ರಕ್ತದ ಸಕ್ಕರೆ ನಿಯಂತ್ರಣದಲ್ಲಿಡಲು, ತೂಕ ನಷ್ಟಕ್ಕೆ (Weight Loss), ಮಧುಮೇಹ (Diabetes) ತಡೆಗೆ ತಜ್ಞರು ವಾಕಿಂಗ್ (Walking) ಮಾಡಿ ಅಂತಾ ಹೇಳ್ತಾರೆ. ಇಡೀ ದೇಹವನ್ನು ಆರೋಗ್ಯವಾಗಿಡೋಕೆ (Body Health) ವಾಕಿಂಗ್ ತುಂಬಾ ಮುಖ್ಯ. ಇದು ತೂಕ ಇಳಿಕೆಗೆ ಮತ್ತು ನಿಯಂತ್ರಣದಲ್ಲಿಡೋಕೆ ಸಹಾಯ ಮಾಡುತ್ತದೆ. ವಾಕಿಂಗ್ ಮಾಡಿದ್ರೆ ಒಂದಲ್ಲ ಸಾಕಷ್ಟು ಆರೋಗ್ಯ ಪ್ರಯೋಜನ ಸಿಗುತ್ತೆ. ಹೃದಯದ ಆರೋಗ್ಯ ಕಾಪಾಡಬಹುದು. ವಾಕಿಂಗ್ ದೈಹಿಕ ಚಟುವಟಿಕೆ ಇಡೀ ದೇಹ ಮತ್ತು ಮನಸ್ಸನ್ನು ತಾಜಾ ಆಗಿರಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬೇಗ ಬರ್ನ್ ಮಾಡೋಕೆ ಇದು ಸಹಾಯ ಮಾಡುತ್ತೆ ಅಂತಾ ಹೇಳಿದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ತೂಕ ಬೇಗ ಕಡಿಮೆಯಾಗುತ್ತೆ
ಕೆಲವು ಅಧ್ಯಯನಗಳ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಬೇಗ ಕರಗುತ್ತೆ. ಅನೇಕ ರೋಗಗಳನ್ನು ತಡೆಯೋಕೆ ಇದು ಸಹಾಯ ಮಾಡುತ್ತೆ.
ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ ಅನ್ನೋದನ್ನ ಸಂಶೋಧನೆಯೊಂದು ಹೇಳಿದೆ.
ಜಿ ಎ ವಾಲಿಸ್ ಮತ್ತು ಜೇವಿಯರ್ ಟಿ ಗೊನ್ಜಾಲೆಜ್ ಅವರ ಸಂಶೋಧನಾ ವರದಿಯು 2018 ರಲ್ಲಿ ಪಬ್ಮೆಡ್ ಸೆಂಟ್ರಲ್ ನಲ್ಲಿ ಪ್ರಕಟವಾಗಿದೆ. ಅದರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ಕಾರ್ಬೋಹೈಡ್ರೇಟ್ ಗಳು ತಕ್ಷಣವೇ ಗ್ಲೂಕೋಸ್ ಆಗಿ ವಿಭಜನೆ ಆಗುತ್ತವೆ.
ಗ್ಲೂಕೋಸ್ ರಕ್ತದಲ್ಲಿ ಹರಿಯಲು ಪ್ರಾರಂಭಿಸುತ್ತದೆ. ಇದು ಸ್ನಾಯುಗಳು ಮತ್ತು ಯಕೃತ್ತಿನಲ್ಲಿ ಗ್ಲೈಕೋಜೆನ್ ಆಗಿ ಸಂಗ್ರಹ ಆಗುತ್ತದೆ. ಇದು ಶಕ್ತಿಯ ತ್ವರಿತ ಪೂರೈಕೆ ಮಾಡಿ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದು ಹೇಳಿದೆ.
ದೇಹವು ಹೆಚ್ಚು ಕೊಬ್ಬನ್ನು ಸುಡುತ್ತದೆ
ವೇಗವಾಗಿ ಹೆಜ್ಜೆ ಹಾಕಿದಷ್ಟೂ ದೈಹಿಕ ಚಟುವಟಿಕೆ ಹೆಚ್ಚುತ್ತದೆ ಮತ್ತು ಆರೋಗ್ಯ ಪ್ರಯೋಜನದ ಜೊತೆಗೆ ತೂಕ ಇಳಿಕೆ ಬೇಗ ಆಗುತ್ತದೆ ಎಂದು ಹೇಳಿದೆ. ಹೊಟ್ಟೆಯು ಖಾಲಿ ಆದ್ರೆ ವಿಶೇಷವಾಗಿ ಯಕೃತ್ತಿನಲ್ಲಿ ಗ್ಲೈಕೊಜೆನ್ ಮಳಿಗೆಗಳು ಬೇಗ ಖಾಲಿಯಾಗುತ್ತವೆ.
ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ವಾಕಿಂಗ್ ಮಾಡಿದ್ರೆ ದೇಹವು ಹೆಚ್ಚು ಕೊಬ್ಬನ್ನು ಸುಡುತ್ತದೆ ಎಂದು ಸಂಶೋಧನೆ ಹೇಳಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಡೆಯುವುದು ಕೊಬ್ಬನ್ನು ವೇಗವಾಗಿ ಕರಗಿಸಲು ಗ್ಲೈಕೊಜೆನ್ ಕಡಿಮೆ ಲಭ್ಯವಿರುವುದು ಕಾರಣವಾಗಿದೆ ಎನ್ನುತ್ತವೆ ಇತರ ಅಧ್ಯಯನಗಳು.
ವಾಕಿಂಗ್ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಅಧ್ಯಯನದ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ವೇಗದ ವಾಕಿಂಗ್ ಮಾಡಿದರೆ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.
ಉಗುರು ಬೆಚ್ಚಗಿನ ನೀರನ್ನು ಕುಡಿದು ವಾಕಿಂಗ್ ಹೋಗಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ಮಾನಸಿಕ ಆರೋಗ್ಯಕ್ಕೂ ಸಹಕಾರಿ. ಬೆಳಿಗ್ಗೆ ವಾಕಿಂಗ್ ಹೋಗುವ ಮೊದಲು ಉಗುರು ಬೆಚ್ಚಗಿನ ನೀರು ಅಥವಾ ಗ್ರೀನ್ ಟೀ ಕುಡಿದರೆ ತೂಕವನ್ನು ಬೇಗ ಕರಗಿಸಲು ಮತ್ತು ಸಾಕಷ್ಟು ಪ್ರಯೋಜನ ನೀಡುತ್ತದೆ.
ನೀವು ಮಧುಮೇಹಿ ಅಥವಾ ಮಧುಮೇಹ ಪೂರ್ವ ರೋಗಿಗಳಲ್ಲದಿದ್ದರೆ, ನೀವು ಹಣ್ಣಿನ ರಸವನ್ನು ಸೇವಿಸಬಹುದು. ಕೆಲವರಿಗೆ ನಡೆಯುವಾಗ ಬೆವರು ಹೆಚ್ಚು ಬರುತ್ತದೆ. ಬಾಯಾರಿಕೆಯೂ ಆಗುತ್ತದೆ. ಆಗ ನೀವು ನೀರು ಕುಡಿಯಬಹುದು.
ಇದನ್ನೂ ಓದಿ: ಉತ್ತಮ ಜೀರ್ಣಕ್ರಿಯೆಗಾಗಿ ಈ ಪದಾರ್ಥಗಳನ್ನು ತಪ್ಪದೇ ಸೇವನೆ ಮಾಡಿ !
ಇನ್ನು ರಾತ್ರಿಯ ಊಟದ ನಂತರ ತಕ್ಷಣವೇ ಬ್ರಿಸ್ಕ್ ವಾಕ್ ಮಾಡಬೇಡಿ. ಆಹಾರವನ್ನು ಸೇವಿಸಿದ ನಂತರ ರಕ್ತ ಪರಿಚಲನೆಯು ಹೊಟ್ಟೆಯ ಕಡೆಗೆ ಹೆಚ್ಚಾಗುತ್ತದೆ. ಹಾಗಾಗಿ ವೇಗವಾಗಿ ನಡೆದರೆ ಹೊಟ್ಟೆ ನೋವು ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ