• Home
  • »
  • News
  • »
  • lifestyle
  • »
  • Easy Snacks: ಮಳೆಗಾಲದಲ್ಲಿ ಟ್ರೈ ಮಾಡಲೇಬೇಕಾದ ಗರಿಗರಿ ಸ್ನ್ಯಾಕ್ಸ್​..!

Easy Snacks: ಮಳೆಗಾಲದಲ್ಲಿ ಟ್ರೈ ಮಾಡಲೇಬೇಕಾದ ಗರಿಗರಿ ಸ್ನ್ಯಾಕ್ಸ್​..!

ಮಳೆಗಾಲದ ಗರಿಗರಿ ಸ್ನ್ಯಾಕ್ಸ್​

ಮಳೆಗಾಲದ ಗರಿಗರಿ ಸ್ನ್ಯಾಕ್ಸ್​

ಹೊರಗೆ ಮಳೆ... ಮನೆಯಲ್ಲಿ ಚಳಿ... ಇಂತಹ ವಾತಾವರಣದಲ್ಲಿ ಸಂಜೆ ಬಿಸಿ ಬಿಸಿಯಾಗಿರ ಕಾಫಿ ಅಥವಾ ಟೀ ಜತೆ ಸೇವಿಸಲು ಗರಿ ಗರಿ ಸ್ನ್ಯಾಕ್ಸ್​ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ. ಇಲ್ಲಿವೆ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಗರಿ ಗರಿ ಸ್ನ್ಯಾಕ್ಸ್​ ರೆಸಿಪಿ.

  • Share this:

ಮಳೆಗಾಲದಲ್ಲಿ ಬಿಸಿಬಿಸಿಯಾಗಿ ಗರಿಗರಿಯಾಗಿ ತಿನ್ನಬೇಕೆಂಬ ಹಂಬಲ ಇದ್ದೇ ಇರುತ್ತದೆ. ಮನೆಯಲ್ಲೇ ಇರುವಾಗ ಸುಲಭವಾಗಿ ಏನಾದರೂ ಮಾಡಿ ತಿನ್ನಬೇಕೆಂಬ ಚಪಲವುಂಟಾಗುವುದು ಸಹಜ. ಅದರಲ್ಲೂ ಮಾಡುವ ತಿನಿಸು ಸರಳವಾಗಿರಬೇಕು ಮತ್ತು ಬಾಯಿಗೆ ರುಚಿಯನ್ನುಂಟು ಮಾಡುವಂತಿರಬೇಕು. ಹಾಗಿದ್ದರೆ ಮಳೆಗಾಲದಲ್ಲಿ ರುಚಿ ಮತ್ತು ಸುಲಭವಾಗಿ ಮಾಡಬಹುದಾದ ಬೇರೆ ಬೇರೆ ರೆಸಿಪಿಗಳನ್ನು ನಾವಿಲ್ಲಿ ನೀಡುತ್ತಿದ್ದು, ನೀವು ಇದನ್ನು ಟ್ರೈ ಮಾಡಲೇಬೇಕು.


ಪಕೋಡಾಗಳು


ಟೀ ಸಮಯದಲ್ಲಿ ತಟ್ಟನೆ ನೆನಪಾಗುವುದು ಬಿಸಿಬಿಸಿಯಾದ ಪಕೋಡಾಗಳು. ಈರುಳ್ಳಿ ಕಡಲೆಹಿಟ್ಟು, ಮೆಣಸಿನ ಹುಡಿ, ಇಂಗು, ಉಪ್ಪು, ಎಣ್ಣೆ,ಕರಿಬೇವಿನ ಸೊಪ್ಪು ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಗಳು. ಬರಿಯ ಈರುಳ್ಳಿ ಮಾತ್ರವಲ್ಲದೆ ಬದನೆ, ಆಲೂಗೆಡ್ಡೆ, ಕ್ಯಾಪ್ಸಿಕಮ್​ ಮೊದಲಾದ ತರಕಾರಿಗಳನ್ನು ಬಳಸಿ ಪಕೋಡಾಗಳನ್ನು ತಯಾರಿಸಬಹುದು.


ಸ್ಪ್ರಿಂಗ್ ರೋಲ್ಸ್


ಚೀನಾದ ಖಾದ್ಯವಾಗಿರುವ ಇದು ಭಾರತದ ಪ್ರತಿ ಮನೆಯಲ್ಲೂ ಹೆಸರುವಾಸಿ. ಚೀನಾದಲ್ಲಿ ವಸಂತಕಾಲದಲ್ಲಿ ಮಾಡುವ ಖಾದ್ಯವಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ತರಕಾರಿ ಇಲ್ಲವೇ ಚಿಕನ್ ಅನ್ನು ಬಿಳಿಯ ಶೀಟ್ ಮತ್ತು ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟಿನಿಂದ ಸುತ್ತಿ ಇದನ್ನು ತಯಾರಿಸಬಹುದು. ಇದನ್ನು ಎಣ್ಣೆಯಲ್ಲಿ ಕರಿಯಬಹುದು ಅಥವಾ ಬೇಕ್ ಕೂಡ ಮಾಡಬಹುದು. ತರಕಾರಿ ಇಲ್ಲವೇ ಮಾಂಸವನ್ನು ಫಿಲ್ಲಿಂಗ್ ಆಗಿ ಬಳಸಬಹುದು.


ಫ್ರೆಂಚ್ ಫ್ರೈಸ್


ಫ್ರೆಂಚ್ ಫ್ರೈಸ್ ಎಲ್ಲರ ಅಚ್ಚುಮೆಚ್ಚಿನದಾಗಿದೆ. ಮನೆಯಲ್ಲಿ ಇದನ್ನು ಸುಲಭವಾಗಿ ತಯಾರಿಸಬಹುದು. ರೆಸ್ಟೋರೆಂಟ್‌ನಲ್ಲಿ ಲಭ್ಯವಿದ್ದರೂ ಮನೆಯಲ್ಲಿ ಇದನ್ನು ಸುಲಭವಾಗಿ ತಯಾರಿಸಬಹುದು. ಸ್ವಲ್ಪ ಉಪ್ಪು, ಕಾಳುಮೆಣಸು, ಮೆಣಸಿನ ಪುಡಿಯನ್ನು ಹಾಕಿ ಕೂಡ ಇದನ್ನು ಗರಿಗರಿಯಾಗಿ ತಯಾರಿಸಬಹುದು.


ಚಹಾ ಕಾಫಿ ಮಜ


ಮಳೆಗಾಲದ ದಿನಗಳಲ್ಲಿ ಶುಂಠಿ ಅಥವಾ ಏಲಕ್ಕಿ ಚಹಾ ಮಾಡುವುದು ಸಾಮಾನ್ಯವಾಗಿದೆ. ಮನೆಮಂದಿಯೊಂದಿಗೆ ಬಿಸಿಬಿಸಿಯಾದ ಚಹಾವನ್ನು ಹೀರುವುದೇ ಸ್ವರ್ಗಸುಖವಾಗಿದೆ. ಇನ್ನು ಕಾಫಿ ಪ್ರಿಯರು ಕ್ವಾರಂಟೈನ್ ಕಾಫಿ, ಡಾಲ್ಗೊನಾ ಕಾಫಿಯನ್ನು ಕೂಡ ಮನೆಯಲ್ಲಿ ಆಸ್ವಾದಿಸಬಹುದು.


ಸಮೋಸ


ಭಾರತೀಯ ಅತಿಪ್ರಿಯವಾಗಿರುವ ಸ್ನ್ಯಾಕ್ ಎಂದರೆ ಸಮೋಸವಾಗಿದೆ. ಇದನ್ನು ಬಿಸಿಬಿಸಿಯಾದ ಚಹಾದೊಂದಿಗೆ ಆಸ್ವಾದಿಸಬಹುದು. ಪ್ರತಿ ಭಾರತೀಯರ ಮನೆಗಳಲ್ಲಿ ಇದು ಅಚ್ಚುಮೆಚ್ಚಿನ ಖಾದ್ಯವಾಗಿದೆ. ಚೈನೀಸ್ ಸಮೋಸ, ಕೀಮಾ ಸಮೋಸ, ಪಾಸ್ತಾ ಸಮೋಸ, ಹೂಕೂಸು ಸಮೋಸ, ತರಕಾರಿ ಸಮೋಸ ಹೀಗೆ ಸಮೋಸಾದಲ್ಲೂ ವಿವಿಧ ವೆರೈಟಿಗಳನ್ನು ತಯಾರಿಸಬಹುದು.


ಹಣ್ಣಿನ ಚಾಟ್


ಇನ್ನು ನೀವು ಡಯೆಟ್ ಮಾಡುತ್ತಿದ್ದರೆ ಹಣ್ಣಿನ ಚಾಟ್ ಕೂಡ ಮಳೆಗಾಲದಲ್ಲಿ ಅತ್ಯುತ್ತಮವಾದುದು. ಎಲ್ಲಾ ರೀತಿಯ ಹಣ್ಣುಗಳನ್ನು ಬೌಲ್‌ನಲ್ಲಿ ಹಾಕಿ ಅದಕ್ಕೆ ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಚಾಟ್ ಅನ್ನು ತಯಾರಿಸಬಹುದು. ಬೇಕಿದ್ದರೆ ಚಾಟ್ ಮಸಾಲೆಯ ಘಮವನ್ನು ಇದಕ್ಕೆ ಸೇರಿಸಿ ಇನ್ನಷ್ಟು ಸ್ವಾದಿಷ್ಟಗೊಳಿಸಬಹುದು.


ಬ್ರೆಡ್ ಪಕೋಡಾ


ಹೆಚ್ಚಿನ ಮನೆಗಳಲ್ಲಿ ಈ ಸ್ನ್ಯಾಕ್ ಅನ್ನು ಸುಲಭವಾಗಿ ತಯಾರಿಸಬಹುದಾಗಿದೆ. ತ್ರಿಕೋನಾಕಾರದಲ್ಲಿ ಕತ್ತರಿಸಿದ ಬ್ರೆಡ್ ಅನ್ನು ಮೆಣಸಿನ ಹುಡಿ ಸೇರಿಸಿದ ಕಡಲೆ ಹಿಟ್ಟಿನಲ್ಲಿ ಮುಳುಗಿಸಿ ಬ್ರೆಡ್ ಪಕೋಡಾವನ್ನು ತಯಾರಿಸಬಹುದು. ಇದಕ್ಕೆ ಪನ್ನೀರ್ ಇಲ್ಲವೇ ಆಲೂಗೆಡ್ಡೆಯನ್ನು ಮಿಶ್ರ ಮಾಡಿಕೊಳ್ಳಬಹುದು. ಮಸಾಲೆ ಚಹಾ ಅಥವಾ ಶುಂಠಿ ಚಹಾದೊಂದಿಗೆ ಪಕೋಡಾವನ್ನು ಗರಿಗರಿಯಾಗಿ ಸೇವಿಸಬಹುದು.


ದಾಲ್ ವಡಾ


ದಾಲ್ ವಡಾ ಜನಪ್ರಿಯವಾಗಿರುವ ಗರಿಗರಿಯಾದ ತಿನಿಸಾಗಿದೆ. ಇದನ್ನು ಮಸಾಲೆ ವಡಾ ಎಂದೂ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ರಸ್ತೆಬದಿಯ ತಿಂಡಿಗಳಲ್ಲಿ ಇದೂ ಜನಪ್ರಿಯವಾದುದು. ಇದಕ್ಕೆ ಮಸಾಲೆಗಳನ್ನು ಸೇರಿಸುತ್ತಾರೆ. ಅಂತೆಯೇ ಈರುಳ್ಳಿ, ಕರಿಬೇವಿನಸೊಪ್ಪು, ಬೇರೆ ಬೇರೆ ಸೊಪ್ಪುಗಳನ್ನು ಹಾಕಿ ತಯಾರಿಸುತ್ತಾರೆ.


ಬಟಾಟೆ ವಡಾ


ಮಹಾರಾಷ್ಟ್ರದ ಸಸ್ಯಾಹಾರಿ ಖಾದ್ಯವಾಗಿರುವ ಬಟಾಟೆ ವಡೆಯನ್ನು ತಾಜಾ ಮತ್ತು ಬಿಸಿಯಾಗಿ ತಯಾರಿಸಲಾಗುತ್ತದೆ. ಇದಕ್ಕೆ ಹಿಸುಕಿದ ಆಲೂಗೆಡ್ಡೆಯನ್ನು ಕಡಲೆಹಿಟ್ಟು ಮತ್ತು ಕೊತ್ತಂಬರಿ ಮಿಶ್ರಣದೊಂದಿಗೆ ಬೆರೆಸಿ ನೆನಸಲಾಗುತ್ತದೆ. ನಂತರ ಎಣ್ಣೆಯಲ್ಲಿ ಕರಿದು ಬಟಾಟೆ ವಡೆಯನ್ನು ತಯಾರಿಸಲಾಗುತ್ತದೆ.

Published by:Anitha E
First published: