ತುಂಬಾ ಜನರು ಬೆಳಗ್ಗೆ (Morning) ಎದ್ದ ಕೂಡಲೇ ಟೀ, ಕಾಫಿ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಹೆಲ್ದೀ (Healthy) ಆಗಿರಲು ಮತ್ತು ಉತ್ತಮ ಆರೋಗ್ಯ ಹೊಂದಲು ನೀವು ಬೆಳಗ್ಗೆ ಎದ್ದ ಕೂಡಲೇ ಟೀ ಮತ್ತು ಕಾಫಿ (Tea And Coffee) ಕುಡಿಯುವ ಅಭ್ಯಾಸವನ್ನು ತಪ್ಪಿಸಿ ಅಂತಾ ಸಲಹೆ ನೀಡುತ್ತಾರೆ ತಜ್ಞರು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ (Empty Stomach) ನೀವು ಪೋಷಕಾಂಶ ಸಮೃದ್ಧ ಆಹಾರ ಸೇವನೆ ಮಾಡಿ. ಇದು ದೇಹದ (Body) ಆರೋಗ್ಯ ಹೆಚ್ಚಿಸುತ್ತದೆ. ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಕೆಫೀನ್ ಅಂಶವು ಕಾಫಿ ಪುಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಅನಾರೋಗ್ಯ ತಂದೊಡ್ಡುತ್ತದೆ
ಕಾಫಿಯ ಅತಿಯಾದ ಸೇವನೆಯು ಹೆಚ್ಚಿನ ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ಗಂಭೀರ ಕಾಯಿಲೆ ಉಂಟಾಗಲು ಕಾರಣವಾಗುತ್ತದೆ. ಕಾಫಿ ಕುಡಿಯುವ ಮೊದಲು ಪೇಪರ್ ಫಿಲ್ಟರ್ ಮೂಲಕ ಕಾಫಿಯನ್ನು ಫಿಲ್ಟರ್ ಮಾಡಿ ಕುಡಿಯಬೇಕು.
ಯಾಕಂದ್ರೆ ಕಾಫಿಯು ಕೆಟ್ಟ ಕೊಲೆಸ್ಟ್ರಾಲ್ ಉತ್ತೇಜಿಸುವ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಜೊತೆಗೆ ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ಪೌಷ್ಟಿಕತಜ್ಞ ಮನೋಲಿ ಮೆಹ್ತಾ ಅವರು ಕಾಫಿ ಬದಲು ಈ ಐದು ಆಹಾರಗಳ ಸೇವನೆ ಮಾಡಲು ಸಲಹೆ ನೀಡಿದ್ದಾರೆ. ಇದು ತ್ವರಿತ ಶಕ್ತಿ ನೀಡುತ್ತದೆ.
ಖರ್ಜೂರ ಸೇವನೆ ಮಾಡಿ
ಕಾಫಿಯ ಬದಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವನೆ ಮಾಡಿ. ಇದು ನೈಸರ್ಗಿಕ ಸಕ್ಕರೆ ಹೊಂದಿದೆ. ಇದು ತಕ್ಷಣ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ. ಹಾಗಾಗಿ ಕಾಫಿ ಸೇವನೆ ಬದಲು ದಿನದ ಮಧ್ಯದಲ್ಲಿ ನೀವು ಆಲಸ್ಯ ಹೋಗಲಾಡಿಸಲು ಒಂದು ಹಿಡಿ ಖರ್ಜೂರ ಸೇವನೆ ಮಾಡಿ.
ನಿಂಬೆ ಪುದೀನ ನೀರು ಸೇವಿಸಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಮತ್ತು ಪುದೀನಾ ನೀರು ಸೇವನೆ ಮಾಡಿ. ಇದು ತಾಜಾತನ ನೀಡುತ್ತದೆ. ಇದು ನಿರ್ಜಲೀಕರಣ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.
ನೀವು ನಿಂಬು ಮತ್ತು ಪುದಿನಾ ನೀರಿನಲ್ಲಿ ಕಿವಿ, ಸೇಬು ಅಥವಾ ಸೌತೆಕಾಯಿ ಪದಾರ್ಥಗಳನ್ನು ಸೇರಿಸಿ ಸೇವನೆ ಮಾಡಬಹುದು.
ಕಿತ್ತಳೆ ಹಣ್ಣು ಸೇವನೆ ಮಾಡಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಬದಲು ಕಿತ್ತಳೆ ಹಣ್ಣು ಸೇವನೆ ಮಾಡಿ. ಇದು ಸಾಕಷ್ಟು ವಿಟಮಿನ್-ಸಿ ಮತ್ತು ಶಕ್ತಿ ಹೊಂದಿದೆ. ಅದಕ್ಕಾಗಿ ನೀವು ಕಾಫಿ ಬದಲು ಕಿತ್ತಳೆ ಸೇವನೆ ಮಾಡಿ.
ಈ ಕಿತ್ತಳೆ ಹಣ್ಣು ನಿಮಗೆ ರಂಜಕ, ಖನಿಜ ಮತ್ತು ಫೈಬರ್ ನ್ನು ದೇಹಕ್ಕೆ ಒದಗಿಸುತ್ತದೆ. ಇದು ದೇಹದ ಉತ್ತಮ ಕಾರ್ಯ ಚಟುವಟಿಕೆಗೆ ಸಹಾಯ ಮಾಡುತ್ತದೆ.
ಬಾದಾಮಿ ಸೇವನೆ ಮಾಡಿ
ಬಾದಾಮಿ ಪದಾರ್ಥ ಸೇವನೆ ಮಾಡಿದರೆ ಹೆಚ್ಚಿನ ಪ್ರೋಟೀನ್ ಆಹಾರ ಸಿಗುತ್ತದೆ. ಇದು ಆರೋಗ್ಯಕರ ಕೊಬ್ಬಿನ ಜೊತೆಗೆ ಫೈಬರ್ ಅಂಶ ದೇಹಕ್ಕೆ ಒದಗಿಸುತ್ತದೆ.
ಈ ಡ್ರೈ ಫ್ರೂಟ್ ನಲ್ಲಿರುವ ವಿಟಮಿನ್ ಬಿ ದೇಹಕ್ಕೆ ಶಕ್ತಿ ಒದಗಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಹಾಗೆಯೇ ಇದು ಮೆಗ್ನೀಸಿಯಮ್ ಸ್ನಾಯುವಿನ ಆಯಾಸ ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಎಳ್ಳು ಬೀಜಗಳು
ಕಾಫಿಯ ಬದಲು ಹುರಿದ ಎಳ್ಳನ್ನೂ ಸೇವಿಸಿದರೆ ಶಕ್ತಿ ಸಿಗುತ್ತದೆ. ಇದು ಆರೋಗ್ಯಕರ ಕೊಬ್ಬು ಮತ್ತು ಒಮೆಗಾ 6 ಹೊಂದಿದೆ. ಹುರಿದ ಎಳ್ಳು ಸೇವನೆಯು ಆಯಾಸ ಮತ್ತು ಆಲಸ್ಯ ಸಮಸ್ಯೆ ಹೊಡೆದೋಡಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ