Morning Breakfast: ಬೆಳಗಿನ ತಿಂಡಿಗೆ ಹೆಸರುಕಾಳಿನ ದೋಸೆ ಮಾಡುವುದು ಹೇಗೆ? ಇಲ್ಲಿದೆ ವಿವರ

ಹೆಸರುಕಾಳಿನ ದೋಸೆ

ಹೆಸರುಕಾಳಿನ ದೋಸೆ

ಮಕ್ಕಳಿಗೆ ಹೆಸರು ಕಾಳಿನ ದೋಸೆ ಪೌಷ್ಟಿಕಾಂಶದ ಗುಣಮಟ್ಟ ಹೆಚ್ಚಿಸುತ್ತದೆ. ಅವರ ಟಿಫಿನ್ ಬಾಕ್ಸ್ನಲ್ಲಿ ವಾರದಲ್ಲಿ ಎರಡು ದಿನವಾದರೂ ಹೆಸರು ಕಾಳಿನ ಖಾದ್ಯ ಸೇರಿಸಿ. ಹಾಗಾದರೆ ತಡ ಮಾಡದೇ ಇಂದು ನಾವು ಸುಲಭ ಮತ್ತು ರುಚಿಕರ ಹೆಸರು ಕಾಳಿನ ದೋಸೆ ಪಾಕವಿಧಾನ ಹೇಗೆ ತಯಾರಿಸುವುದು ಎಂದು ನೋಡೋಣ.

ಮುಂದೆ ಓದಿ ...
  • Share this:

    ಹೆಸರು ಕಾಳಿನ ದೋಸೆಯನ್ನು (Moong Dal Dosa) ಪೌಷ್ಟಿಕಾಂಶಭರಿತ ಆಹಾರವೆಂದು ಪರಿಗಣಿಸಲಾಗಿದೆ. ಇದು ಒಟ್ಟಾರೆ ಆರೋಗ್ಯಕ್ಕೆ (Health) ತುಂಬಾ ಪ್ರಯೋಜನಕಾರಿ. ತೂಕ ನಷ್ಟ ಆಹಾರದ ಭಾಗವಾಗಿ ಹೆಸರು ಕಾಳಿನ ದೋಸೆಯನ್ನು ಮಾಡಬಹುದು. ಇದು ಮಧುಮೇಹ ಮತ್ತು ಹೃದಯ ಕಾಯಿಲೆಯವರು ಸಹ ಚಿಂತಿಸದೆ ತಿನ್ನಬಹುದು. ಮಕ್ಕಳಿಗೆ ಹೆಸರು ಕಾಳಿನ ದೋಸೆ ಪೌಷ್ಟಿಕಾಂಶದ ಗುಣಮಟ್ಟ ಹೆಚ್ಚಿಸುತ್ತದೆ. ಅವರ ಟಿಫಿನ್ ಬಾಕ್ಸ್ನಲ್ಲಿ ವಾರದಲ್ಲಿ ಎರಡು ದಿನವಾದರೂ ಹೆಸರು ಕಾಳಿನ ಖಾದ್ಯ (Recipe) ಸೇರಿಸಿ. ಹಾಗಾದರೆ ತಡ ಮಾಡದೇ ಇಂದು ನಾವು ಸುಲಭ ಮತ್ತು ರುಚಿಕರ ಹೆಸರು ಕಾಳಿನ ದೋಸೆ ಪಾಕ ವಿಧಾನ ಹೇಗೆ ತಯಾರಿಸುವುದು ಎಂದು ನೋಡೋಣ.


    ಹೆಸರು ಕಾಳಿನ ದೋಸೆ ರೆಸಿಪಿ


    ಬೆಳಗಿನ ತಿಂಡಿಗೆ ಹೆಸರು ಕಾಳಿನ ದೋಸೆ ಉತ್ತಮ ಆಯ್ಕೆ ಆಗಿದೆ. ಹೆಸರು ಕಾಳು ಅನೇಕ ಪ್ರಮುಖ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದರ ಸೇವನೆಯು ಕೊಲೆಸ್ಟ್ರಾಲ್ ಮಟ್ಟ, ಹೃದ್ರೋಗ ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದು ಜೀರ್ಣಕ್ರಿಯೆಗೆ ಆರೋಗ್ಯಕರ ಆಯ್ಕೆ ಆಗಿದೆ.


    ಹೆಸರು ಕಾಳಿನ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು


    ಹೆಸರು ಕಾಳು- 2 ಕಪ್, ಹಸಿರು ಮೆಣಸಿನಕಾಯಿ – 2, ನೆನೆಸಿದ ಅಕ್ಕಿ - ½ ಕಪ್, ಪಾಲಕ - 100 ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು, ಶುಂಠಿ - ಒಂದು ಸಣ್ಣ ತುಂಡು, ಕರಿಮೆಣಸು, ಹುರಿದ ಜೀರಿಗೆ ಪುಡಿ, ತುಪ್ಪ ಬೇಕು.




    ಹೆಸರು ಕಾಳಿನ ದೋಸೆ ತಯಾರಿಸುವ ವಿಧಾನ


    ಮೊದಲು ಹೆಸರು ಕಾಳನ್ನು ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅದು ನೆನೆದು ಊದಿಕೊಂಡ ನಂತರ ಬ್ಲೆಂಡರ್ ಜಾರ್‌ ನಲ್ಲಿ ನೆನೆದ ಹೆಸರು ಕಾಳು, ನೆನೆಸಿದ ಅಕ್ಕಿ, ಪಾಲಕ್, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ನಯವಾದ ಪೇಸ್ಟ್ ತಯಾರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


    ದೋಸೆಗೆ ಸ್ಥಿರತೆ ಹದವಾಗಿರುವಂತೆ ಮಾಡಿ. ಬೇಕಾದರೆ ಸ್ವಲ್ಪ ಮೊಸರು ಸೇರಿಸಬಹುದು. ಮಧ್ಯಮ ಉರಿಯಲ್ಲಿ ನಾನ್ ಸ್ಟಿಕ್ ಪ್ಯಾನ್ ಇರಿಸಿ. ಸಂಪೂರ್ಣವಾಗಿ ಬೆಚ್ಚಗಾಗಲು ಬಿಡಿ. ನಂತರ ಅದಕ್ಕೆ ಸ್ವಲ್ಪ ತುಪ್ಪ ಹಾಕಿ ನೀರು ಚಿಮುಕಿಸಿ. ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಿ. ಬಾಣಲೆಯ ಮೇಲೆ ಹಿಟ್ಟನ್ನು ಸುರಿಯಿರಿ. ದೋಸೆಯ ಆಕಾರಕ್ಕೆ ತನ್ನಿ.


    ಈಗ ದೋಸೆಯ ಎರಡು ಬದಿ ಚೆನ್ನಾಗಿ ಬೇಯಿಸಿ, ತೆಗೆಯಿರಿ. ಅದಕ್ಕೆ ಸ್ವಲ್ಪ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ, ಕೊತ್ತಂಬರಿ ಸೊಪ್ಪು ಅಥವಾ ಪುದೀನಾ ಚಟ್ನಿ ಜೊತೆ ಸವಿಯಿರಿ.


    ಹೆಸರುಕಾಳಿನ ದೋಸೆ


    ಹೆಸರು ಕಾಳು ಹಲವು ಪ್ರಯೋಜನ ಹೊಂದಿದೆ. ಇದು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಮೂಂಗ್ ದಾಲ್ ನಲ್ಲಿ ಮೆಗ್ನೀಸಿಯಮ್ ಇದೆ. ಈ ಕಾರಣ ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಮೂಂಗ್ ಬೇಲ್ ಅನ್ನು ಆಹಾರದಲ್ಲಿ ಸೇರಿಸಿ.


    ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ


    ಮೂಂಗ್ ದಾಲ್ ನಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿದೆ. ಇದು ಅಜೀರ್ಣ ಮತ್ತು ಸುಡುವ ಸಂವೇದನೆ ಸಮಸ್ಯೆ ನಿವಾರಿಸುತ್ತದೆ. ಇದರ ಬಳಕೆಯಿಂದ ಜೀರ್ಣ ಶಕ್ತಿ ಬಲಪಡಿಸಬಹುದು. ಮೂಳೆಗಳನ್ನು ಬಲಪಡಿಸುತ್ತದೆ. ಮೂಂಗ್ ದಾಲ್ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಮೂಳೆಗಳು ಆರೋಗ್ಯಕರವಾಗಿರುತ್ತವೆ.


    ಇದನ್ನೂ ಓದಿ: ಬೆಳಗಿನ ತಿಂಡಿಗೆ ಕಾಂಜಿ ವಡಾ ತಯಾರಿಸಿ, ಇಲ್ಲಿದೆ ಸಿಂಪಲ್ ವಿಧಾನ!


    ಮೂಳೆ ಮುರಿತದ ಸಮಸ್ಯೆಯಿದ್ದರೆ, ಖಂಡಿತವಾಗಿಯೂ ಮೂಂಗ್ ದಾಲ್ ತಿನ್ನಿರಿ. ಅದು ಗುಣವಾಗಲು ಸಹಾಯ ಮಾಡುತ್ತದೆ. ಕಣ್ಣುಗಳ ಆರೋಗ್ಯ ಕಾಪಾಡುತ್ತದೆ. ವಿಟಮಿನ್-ಸಿ ರೆಟಿನಾ ಸರಿಯಾಗಿಡುತ್ತದೆ.

    Published by:renukadariyannavar
    First published: