ಸಿಹಿ (Sweet) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಿಹಿತಿಂಡಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಕೆಲ ಮಂದಿಗೆ ಶುಗರ್ ಇರುತ್ತದೆ. ಹಾಗಾಗಿ ಮನೆಯವರು ಅವರಿಗೆ ಸಿಹಿ ಪದಾರ್ಥ ತಿನ್ನಲು ಬಿಡುವುದಿಲ್ಲ. ಹೀಗಿದ್ದರೂ ಅದೆಷ್ಟೋ ಜನ ಮನೆಯ ಕಣ್ಣು ತಪ್ಪಿಸಿ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಸದ್ಯ ಮನೆಯಲ್ಲಿಯೇ ಕುಳಿತು ಕಡಿಮೆ ವೆಚ್ಚದಲ್ಲಿ ರುಚಿಕರವಾದ ಸಾಂಪ್ರದಾಯಿಕ ಒತ್ತು ಶಾವಿಗೆ (Ottu Shavige) , ಕಾಯಿ ಹಾಲು (Kayi Halu) ಮಾಡುವ ಪಾಕ ವಿಧಾನವನ್ನು ನಾವು ನಿಮಗೆ ಹೇಳಿಕೊಡುತ್ತೇವೆ. ಸಾಮಾನ್ಯವಾಗಿ ಒತ್ತು ಶಾವಿಗೆಯನ್ನು ಹಬ್ಬಹರಿದಿನಗಳಲ್ಲಿ ಮಾಡುವುದು ಸಹಜ. ಆದರೆ ಕೆಲ ಮಂದಿ ತಮಗೆ ತಿನ್ನಬೇಕು ಅನಿಸಿದಾಗ ಕೂಡ ಮನೆಯಲ್ಲಿ ಸುಲಭವಾಗಿ ಒತ್ತು ಶಾವಿಗೆ ಕಾಯಿ ಹಾಲು ಮಾಡಿ ಸವಿಯಬಹುದು. ಅಲ್ಲದೇ ಈ ರೆಸಿಪಿಯಲ್ಲಿ ಸಕ್ಕರೆ (Sugar) ಬಳಸುವುದಿಲ್ಲ ಬದಲಾಗಿ ಬೆಲ್ಲವನ್ನು ಬಳಸಲಾಗುತ್ತದೆ.
ಒತ್ತು ಶಾವಿಗೆಗೆ ಬೇಕಾಗುವ ಸಾಮಗ್ರಿಗಳು
ಕಾಯಿ ಹಾಲು ಮಾಡಲು ಬೇಕಾಗುವ ಪದಾರ್ಥಗಳು
ಮೊದಲು ಮಿಕ್ಸಿ ಜಾರಿಗೆ ನೆನೆಸಿದ ದೋಸೆ ಅಕ್ಕಿಯನ್ನು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಅಕ್ಕಿ ಜೊತೆಗೆ ಅರ್ಧ ಕಪ್ ತೆಂಗಿನ ತುರಿ, ಸ್ವಲ್ಪ ನೀರು ಹಾಕಿ ಮತ್ತೆ ನುಣ್ಣಗೆ ರುಬ್ಬಿ. ನಂತರ ಇದನ್ನು ಒಂದು ಬಾಣಲೆಗೆ ಹಾಕಿ, 2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಸ್ಟವ್ ಮೇಲೆ ಸಣ್ಣ ಉರಿಯಲ್ಲಿ ಕಲಸುತ್ತಾ ಇರಬೇಕು. ಇದಕ್ಕೆ 1 ದೊಡ್ಡ ಚಮಚ ತುಪ್ಪ ಹಾಕಿ ಮತ್ತೆ ಕಲಸಬೇಕು. ಬಳಿಕ ಮತ್ತೊಂದು ಪಾತ್ರೆಗೆ ಹಾಕಿ ಎಲ್ಲವನ್ನು ಚೆನ್ನಾಗಿ ಕಲಸಿ.
ನಂತರ ಅಂಗೈಗೆ ಸ್ವಲ್ಪ ತುಪ್ಪ ಸವರಿಕೊಂಡು ಉದ್ದ ಉಡ್ಡೆಯಾಗಿ ಮಾಡಿಕೊಂಡು. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಕಡುಬು ಬೇಯಿಸುವ ರೀತಿ 10 ರಿಂದ 12 ನಿಮಿಷ ಬೇಯಿಸಿಬೇಕು. ಕೊನೆಗೆ ಶಾವಿಗೆ ಅಚ್ಚಿಗೆ ಎಣ್ಣೆ ಸವರಿ, ಅದಕ್ಕೆ ಬೇಯಿಸಿರುವ ಕಡುಬು ಇಟ್ಟು ಮುಚ್ಚಳ ಮುಚ್ಚಿ, ಒಂದು ತಟ್ಟೆ ಮೇಲೆ ನಿಮಗೆ ಬೇಕಾದ ಆಕೃತಿಯಲ್ಲಿ ಒತ್ತಬೇಕು. ಆಗ ಅಕ್ಕಿ ಶಾವಿಗೆ ಸಿದ್ಧವಾಗುತ್ತದೆ.
ಕಾಯಿ ಹಾಲು ಮಾಡುವ ವಿಧಾನ
ಒಂದು ಮಿಕ್ಸಿ ಜಾರಿಗೆ ನೆನೆಸಿರುವ ಅಕ್ಕಿ, ಒಂದು ಚಮಚದಷ್ಟು ತೆಂಗಿನ ತುರಿ, ನೆನೆಸಿದ ಗಸ ಗಸೆ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಆಮೇಲೆ ಒಂದು ಪಾತ್ರೆಗೆ ಅರ್ಧ ಕಪ್ ಬೆಲ್ಲ, ಕಾಲು ಕಪ್ ನೀರು ಹಾಕಿ. ಬೆಲ್ಲ ಕರಗುವ ತನಕ ಬಿಸಿಮಾಡಿ ಪಾಕ ಮಾಡಿಕೊಳ್ಳಬೇಕು. ನಂತರ ಇದಕ್ಕೆ ರುಬ್ಬಿದ ಮಿಶ್ರಣ ಮತ್ತು ಒಂದೂವರೆ ಕಪ್ ತೆಳುವಾದ ತೆಂಗಿನಕಾಯಿ ಹಾಲು ಹಾಕಿ ಬೆರಸಬೇಕು.
ಬಳಿಕ ಒಂದು ಚಿಟಿಕೆ ಉಪ್ಪು, ಏಲಕ್ಕಿ ಪುಡಿ ಹಾಕಿ ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷ ಕುದಿಸಿಬೇಕು. ಇನ್ನೂಇದಕ್ಕೆ 1 ಕಪ್ ತೆಂಗಿನಕಾಯಿ ಹಾಲು ಹಾಕಿ ಕಲಸಿ ಸಣ್ಣ ಉರಿಯಲ್ಲಿ 3 ನಿಮಿಷ ಕುದಿಸಿದರೆ ಕಾಯಿ ಹಾಲು ಕೂಡ ಸಿದ್ಧವಾಗುತ್ತದೆ. ನಂತರ ಒತ್ತಿಟ್ಟ ಶಾವಿಗೆಗೆ ಕಾಯಿ ಹಾಲು ಬೆರೆಸಿಕೊಂಡು ಸವಿಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ