Relationship Tips: ಬೆಳಗ್ಗೆ ಎಂದಾಗ ಗಂಡ, ಹೆಂಡತಿ ಹೀಗೆ ಮಾಡಿದರೆ ಸಂಬಂಧ ಗಟ್ಟಿಯಾಗುತ್ತೆ!
Relationship Tips: ಬೆಳಗ್ಗೆ ಎಂದಾಗ ಗಂಡ, ಹೆಂಡತಿ ಹೀಗೆ ಮಾಡಿದರೆ ಸಂಬಂಧ ಗಟ್ಟಿಯಾಗುತ್ತೆ!
ಸಾಂದರ್ಭಿಕ ಚಿತ್ರ
ಬೆಳಗ್ಗೆ ಎದ್ದಾಗ ನಿಮ್ಮ ಹೆಂಡತಿಗೆ ನಗು ಮುಖದಿಂದ ಶುಭೋದಯ ಅಥವಾ ಗುಡ್ ಮಾರ್ನಿಂಗ್ ಅಂತ ಹೇಳಿ. ಇದು ದೊಡ್ಡ ವಿಚಾರವೇನಲ್ಲ. ನೀವು ಎಚ್ಚರಗೊಂಡು ಪರಸ್ಪರ ಸಂತೋಷದಿಂದ ಮಾತನಾಡಲು ಪ್ರಾರಂಭಿಸಿದಾಗ, ನಿಮ್ಮ ನಡುವೆ ಪಾಸಿಟಿವ್ ಆಲೋಚನೆಗಳು ಬರುತ್ತದೆ. ಶುಭೋದಯವನ್ನು ಹೇಳುವಾಗ ಸಣ್ಣ ಅಪ್ಪುಗೆಯನ್ನು ನೀಡಿ. ನಿಮ್ಮ ಉಷ್ಣತೆ ಖಂಡಿತವಾಗಿಯೂ ನಿಮ್ಮ ಹೆಂಡತಿಗೆ ಸಂತೋಷವನ್ನು ತರುತ್ತದೆ.
ಗಂಡ, ಹೆಂಡತಿ ಸಂಬಂಧಕ್ಕೆ ಕೊನೆಯಿಲ್ಲ. ದಂಪತಿ ಪ್ರಣಯಕ್ಕೆ ನಿರ್ದಿಷ್ಟ ಸಮಯವಿಲ್ಲವಾದರೂ, ಸಂಜೆ ಮತ್ತು ರಾತ್ರಿಯನ್ನು ಹೆಚ್ಚಾಗಿ ರೋಮ್ಯಾಂಟಿಕ್ ಸಮಯವೆಂದು ಪರಿಗಣಿಸಲಾಗುತ್ತದೆ. ಆದರೆ ವಾಸ್ತವವಾಗಿ ಬೆಳಗ್ಗೆ ರೋಮ್ಯಾಂಟಿಕ್ ಮೂಡ್ನಿಂದ ದಿನಚರಿ ಆರಂಭಿಸಿದರೆ, ಆ ದಿನ ಪೂರ್ತಿ ಸಂತೋಷದಿಂದ ಮತ್ತು ಉಲ್ಲಾಸದಿಂದ ಇರುತ್ತೀರಾ. ಬೆಳಗ್ಗೆ ನೀವು ಮಾಡುವ ಕೆಲವು ಕೆಲಸಗಳು ನಿಮ್ಮಿಬ್ಬರ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ದಿನ ಸಂತೋಷಕರವಾಗಿರಬೇಕೆಂದು ನೀವು ಬಯಸಿದರೆ, ಬೆಳಗ್ಗೆ ನೀವು ಈ 5 ಕೆಲಸಗಳನ್ನು ಮಾಡಿ.
ಶುಭೋದಯ : ಬೆಳಗ್ಗೆ ಎದ್ದಾಗ ನಿಮ್ಮ ಹೆಂಡತಿಗೆ ನಗು ಮುಖದಿಂದ ಶುಭೋದಯ ಅಥವಾ ಗುಡ್ ಮಾರ್ನಿಂಗ್ ಅಂತ ಹೇಳಿ. ಇದು ದೊಡ್ಡ ವಿಚಾರವೇನಲ್ಲ. ನೀವು ಎಚ್ಚರಗೊಂಡು ಪರಸ್ಪರ ಸಂತೋಷದಿಂದ ಮಾತನಾಡಲು ಪ್ರಾರಂಭಿಸಿದಾಗ, ನಿಮ್ಮ ನಡುವೆ ಪಾಸಿಟಿವ್ ಆಲೋಚನೆಗಳು ಬರುತ್ತದೆ. ಶುಭೋದಯವನ್ನು ಹೇಳುವಾಗ ಸಣ್ಣ ಅಪ್ಪುಗೆಯನ್ನು ನೀಡಿ. ನಿಮ್ಮ ಉಷ್ಣತೆ ಖಂಡಿತವಾಗಿಯೂ ನಿಮ್ಮ ಹೆಂಡತಿಗೆ ಸಂತೋಷವನ್ನು ತರುತ್ತದೆ.
ಕೆಲಸದಲ್ಲಿ ಭಾಗಿ: ಬೆಳಗ್ಗೆ ಅಡುಗೆ ಮಾಡುವುದರಿಂದ ಹಿಡಿದು ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳುಹಿಸುವವರೆಗೆ, ಅಥವಾ ಮಕ್ಕಳನ್ನು ನೋಡಿಕೊಳ್ಳುವ ಇತರೆ ಕೆಲಸಗಳನ್ನು ಮಹಿಳೆಯರೇ ಮಾಡುತ್ತಾರೆ. ಇದು ಅವರಲ್ಲಿ ಒಂದು ರೀತಿಯ ಹತಾಶೆಯ ಮನೋಭಾವವನ್ನು ಹುಟ್ಟುಹಾಕುತ್ತದೆ. ಕೆಲಸಕ್ಕೆ ಹೋಗುವ ಗಂಡನಿಗೆ ಬೇಕಾದ ಕೆಲಸವನ್ನೂ ಕೂಡ ಮಾಡುತ್ತಾರೆ. ಹಾಗಾಗಿ ನೀವು ಕೂಡ ನಿಮ್ಮ ಪತ್ನಿಗೆ ಸಹಾಯ ಮಾಡಿ.
ಅಂದರೆ, ಕೆಲಸವನ್ನು ಹಂಚಿಕೊಳ್ಳಿ. ಇಬ್ಬರೂ ಒಟ್ಟಿಗೆ ಕೆಲಸ ಮಾಡಿದಾಗ, ಪರಸ್ಪರರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಅಂತೆಯೇ, ಇಬ್ಬರೂ ಒಟ್ಟಿಗೆ ಕೆಲಸ ಮಾಡಿದಾಗ ಒಂದೇ ಕೆಲಸವನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದು. ಆಗ ಪರಸ್ಪರ ಪ್ರೀತಿ ಸಹಜವಾಗಿ ಹೆಚ್ಚುತ್ತದೆ. ಇಬ್ಬರೂ ಕೆಲಸವನ್ನು ಹಂಚಿಕೊಳ್ಳುವ ಸಮಯದಲ್ಲಿ ಹೆಂಡತಿ ನಿಮ್ಮೊಂದಿಗೆ ಮಾತನಾಡುತ್ತಾರೆ. ಅವರ ಚಿಂತನೆಯ ಪ್ರಕ್ರಿಯೆಯನ್ನು ನೀವು ಅರ್ಥಮಾಡಿಕೊಳ್ಳಬಹುದು.
ಒಟ್ಟಿಗೆ ಸ್ನಾನ : ಇಬ್ಬರೂ ಒಟ್ಟಿಗೆ ಸ್ನಾನ ಮಾಡಿದರೆ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಸಂತೋಷಕ್ಕೆ ಸಮಯ ಮತ್ತು ಅವಧಿ ಇಲ್ಲ. ನಿಮ್ಮ ಸಂತೋಷವು ನಿಮ್ಮ ಮನಸ್ಸಿನ ಮೇಲೆ ಅವಲಂಬಿತವಾಗಿರುವುದರಿಂದ, ನಿಮಗೆ ಸಿಕ್ಕಾಗಲೆಲ್ಲಾ ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹೆಂಡತಿಯನ್ನು ಸಂತೋಷಪಡಿಸುವುದು ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.
ಒಟ್ಟಿಗೆ ತಿನ್ನುವುದು: ಗಂಡ ಮತ್ತು ಹೆಂಡತಿ ಒಟ್ಟಿಗೆ ತಿನ್ನುತ್ತಾರೆ. ಮಕ್ಕಳಿದ್ದರೆ ಎಲ್ಲರೂ ಒಂದು ರೌಂಡ್ ಕುಳಿಕೊಂಡು ಊಟ ಮಾಡುವುದನ್ನು ರೂಢಿಸಿಕೊಳ್ಳಿ. ಊಟ ಮಾಡುವಾಗ ಸ್ವಲ್ಪ ಕಾಮಿಡಿ ಮಾಡಿ, ಜೀವನದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿ ಖುಷಿಯಾಗಿರಿ. ಬೇಡದ ಆಲೋಚನೆಗಳನ್ನು ಬಿಡಿ. ಸಂತೋಷದ ಆಲೋಚನೆಗಳನ್ನು ಮಾತ್ರ ಮನಸ್ಸಿನಲ್ಲಿಟ್ಟು ಕೊಳ್ಳಿ.
top videos
ಮುದ್ದಾಟ: ಮದುವೆಯಾಗಿ ದಿನಗಳು ಕಳೆದಂತೆ ದಂಪತಿಗಳ ಮುದ್ದಾಟ ಕಡಿಮೆಯಾಗತೊಡಗುತ್ತದೆ. ಮಕ್ಕಳಿದ್ದರೆ ಹೇಳಬೇಕಾಗಿಲ್ಲ. ಆದರೆ ಎಷ್ಟು ವರ್ಷವಾದರೂ ದಿನವೂ ಹೆಂಡತಿಯನ್ನು ಅಪ್ಪಿಕೊಳ್ಳುವುದನ್ನು ಬಿಡಬೇಡಿ. ಪ್ರೀತಿ, ಮುದ್ದು ಮುದ್ದಾಗಿ ಅವರಲ್ಲಿರುವ ಮನಸ್ತಾಪಗಳು ಕ್ಷಣಮಾತ್ರದಲ್ಲಿ ಮಾಯವಾಗುತ್ತವೆ. ನೀವು ನಿಮ್ಮ ಹೆಂಡತಿಯನ್ನು ಅಪ್ಪಿಕೊಂಡಾಗ, ನಿಮ್ಮ ಆಂತರಿಕ ಸಮಸ್ಯೆಗಳ ಆಲೋಚನೆಗಳು ಕಣ್ಮರೆಯಾಗುತ್ತವೆ. ಹಾಗೆಯೇ ಮುಂಜಾನೆ ಕೈ ಹಿಡಿಯುವುದು, ಕಣ್ಣು ಉಜ್ಜುವುದು ಮುಂತಾದ ಸಣ್ಣ ಪುಟ್ಟ ಸ್ಪರ್ಶಗಳು ದಿನವನ್ನು ಸಂತೋಷದಿಂದ ಕಳೆಯುವಂತೆ ಮಾಡುತ್ತದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ