ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಉತ್ತಮ?: ಸಂಶೋಧನೆಯಿಂದ ತಿಳಿದು ಬಂತು ಹೊಸ ಸತ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಲೈಂಗಿಕ ಜೀವನದ ಕುರಿತಾಗಿ ಅನೇಕರಲ್ಲಿ ಹಲವಾರು ಗೊಂದಲಗಳಿವೆ. ಇದರಲ್ಲಿ ಮುಖ್ಯವಾಗಿ ಲೈಂಗಿಕ ಕ್ರಿಯೆ ನಡೆಸಬಹುದಾದ ಸೂಕ್ತ ಸಮಯ ಯಾವುದೆಂಬ ಪ್ರಶ್ನೆ. ಇಂತಹದೊಂದು ನಿಗೂಢ ಪ್ರಶ್ನೆಗೆ ಸಂಶೋಧಕರು ಉತ್ತರ ನೀಡಿದ್ದಾರೆ. ಈ ಅಧ್ಯಯನದ ಪ್ರಕಾರ ರಾತ್ರಿಗಿಂತ ಬೆಳಿಗ್ಗೆ ಲೈಂಗಿಕ ಕ್ರಿಯೆಯಲ್ಲಿ ಏರ್ಪಡುವುದು ಉತ್ತಮವಂತೆ.

  ಬೆಳಗಿನ ಜಾವ ಪುರುಷರ ಹಾಗೂ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಬಿಡುಗಡೆ ಹೆಚ್ಚಾಗಿರುತ್ತದೆ. ಹೀಗಾಗಿ ಲೈಂಗಿಕ ಆಕಾಂಕ್ಷೆ ಕೆರಳುವ ಸಮಯ ಕೂಡ ಇದಾಗಿರುತ್ತದೆ. ಇಂತಹ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಏರ್ಪಡುವುದು ಉತ್ತಮ. ಅದರಲ್ಲೂ ಮುಂಜಾನೆ ವೇಳೆಯಲ್ಲಿ ಸೆಕ್ಸ್​ ನಡೆಸುವುದರಿಂದ ಲೈಂಗಿಕ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ. ಇದರಿಂದ ದಂಪತಿಯ ಲೈಂಗಿಕ ಜೀವನ ಉತ್ತಮಗೊಳ್ಳಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

  ಇದನ್ನೂ ಓದಿ: ಸೆಟ್ಟೇರಿತು ರಾಜಮೌಳಿಯ ಹೊಸ ಚಿತ್ರ: ಈ ಬಾರಿ ಜೂ.ಎನ್​ಟಿಆರ್ vs ರಾಮ್​ ಚರಣ್

  ಲೈಂಗಿಕತೆ ಎಂದರೆ ಕೇವಲ ಸಂತೃಪ್ತಿ ಪಡೆಯುವುದು ಮಾತ್ರ ಆಗಿರುವುದಿಲ್ಲ. ಬದಲಾಗಿ ಪುರುಷರ ಮತ್ತು ಮಹಿಳೆಯರ ಭಾವನಾತ್ಮಕ ಸಂಬಂಧ ಸೆಕ್ಸ್​ನಿಂದ ವೃದ್ಧಿಸುತ್ತದೆ. ಹೀಗಾಗಿ ಇಬ್ಬರಿಗೂ ಸೂಕ್ತವಾದ ಸಮಯವನ್ನು ಆರಿಸಿಕೊಳ್ಳುವ ಬಗ್ಗೆ ಕೂಡ ಗಮನ ಹರಿಸಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

  ಇದನ್ನೂ ಓದಿ: #KGF ಹೊಸ ದಾಖಲೆ: ಸೂಪರ್ ಸ್ಟಾರ್​ಗಳನ್ನು ಹಿಂದಿಕ್ಕಿದ ರಾಕಿಂಗ್ ಸ್ಟಾರ್

  ತಿಂಗಳಲ್ಲಿ ನಿರ್ದಿಷ್ಟವಾಗಿ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದರಿಂದ ಕೂಡ ಲೈಂಗಿಕ ಸಾಮರ್ಥ್ಯ ಹೆಚ್ಚಾಗುವುದು ಎಂದು ತಿಳಿಸಿರುವ ಸಂಶೋಧಕರು, ಜಂಕ್ ಫುಡ್, ವಿಪರೀತ ಆಹಾರ ಸೇವನೆಯಿಂದ ಸೆಕ್ಸ್ ಜೀವನಕ್ಕೆ ಕುತ್ತುಂಟಾಗುತ್ತದೆ ಎಂದಿದ್ದಾರೆ. ಅಲ್ಲದೆ ಇದೇ ಅಧ್ಯಯನದಲ್ಲಿ ಮಹಿಳೆಯರಿಗೆ ಅಂಡೋತ್ಪತ್ತಿಯಾದ ಹತ್ತು ದಿನಗಳ ಬಳಿಕ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದು ಸೂಕ್ತ ಸಮಯ ಎಂದೂ ಕೂಡ ತಿಳಿಸಿದ್ದಾರೆ.

  ಇದನ್ನೂ ಓದಿ:ರಾಕಿಂಗ್ ಸ್ಟಾರ್ vs ಪವರ್ ಸ್ಟಾರ್: ಒಂದೇ ಸಿನಿಮಾದಲ್ಲಿ ಅಪ್ಪು-ಯಶ್?
  First published: