Breakfast: ಸಮಯ ಇಲ್ಲವೇ? ಹಾಗಿದ್ರೆ ಗುಜರಾತ್ ಶೈಲಿಯ ಮೆಂತ್ಯ ಥೇಪ್ಲಾ, ಮೂಲಂಗಿ ಪರಾಠಾ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುಜರಾತ್ ನಲ್ಲಿ ಮೆಂತ್ಯ ಥೇಪ್ಲಾ ಖಾದ್ಯವು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಸರಳ. ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಬೆಳಗಿನ ತಿಂಡಿಗೆ ನೀವು ಇದನ್ನು ಬೇಗ ತಯಾರಿಸಬಹುದು.

  • Share this:

    ಬೆಳಗಿನ ತಿಂಡಿಗೆ (Morning Breakfast), ರೊಟ್ಟಿ, ಚಪಾತಿ, ಥೇಪ್ಲಾ, ಪರಾಠಾ, ದೋಸೆ, ಇಡ್ಲಿ ಇವು ತುಂಬಾ ಜನರು (People) ಇಷ್ಟ ಪಟ್ಟು ಸೇವಿಸುವ ಪದಾರ್ಥಗಳು (Ingredients). ತುಂಬಾ ಜನರು ಮನೆಯಲ್ಲಿ ದಿನವೂ ವಿವಿಧ ಪಾಕವಿಧಾನಗಳನ್ನು (Recipes) ಬೆಳಗಿನ ತಿಂಡಿಗೆ ಮಾಡಿ ತಿನ್ನುತ್ತಾರೆ. ದಿನವೂ ಬೇರೆ ಬೇರೆ ರೆಸಿಪಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ನೀವು ಮನೆಯಲ್ಲಿ ಗುಜರಾತ್ ಶೈಲಿಯ ಥೇಪ್ಲಾ ಹಾಗೂ ಮೂಲಂಗಿ ಪರಾಠಾ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ಹೇಳಲಾಗಿದೆ. ಅಂದ ಹಾಗೇ ಮೆಂತ್ಯ ಮತ್ತು ಮೂಲಂಗಿ ಹಲವು ಪೋಷಕಾಂಶ (Nutrients) ಸಮೃದ್ಧ ಪದಾರ್ಥಗಳು. ಜೊತೆಗೆ ಇವುಗಳ ಸೇವನೆ ಸಾಕಷ್ಟು ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ.


    ಬೆಳಗಿನ ತಿಂಡಿಗೆ ಮೆಂತ್ಯ ಥೇಪ್ಲಾ ಹಾಗೂ ಮೂಲಂಗಿ ಪರಾಠಾ ಹೀಗೆ ಮಾಡಿ


    ಗುಜರಾತ್ ನಲ್ಲಿ ಮೆಂತ್ಯ ಥೇಪ್ಲಾ ಖಾದ್ಯವು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಸರಳ. ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಬೆಳಗಿನ ತಿಂಡಿಗೆ ನೀವು ಇದನ್ನು ಬೇಗ ತಯಾರಿಸಬಹುದು.


    ಮಲ್ಟಿಗ್ರೇನ್ ಮೆಂತ್ಯ ಥೇಪ್ಲಾ ರೆಸಿಪಿಯು, ಮೆಂತ್ಯ, ಶುಂಠಿ, ಮೆಣಸಿನಕಾಯಿ, ಗಿಡಮೂಲಿಕೆ ಮತ್ತು ಮೊಸರು, ಹಿಟ್ಟನ್ನು ಬೆರೆಸಿ ತಯಾರು ಮಾಡಲಾಗುತ್ತದೆ. ಉಪಹಾರಕ್ಕೆ ಈ ಪಾಕವಿಧಾನ ಸರಳ ಮತ್ತು ಸೂಕ್ತವಾಗಿದೆ.




    ಮಲ್ಟಿಗ್ರೇನ್ ಮೇಥಿ ಥೇಪ್ಲಾ ತಯಾರಿಸುವುದು ಹೇಗೆ?


    ಬೇಕಾಗುವ ಪದಾರ್ಥಗಳು


    1/2 ಕಪ್ ಗೋಧಿ ಹಿಟ್ಟು, 1/2 ಕಪ್ ಬೇಳೆ ಹಿಟ್ಟು, ಹಿಂಗ್ 2 ಟೀಸ್ಪೂನ್, ಎಣ್ಣೆ, ಉಪ್ಪು, ಮೆನಸಿನಕಾಯಿ, ಮೆಂತ್ಯ ಬೇಕು.


    ಮಲ್ಟಿಗ್ರೇನ್ ಮೆಂತ್ಯ ಥೇಪ್ಲಾ ತಯಾರಿಸುವ ವಿಧಾನ


    ದೊಡ್ಡ ಪಾತ್ರೆಯಲ್ಲಿ ಎಲ್ಲಾ ಹಿಟ್ಟನ್ನು ಹಾಕಿರಿ. ಅದಕ್ಕೆ ಮೊಸರು, ಸ್ವಲ್ಪ ಎಣ್ಣೆ ಮತ್ತು ಮಸಾಲೆ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಮತ್ತು ಹಿಟ್ಟನ್ನು ಚೆನ್ನಾಗಿ ನಾದಿರಿ. ಎಣ್ಣೆಯಿಂದ ಗ್ರೀಸ್ ಮಾಡಿ ಮತ್ತು ಸ್ವಲ್ಪ ಸಮಯ ಅದನ್ನು ಪಕ್ಕಕ್ಕೆ ಇರಿಸಿ. ಕಾದ ಗ್ರಿಡಲ್ ಮೇಲೆ ಎಣ್ಣೆ ಹಚ್ಚಿ. ಮತ್ತು ಅದು ಎರಡೂ ಬದಿ ಗರಿಗರಿಯಾಗುವವರೆಗೆ ಬೇಯಿಸಿ ಮತ್ತು ಸರ್ವ್ ಮಾಡಿ.


    ಮೂಲಂಗಿ ಪರಾಠಾ ರೆಸಿಪಿ


    ಈ ಮೂಲಂಗಿ ಪರಾಠ ಮಾಡಲು ಮೂಲಂಗಿಯನ್ನು ತುರಿದು ಬಳಸಲಾಗುತ್ತದೆ. ಸುವಾಸನೆ ಭರಿತ ಮಸಾಲೆ ಹಾಕಿ ತಯಾರಿಸಲಾಗುತ್ತದೆ.


    ಸಾಂದರ್ಭಿಕ ಚಿತ್ರ


    ಮೂಲಂಗಿ ಪರಾಠಾ ತಯಾರಿಸಲು ಬೇಕಾಗುವ ಪದಾರ್ಥಗಳು


    1 ಕಪ್ ಗೋಧಿ ಹಿಟ್ಟು, 1 ಚಮಚ ಎಣ್ಣೆ, 2 ಮೂಲಂಗಿ, 1 ಟೀಸ್ಪೂನ್ ಅಜ್ವೈನ್, 1 ಹಸಿರು ಮೆಣಸಿನಕಾಯಿ, ಕತ್ತರಿಸಿದ್ದು, 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, 1 ಟೀಸ್ಪೂನ್ ಗರಂ ಮಸಾಲಾ, ಎಣ್ಣೆ ಬೇಕು.


    ಮೂಲಂಗಿ ಪರಾಠಾ ಮಾಡಲು ಮೊದಲು ಗೋಧಿ ಹಿಟ್ಟನ್ನು ಮೃದುವಾಗಿ ನಾದಿರಿ. ಸ್ವಲ್ಪ ಸಮಯ ವಿಶ್ರಾಂತಿಗೆ ಬಿಡಿ. ಈ ಮಧ್ಯೆ, ಮೂಲಂಗಿ ಚೆನ್ನಾಗಿ ತೊಳೆಯಿರಿ, ಸಿಪ್ಪೆ ಸುಲಿದು ತುರಿ ಮಾಡಿ. ಕತ್ತರಿಸಿದ ಹಸಿರು ಮೆಣಸಿನಕಾಯಿ, ಗರಂ ಮಸಾಲಾ, ಕೆಂಪು ಮೆಣಸಿನ ಪುಡಿ, ಅಜ್ವೈನ್ ಮತ್ತು ತಾಜಾ ಕೊತ್ತಂಬರಿ ಸೊಪ್ಪು ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ.


    ಇದನ್ನೂ ಓದಿ: ಹಲಸಿನ ಹಣ್ಣಿನಿಂದ ಆಗುವ ಪ್ರಯೋಜನಗಳನ್ನು ಕೇಳ್ತಾ ಇದ್ರೆ, ಈಗ್ಲೇ ಪಕ್ಕಾ ತಿನ್ನೋಕೆ ಸ್ಟಾರ್ಟ್​ ಮಾಡ್ತೀರ!


    ತಯಾರಾದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿರಿ. ಅದನ್ನು ಮೂಲಂಗಿ ಮಿಶ್ರಣದಿಂದ ತುಂಬಿಸಿ. ಸಮವಾಗಿ ಸುತ್ತಿಕೊಳ್ಳಿ. ಮಧ್ಯಮ ಉರಿಯಲ್ಲಿ ತವೆ ಬಿಸಿ ಮಾಡಿ. ನಂತರ ರೆಡಿ ಮಾಡಿದ ಪರಾಠಾವನ್ನು ಚೆನ್ನಾಗಿ ಬೇಯಿಸಿ. ಸ್ವಲ್ಪ ತುಪ್ಪ ಅನ್ವಯಿಸಿ. ಎರಡೂ ಬದಿ ಗೋಲ್ಡನ್ ಬ್ರೌನ್ ಆದ್ಮೇಲೆ ಸರ್ವ್ ಮಾಡಿ.

    Published by:renukadariyannavar
    First published: