ಇಂದಿಗೂ ಭಾರತದಲ್ಲಿ (India) ಅನೇಕ ಜನರು (People) ತಮ್ಮ ಬೆಳಗಿನ ಉಪಹಾರಕ್ಕೂ (Morning Breakfast) ಮೊದಲು ರಸ್ಕ್ ಮತ್ತು ಚಹಾ (Rusk And Tea) ಸೇವಿಸುತ್ತಾರೆ. ಬೆಳಗ್ಗೆ ಎದ್ದು ಫ್ರೆಶ್ ಆದ ಕೂಡಲೇ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತುಂಬಾ ಜನರು ಬೆಳಗ್ಗೆ ಚಹಾ ಮತ್ತು ರಸ್ಕ್, ಟೋಸ್ಟ್, ಬ್ರೆಡ್ ಸೇವನೆ ಮಾಡ್ತಾರೆ. ಚಹಾ ಮತ್ತು ರಸ್ಕ್ ಇಲ್ಲದಿದ್ದರೆ ಕೆಲವರು ಬೆಳಗ್ಗೆಯೇ ಮೂಡ್ ಹಾಳು ಮಾಡಿಕೊಳ್ಳುತ್ತಾರೆ. ಆದರೆ ಹೀಗೆ ಸೇವಿಸುವ ಚಹಾ ಮತ್ತು ರಸ್ಕ್ ಆರೋಗ್ಯಕ್ಕೆ ಒಳ್ಳೆಯದೇ, ಇದು ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ? ಇದೆಲ್ಲವನ್ನೂ ಸರಿಯಾಗಿ ಯೋಚನೆ ಮಾಡುವುದಿಲ್ಲ.
ಬೆಳಗ್ಗೆ ರಸ್ಕ್ ಮತ್ತು ಚಹಾ ಸೇವನೆ ಆರೋಗ್ಯಕ್ಕೆ ಹಾನಿಕರ!
ಇನ್ನು ಕೆಲವರಿಗೆ ಚಹಾ ಮತ್ತು ರಸ್ಕ್ ಸೇವನೆ ಕೆಟ್ಟದ್ದು ಎಂದು ಗೊತ್ತಿದ್ದರೂ ಸಹ ಬಿಡಲು ಸಾಧ್ಯವಿಲ್ಲದೇ ಸೇವನೆ ಮಾಡುತ್ತಾರೆ. ತಮ್ಮ ದಿನವನ್ನು ತುಂಬಾ ಜನರು ಚಹಾ ಮತ್ತು ರಸ್ಕ್ ತಿನ್ನುವ ಮೂಲಕ ಆರಂಭಿಸುತ್ತಾರ. ಪ್ರತಿ ಬಾರಿ ಚಹಾದ ಜೊತೆಗೆ ಬಿಸ್ಕತ್ತು ಅಥವಾ ರಸ್ಕ್ ಸೇವನೆ ಮಾಡುತ್ತಾರೆ. ಇದು ಆರೋಗ್ಯಕರವಲ್ಲ ಅಂತಾರೆ ತಜ್ಞರು. ಬೆಳಗಿನ ಉಪಾಹಾರವು ಯಾವಾಗಲೂ ದಿನದ ಮೊದಲ ಊಟವಾಗಿರುತ್ತದೆ.
ಇದರಲ್ಲಿ ಯಾವಾಗಲೂ ಆರೋಗ್ಯಕರ ಮತ್ತು ಪೋಷಕಾಂಶ ಸಮೃದ್ಧ ಪದಾರ್ಥಗಳನ್ನು ಸೇವನೆ ಮಾಡಬೇಕಾಗುತ್ತದೆ. ಇದು ನಿಮಗೆ ದಿನವಿಡೀ ಶಕ್ತಿ ನೀಡುತ್ತದೆ. ಚಹಾದ ಜೊತೆ ರಸ್ಕ್ ಸೇವಿಸುವುದು ಸ್ವಲ್ಪ ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಆದರೆ ಇದು ಆರೋಗ್ಯಕ್ಕೆ ಶತ್ರುವಿದ್ದಂತೆ.
ಚಹಾದೊಂದಿಗೆ ರಸ್ಕ್ ಸೇವನೆಯು ಅನೇಕ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ. ದಿನವೂ ರಸ್ಕ್ ಮತ್ತು ಚಹಾ ಸೇವಿಸುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ರಸ್ಕ್ ಸೇವನೆ ಹೇಗೆ ಆರೋಗ್ಯಕ್ಕೆ ಒಳ್ಳೆಯದಲ್ಲ?
ಚಹಾದ ಜೊತೆ ರಸ್ಕ್ ಸೇವಿಸುವುದು ಕಡಿಮೆ ಕ್ಯಾಲೊರಿ ಎಂದು ನೀವು ತಿಳಿಸದರೆ ಇದು ತಪ್ಪು. ವಿಶೇಷ ಸಂಶೋಧನೆಯೊಂದರ ಪ್ರಕಾರ, ಬ್ರೆಡ್ಗಿಂತ ಹೆಚ್ಚಿನ ಕ್ಯಾಲೊರಿಗಳು ರಸ್ಕ್ನಲ್ಲಿ ಕಂಡು ಬರುತ್ತವೆ. 100 ಗ್ರಾಂ ರಸ್ಕ್‌ನಲ್ಲಿ ಸುಮಾರು 407 ಕ್ಯಾಲೋರಿ ಇದೆ. ಬಿಳಿ ಬ್ರೆಡ್‌ನಲ್ಲಿ ಸುಮಾರು 232 ರಿಂದ 250 ಕಿಲೋ ಕ್ಯಾಲರಿ ಇದೆ.
ರಸ್ಕ್ ಸಂಸ್ಕರಿಸಿದ ಆಹಾರ
ರಸ್ಕ್ ತಯಾರಿಕೆಯಲ್ಲಿ ಮೈದಾ ಬಳಸಲಾಗುತ್ತದೆ. ಸ್ವಲ್ಪ ರವೆ ಸೇರಿಸಲಾಗುತ್ತದೆ. ಹೀಗಾಗಿ ಇದು ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ರಸ್ಕ್ ತಿನ್ನುವುದರಿಂದ ಇನ್ಸುಲಿನ್ ಸ್ಪೈಕ್‌ಗಳಿಂದ ರಕ್ತದ ಸಕ್ಕರೆ ಮಟ್ಟ ಹೆಚ್ಚುತ್ತದೆ.
ತೂಕ ಹೆಚ್ಚಾಗಲು ಕಾರಣವಾಗಿದೆ ರಸ್ಕ್ ಸೇವನೆ
ರಸ್ಕ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಗಳ ಪ್ರಮಾಣ ಹೆಚ್ಚು. ರಸ್ಕ್ ಅನ್ನು ಅತಿಯಾಗಿ ಸೇವಿಸಿದರೆ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಮಧುಮೇಹ ಸಹ ಬರಬಹುದು. ಸಂಸ್ಕರಿಸಿದ ಸಕ್ಕರೆಯನ್ನು ರಸ್ಕ್‌ಗೆ ಮಾಧುರ್ಯ ತರಲು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ.
ಇದು ಆರೋಗ್ಯಕ್ಕೆ ತುಂಬಾ ಹಾನಿಕರ. ರಸ್ಕ್ ಸೇವನೆಯು ರಕ್ತದ ಸಕ್ಕರೆಯ ಮಟ್ಟ ಹೆಚ್ಚಿಸಲು ಕಾರಣ ಅಂತಾರೆ ತಜ್ಞರು. ಹೀಗಾಗಿ ರಸ್ಕ್ ಸೇವನೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.
ರಸ್ಕ್ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ
ಆಹಾರ ತಜ್ಞರ ಪ್ರಕಾರ, ರಸ್ಕ್ ತಯಾರಿಸಲು ಬಳಸುವ ತೈಲವು ಹೆಚ್ಚಾಗಿ ತುಪ್ಪ ಅಥವಾ ಮಾರ್ಗರೀನ್ ಆಗಿದೆ. ಇದು ದೇಹದ ಉಷ್ಣತೆಯಲ್ಲೂ ದೇಹದಲ್ಲಿ ಗಟ್ಟಿಯಾಗುತ್ತದೆ. ಹಾಗಾಗಿ ಇದು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಉಂಟು ಮಾಡುತ್ತದೆ. ದಿನವೂ ರಸ್ಕ್ ಸೇವನೆಯಿಂದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಶುರುವಾಗುತ್ತದೆ. ಇದು ಹೃದಯಾಘಾತಕ್ಕೂ ಕಾರಣವಾಗಬಹುದು.
ಹೃದಯ ಕಾಯಿಲೆಗೆ ರಸ್ಕ್ ಸೇವನೆಯು ಕಾರಣ
ಚಹಾದ ಜೊತೆ ರಸ್ಕ್ ಸೇವಿಸಿದರೆ ಇದು ಹೃದಯದ ಆರೋಗ್ಯಕ್ಕೆ ಹಾನಿಕರ. ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಇದು ಹೃದ್ರೋಗದ ಮುಖ್ಯ ಅಪಾಯಕಾರಿ ಅಂಶವಾಗಿದೆ. ಅಧಿಕ ರಕ್ತದೊತ್ತಡ, ಅಧಿಕ ತೂಕ, ಮಧುಮೇಹ, ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರ ತೂಕ ಎಷ್ಟಿರಬೇಕು? ಅವರ ಜೀವನಶೈಲಿ ಹೇಗಿರಬೇಕು?
ಹೊಟ್ಟೆಯ ಸಮಸ್ಯೆಗೆ ಕಾರಣ
ನಿಯಮಿತವಾಗಿ ರಸ್ಕ್ ಅನ್ನು ಚಹಾದ ಜೊತೆ ಸೇವಿಸಿದರೆ ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಗ್ಯಾಸ್, ಕಳಪೆ ಜೀರ್ಣಕ್ರಿಯೆ, ಆಮ್ಲೀಯತೆ, ಮಲಬದ್ಧತೆ ಸಮಸ್ಯೆ ಎದುರಿಸಬೇಕಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ