ಭಾರತೀಯರು (Indian’s) ತಮ್ಮ ಬೆಳಗಿನ ಉಪಹಾರದಲ್ಲಿ (Morning Breakfast) ಹೆಚ್ಚಾಗಿ ದೋಸೆ, ಇಡ್ಲಿ ವಡಾ, ಪುರಿ, ಆಲೂ ಪರಾಠಾ, ಉಪ್ಪಿಟ್ಟು, ಅವಲಕ್ಕಿ, ಪಡ್ಡು ಹೀಗೆ ಕೆಲ ಪದಾರ್ಥಗಳನ್ನು (Ingredients) ವಾರ ಪೂರ್ತಿ ವಿವಿಧ ಖಾದ್ಯ ತಯಾರಿಸಿ ತಿನ್ನುತ್ತಾರೆ. ಹೀಗೆ ಭಾರತೀಯರು ತಿನ್ನುವ ಕೆಲವು ಉಪಹಾರ ಖಾದ್ಯಗಳನ್ನು ಅತ್ಯಂತ ಕೆಟ್ಟ ತಿಂಡಿ (Worst Breakfast) ಎಂದು ಹೇಳಲಾಗಿದೆ. ಅಂದ ಹಾಗೇ ದಿನದ ಮೊದಲ ಊಟ ಅಂದ್ರೆ ಅದು ಬೆಳಗಿನ ತಿಂಡಿ. ಹೀಗಾಗಿ ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗಿನ ತಿಂಡಿಯು ಹೆಲ್ದೀ ಆಗಿರಬೇಕು. ಹೆಚ್ಚು ಪೌಷ್ಠಿಕ ತತ್ವಗಳಿಂದ ತುಂಬಿರಬೇಕು. ಎಣ್ಣೆಯುಕ್ತವಾಗಿರಬಾರದು ಎಂದು ತಜ್ಞರು ಹೇಳುತ್ತಾರೆ.
ಬೆಳಗಿನ ಉಪಹಾರ ಆರೋಗ್ಯವಾಗಿರಬೇಕು ಯಾಕೆ?
ದಿನದ ಮೊದಲ ತಿಂಡಿಯು ಪೌಷ್ಟಿಕವಾಗಿರಬೇಕು. ಫೈಬರ್, ಜೀವಸತ್ವಗಳು ಮತ್ತು ಪ್ರೋಟೀನ್ ಗಳಲ್ಲಿ ಸಮೃದ್ಧ ಉಪಹಾರ ಸೇವಿಸಿದರೆ ಆರೋಗ್ಯ ಕಾಪಾಡಲು ಸಾಧ್ಯ. ದೀರ್ಘಕಾಲ ಯಾವುದೇ ಕಾಯಿಲೆ, ಆರೋಗ್ಯ ತೊಂದರೆಯಿಲ್ಲದೇ ಬದುಕಬಹುದು.
ಬೆಳಗಿನ ಮುಖ್ಯವಾದ ಈ ತಿಂಡಿ ಸೇವನೆ ತಪ್ಪಿಸಿದರೆ ತಲೆನೋವು, ರಕ್ತದಲ್ಲಿ ಕಡಿಮೆ ಸಕ್ಕರೆ, ದೌರ್ಬಲ್ಯ ಮತ್ತು ತಲೆತಿರುಗುವಿಕೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಬೆಳಗಿನ ತಿಂಡಿ ಸೇವನೆ ತಪ್ಪಿಸಬಾರದು. ಹಾಗೂ ಉಪಹಾರದಲ್ಲಿ ಮೊಟ್ಟೆ, ಕ್ವಿನೋವಾ, ಓಟ್ ಮೀಲ್, ಕಾಫಿ, ಚಿಯಾ ಬೀಜ ಹಾಗೂ ಇತ್ಯಾದಿ ಆರೋಗ್ಯಕರ ಪದಾರ್ಥ ಬಳಸಬೇಕು.
ಬೆಳಗಿನ ಉಪಾಹಾರದಲ್ಲಿ ಕೆಲ ಆಹಾರ ಸೇವಿಸಿದ್ರೆ ಅದು ಆರೋಗ್ಯ ಹಾಳು ಮಾಡುತ್ತದೆ. ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ.
ಮಾರುಕಟ್ಟೆಯಿಂದ ರೆಡಿಮೇಡ್, ಪ್ಯಾಕೇಜ್ ಮಾಡಿದ ಹಣ್ಣಿನ ರಸ ಸೇವನೆ ಬೇಡ
ತಾಜಾ ಹಣ್ಣು ಮತ್ತು ತರಕಾರಿ ರಸ ಆರೋಗ್ಯಕರ. ಆದರೆ ಬೆಳಗಿನ ಉಪಾಹಾರದಲ್ಲಿ ಮಾರುಕಟ್ಟೆಯಿಂದ ರೆಡಿಮೇಡ್ ಪ್ಯಾಕ್ ಮಾಡಿದ ಹಣ್ಣು, ತರಕಾರಿ ಜ್ಯೂಸ್ ಪ್ಯಾಕೆಟ್ ತಂದು ಬೆಳಗ್ಗೆ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಇದರಲ್ಲಿ ಪರಿಮಳ, ಅಧಿಕ ಕೃತಕ ಸಕ್ಕರೆ ಇರುತ್ತೆ. ಇದು ಮಧುಮೇಹ ಕಾಯಿಲೆಗೆ ಕಾರಣವಾಗಬಹುದು.
ಆಲೂ ಪುರಿ ತಿಂಡಿ ಸೇವನೆ ತಪ್ಪಿಸಿ
ನೀವೂ ಬೆಳಗಿನ ತಿಂಡಿಯಲ್ಲಿ ಪುರಿ ಮತ್ತು ಆಲೂ ಪಲ್ಯ ತಿನ್ನಲು ಹೆಚ್ಚು ಇಷ್ಟ ಪಡಬಹುದು. ಆದರೆ ಇದು ಆರೋಗ್ಯ ಹದಗೆಡಿಸುತ್ತದೆ. ಯಾಕಂದ್ರೆ ಆಲೂ ಪುರಿಯನ್ನು ಎಣ್ಣೆಯಲ್ಲಿ ತಯಾರಿಸಲಾಗುತ್ತದೆ. ಜೊತೆಗೆ ಪುರಿಯನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾದಲ್ಲಿ ಯಾವುದೇ ಪೋಷಕಾಂಶಗಳಿಲ್ಲ.
ಇದನ್ನು ಬಿಳಿ ವಿಷ ಎಂದು ಕರೆಯುತ್ತಾರೆ. ಜೊತೆಗೆ ಪುರಿಯನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದರಲ್ಲಿ ಯಾವುದೇ ಪೋಷಕಾಂಶಗಳಿರಲ್ಲ. ಇದು ಕೆಟ್ಟ ಕೊಬ್ಬು, ಬೊಜ್ಜು, ಹೃದ್ರೋಗ, ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ.
ವಡಾ ಸಾಂಬಾರ್ ಸೇವನೆ ಬೇಡ
ಸಾಂಬಾರ್ ವಡಾ ಖಾದ್ಯ, ದಕ್ಷಿಣ ಭಾರತದ ಆಹಾರವಾಗಿದೆ. ಬೆಳಗಿನ ಉಪಾಹಾರದಲ್ಲಿ ತುಂಬಾ ಜನ ಸೇವಿಸುತ್ತಾರೆ. ವಡಾವನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದು ಜೀರ್ಣಕ್ರಿಯೆಗೆ ತೊಂದರೆ ಮಾಡುತ್ತದೆ. ಬೇಗ ಜೀರ್ಣವಾಗುವುದಿಲ್ಲ. ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆ ಉಂಟು ಮಾಡುತ್ತದೆ.
ಕಾರ್ನ್ ಫ್ಲೇಕ್ಸ್ ಸೇವನೆ ತಪ್ಪಿಸಿ
ಬೆಳಗಿನ ತಿಂಡಿಯಲ್ಲಿ ಪ್ಯಾಕ್ ಮಾಡಿದ ಕಾರ್ನ್ ಫ್ಲೇಕ್ಸ್ ಸೇವನೆ ಆರೋಗ್ಯಕರವಲ್ಲ. ಇದರಲ್ಲಿ ಸಕ್ಕರೆ, ಉಪ್ಪಿನ ಪ್ರಮಾಣ ಹೆಚ್ಚಿದೆ. ಕಾರ್ನ್ ಫ್ಲೇಕ್ಸ್ನಲ್ಲಿ ಫೈಬರ್ ಇಲ್ಲ. ಇದು ಅನಾರೋಗ್ಯಕರ ಉಪಹಾರದ ವರ್ಗಕ್ಕೆ ಸೇರಿದೆ.
ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!
ಜಾಮ್ ಮತ್ತು ಬಿಳಿ ಬ್ರೆಡ್ ಸೇವನೆ ಬೇಡ
ಬೆಳಗಿನ ಉಪಾಹಾರದಲ್ಲಿ ಬಿಳಿ ಬ್ರೆಡ್ ಹಣ್ಣಿನ ಜಾಮ್ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. ಇದು ಅನಾರೋಗ್ಯಕರ ಉಪಹಾರವಾಗಿದೆ. ಇದು ಸಕ್ಕರೆ, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಿಂದ ಕೂಡಿದೆ. ಇದು ಬೊಜ್ಜು ಮತ್ತು ಮಧುಮೇಹ ಕಾಯಿಲೆಗೆ ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ