• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Veg Kabab: ನಾನ್‌-ವೆಜ್‌ನವರಷ್ಟೇ ಅಲ್ಲ, 'ನಾನು ವೆಜ್' ಎನ್ನುವವರೂ ತಿನ್ನಬಹುದು ಈ ಕಬಾಬ್! ಸಿಂಪಲ್ ರೆಸಿಪಿ ಇಲ್ಲಿದೆ

Veg Kabab: ನಾನ್‌-ವೆಜ್‌ನವರಷ್ಟೇ ಅಲ್ಲ, 'ನಾನು ವೆಜ್' ಎನ್ನುವವರೂ ತಿನ್ನಬಹುದು ಈ ಕಬಾಬ್! ಸಿಂಪಲ್ ರೆಸಿಪಿ ಇಲ್ಲಿದೆ

ವೆಜ್ ಕಬಾಬ್ (ಸಾಂದರ್ಭಿಕ ಚಿತ್ರ)

ವೆಜ್ ಕಬಾಬ್ (ಸಾಂದರ್ಭಿಕ ಚಿತ್ರ)

ನಾಲಿಗೆಗೆ ರುಚಿ ಎನಿಸುವ, ಪೌಷ್ಟಿಕಾಂಶ ಇರುವ, ಯಾವುದಾದರೂ ಹೊಸ ರುಚಿಯ ಅಡುಗೆ ಬಯಸಿದರೆ ನೀವು ಇದನ್ನು ಖಂಡಿತಾ ಟ್ರೈ ಮಾಡಲೇಬೇಕು. ಅದೇ ವೆಜಿಟೇಬಲ್ ಕಬಾಬ್! ನಾನ್ ವೆಜ್‌ ಪ್ರಿಯರೇನೋ ಕಬಾಬ್ ತಿಂದು, ಎಂಜಾಯ್ ಮಾಡ್ತಾರೆ. ಆದ್ರೆ ವೆಜ್‌ ಪ್ರಿಯರು ಏನ್ ಮಾಡ್ಬೇಕು? ಸಿಂಪಲ್ ಈ ವೆಜ್ ಕಬಾಬ್‌ ರೆಸಿಪಿಯನ್ನು ಮನೆಯಲ್ಲಿ ಟ್ರೈ ಮಾಡ್ಬೇಕು!

ಮುಂದೆ ಓದಿ ...
 • Share this:

  ನೀವು ನಾನ್‌ ವೆಜ್‌ (Non Veg) ಅಂದ್ರೆ ಮಾರುದ್ಧ ಸರಿಯುತ್ತೀರಾ? ಬೆಳಗಿನ ಉಪಾಹಾರಕ್ಕೆ (Morning Breakfast) ಬ್ರೆಡ್, ಮೊಟ್ಟೆ, ರೊಟ್ಟಿ-ಪರಾಟಾ, ಹಣ್ಣುಗಳು ಇತ್ಯಾದಿಗಳನ್ನು ಸೇವಿಸಲು ನಿಮಗೆ ಮನಸ್ಸಿಲ್ಲವೇ? ಹಾಗಾದರೆ ಇಂದು ನೀವು ಈ ಡಿಫ್ರೆಂಟ್‌ ಆಗಿರೋ ರೆಸಿಪಿ (Recipe) ಟ್ರೈ ಮಾಡಿ, ಮನೆಯಲ್ಲಿ ಹೊಸ ಬ್ರೇಕ್ ಫಾಸ್ಟ್ ತಯಾರಿಸಬಹುದು. ನಾಲಿಗೆಗೆ ರುಚಿ ಎನಿಸುವ, ಪೌಷ್ಟಿಕಾಂಶ ಇರುವ, ಯಾವುದಾದರೂ ಹೊಸ ರುಚಿಯ ಅಡುಗೆ ಬಯಸಿದರೆ ನೀವು ಇದನ್ನು ಖಂಡಿತಾ ಟ್ರೈ ಮಾಡಲೇಬೇಕು. ಅದೇ ವೆಜಿಟೇಬಲ್ ಕಬಾಬ್! (Vegetable Kabab) ನಾನ್ ವೆಜ್‌ ಪ್ರಿಯರೇನೋ ಕಬಾಬ್ ತಿಂದು, ಎಂಜಾಯ್ ಮಾಡ್ತಾರೆ. ಆದ್ರೆ ವೆಜ್‌ ಪ್ರಿಯರು ಏನ್ ಮಾಡ್ಬೇಕು? ಸಿಂಪಲ್ ಈ ವೆಜ್ ಕಬಾಬ್‌ ರೆಸಿಪಿಯನ್ನು ಮನೆಯಲ್ಲಿ ಟ್ರೈ ಮಾಡ್ಬೇಕು! ಇದನ್ನು ತಿನ್ನುವುದರಿಂದ ದಿನವಿಡೀ ನೀವು ಫಿಟ್ ಆಗಿ ಮತ್ತು ಚೈತನ್ಯದಿಂದ ಇರುತ್ತೀರಿ. ಈ ಕಬಾಬ್ ತೂಕವನ್ನೂ ಕಡಿಮೆ ಮಾಡಬಹುದು!


  ಈ ಕಬಾಬ್‌ಗಳು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಈ ಸಸ್ಯಾಹಾರಿ ಕಬಾಬ್‌ನ ಪಾಕವಿಧಾನವನ್ನು ಶುಭಿ ಶಿವರೆ ಎಂಬುವರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಶುಭಿ ಪೌಷ್ಟಿಕತಜ್ಞೆ, ಆರೋಗ್ಯ ತಜ್ಞಯಾಗಿದ್ದು, ಅವರು ಈ ರುಚಿಕರವಾದ ಕಬಾಬ್ ರೆಸಿಪಿಯನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


  ಈ ಪ್ರೊಟೀನ್ ಭರಿತ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ಸಸ್ಯಾಹಾರಿ ಕಬಾಬ್ ರೆಸಿಪಿಯನ್ನು ಹೇಗೆ ಮಾಡಬೇಕೆಂದು ಇಲ್ಲಿ ಕಲಿಯೋಣ.


  ಬೇಕಾಗುವ ಸಾಮಗ್ರಿಗಳು:


  ಸಿಹಿಗೆಣಸು - 1


  ಆಲೂಗಡ್ಡೆ - 1


  ಹಸಿರು ಬೀನ್ಸ್ - 1/2 ಕಪ್


  ಕೊತ್ತಂಬರಿ - ಸಣ್ಣದಾಗಿ ಹೆಚ್ಚಿದ್ದು


  ಈರುಳ್ಳಿ - 1 ಟೀ ಸ್ಪೂನ್ (ಸಣ್ಣದಾಗಿ ಹೆಚ್ಚಿದ್ದು)


  ಶುಂಠಿ ಪೇಸ್ಟ್ - ಅರ್ಧ ಚಮಚ


  ಬೆಳ್ಳುಳ್ಳಿ ಪೇಸ್ಟ್ - ಅರ್ಧ ಟೀ ಚಮಚ


  ಉಪ್ಪು - ರುಚಿಗೆ ತಕ್ಕಷ್ಟು


  ಗರಂ ಮಸಾಲೆಗಳು - ಆದ್ಯತೆಗೆ ಅನುಗುಣವಾಗಿ  ವೆಜ್ ಕಬಾಬ್ ರೆಸಿಪಿ


  • ಮೊದಲು ಆಲೂಗಡ್ಡೆ ಮತ್ತು ಗೆಣಸನ್ನು ಕುದಿಸಿ. ಅವುಗಳನ್ನು ಸಿಪ್ಪೆ ತೆಗೆದು ಬಟ್ಟಲಿನಲ್ಲಿ ಚೆನ್ನಾಗಿ ಸ್ಮ್ಯಾಶ್ ಮಾಡಿ.

  • ಈಗ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಬೇಳೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ.

  • ಜೊತೆಗೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮಸಾಲಾ, ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.

  • ಅದನ್ನು ಟಿಕ್ಕಿಯಾಗಿ ಆಕಾರ ಮಾಡಿ ಮತ್ತು ತಟ್ಟೆಯಲ್ಲಿ ಇರಿಸಿ.

  • ಆಕಾರ ಮಾಡಲು ನಿಮಗೆ ಕಾರ್ನ್ ಫ್ಲೋರ್, ಬೇಳೆ ಹಿಟ್ಟು ಅಥವಾ ಹಿಟ್ಟು ಮುಂತಾದ ಯಾವುದೇ ಪದಾರ್ಥಗಳು ಅಗತ್ಯವಿಲ್ಲ.

  • ಪ್ಯಾನ್ ಅನ್ನು ಗ್ಯಾಸ್ ಮೇಲೆ ಬಿಸಿ ಮಾಡಿ. ಇದಕ್ಕೆ ಎಣ್ಣೆ ಅಥವಾ ಬೆಣ್ಣೆಯನ್ನು ಸೇರಿಸಿ.

  • ಒಂದು ಸಮಯದಲ್ಲಿ 3-4 ಟಿಕ್ಕಿಗಳನ್ನು ಹುರಿದುಕೊಳ್ಳಿ.

  • ಎರಡೂ ಬದಿಗಳು ಗೋಲ್ಡನ್ ಬ್ರೌನ್ ಆಗಿರುವಾಗ, ಅವುಗಳನ್ನು ತಟ್ಟೆಯಲ್ಲಿ ತೆಗೆದುಕೊಳ್ಳಿ. ಈಗ ವೆಜ್ ಕಬಾಬ್ ರೆಡಿಯಾಗುತ್ತದೆ.


  ಇದನ್ನೂ ಓದಿ: Morning Breakfast: ಬೆಳಗ್ಗಿನ ತಿಂಡಿಗೆ ತಯಾರಿಸಿ ಪನೀರ್ ಚೀಸ್ ಪರೋಟಾ, ಮಾಡುವ ಮಾಡುವ ವಿಧಾನ


  ವೆಜ್ ಕಬಾಬ್ ಜೊತೆ ಕಾಂಬಿನೇಷನ್ ಏನು?


  ಬಿಸಿಯಾದ ವೆಜ್ ಕಬಾಬ್‌ಗಳನ್ನು ಕಡಲೆಕಾಯಿ ಅಥವಾ ಹಸಿರು ಚಟ್ನಿ, ಟೊಮೆಟೊ ಸಾಸ್‌ನೊಂದಿಗೆ ಬಡಿಸಿ. ನೀವು ಇದನ್ನು ಬೆಳಗಿನ ಉಪಾಹಾರಕ್ಕಾಗಿ ಅಥವಾ ಸಂಜೆಯ ಲಘು ಆಹಾರವಾಗಿಯೂ ಸೇವಿಸಬಹುದು.

  Published by:Annappa Achari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು