• Home
  • »
  • News
  • »
  • lifestyle
  • »
  • Breakfast: ಬೆಳಗಿನ ಉಪಹಾರಕ್ಕೆ ಊದಲು ಅಕ್ಕಿಯ ಉಪ್ಪಿಟ್ಟು ರೆಸಿಪಿ ಹೀಗೆ ಮಾಡಿ!

Breakfast: ಬೆಳಗಿನ ಉಪಹಾರಕ್ಕೆ ಊದಲು ಅಕ್ಕಿಯ ಉಪ್ಪಿಟ್ಟು ರೆಸಿಪಿ ಹೀಗೆ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಉಪಾಹಾರಕ್ಕೆ ಆಹಾರ ಪೋಷಕಾಂಶ ಸಮೃದ್ಧವೂ ಆಗಿರಬೇಕಾಗುತ್ತದೆ. ದಿನವಿಡೀ ಶಕ್ತಿ ನೀಡುವ ಹಾಗೂ ಜಲಸಂಚಯನ ಕಾಪಾಡುವಂತಿರಬೇಕು. ನಾವು ಇಂದು ಊದಲು ಅಕ್ಕಿಯ ಉಪ್ಪಿಟ್ಟು ಅಂದ್ರೆ ಸಮಕ್ ರೈಸ್ ಉಪ್ಮಾ ರೆಸಿಪಿ ಮಾಡುವ ವಿಧಾನವನ್ನು ಇಲ್ಲಿ ನೋಡೋಣ.

  • Share this:

    ಬೆಳಗಿನ ಉಪಹಾರದಲ್ಲಿ (Morning Breakfast) ಟೇಸ್ಟಿ ಮತ್ತು ಆರೋಗ್ಯಕರ (Tasty And Healthy) ಮತ್ತು ಭಾರವಲ್ಲದ ಮತ್ತು ದೀರ್ಘಕಾಲ ಹೊಟ್ಟೆ ತುಂಬಿಸುವ ಆಹಾರ ಪದಾರ್ಥಗಳ (Food Ingredients) ಸೇವನೆ ಮಾಡುವುದು ತುಂಬಾ ಮುಖ್ಯ. ರುಚಿಕರ ಮತ್ತು ಹಗುರವಾದ ಆಹಾರ ಪದಾರ್ಥಗಳ ಸೇವನೆ ಮಾಡುವುದು ಹೊಟ್ಟೆಯ ಸಮಸ್ಯೆಗಳಿಂದಲೂ ನಿಮ್ಮನ್ನು ದೂರವಿಡುತ್ತದೆ. ಅದರಲ್ಲೂ ಈಗ ನವರಾತ್ರಿ ಆರಂಭವಾಗಿದ್ದು, ಈ ಉಪವಾಸ ವ್ರತಾಚರಣೆಯ ದಿನಗಳಲ್ಲಿ ಬೆಳಗಿನ ಆಹಾರ ಪೋಷಕಾಂಶ ಸಮೃದ್ಧವೂ ಆಗಿರಬೇಕಾಗುತ್ತದೆ. ದಿನವಿಡೀ ಶಕ್ತಿ ನೀಡುವ ಹಾಗೂ ಜಲಸಂಚಯನ ಕಾಪಾಡುವಂತಿರಬೇಕು. ಇದು ಉಪವಾಸದ ದಿನ ಹಾಗಾಗಿ ಆಯ್ಕೆಗಳು ತುಂಬಾ ಕಡಿಮೆ ಎಂದುಕೊಳ್ಳುವುದನ್ನು ಬಿಟ್ಟು ಹೊಸ ರೆಸಿಪಿ ಟ್ರೈ ಮಾಡಿ.  


    ಊದಲು / ಸಮಕ್ ಅಕ್ಕಿಯ ಉಪ್ಪಿಟ್ಟು ರೆಸಿಪಿ


    ಅದಕ್ಕೆಂದೇ ನಾವು ಇಂದು ಊದಲು ಅಕ್ಕಿಯ ಉಪ್ಪಿಟ್ಟು / ಸಮಕ್ ರೈಸ್ ಉಪ್ಮಾ ರೆಸಿಪಿ ಮಾಡುವ ವಿಧಾನವನ್ನು ಇಲ್ಲಿ ನೋಡೋಣ. ಈ ನವರಾತ್ರಿ ಉಪವಾಸದಲ್ಲಿ ನೀವು ಊದಲು ಅಕ್ಕಿಯ ಉಪ್ಪಿಟ್ಟು / ಸಮಕ್ ರೈಸ್ ಉಪ್ಮಾ ರೆಸಿಪಿ ಉತ್ತಮ ಪಾಕ ವಿಧಾನ ನೋಡೋಣ.


    ನಿಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ನೀವು ಯೋಚನೆ ಮಾಡಿದ್ದರೆ ಆರೋಗ್ಯಕರ ಊದಲು ಅಕ್ಕಿಯ ಉಪ್ಪಿಟ್ಟು / ಸಮಕ್ ರೈಸ್ ಉಪ್ಮಾ ರೆಸಿಪಿ ಮಾಡಿ ಸೇವಿಸಲು ಪ್ರಯತ್ನಿಸಿ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಸಮಕ್ / ಊದಲು ಅಕ್ಕಿಯು ಗ್ಲುಟನ್ ಮುಕ್ತ ಆಗಿದೆ. ಅಂಟು ಅಸಹಿಷ್ಣುತೆ ಇರುವವರಿಗೆ ಈ ಪಾಕ ವಿಧಾನ ಸೂಕ್ತ. ಈ ಪಾಕವಿಧಾನ ಉಪಹಾರಕ್ಕೆ ಸೂಕ್ತವಾಗಿದೆ. ಇದು ಭಾರವಾಗಿಲ್ಲ. ಇದು ಆರೋಗ್ಯಕರ ಮತ್ತು ರುಚಿಕರ ಸಮಕ್ ರೈಸ್ ಉಪ್ಪಿಟ್ಟು ಪಾಕವಿಧಾನವನ್ನು ತ್ವರಿತವಾಗಿ ಮಾಡಬಹುದು.


    ಊದಲು / ಸಮಕ್ ಅಕ್ಕಿಯ ಉಪ್ಪಿಟ್ಟು ರೆಸಿಪಿ ಮಾಡಲು ಬೇಕಾಗಿರುವ ಸಾಮಗ್ರಿಗಳು


    ತೊಳೆದು 20 ರಿಂದ 30 ನಿಮಿಷಗಳವರೆಗೆ ನೆನೆಸಿದ ಒಂದು ಕಪ್ ಸಮಕ್ / ಊದಲು ಅಕ್ಕಿ, ಎರಡು ಚಮಚ ತುಪ್ಪ, ಒಂದು ಟೀಸ್ಪೂನ್ ಜೀರಿಗೆ, ಎರಡು ಟೀ ಸ್ಪೂನ್ ಗೋಡಂಬಿ ಬೀಜಗಳು, ಎರಡು ಟೀಸ್ಪೂನ್ ಕಡಲೆಕಾಯಿ, ಎರಡರಿಂದ ಮೂರು ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಟೀಸ್ಪೂನ್ ಒಣದ್ರಾಕ್ಷಿ, ಎರಡು ಟೀ ಸ್ಪೂನ್ ನಿಂಬೆ ರಸ, ಅರ್ಧ ಕಪ್ ಕತ್ತರಿಸಿದ ಟೊಮೆಟೊ, ತಾಜಾ ಕೊತ್ತಂಬರಿ ಸೊಪ್ಪು.


    ಸಮಕ್ / ಊದಲು ಅಕ್ಕಿ ಉಪ್ಪಿಟ್ಟು ಮಾಡುವುದು ಹೇಗೆ?


    ಸಮಕ್ / ಊದಲು ಅಕ್ಕಿಯನ್ನು ತೊಳೆದು ಅರ್ಧ ಘಂಟೆ ನೀರಿನಲ್ಲಿ ನೆನೆಸಿಡಿ. ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ. ಜೀರಿಗೆ, ಕಡಲೆಕಾಯಿ, ಗೋಡಂಬಿ ಮತ್ತು ಒಣದ್ರಾಕ್ಷಿ ಸೇರಿಸಿ. ಕೆಲವು ನಿಮಿಷ ಫ್ರೈ ಮಾಡಿ. ಅಕ್ಕಿಯನ್ನು ಸಂಪೂರ್ಣ ನೀರಿನಿಂದ ಬೇರ್ಪಡಿಸಿ. ಸೋಸಿದ ಅಕ್ಕಿಯನ್ನು ಪ್ಯಾನ್ ಗೆ ಹಾಕಿರಿ. ಮೂರು ನಿಮಿಷ ಚೆನ್ನಾಗಿ ಫ್ರೈ ಮಾಡಿ.


    ನಂತರ ಎರಡು ಕಪ್ ನೀರು ಮತ್ತು ಉಪ್ಪು ಸೇರಿಸಿ. ಅದು ಕುದಿಯುವಾಗ ಎಲ್ಲಾ ನೀರು ಇಂಗುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿ. ಅಕ್ಕಿ ಚೆನ್ನಾಗಿ ಬೆಂದು ನೀರು ಆವಿಯಾದ ನಂತರ ಅದಕ್ಕೆ ಕತ್ತರಿಸಿದ ಟೊಮ್ಯಾಟೊ, ನಿಂಬೆ ರಸ ಸೇರಿಸಿ. ಈಗ ಉರಿಯನ್ನು ಆಫ್ ಮಾಡಿ. ಒಂದು ನಿಮಿಷ ಮುಚ್ಚಿಡಿ. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಬಿಸಿಯಾಗಿ ಬಡಿಸಿ.


    ಸಮಕ್ / ಊದಲು ಅಕ್ಕಿಯ ಪ್ರಯೋಜನಗಳು


    ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಿ


    ಸಮಕ್ ಅಕ್ಕಿಯಲ್ಲಿ ಸಾಕಷ್ಟು ಪಿಷ್ಟವಿದೆ. ಇದು ಫೈಬರ್‌ನಂತೆ ಕೆಲಸ ಮಾಡುತ್ತದೆ. ಕರುಳಿನ ಬ್ಯಾಕ್ಟೀರಿಯಾ ಆರೋಗ್ಯ ಹೆಚ್ಚಿಸುವ ಮೂಲಕ ಉರಿಯೂನ್ನು ಕಡಿಮೆ ಮಾಡುತ್ತದೆ. ಇದು ಎಲ್ಡಿಎಲ್, ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮತ್ತು ದೇಹದಲ್ಲಿನ ಒಟ್ಟು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ರಕ್ತದ ಸಕ್ಕರೆ ಮಟ್ಟ ಕಾಪಾಡುತ್ತದೆ


    ಸಮಕ್ / ಊದಲು ಅಕ್ಕಿಯು ಮಧುಮೇಹ ರೋಗಿಗಳಿಗೆ ಉತ್ತಮ. ದೇಹದ ರಕ್ತದ ಸಕ್ಕರೆ ಮಟ್ಟ ಕಾಪಾಡುತ್ತದೆ. ರಕ್ತಹೀನತೆ ಒಂದು ಅಸ್ವಸ್ಥತೆ. ರಕ್ತದಲ್ಲಿ ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳು ಇರಲ್ಲ. ದೇಹದ ಭಾಗಗಳಿಗೆ ಕಡಿಮೆ ಆಮ್ಲಜನಕ ಸಿಗುತ್ತದೆ. ರಕ್ತಹೀನತೆ ಸಮಸ್ಯೆ ನಿಯಂತ್ರಿಸುತ್ತದೆ.

    Published by:renukadariyannavar
    First published: