• Home
  • »
  • News
  • »
  • lifestyle
  • »
  • Healthy Breakfast: ಬೆಳಗಿನ ತಿಂಡಿಯಲ್ಲಿ ಆರೋಗ್ಯಕರ ಕೊಬ್ಬು ಪದಾರ್ಥಗಳ ಸೇವನೆ ಉತ್ತಮವೇ?

Healthy Breakfast: ಬೆಳಗಿನ ತಿಂಡಿಯಲ್ಲಿ ಆರೋಗ್ಯಕರ ಕೊಬ್ಬು ಪದಾರ್ಥಗಳ ಸೇವನೆ ಉತ್ತಮವೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಉಪಾಹಾರವು ಇಡೀ ದಿನದ ಕೆಲಸಕ್ಕೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ. ಹಾಗಾಗಿ ಬೆಳಗಿನ ತಿಂಡಿಯಲ್ಲಿ ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುವ ಮತ್ತು ಹೊಟ್ಟೆ ತುಂಬಿಸುವ ಪದಾರ್ಥ ಸೇವನೆ ಮಾಡಬೇಕು. ಜೊತೆಗೆ ತುಂಬಾ ಜನರು ಬೆಳಗಿನ ಉಪಾಹಾರ ಸೇವನೆ ಮಾಡುವುದಿಲ್ಲ. ಆದರೆ ಇದು ತಪ್ಪು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ಹೆಚ್ಚು ಜನರು (People) ಆಮ್ಲೆಟ್, ಎಗ್ ಹಾಗೂ ಬ್ರೆಡ್ (Bread) ತಿನ್ನುತ್ತಾರೆ. ಆದರೆ ಬೆಳಗಿನ ತಿಂಡಿಯೂ ತುಂಬಾ ಮುಖ್ಯವಾದ ಆಹಾರವಾಗಿದೆ (Food) ಎನ್ನುತ್ತಾರೆ ತಜ್ಞರು. ಬೆಳಗಿನ ಉಪಾಹಾರವು ತುಂಬಾ ಸರಳ ಮತ್ತು ಹೆಲ್ದೀ (Healthy) ಆಗಿರುವುದು ಮುಖ್ಯ. ಮತ್ತು ನೀವು ದಿನವೂ (Daily) ಬೆಳಗಿನ ಉಪಾಹಾರಕ್ಕೆ ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಸೂಕ್ಷ್ಮ ಮತ್ತು ಚೆನ್ನಾಗಿ ತಿಳಿಯುವುದು ತುಂಬಾ ಮುಖ್ಯ. ವಾಸ್ತವದಲ್ಲಿ ಬೆಳಗಿನ ಉಪಾಹಾರವು ಇಡೀ ದಿನದ ಕೆಲಸಕ್ಕೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ. ಹಾಗಾಗಿ ಬೆಳಗಿನ ತಿಂಡಿಯಲ್ಲಿ ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುವ ಮತ್ತು ಹೊಟ್ಟೆ ತುಂಬಿಸುವ ಪದಾರ್ಥ ಸೇವನೆ ಮಾಡಬೇಕು.


    ಬೆಳಗಿನ ಉಪಾಹಾರ ಮತ್ತು ಆರೋಗ್ಯ


    ಜೊತೆಗೆ ತುಂಬಾ ಜನರು ಬೆಳಗಿನ ಉಪಾಹಾರ ಸೇವನೆ ಮಾಡುವುದಿಲ್ಲ. ಆದರೆ ಇದು ತಪ್ಪು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ನಮ್ಮ ದಿನವನ್ನು ಚೆನ್ನಾಗಿ ಇಡುವುದೇ ಬೆಳಗಿನ ತಿಂಡಿ. ಸಾಮಾನ್ಯವಾಗಿ ಜನರು ಬೆಳಗ್ಗೆ ನೀರನ್ನೂ ಕುಡಿಯದೇ ಚಹಾ ಅಥವಾ ಕಾಫಿ ಕುಡಿದು ತಮ್ಮ ದಿನವನ್ನು ಆರಂಭಿಸುತ್ತಾರೆ.


    ಬೆಳಿಗ್ಗೆ ಏಳುವ ಜೊತೆಗೆ ಕಾಫಿ, ಟೀ ಕುಡಿಯುವ ರೂಢಿ ಇದು ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ ತಜ್ಞರು. ಜನರು ಬೆಳಗಿನ ಉಪಾಹಾರದಲ್ಲಿ ಚಹಾ, ಪರಾಠ, ಪುರಿ, ದೋಸೆ, ಅವಲಕ್ಕಿ, ಉಪ್ಪಿಟ್ಟು, ತರಕಾರಿ ಮತ್ತು ಜಾಮ್ ಬ್ರೆಡ್ ಅನ್ನು ಹೆಚ್ಚು ಸೇವಿಸುವುದು ಜನರ ರೂಢಿ ಆಗಿದೆ. ಈ ಪದಾರ್ಥಗಳು ಹೊಟ್ಟೆ ತುಂಬಿಸುತ್ತವೆ. ಆದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಉಪಾಹಾರದಲ್ಲಿ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧ ಪದಾರ್ಥ ಸೇವಿಸಿ


    ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಅವರು ಹೇಳುವ ಪ್ರಕಾರ, ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಬೆಳಗಿನ ಉಪಾಹಾರದಲ್ಲಿ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಪದಾರ್ಥಗಳ ಸೇವನೆ ಮಾಡಬೇಕು. ಮನೆಯಲ್ಲಿ ಹಿರಿಯರು ನೆನೆಸಿದ ಬಾದಾಮಿ ಬೆಳಿಗ್ಗೆ ಬೇಗ ಎದ್ದು ತಿನ್ನಲು ಸಲಹೆ ನೀಡುತ್ತಾರೆ.


    ಏಕೆಂದರೆ ಇದರ ಹಿಂದೆ ಹಲವು ಕಾರಣಗಳು ಇವೆ ಎಂದು ಅವರು ಹೇಳಿದ್ದಾರೆ. ವಾಸ್ತವದಲ್ಲಿ ಬೆಳಿಗ್ಗೆ ಆರೋಗ್ಯಕರ ಕೊಬ್ಬನ್ನು ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಅನೇಕ ಸಂಶೋಧನೆಗಳು ಹೇಳಿವೆ.


    ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ


    ಆರೋಗ್ಯಕರ ಕೊಬ್ಬು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯಕ ಆಗಿವೆ. ಕಾರ್ಬೋಹೈಡ್ರೇಟ್‌ಗಳು ಇರುವುದಿಲ್ಲ ಆದರೂ ರಕ್ತದ ಸಕ್ಕರೆ ಮಟ್ಟ ಏರಿಕೆ ಆಗಲ್ಲ. ಅಲ್ಲದೇ ಇದು ಇನ್ಸುಲಿನ್ ಪ್ರತಿರೋಧ ಸುಧಾರಿಸುತ್ತದೆ.


    ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ


    ಆರೋಗ್ಯಕರ ಕೊಬ್ಬು ನಿಮಗೆ ಶಕ್ತಿ ನೀಡುತ್ತದೆ. ಮತ್ತು ನಿಮಗೆ ತೃಪ್ತಿ ನೀಡುತ್ತದೆ. ಈ ಕಾರಣದಿಂದ ನಿಮಗೆ ಹಸಿವು ಕಡಿಮೆ ಆಗುತ್ತದೆ. ಈ ರೀತಿಯಾಗಿ, ತೂಕ ನಿಯಂತ್ರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.


    ಹಾರ್ಮೋನ್ ಆರೋಗ್ಯ ಸುಧಾರಣೆ


    ಇದು ಹಾರ್ಮೋನುಗಳ ಆರೋಗ್ಯ ಸುಧಾರಿಸಲು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆ ಸುಗಮ ಮಾಡಲು ಉತ್ತಮವಾಗಿ ಕೆಲಸ ಮಾಡುತ್ತದೆ. ಮತ್ತು ಕರುಳಿನ ಒಳಪದರವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


    ಮಾನಸಿಕ ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ


    ಬೆಳಗ್ಗೆ ಆರೋಗ್ಯಕರ ಕೊಬ್ಬು ಹೊಂದಿರುವ ಪದಾರ್ಥಗಳ ಸೇವನೆ ಮಾಡುವುದು ಮಾನಸಿಕ ಬೆಳವಣಿಗೆ ಉತ್ತೇಜನ ನೀಡುತ್ತದೆ. ಜೊತೆಗೆ ಅಷ್ಟೇ ಅಲ್ಲದೇ, ತಾಪಮಾನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ ನಿಯಂತ್ರಣ ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!


    ಆರೋಗ್ಯಕರ ಕೊಬ್ಬು ಪಡೆಯಲು ಏನು ತಿನ್ನಬೇಕು?


    ಆರೋಗ್ಯಕರ ಕೊಬ್ಬಿನಲ್ಲಿ ನೆನೆಸಿದ ಬಾದಾಮಿ, ವಾಲ್ನಟ್ಸ್, ಗೋಡಂಬಿ, ತೆಂಗಿನ ಎಣ್ಣೆ, ಹಸುವಿನ ತುಪ್ಪ ಮತ್ತು ತೆಂಗಿನಕಾಯಿ ಇದ್ದು, ಇವುಗಳನ್ನು ನಿಮ್ಮ ಬೆಳಗಿನ ಉಪಾಹಾರದಲ್ಲಿ ಸೇವನೆ ಮಾಡಬಹುದು.

    Published by:renukadariyannavar
    First published: