Christmas ಹಬ್ಬಕ್ಕೆ ಪ್ರವಾಸ ಮಾಡ್ಬೇಕಾ..? ಇಲ್ಲಿದೆ ನೋಡಿ ಸುಂದರ ರೈಲು ಸವಾರಿಗಳ ವಿವರ..

ಪ್ರತಿ ರೈಲು ಪ್ರೇಮಿಯ ಕನಸಿನ ಪ್ರಯಾಣವಾಗಿದೆ. ಏಕೆಂದರೆ ಇದು ಸುಂದರವಾದ ಪರ್ವತಗಳು ಮತ್ತು ಸುಂದರವಾದ ಸರೋವರಗಳ ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ.

ರೈಲು ಪ್ರಯಾಣ

ರೈಲು ಪ್ರಯಾಣ

  • Share this:
ಬಹುತೇಕರು ಯಾವುದಾದರೂ ಪ್ರವಾಸಿ(Tourist places) ಸ್ಥಳಗಳಿಗೆ ಹೋಗುವುದಾದರೆ ವಿಮಾನದಲ್ಲಿಯೇ(Airplane) ಪ್ರಯಾಣಿಸಲು ಇಷ್ಟ ಪಡುತ್ತಾರೆ, ಏಕೆಂದರೆ ಆ ಉಳಿದಂತಹ ಪ್ರಯಾಣದ ಸಮಯವನ್ನು ಪ್ರವಾಸಿ ಸ್ಥಳಗಳಲ್ಲಿ ಕಳೆಯಬಹುದು ಎಂಬುದು ಅವರ ಯೋಚನೆ ಆಗಿರುತ್ತದೆ.ಆದರೆ ಕೆಲವು ರೈಲು ಮಾರ್ಗಗಳು (Railroads)ಇವೆ, ಬೇರೆ ಪ್ರವಾಸಿ ಸ್ಥಳಗಳಿಗೆ ಹೋಗುವ ಬದಲು ಈ ಕೆಲವು ಮಾರ್ಗದ ರೈಲು ಸವಾರಿ ಹೋದರೆ ಸಾಕು ಅಲ್ಲಿರುವ ಮನಮೋಹಕ ಪರಿಸರ(Glamorous environment) ನೋಡಿ ಒಂದು ಪ್ರವಾಸಕ್ಕೆ ಹೋಗಿ ಬಂದಂತೆ ಆಗುತ್ತದೆ.

ಈ ಕ್ರಿಸ್​ಮಸ್ ಹಬ್ಬದ ರಜಾ ದಿನಗಳಲ್ಲಿ ಉತ್ತಮ ರೈಲು ಪ್ರಯಾಣ ಆನಂದಿಸಲು ನೀವು ಉತ್ಸುಕರಾಗಿದ್ದರೆ, ಇಲ್ಲಿದೆ ನೋಡಿ ರೈಲು ಸವಾರಿಗಳ ದೊಡ್ಡ ಪಟ್ಟಿ.

1. ನಾಪಾ ವ್ಯಾಲಿ ವೈನ್ ಟ್ರೈನ್‌ನ ಸಾಂಟಾ ರೈಲು, ಕ್ಯಾಲಿಫೋರ್ನಿಯಾ

ನಾಪಾ ವ್ಯಾಲಿ ವೈನ್ ಟ್ರೈನ್ ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ಸಾಂಟಾ ರೈಲಿನಲ್ಲಿ ಹಬ್ಬದ ಸಂಗೀತವನ್ನು ಹಾಕಿ ಬೇರೆಯದ್ದೆ ಅನುಭವನೀಡುತ್ತದೆ. ನಾಪಾ ಕಣಿವೆಯ ರೋಲಿಂಗ್ ದೃಶ್ಯಾವಳಿಗಳ ಮೂಲಕ ಈ 1 ಗಂಟೆ 25 ನಿಮಿಷದ ರೈಲು ಪ್ರಯಾಣದ ಸಮಯದಲ್ಲಿ, ರೈಲಿನಲ್ಲಿರುವವರು ಅನೇಕ ತರಹದ ಆಟಗಳನ್ನು ಆಡಬಹುದು, ಹಾಡಬಹುದು ಮತ್ತು ತಾಜಾ ಬೇಯಿಸಿದ ಕುಕ್ಕೀಸ್‌ ಮತ್ತು ಬಿಸಿ ಚಾಕೊಲೇಟ್ ಆನಂದಿಸಬಹುದು.

ಇದನ್ನೂ ಓದಿ: Christmas Holiday: ಈ ಸಲ ಕ್ರಿಸ್​ಮಸ್ ರಜೆಗೆ ಎಲ್ಲಿಗೆ ಟ್ರಿಪ್? ಎಲ್ರೂ ಆಗ್ಲೇ ಬುಕ್ ಮಾಡ್ತಿದಾರೆ ನೋಡಿ

2. ಅರೋರಾ ರೈಲು, ಅಲಾಸ್ಕಾ

ಆ್ಯಂಕರೇಜ್‌ನಿಂದ ಫೇರ್ ಬ್ಯಾಂಕ್ಸ್ಗೆ ತೆರಳುವ ಈ ರೈಲು ಸವಾರಿಯೂ 12 ಗಂಟೆಗಳದ್ದಾಗಿದ್ದು, ರೈಲು ಪ್ರಯಾಣವು ದಾರಿಯುದ್ದಕ್ಕೂ ಮನಸ್ಸಿಗೆ ಮುದ ನೀಡುವ ಪರಿಸರವನ್ನು ನೋಡಬಹುದಾಗಿದೆ. ಚಳಿಗಾಲದಲ್ಲಿ ನೀವು ಈ ಗಮ್ಯಸ್ಥಾನಕ್ಕೆ ಹೋಗಲು ನೀವು ಯೋಜಿಸಿದರೆ, ಹವಾಮಾನ ಪರಿಸ್ಥಿತಿಗಳು ರಾಜ್ಯಾದ್ಯಂತ ಪ್ರಯಾಣಿಸಲು ಕಷ್ಟವಾಗಬಹುದು ಮತ್ತು ಈ ರೈಲು ಅಲ್ಲಿ ಸುತ್ತ ಮುತ್ತಲಿನ ಜಾಗಗಳನ್ನು ಸುತ್ತಲು ಉತ್ತಮ ಆಯ್ಕೆ ಎಂದು ಹೇಳಬಹುದು.

3. ಸಾಂಟಾ ಕ್ಲಾಸ್ಕ್ಸ್ಪ್ರೆಸ್ ರಾತ್ರಿ ರೈಲು, ಫಿನ್ಲ್ಯಾಂಡ್

ಹೆಲ್ಸಿಂಕಿಯಿಂದ ಫಿನ್ಲ್ಯಾಂಡ್‌ನ ಉತ್ತರದ ಲ್ಯಾಪ್ಲ್ಯಾಂಡ್ ಪ್ರದೇಶಕ್ಕೆ ರಾತ್ರಿಯಿಡೀ ಪ್ರಯಾಣಿಸಲು ಈ ರೈಲನ್ನು ಹತ್ತಿ. ಈ ರೈಲು ಫಿನ್ಲ್ಯಾಂಡ್‌ನ ಸುಂದರವಾದ ಚಳಿಗಾಲದ ಭೂದೃಶ್ಯವನ್ನು ಪ್ರಯಾಣದ ಮೂಲಕ ನೋಡಬಹುದು ಮತ್ತು ಹಿಮದಿಂದ ಕೂಡಿದ ಶಿಖರಗಳನ್ನು ವೀಕ್ಷಿಸುವ ಅವಕಾಶ ನೀಡುತ್ತದೆ.

ಆಸಕ್ತಿ ಇದ್ದರೆ, ಸಾಂಟಾ ಕ್ಲಾಸ್‌ನ ನಿವಾಸ ಎಂದು ಅಧಿಕೃತವಾಗಿ ಕರೆಯಲ್ಪಡುವ ರೋವಾನಿಯೆಮಿಯಲ್ಲಿ ನಿಲುಗಡೆಯನ್ನು ಆನಂದಿಸಬಹುದು. ಅಲ್ಲಿ ಸಾಂಟಾ ನೀಡುವ ಉಡುಗೊರೆಯನ್ನೂ ಪಡೆಯಬಹುದು.

4. ಬರ್ನಿಯಾ ಎಕ್ಸ್ಪ್ರೆಸ್, ಸ್ವಿಟ್ಜರ್ಲ್ಯಾಂಡ್

ಆಲ್ಪೈನ್‌ನ ಅದ್ಭುತ ದೃಶ್ಯಗಳ ದೊಡ್ಡ ವಿಹಂಗಮ ನೋಟವನ್ನು ರೈಲಿನ ಕಿಟಕಿಗಳ ಹಿಂದೆ ಕುಳಿತು ಆನಂದಿಸಿರಿ. ಈ ರೈಲು ದಕ್ಷಿಣ ಮತ್ತು ಉತ್ತರ ಯುರೋಪ್ ಅನ್ನು ಸಂಪರ್ಕಿಸುತ್ತದೆ ಮತ್ತು ಆಲ್ಪ್ಸ್ ಅನ್ನು ಅತ್ಯಂತ ಅದ್ಭುತ ರೀತಿಯಲ್ಲಿ ನೋಡಲು ನಿಮಗೆ ಅನುವು ಮಾಡಿಕೊಡುತ್ತದೆ.

ಈ ಮಾರ್ಗವು ನಿಮ್ಮನ್ನು ಅಲ್ಬುಲಾ ಮತ್ತು ಬರ್ನಿನಾ ಮೂಲಕ ಕರೆದೊಯ್ಯುತ್ತದೆ ಹಾಗೂ ಸ್ವಿಟ್ಜರ್ಲ್ಯಾಂಡ್‌ನ ಎತ್ತರದ ಹಿಮ ನದಿಗಳು ಮತ್ತು ಇಟಲಿಯ ಸುಂದರವಾದ ತಾಣವನ್ನು ನೋಡಲು ಸಿಗುತ್ತದೆ.

5. ರಾಕಿ ಪರ್ವತಾರೋಹಿ, ಕೆನಡಾ

ಇದು ಪ್ರತಿ ರೈಲು ಪ್ರೇಮಿಯ ಕನಸಿನ ಪ್ರಯಾಣವಾಗಿದೆ. ಏಕೆಂದರೆ ಇದು ಸುಂದರವಾದ ಪರ್ವತಗಳು ಮತ್ತು ಸುಂದರವಾದ ಸರೋವರಗಳ ಮೂಲಕ ನಿಮ್ಮನ್ನು ಕರೆದೊಯ್ಯುತ್ತದೆ. ವ್ಯಾಂಕೋವರ್‌ನಿಂದ ಕ್ಯಾಲ್ಗರಿಗೆ ಹೋಗುವ ಮಾರ್ಗದಲ್ಲಿರುವ ಸುಂದರವಾದ ಅರಣ್ಯ, ಹರಿಯುವ ನದಿಗಳು ಮತ್ತು ಸುಂದರವಾದ ಹಿಮನದಿ ಸರೋವರಗಳನ್ನು ನೋಡುತ್ತೀರಿ.

ಇದನ್ನು ಗೋಲ್ಡ್ ಲೀಫ್ ಕಾರಿನಿಂದ ನೋಡಿದರೆ ಸಿಗುವ ಮಜಾನೇ ಬೇರೆ. ಅಲ್ಲಿ ಪ್ರಯಾಣಿಕರು ರೈಲಿನ ಮೇಲೆ ಇರುವ ಗಾಜಿನ ಒಂದು ಕೋಣೆಯಲ್ಲಿ ಕುಳಿತು ಈ ದೃಶ್ಯಗಳನ್ನು ಆನಂದಿಸಬಹುದು.

6. ಟ್ರಾನ್ಜ್ ಆಲ್ಪೈನ್, ನ್ಯೂಜಿಲ್ಯಾಂಡ್

ಈ ರಮಣೀಯ ರೈಲು ಪ್ರಯಾಣವು ನಿಮ್ಮನ್ನು ಉದ್ಯಾನ ನಗರವಾದ ಕ್ರೈಸ್ಟ್ ಚರ್ಚ್‌ನಿಂದ ಗ್ರೇಮೌತ್‌ನ ಕಾಡುಗಳಿಗೆ ಕರೆದೊಯ್ಯುತ್ತದೆ. ಈ ಪ್ರಯಾಣದಲ್ಲಿ, ನೀವು ಈ ಪ್ರಯಾಣದಲ್ಲಿ ಮಂಜುಗಡ್ಡೆಯಿಂದ ಪೋಷಿಸಲ್ಪಟ್ಟ ವೈಮಾಕರಿ ನದಿಯನ್ನು ತುಂಬಾನೇ ಹತ್ತಿರದಿಂದ ನೋಡಬಹುದು.

7. ಟ್ರಾನ್ಸ್-ಸೈಬೀರಿಯನ್ ರೈಲ್ವೆ, ರಷ್ಯಾ

ರಷ್ಯಾದ ಟ್ರಾನ್ಸ್-ಸೈಬೀರಿಯನ್ ರೈಲ್ವೆಯು ಭೂಮಿಯ ಮೇಲಿನ ಅತಿ ಉದ್ದದ ನಿರಂತರ ರೈಲು ಮಾರ್ಗಕ್ಕೆ ಹೆಸರುವಾಸಿಯಾಗಿದೆ.

ಈ ಸುಂದರವಾದ ರೈಲು ಮಾರ್ಗವು ರಷ್ಯಾ, ಮಂಗೋಲಿಯಾ ಮತ್ತು ಚೀನಾವನ್ನು ಸಂಪರ್ಕಿಸುತ್ತದೆ ಮತ್ತು ನಿಮ್ಮನ್ನು ಬಿರ್ಚ್ ಕಾಡುಗಳು, ಸುಂದರವಾದ ನೀಲಿ ಸರೋವರಗಳ ಮೂಲಕ ಕರೆದೊಯ್ಯುತ್ತದೆ ಮತ್ತು ಅಂತಿಮವಾಗಿ ಗೋಬಿ ಮರುಭೂಮಿಯ ಶುಷ್ಕ ವಿಸ್ತಾರದ ಮೂಲಕ ಹಾದು ಹೋಗುತ್ತದೆ, ಈ ರೈಲು ಪ್ರಯಾಣವು ಬೀಜಿಂಗ್‌ನಲ್ಲಿ ಕೊನೆಗೊಳ್ಳುತ್ತದೆ.

8. ದಿ ಘನ್, ಆಸ್ಟ್ರೇಲಿಯಾ

ನೀವು ಆಸ್ಟ್ರೇಲಿಯಾದ ಪರಿಸರದ ವಿಶಾಲತೆ ನೋಡಲು ಬಯಸಿದರೆ, ನೀವು ಖಂಡಿತವಾಗಿಯೂ ಘನ್‌ನಲ್ಲಿ ರೈಲು ಸವಾರಿ ಹೋಗಲೇಬೇಕು. ಇದು 3 ದಿನಗಳ ಪ್ರಯಾಣವಾಗಿದ್ದು, ಸುಮಾರು 2000 ಮೈಲಿಗಳನ್ನು ಕ್ರಮಿಸುತ್ತದೆ.

ಇದನ್ನೂ ಓದಿ: ಹೊಸ ವರ್ಷ & ಕ್ರಿಸ್ ಮಸ್ ಅದ್ದೂರಿ ಆಚರಣೆಗೆ ನಿರ್ಬಂಧ?; ಶೀಘ್ರದಲ್ಲೇ ಸರ್ಕಾರ ನಿರ್ಧಾರ

ಅದೇ ಸಮಯದಲ್ಲಿ ಅಡಿಲೇಡ್ ಸುತ್ತಮುತ್ತಲಿನ ಹಚ್ಚ ಹಸಿರಿನ ಭೂಮಿಗಳು ಮತ್ತು ಹುಲ್ಲುಗಾವಲುಗಳನ್ನು ನೀವು ನೋಡಬಹುದು. ಅಲ್ಲದೆ, ಅಲ್ಲಲ್ಲಿ ಬರುವ ನಿಲುಗಡೆಗಳು ರೈಲಿನಿಂದ ಇಳಿಯಲು ಮತ್ತು ಕಾಲ್ನಡಿಗೆಯ ಮೂಲಕ ವಿವಿಧ ಸ್ಥಳಗಳನ್ನು ನೋಡಲು ನಿಮಗೆ ಉತ್ತಮ ಅವಕಾಶ ನೀಡುತ್ತದೆ.

9. ವೆಸ್ಟ್ ಹೈಲ್ಯಾಂಡ್ ಲೈನ್, ಸ್ಕಾಟ್ಲೆಂಡ್

ಈ ರೈಲು ಪ್ರಯಾಣವು ನಿಮ್ಮನ್ನು ಸ್ಕಾಟಿಷ್ ಹೈಲ್ಯಾಂಡ್ಸ್‌ನಿಂದ ಸೆಂಟ್ರಲ್ ಸ್ಕಾಟ್ಲೆಂಡ್‌ಗೆ ಕರೆದೊಯ್ಯುತ್ತಿದ್ದಂತೆ, ವೆಸ್ಟ್ ಹೈಲ್ಯಾಂಡ್ ಲೈನ್‌ನಲ್ಲಿರುವ ಪರ್ವತಗಳು ಮತ್ತು ಸಮುದ್ರ ಅದ್ಭುತಗಳನ್ನು ನೀವು ನೋಡಬಹುದಾಗಿದೆ.

ನೀವು ಬಯಸಿದರೆ, ನೀವು ಈ ರೈಲು ಪ್ರಯಾಣವನ್ನು ಒಂದೇ ಬಾರಿಗೆ ಆನಂದಿಸಬಹುದು, ಇಲ್ಲದಿದ್ದರೆ ನಿಮ್ಮ ರಜಾ ದಿನಗಳನ್ನು ನೋಡಿಕೊಂಡು ನಿಮ್ಮ ಟ್ರಿಪ್ ಅನ್ನು ಯೋಜಿಸಿಕೊಳ್ಳಬಹುದು.
Published by:vanithasanjevani vanithasanjevani
First published: