Relationship: ಈ ಕಾರಣಗಳಿದ್ರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದರ್ಥ..!

Communication in Relationship: ಒಬ್ಬರನ್ನೊಬ್ಬರು ದೂಷಿಸುತ್ತಾ ಶೋಷಿಸುವ ಹಾದಿಯನ್ನು ಹಿಡಿದರೆ ಸಂಬಂಧದ ಆರೋಗ್ಯ ಹದಗೆಟ್ಟಿದೆ, ಅದು ಸಕಾರಾತ್ಮಕವಾದ ಸಂಬಂಧವಾಗಿರದೇ ಅನಾರೋಗ್ಯಕರವಾದ, ನಿಂದನೀಯ ಸಂಬಂಧವಾಗಿ ಬದಲಾಗುತ್ತಿದೆ ಎಂದರ್ಥ.

 ಪ್ರೀತಿ

ಪ್ರೀತಿ

  • Share this:
    ಪ್ರೀತಿ(Love) ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು (Life)ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ನಿಜ, ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು( Feeling secure ) ನೀಡುತ್ತದೆ ಎನ್ನುವ ನಂಬಿಕೆಯೇ (Trust)ಜೀವಕ್ಕೊಂದು ಬೆಳಕು(Light). ಪ್ರೀತಿ ಒಂದು ಅದ್ಭುತ(Wonder) ಸಂಬಂಧ(Relationship), ಸೃಷ್ಟಿಯ ನಿಯಮವು ಸರಿಯೇ ಪ್ರೀತಿ ಹೇಗೆ ಹುಟ್ಟುತ್ತದೆ ಎಂಬ ಕುತೂಹಲ ಯಾರಿಗೆ ತಾನೆ ಇರುವುದಿಲ್ಲ ಹೇಳಿ.ನಮ್ಮ ಜೀವನದಲ್ಲಿ ಪ್ರೀತಿಯು ಯಾವ ಸಮಯದಲ್ಲಾದರೂ ಆಗಬಹುದು,ಯಾವ ವ್ಯಕ್ತಿಯ ಜೊತೆಗಾದರೂ ಆಗಬಹುದು,ಯಾವ ಸ್ಥಳದಲ್ಲಿ ಆದರೂ ಆಗಬಹುದು.ಹೀಗೆ ಆದ ಪ್ರೀತಿ ಸದಾ ಆರೋಗ್ಯಕರವಾಗಿ ಇರುತ್ತದೆ ಎಂದು ಹೇಳಲಾಗುವುದಿಲ್ಲ.. ಕೆಲವೊಮ್ಮೆ ಸಂಗಾತಿಗಳ ನಡುವೆ ಕಲಹ, ಭಿನ್ನಾಭಿಪ್ರಾಯಗಳು ಸಾಮಾನ್ಯ. ಈ ಗೊಂದಲ, ಗೋಜಲುಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಸೂಕ್ತ ವರ್ತನೆಗಳನ್ನು ಪ್ರದರ್ಶಿಸುವುದು ಬಹುಮುಖ್ಯ. ಹಾಗಲ್ಲದೇ ಒಬ್ಬರನ್ನೊಬ್ಬರು ದೂಷಿಸುತ್ತಾ ಶೋಷಿಸುವ ಹಾದಿಯನ್ನು ಹಿಡಿದರೆ ಸಂಬಂಧದ ಆರೋಗ್ಯ ಹದಗೆಟ್ಟಿದೆ, ಅದು ಸಕಾರಾತ್ಮಕವಾದ ಸಂಬಂಧವಾಗಿರದೇ ಅನಾರೋಗ್ಯಕರವಾದ, ನಿಂದನೀಯ ಸಂಬಂಧವಾಗಿ ಬದಲಾಗುತ್ತಿದೆ ಎಂದರ್ಥ.

    1) ಕೇವಲ ಮೆಸೇಜ್ ಗಷ್ಟೇ ಸೀಮಿತ ಆದರೆ: ಸಾಮಾನ್ಯವಾಗಿ ಪ್ರೇಮಿಗಳು ಗಂಟೆಗಟ್ಟಲೆ ಫೋನ್ನಲ್ಲಿ ಹರಟೆ ಹೊಡೆಯುತ್ತಾರೆ.. ಯಾವಾಗ ನಿಮ್ಮ ಸಂಬಂಧ ಸಕಾರಾತ್ಮಕವಾಗಿ ಇರುವುದಿಲ್ಲವೋ ಆಗ ನಿಮ್ಮ ಸಂಗಾತಿ ನಿಮ್ಮಿಂದ ತಪ್ಪಿಸಿಕೊಳ್ಳಲು ನಿಮ್ಮ ಜೊತೆ ಸಂವಹನ ನಡೆಸಲು ಮೆಸೇಜ್ ಮಾಡುತ್ತಾರೆ.. ಹೀಗಿದ್ದಾಗ ನಿಮ್ಮ ಸಂಬಂಧ ಹಳಿ ತಪ್ಪಿದೆ ಎಂದು ಅರ್ಥ..

    ಇದನ್ನೂ ಓದಿ: ಕದ್ದುಮುಚ್ಚಿ ಲವ್ವಿಡವ್ವಿ ಮಾಡ್ತಿದ್ದವನ ಎಲ್ಲಾ ಗರ್ಲ್​ಫ್ರೆಂಡ್ಸ್ ಒಟ್ಟಿಗೆ ಮನೆಗೆ ಬಂದಾಗ…



    2)ನಿಂದನೆ: ಸಂಬಂಧಗಳ ಹೊಸತರಲ್ಲಿ ನಿಂದನೆ ಎಂಬುದು ಇರುವುದಿಲ್ಲ.. ಜಗಳ ಆಡುವ ಪರಿಸ್ಥಿತಿ ಬಂದರೂ ತಾಳ್ಮೆ ಎಂಬುದು ಇರುತ್ತದೆ.. ಯಾವಾಗ ನಿಮ್ಮ ಸಂಗಾತಿ ನಿಮ್ಮ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೋ ಆಗ ಅವರು ನಿಮ್ಮ ಜೊತೆಗೆ ಜಗಳ ಆಡುವ ಸಂದರ್ಭದಲ್ಲಿ ನಿಮ್ಮನ್ನ ವಯಕ್ತಿಕವಾಗಿ ಕೂಡ ನಿಂದನೆ ಮಾಡಬಹುದು..ಇದು ನಿಮ್ಮ ಸಂಬಂಧ ಹಾಳಾಗಿದೆ ಎಂದು ಸೂಚನೆ..

    3) ಯಾವುದಕ್ಕೂ ಸ್ಪಂದನೆ ಮಾಡದೆ ಇರುವುದು: ಪ್ರತಿಯೊಂದು ವಿಷಯದಲ್ಲಿ ನಿಮ್ಮ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಿದ್ದ ಸಂಗಾತಿ ಇದ್ದಕ್ಕಿದ್ದಂತೆಯೇ ನಿಮ್ಮಿಂದ ಅಂತರ ಕಾಯ್ದುಕೊಂಡರೆ, ಹಾಗೂ ನಿಮ್ಮ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಇದ್ದರೆ, ನಿಮ್ಮ ಸಂಬಂಧದಲ್ಲಿ ಬಿರುಕು ಆರಂಭವಾಗಿದೆ ಎಂದು ಅರ್ಥ..

    4) ಎಲ್ಲದ್ದಕ್ಕೂ ನಿಮ್ಮನ್ನೇ ಹೊಣೆಯಾಗಿಸುವುದು: ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವ ಮಾತಿನಂತೆ ಪ್ರತಿ ವಿಷಯಗಳು ಹಾಗೂ ಪ್ರತಿ ತಪ್ಪುಗಳಲ್ಲಿ ನಿಮ್ಮ ಸಂಗಾತಿ ನಿಮ್ಮನೆ ಹೊಣೆಯಾಗಿಸುತ್ತಿದ್ದರೆ, ಅವರು ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಿದ್ದಾರೆ, ನಿಮ್ಮ ಅಗತ್ಯತೆ ಇಲ್ಲ ಎಂದು ಅರ್ಥ

    ಇದನ್ನೂ ಓದಿ: ಸಂಗಾತಿ ಜೊತೆ ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕಾದರೆ, ಈ ಟಿಪ್ಸ್‌ಗಳನ್ನು ಪಾಲಿಸಿರಿ..

    5) ಹಳೆಯದನ್ನ ಕೆದಕಿ ಜಗಳ ಮಾಡುವುದು: ನೀವು ಹಿಂದೆ ಯಾವಾಗಲೋ ಮಾಡಿದ ತಪ್ಪನ್ನು ಇಟ್ಟುಕೊಂಡು ಪದೇಪದೇ ನಿಮ್ಮ ಮೇಲೆ ಜಗಳ ಆಡುವುದು.. ನಿಮ್ಮದಲ್ಲದ ತಪ್ಪುಗಳಿಗೆ ನಿಮ್ಮನ್ನ ಹೊಣೆಯಾಗಿಸುವುದು.. ಕ್ಷುಲ್ಲಕ ಕಾರಣವನ್ನು ಹುಡುಕಿ ಅದನ್ನ ಭೂತಕಾಲ ದೊಂದಿಗೆ ಹೋಲಿಕೆ ಮಾಡಿಕೊಂಡು ನಿಮ್ಮ ಸಂಗಾತಿ ಪದೇಪದೇ ನಿಮ್ಮ ಜೊತೆ ಜಗಳ ಹಾಡುತ್ತಿದ್ದರೆ ನಿಮ್ಮ ಸಂಬಂಧ ಅನಾರೋಗ್ಯಕರವಾಗಿದೆ ಎಂದು ಅರ್ಥ.. ಇದು ನಿಮ್ಮ ಸಂಗಾತಿ ನಿಮ್ಮಿಂದ ಬಿಡುಗಡೆಹೊಂದಿ ಮತ್ತೊಂದು ಸಂಬಂಧ ಹೊಂದಲು ಬಯಸುತ್ತಿದ್ದಾರೆ ಎಂದು ಅರ್ಥ..

    6) ನಿಮ್ಮ ಫೋನ್ ಕರೆ ಅವಾಯ್ಡ್: ಮೊದಲೆಲ್ಲಾ ನಿಮ್ಮ ಫೋನ್ ಬಂದ ತಕ್ಷಣ ಸ್ಪಂದನೆ ಮಾಡುತ್ತಿದ್ದ, ನಿಮ್ಮ ಪ್ರೇಮಿ ನಿಮ್ಮ ಜೊತೆ ಮಾತನಾಡಲು ಸಹ ಹಿಂದೆ-ಮುಂದೆ ಯೋಚನೆ ಮಾಡುತ್ತಿದ್ದಾರೆ, ನಿಮ್ಮ ಫೋನ್ ಕರೆಗಳನ್ನು ಸ್ವೀಕಾರ ಮಾಡಲು ಹಿಂದೇಟು ಹಾಕುತ್ತಾರೆ.. ನೀವು ಹತ್ತು ಬಾರಿ ಫೋನ್ ಮಾಡಿದರೆ ಒಮ್ಮೆ ರಿಸೀವ್ ಮಾಡಿ, ಕುಂಟುನೆಪಗಳನ್ನು ಹೇಳುತ್ತಿದ್ದರೆ ನೀವು ಆ ಸಂಬಂಧದಿಂದ ಹೊರಬರುವುದು ಸೂಕ್ತ..
    Published by:ranjumbkgowda1 ranjumbkgowda1
    First published: