಲಿ ಸ್ಥಾನ ಪಡೆದಿದ್ದಾರೆ.

via: www.wardheernews.com


5-ಸಮಂತಾ ಲ್ವೆತ್​ವೈಟ್​ : ವಿಶ್ವದ ಮೋಸ್ಟ್​ ವಾಟೆಂಡ್ ಭಯೋತ್ಪಾದನಾ ಮಹಿಳೆಯರಲ್ಲಿ ಸಮಂತಾ ಲ್ವೆತ್​ವೈಟ್ ಕೂಡ ಒಬ್ಬಳು. 400 ಕ್ಕಿಂತ ಹೆಚ್ಚಿನ ಜನರ ಸಾವಿಗೆ ಕಾರಣವಾಗಿರುವ ಸಮಂತಾ ಅವರನ್ನು ವೈಟ್​ ವಿಡೊ (ಬಿಳಿ ವಿಧವೆ) ಎಂದು ಪ್ರಪಂಚದಾದ್ಯಂತ ಗುರುತಿಸಲಾಗುತ್ತದೆ. ಸಿರಿಯಾದ ಭಯೋತ್ಪಾದನಾ ಚಟುವಟಿಕೆಯ ಮಾಸ್ಟರ್ ಮೈಂಡ್​ ಆಗಿರುವ ವೈಟ್ ವಿಡೊ ಇಂಟರ್​ಪೋಲ್​ ಬೇಕಾಗಿರುವ ಮೋಸ್ಟ್​ ವಾಟೆಂಡ್​ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಯುಕೆ ಮೂಲದ ಸಮಂತಾ ಲ್ವೆತ್​ವೈಟ್ 17ನೇ ವರ್ಷವಿದ್ದಾಗ ಕೈಸ್ತ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದರು. ಇವರ ಪತಿ ಜರ್ಮೈನ್ ಲಿಂಡ್ಸೆ ಅವರು ಕೂಡ ಲಂಡನ್​ ಆತ್ಮಹತ್ಯಾ ದಾಳಿಯ ರೂವಾರಿಯಲ್ಲಿ ಒಬ್ಬರಾಗಿದ್ದು, ಸಮಂತಾ ಲ್ವೆತ್​ವೈಟ್ ಕೂಡ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಮಹಿಳಾ ಆತ್ಮಹತ್ಯಾ ಬಾಂಬರ್​ಗಳಿಗೆ ತರಬೇತಿ ನೀಡುವಲ್ಲಿ ಸಮಂತಾ ಲ್ವೆತ್​ವೈಟ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎನ್ನಲಾಗಿದೆ.

via: www.trust.org


4- ಕರ್ನಲ್ ಫ್ಯಾನೆಟ್ಟೆ ಉಮುರಾಜಾ: ರಾವಂಡ ದೇಶದ ಬಂಡಾಯ ನಾಯಕಿಯಾಗಿ ಫ್ಯಾನೆಟ್ಟೆ ಉಮುರಾಜಾ ಗುರುತಿಸಿಕೊಂಡಿದ್ದಾರೆ. ಕಾಂಗೋಲೀಸ್ ಟುಟ್ಸಿ ಬಂಡಾಯ ಗುಂಪಿನ M23 ಮಿಲಿಟರಿ ಮತ್ತು ರಾಜಕೀಯ ವಿಭಾಗದ ಹಿರಿಯ ಸದಸ್ಯರಾಗಿರುವ ಉಮುರಾಜಾ ಬೆಳೆದಿರುವುದು ರಾವಂಡ ನಿರಾಶ್ರಿತ ಶಿಬಿರದಲ್ಲಿ. ಪದವಿ ವಿದ್ಯಾಭ್ಯಾಸ ಹೊಂದಿರುವ ಕರ್ನಲ್ ಫ್ಯಾನೆಟ್ಟೆ ಉಮುರಾಜಾ ವಿರುದ್ಧ ಕೊಲೆ, ಅಪರಾಧ ಮತ್ತು ಮಕ್ಕಳನ್ನು ಬಲವಂತವಾಗಿ ಬಂಡಾಯ ಗುಂಪಿಗೆ ನೇಮಕಾತಿ ಮಾಡಿರುವುದು ಸೇರಿದಂತೆ ಹಲವಾರು ಪ್ರಕರಣಗಳು ಇವರ ಮೇಲಿದೆ.

ಸ್ತ್ರೀವಾದಿ ಎಂದು ಕರೆಸಿಕೊಳ್ಳುವ ಉಮುರಾಜಾ ತನ್ನ ಸೈನ್ಯವನ್ನು ಮಾನವ ಹತ್ಯೆಗಳಿಗೆ ಪ್ರೇರೆಪಿಸಿ, ತಾವು ಮಾತ್ರ ಇಂಟರ್​ವ್ಯೂ ,ವಿಶ್ರಾಂತಿ ಮೂಲಕ ಕಾಲ ಕಳೆಯುತ್ತಾಳೆ ಎಂಬ ಮಾತಿದೆ. ರಾವಂಡದ ಸಾವು ನೋವುಗಳಿಗೆ ಕಾರಣವಾಗುತ್ತಿರುವ ಬಂಡಾಯ ಗುಂಪಿನ ನಾಯಕಿಯಾಗಿ ಕರ್ನಲ್ ಫ್ಯಾನೆಟ್ಟೆ ಉಮುರಾಜಾ ಅವರು ಮಹಿಳಾ ಕಲ್ಯಾಣಕ್ಕಾಗಿ ದುಡಿಯುತ್ತಿರುವ ನಾಯಕಿ ಎಂದು ಬಿಂಬಿಸಿಕೊಳ್ಳುತ್ತಾರೆ.

via: www.youtube.com


3-ಎನೆಡಿನಾ ಅರೆಲ್ಲನೋ ಫೆಲಿಕ್ಸ್ : ಅಪರಾಧ ಜಗತ್ತಿನಲ್ಲಿ 'ದಿ ಬಾಸ್', 'ದಿ ಗಾಡ್​ಮಾದರ್' ಮತ್ತು 'ನಾರ್ಕೊ-ಮದರ್' ಎಂದು ಕರೆಸಿಕೊಳ್ಳುವ ಎನೆಡಿನಾ ಅರೆಲ್ಲನೋ ಫೆಲಿಕ್ಸ್ ಮೆಕ್ಸಿಕೊದ ಡ್ರಗ್ ದೇವತೆ ಎಂದು ಕುಖ್ಯಾತಿ ಪಡೆದಿದ್ದಾರೆ. ಸಹೋದರರು ಜೈಲಿಗೆ ಹೋದಾಗ ಕ್ರಿಮಿನಲ್ ಲೋಕಕ್ಕೆ ಎಂಟ್ರಿ ಕೊಟ್ಟ ಎನೆಡಿನಾ ಕೊಲೆ ಕಿಡ್ನಾಪ್​ ಮೂಲಕ ಡ್ರಗ್ಸ್​ ವ್ಯವಹಾರವನ್ನು ಮುನ್ನಡೆಸುತ್ತಿದ್ದಳು. ತನ್ನ ಮಾದಕ ವಸ್ತುಗಳನ್ನು ಸಾಗಿಸಲು ಯಾವುದೇ ಹೀನಾ ಕೃತ್ಯಕ್ಕೂ ಅಂಜದಿದ್ದ ಮಹಿಳೆ ಎಂಬ ಕುಪ್ರಸಿದ್ದತೆ ಎನೆಡಿನಾ ಅವರ ಮೇಲಿದೆ. ಅಮರಿಕ ಮತ್ತು ಮೆಕ್ಸಿಕೊ ದೇಶಗಳ ಡ್ರಗ್ಸ್ ಮತ್ತು ಕಿಡ್ನಾಪ್​ನ ಕಿಂಗ್​ ಪಿನ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು.

via: www.youtube.com


2-ಥೆಲ್ಮಾ ರೈಟ್ : 1986ರಲ್ಲಿ ಫಿಲಾಡೆಲ್ಫಿಯಾ ಮಾದಕ ವಸ್ತು ಸಾಗಾಟದಲ್ಲಿ ಕಿಂಗ್ ಆಗಿದ್ದ ಜಾಕಿ ರೈಟ್​ ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಈ ವೇಳೆ ಪತಿಯ ಜಾಗವನ್ನು ತುಂಬಿದ ಥೆಲ್ಮಾ ರೈಟ್ ಫಿಲಾಡೆಲ್ಫಿಯಾದ ಗ್ಯಾಂಗ್​ಸ್ಟರ್​ ಕ್ವೀನ್ ಆಗಿ ಮೆರೆದರು. ಫಿಲಾಡೆಲ್ಫಿಯಾ ಮತ್ತು ಲಾಸ್​ ಏಂಜಲೀಸ್​ ನಡುವೆ ಡ್ರಗ್ ಮಾಫಿಯಾ ಕುದುರಿಸಿದ್ದ ಥೆಲ್ಮಾ ಕೋಟಿಗಟ್ಟಲೆ ಸಂಪಾದಿಸುವ ಡ್ರಗ್ ರಾಣಿಯಾಗಿ ಗುರುತಿಸಿಕೊಂಡಿದ್ದಳು. ಪತಿಯ ಮಾದಕ ಸಾಮ್ರಾಜ್ಯ ವಿಸ್ತರಿಸಿದ್ದ ಥೆಲ್ಮಾ ಕೇವಲ ಒಂದು ತಿಂಗಳಲ್ಲಿ 4 ಲಕ್ಷಕ್ಕೂ ಹೆಚ್ಚಿನ ಡಾಲರ್​ಗಳನ್ನು ಸಂಪಾದಿಸುತ್ತಿದ್ದರು.

ಡ್ರಗ್ ಮಾಫಿಯಾದಿಂದ ಅಪಾರ ಸಂಪತ್ತುಗಳಿಸಿದರೂ ಥೆಲ್ಮಾ ರೈಟ್ ಯಾವತ್ತೂ ಬಂಧನಕ್ಕೆ ಒಳಗಾಗಿರಲಿಲ್ಲ. 1991 ರಲ್ಲಿ ಮಾಫಿಯಾ ಲೋಕಕ್ಕೆ ಗುಡ್​ ಬೈ ಹೇಳಿ, ಸಾಧಾರಣ ಜೀವನಕ್ಕೆ ಹಿಂತಿರುಗಿರುವ ಥೆಲ್ಮಾ ರೈಟ್ 'ವಿತ್ ಐಸ್ ಫ್ರಮ್ ಬೊತ್ ಸೈಡ್ಸ್​-ಲಿವಿಂಗ್ ಮೈ ಲೈಫ್ ಇನ್ ಅಂಡ್ ಔಟ್ ಆಫ್ ದಿ ಗೇಮ್' ಎಂಬ ಆತ್ಮಕಥೆ ಬರೆದಿದ್ದಾರೆ.

via:www.independent.co.uk


1-ಮರಿಯಾ ಲಿಚ್ಚಿಯಾರ್ಡಿ : ಇಟಲಿಯಾದ ಕ್ರಿಮಿನಲ್ ಲೀಸ್ಟ್​​ನ ಅಗ್ರಸ್ಥಾನಿಯಾಗಿರುವ ಮರಿಯಾ ಲಿಚ್ಚಿಯಾರ್ಡಿ ವಿಶ್ವದ ನಂಬರ್ 1 ಕ್ರಿಮಿನಲ್ ಎಂಬ ಕುಖ್ಯಾತಿ ಪಡೆದಿದ್ದಾರೆ. 1993ರಲ್ಲಿ ನೇಪಲ್ಸ್​ ನಗರವನ್ನು ಸಂಪೂರ್ಣ ತನ್ನ ಹಿಡಿತದಲ್ಲಿಟ್ಟುಕೊಂಡ ಮರಿಯಾ ಅವರನ್ನು 'ಲಾ ಪಿಕೋಲಿನಾ' ಮತ್ತು 'ದಿ ಲಿಟ್ಲ್​ ಗರ್ಲ್'​ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಬಲಿಷ್ಠ ಗ್ಯಾಂಗ್​ಸ್ಟರ್​​ಗಳನ್ನು ಒಳಗೊಂಡಿದ್ದ ಲಿಚ್ಚಿಯಾರ್ಡಿಯ ತಂಡ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು.

ಒಂದು ನಗರದ ವ್ಯವಸ್ಥೆಯನ್ನು ತನ್ನ ಅಧೀನದಲ್ಲಿರಿಸಿ ಕ್ರಿಮಿನಲ್ ನಾಯಕಿಯಾಗಿ ಮರಿಯಾ ಲಿಚ್ಚಿಯಾರ್ಡಿ ಮೆರೆದಿದ್ದರು. ವೇಶ್ಯಾವಾಟಿಕೆ ಜಾಲವನ್ನು ವಿಸ್ತರಿಸಿ ಹಣಗಳಿಸುವುದೊಂದೆ ಗುರಿಯಾಗಿಸಿಕೊಂಡಿದ್ದರು. ಮಕ್ಕಳ ಕಳ್ಳ ಸಾಗಣೆ ಸೇರಿದಂತೆ ಹಲವಾರು ಪಾತಕ ಲೋಕದ ಚಟುವಟಿಕೆಗಳನ್ನು ಲಿಚ್ಚಿಯಾರ್ಡಿ ಮುನ್ನೆಡೆಸುತ್ತಿದ್ದರು.

ಅಲ್ಬೆನಿಯಾದ ಬಾಲಕಿಯರನ್ನು ಖರೀದಿಸಿ, ವೇಶ್ಯಾವಾಟಿಕೆ ಮತ್ತು ಮಾದಕ ವಸ್ತುಗಳ ಸಾಗಣೆಗೆ ಬಳಸಿಕೊಳ್ಳುತ್ತಿದ್ದರು. 2001ರಲ್ಲಿ ಬಂಧನಕ್ಕೊಳಗಾದ ಮರಿಯಾ ಲಿಚ್ಚಿಯಾರ್ಡಿ ಕೊಲೆ, ಸುಳಿಗೆ, ಮಕ್ಕಳ ಸಾಗಾಣೆ ಸೇರಿದಂತೆ ಹಲವಾರು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವಿಶ್ವ ಅಪಾಯಕಾರಿ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...