ಕೆನಡಾದ ಮುಕ್ತ ಮಾರುಕಟ್ಟೆಯಲ್ಲಿ ಸಿಗಲಿದೆ ಗಾಂಜಾ! ಅಲ್ಲಿನ ಜನರು ಏನೆಂದರು ಗೊತ್ತಾ?

news18
Updated:August 12, 2018, 5:42 PM IST
ಕೆನಡಾದ ಮುಕ್ತ ಮಾರುಕಟ್ಟೆಯಲ್ಲಿ ಸಿಗಲಿದೆ ಗಾಂಜಾ! ಅಲ್ಲಿನ ಜನರು ಏನೆಂದರು ಗೊತ್ತಾ?
news18
Updated: August 12, 2018, 5:42 PM IST
-ನ್ಯೂಸ್ 18 ಕನ್ನಡ

ವಿಶ್ವದ ಹಲವೆಡೆ ಗಾಂಜಾ ಸೇವನೆಯನ್ನು ಕಾನೂನು ಬದ್ಧಗೊಳಿಸಬೇಕೆಂಬ ಹಲವು ಹೋರಾಟಗಳ ಬಗ್ಗೆ ಕೇಳಿರುತ್ತೀರಿ. ಅಷ್ಟೆಲ್ಲಾ ಯಾಕೆ, ಕಳೆದ ವರ್ಷ ಕೇರಳದ ಕೊಚ್ಚಿನ್ ನಗರದ ಯುವಕರ ಗುಂಪೊಂದು ಗಾಂಜಾವನ್ನು ಕಾನೂನು ಬದ್ಧ ಮಾಡಿ ಎಂದು ರೋಡಿಗಿಳಿದಿದ್ದರು. ಔಷಧಿ ಉದ್ದೇಶಗಳಿಗಾಗಿ ಅನೇಕ ದೇಶಗಳಲ್ಲಿ ಗಾಂಜಾ ಬೆಳೆಯನ್ನು ಕಾನೂನಿಡಿಯಲ್ಲಿ ತರಲಾಗಿದೆ. ಇದೀಗ ಕೆನೆಡಾ ದೇಶದಲ್ಲೂ ಗಾಂಜಾವನ್ನು ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ. ಜಿ7 ದೇಶಗಳ ಒಕ್ಕೂಟದ ದೇಶವೊಂದು ಇದೇ ಮೊದಲ ಬಾರಿ ಗಾಂಜಾವನ್ನು ಕಾನೂನುಬದ್ಧಗೊಳಿಸಿದ್ದು, ಮುಂಬರುವ ಅಕ್ಟೋಬರ್​ 17ರಿಂದ ಮರಿಜ್ವಾನ (ಗಾಂಜಾ)ವನ್ನು ಸೇವಿಸಬಹುದು.

ಒಂದೆಡೆ ಗಾಂಜಾ ಮುಕ್ತವಾಗಿ ದೊರೆಯಲಿದೆ ಎಂಬ ಖುಷಿಯಲ್ಲಿ ಕೆಲವರಿದ್ದರೆ, ಇದು ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ಪ್ರಭಾವ ಬೀರಲಿದೆ ಎಂಬುದರ ಕುರಿತು ಸಮೀಕ್ಷೆಗಳನ್ನು ನಡೆಸಲಾಗಿದೆ. ಇದರ ಪ್ರಕಾರ  ಶೇ.82ರಷ್ಟು ಕೆನಡಾ ನಾಗರೀಕರು ಗಾಂಜಾ ಕಾನೂನುಬದ್ಧವಾಗುವ ಬಗ್ಗೆ ಯಾವುದೇ ಮಹತ್ವ ನೀಡಲಿಲ್ಲ. ಅಮಲು ಪದಾರ್ಥವೊಂದು ಕಾನೂನಡಿಯಲ್ಲಿ ಬರುವುದರಿಂದ ಅದನ್ನು ಸೇವಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಬಹುಪಾಲು ಮಂದಿ ತಿಳಿಸಿದ್ದಾರೆ. ಆದರೆ ಈಗಾಗಲೇ ಗಾಂಜಾ ಪ್ರೇಮಿಗಳಾಗಿರುವ ಒಂದು ಸಮೂಹದ ಶೇ.28ರಷ್ಟು ಮಂದಿ ಈ ಕಾನೂನು ಜಾರಿಗೆ ಬಂದರೆ ಧಮ್ ಎಳೆಯುವರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಈ ವರ್ಷದ ಮೊದಲಾರ್ಧದಲ್ಲಿ ಸುಮಾರು 4.6 ಮಿಲಿಯನ್ ಕೆನಡಾದವರು ಗಾಂಜಾ ಸೇವಿಸಿರುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಪಾಟ್​ ಸೇವನೆಗೆ ಮಾರು ಹೋಗಿರುವವರಲ್ಲಿ ಹೆಚ್ಚಿನವರು ಪುರುಷರು. ಗಾಂಜಾದ ಒಣಗಿದ ಹೂವು ಮತ್ತು ಎಲೆಗಳಿಗೆ ಪುರುಷರು ಆದ್ಯತೆ ನೀಡಿದರೆ, ಮಹಿಳೆಯರು ಕೇಕ್ ರೀತಿಯಲ್ಲಿರುವ ಗಾಂಜಾ ಪದಾರ್ಥಕ್ಕೆ ಮೊರೆ ಹೋಗಿದ್ದಾರೆ. ಅಲ್ಲದೆ ಕೆನಡಾದ ಶೇ.86ರಷ್ಟು ಜನರು ಒಣಗಿದ ಗಾಂಜಾವನ್ನು ಬಳಸುತ್ತಿರುವುದಾಗಿ ಈ ಸಮೀಕ್ಷೆ ತಿಳಿಸಿದೆ.

ಈ ಅಮಲು ಪದಾರ್ಥಗಳ ಬಳಕೆದಾರರು ಒಂದು ಗಾಂಜಾ ಪಾಟ್​ಗೆ 100 ಡಾಲರ್​ವರಗೆ ಹಣ ನೀಡುತ್ತಿದ್ದು, ಹಾಗೆಯೇ ಗಾಂಜಾ ಕ್ಯಾನ್​ಗೆ 250 ಡಾಲರ್​ವೆಗೆ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಇಲ್ಲಿ ಗಾಂಜಾ ಕಾನೂನುಬದ್ಧವಾದರೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ, ಇದರ ಬಳಕೆದಾರರು ಹೆಚ್ಚಾದರೆ ಬೆಲೆಯಲ್ಲಿ ಏರಿಳಿತ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಇನ್ನೊಂದೆರೆಡು ತಿಂಗಳಲ್ಲಿ ಕೆನಡಾದಲ್ಲಿ ಧಮ್ ಮಾರೋ ಧಮ್​ಗೆ ಲೈಸನ್ಸ್​ ಸಿಕ್ಕಾಂಗುತ್ತದೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...